• Home
  • »
  • News
  • »
  • education
  • »
  • NITK ಸುರತ್ಕಲ್, ಬಾಶ್ ಕಂಪೆನಿಯಿಂದ ಇಲೆಕ್ಟ್ರಿಕ್ ವೆಹಿಕಲ್‌ನಲ್ಲಿ ಎಮ್‌ಟೆಕ್ ಆರಂಭಕ್ಕೆ ಒಪ್ಪಂದ; ಏನಿದು ಕೋರ್ಸ್?

NITK ಸುರತ್ಕಲ್, ಬಾಶ್ ಕಂಪೆನಿಯಿಂದ ಇಲೆಕ್ಟ್ರಿಕ್ ವೆಹಿಕಲ್‌ನಲ್ಲಿ ಎಮ್‌ಟೆಕ್ ಆರಂಭಕ್ಕೆ ಒಪ್ಪಂದ; ಏನಿದು ಕೋರ್ಸ್?

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

. ಹೈಬ್ರೀಡ್ ಕೋರ್ಸ್ ಆನ್‌ಲೈನ್ ತರಗತಿಗಳನ್ನು ಹೊಂದಿದ್ದು ಪರೀಕ್ಷೆಯನ್ನು ಆಫ್‌ಲೈನ್‌ನಲ್ಲಿ NITK ಸುರತ್ಕಲ್ ಕ್ಯಾಂಪಸ್‌ನಲ್ಲಿ ನಡೆಸಲಾಗುತ್ತದೆ.

  • Share this:

ಹೊಸ ಮಾದರಿಯ ಶಿಕ್ಷಣ ಪದ್ಧತಿಗೆ ನೂತನ ತಲೆಮಾರನ್ನು ಆಕರ್ಷಿಸುವ ನಿಟ್ಟಿನಲ್ಲಿ NITK ಸುರತ್ಕಲ್ - ಬಾಶ್ (BOSCH) ಗ್ಲೋಬಲ್ ಸಾಫ್ಟ್‌ವೇರ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಬೆಂಗಳೂರಿನೊಂದಿಗೆ ಪಾಲುದಾರಿಕೆಯನ್ನು ಹೊಂದಿದ್ದು ಅನನ್ಯ ರೀತಿಯ ಹೈಬ್ರೀಡ್ ರೀತಿಯ ಎಮ್‌ಟೆಕ್ ಪ್ರೊಗ್ರಾಮ್ ಆದ ಪವರ್ ಎಲೆಕ್ಟ್ರಾನಿಕ್ಸ್ ಹಾಗೂ ಎಲೆಕ್ಟ್ರಿಕ್ ವಾಹನಕ್ಕಾಗಿ ನಿಯಂತ್ರಣ ಅನ್ನು ಪರಿಚಯಿಸಿದೆ.


ಎರಡು ವರ್ಷದ ಹೈಬ್ರೀಡ್ ಮಾದರಿಯ ಕೋರ್ಸ್


ಪ್ರಸ್ತುತ ಎರಡು ವರ್ಷದ ಹೈಬ್ರೀಡ್ ಮಾದರಿಯ ಕೋರ್ಸ್, ಬಾಶ್ ಉದ್ಯೋಗಿಗಳಿಗೆ ಮಾತ್ರವೇ ಲಭ್ಯವಿದೆ. ಹೈಬ್ರೀಡ್ ಕೋರ್ಸ್ ಆನ್‌ಲೈನ್ ತರಗತಿಗಳನ್ನು ಹೊಂದಿದ್ದು ಪರೀಕ್ಷೆಯನ್ನು ಆಫ್‌ಲೈನ್‌ನಲ್ಲಿ NITK ಸುರತ್ಕಲ್ ಕ್ಯಾಂಪಸ್‌ನಲ್ಲಿ ನಡೆಸಲಾಗುತ್ತದೆ.


ಇದನ್ನು ಓದಿ: ದಾವಣಗೆರೆ ವಿವಿಯಲ್ಲಿ ಕಲ್ಯಾಣ ಕರ್ನಾಟಕ ವೃಂದದ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ


NITK ಯ ಎಲೆಕ್ಟ್ರಿಕಲ್ ಹಾಗೂ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ದತ್ತಾತ್ರೇಯ ನಾರಾಯಣ ಗಾವೊಂಕರ್ ಹೇಳುವಂತೆ ಸಂಸ್ಥೆಯು ಪ್ರಾಯೋಜಿಸಿರುವ ಎರಡು ವರ್ಷದ ನಿಯಮಿತ ಎಮ್‌ಟೆಕ್ ಕೋರ್ಸ್ ಇದಾಗಿದೆ ಹಾಗೂ ಪ್ರಸ್ತುತ ಬಾಶ್ ಉದ್ಯೋಗಿಗಳಿಗೆ ಮಾತ್ರವೇ ಲಭ್ಯವಿದೆ ಹಾಗೂ ಮುಂಬರುವ ವರ್ಷಗಳಲ್ಲಿ ಇತರರಿಗೂ ಕೋರ್ಸ್‌ನ ಲಭ್ಯತೆ ದೊರೆಯುವಂತೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.


NITK ಸುರತ್ಕಲ್ ಬಾಶ್ ಗ್ಲೋಬಲ್ ಸಾಫ್ಟ್‌ವೇರ್ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದೆ


NITK ಸುರತ್ಕಲ್ ಬಾಶ್ ಗ್ಲೋಬಲ್ ಸಾಫ್ಟ್‌ವೇರ್‌ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಬೆಂಗಳೂರು ಇದರೊಂದಿಗೆ ಒಂಪ್ಪಂದ ಮಾಡಿಕೊಂಡಿದ್ದು, ಪ್ರೋಗ್ರಾಮ್‌ನ ಆರಂಭವು ಸೆಪ್ಟೆಂಬರ್ 16 ರಂದು ಆರಂಭಗೊಂಡಿದೆ. ಮೊದಲ ಬ್ಯಾಚ್‌ನಲ್ಲಿ 27 ಉದ್ಯೋಗಿಗಳಿರಲಿದ್ದು ಇದು ಅಕ್ಟೋಬರ್‌ನಲ್ಲಿ ಮುಕ್ತಾಯಗೊಳ್ಳಲಿದೆ. ಒಟ್ಟು 40 ಸದಸ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.


ಇದನ್ನು ಓದಿ: ಅಮೆಜಾನ್​-ಫ್ಲಿಪ್​ ಕಾರ್ಟ್​​ನಲ್ಲಿ ಬೃಹತ್​ ನೇಮಕಾತಿ; 30000 ಹುದ್ದೆ ಭರ್ತಿಗೆ ಕ್ರಮ


ಕೋರ್ಸ್ ವಿವರಣೆ ಹೀಗಿದೆ


ಕೋರ್ಸ್ ಅನ್ನು ಏಕೆ ಪರಿಚಯಿಸಲಾಗಿದೆ ಎಂಬುದರ ವಿವರಣೆ ಕೊಟ್ಟ ಗಾವೊಂಕರ್, ಅಟೊಮೊಬೈಲ್ ಇಂಡಸ್ಟ್ರಿಯ ಭವಿಷ್ಯವು EV ಎಸ್ ಕುರಿತಾಗಿದೆ. ಇಂತಹ ಕೋರ್ಸ್‌ನ ಅವಶ್ಯಕತೆ ಇದೆ ಏಕೆಂದರೆ ಅಟೊಮೊಬೈಲ್ ವಿಭಾಗಕ್ಕೆ ಹೆಚ್ಚಿನ ಪರಿಣಿತರ ಅಗತ್ಯವಿದೆ. ಎಲೆಕ್ಟ್ರಿಕ್ ವಾಹನಗಳ ಮಾರುಕಟ್ಟೆ ವೇಗವಾಗಿ ವಿಸ್ತರಿಸುತ್ತಿದೆ. ಎಲೆಕ್ಟ್ರಿಕ್ ವಾಹನಗಳಿಗೆ ತಾಂತ್ರಿಕ ಕೌಶಲ್ಯ ಸೆಟ್‌ಗಳಿಗೆ ಹೆಚ್ಚಿನ ಬೇಡಿಕೆಯಿದೆ. EV ಉತ್ಪಾದನೆಯು ಬಹುತೇಕ ಎಲ್ಲಾ ವಾಹನ ಉದ್ಯಮಗಳ ಪ್ರಾಥಮಿಕ ಗುರಿಯಾಗಿದೆ ಎಂದು ಅವರು ಹೇಳಿದ್ದಾರೆ.


ಕೋರ್ಸ್ ಅನ್ನು ಬಾಶ್‌ನ ಸಮಾಲೋಚನೆಯೊಂದಿಗೆ ವಿನ್ಯಾಸಗೊಳಿಸಲಾಗಿದ್ದು ಇದು ಸಾಮರ್ಥ್ಯವುಳ್ಳ ಥಿಯರಿ ಆಧಾರಿತ ಕೋರ್ಸ್ ಹಾಗೂ ಲ್ಯಾಬ್‌ಗಳನ್ನು ಒಳಗೊಂಡಿದೆ ಅಂತೆಯೇ ಪವರ್ ಎಲೆಕ್ಟ್ರಾನಿಕ್ಸ್ ಹಾಗೂ ಎಲೆಕ್ಟ್ರಿಕ್ ವಾಹನ ನಿಯಂತ್ರಣ ವಿಷಯದ ಪ್ರಮುಖ ಮಾಹಿತಿಗಳನ್ನು ಒಳಗೊಂಡಿರಲಿದೆ.


ವಿಭಾಗವು ಆಯೋಜಿಸಿರುವ ಎರಡನೆಯ ಪಿಜಿ ಪ್ರೋಗ್ರಾಮ್ ಇದಾಗಿದ್ದು NITK ಸುರತ್ಕಲ್‌ನ ಅತಿದೊಡ್ಡ ವಿಭಾಗವಾಗಿದೆ ಎಂದು ಗಾವೊಂಕರ್ ತಿಳಿಸಿದ್ದಾರೆ.


ವೃತ್ತಿನಿರತ ಉದ್ಯೋಗಿಗಳಿಗೆ ಪ್ರಾಶಸ್ತ್ಯ


ಕೋರ್ಸ್ ಅನ್ನು ವಿಶೇಷವಾಗಿ ವೃತ್ತಿನಿರತ ಉದ್ಯೋಗಿಗಳಿಗಾಗಿಯೇ ಇದ್ದು ತರಗತಿಗಳನ್ನು ಸೋಮವಾರದಿಂದ ಶುಕ್ರವಾರದವರೆಗೆ ಬೆಳಗ್ಗೆ 9 ರಿಂದ ಸಂಜೆ 5 ರವರೆಗೆ ನಡೆಸಲಾಗುತ್ತದೆ. ಇತರ ಎಲ್ಲಾ ನಿಯಂತ್ರಕ ಅಗತ್ಯತೆಗಳ ಪ್ರಕಾರ NITK ಸುರತ್ಕಲ್‌ನ ನಿಯಮಿತ ಸಂಪೂರ್ಣ ವಸತಿ PG ಕಾರ್ಯಕ್ರಮಗಳಿವೆ ಎಂದು ಗಾವೊಂಕರ್ ತಿಳಿಸಿದ್ದಾರೆ.


ಸಂಸ್ಥೆಯು ನಿರ್ಮಾಣ ತಂತ್ರಜ್ಞಾನ ಮತ್ತು ನಿರ್ವಹಣೆಯಲ್ಲಿ ಎಮ್‌ಟೆಕ್ ಕೋರ್ಸ್ ಅನ್ನು ಒದಗಿಸುತ್ತಿದೆ. ಲಾರ್ಸನ್ ಹಾಗೂ ಟರ್ಬೊ (L&T) ಕೋರ್ಸ್ ಅನ್ನು ಪ್ರಾಯೋಜಿಸುತ್ತಿದೆ ಹಾಗೂ ಕೆಲವು ವರ್ಷಗಳ ಹಿಂದೆ ಕೋರ್ಸ್ ಅನ್ನು ಆರಂಭಿಸಲಾಗಿದೆ. ಗಾವೊಂಕರ್ ಹೇಳುವಂತೆ ಬಾಶ್ ಹಾಗೂ L&T ಪ್ರಾಯೋಜಿತ ಕೋರ್ಸ್‌ಗಳಿಗೆ ವ್ಯತ್ಯಾಸವಿದ್ದು CTM ನಲ್ಲಿ ಎಮ್‌ಟೆಕ್ ಎಂಬುದು ಆಫ್‌ಲೈನ್ ಕೋರ್ಸ್‌ಗಳಾಗಿವೆ.


NITK ಯ ಪ್ರಮಾಣಿತ ಸಂಪೂರ್ಣ ವಸತಿ ಸ್ನಾತಕೋತ್ತರ ಕಾರ್ಯಕ್ರಮಗಳ ಪ್ರಕಾರ, "ಎಲ್ಲಾ ಇತರ ನಿಯಂತ್ರಕ ಮಾನದಂಡಗಳನ್ನು ಕೋರ್ಸ್‌ನಲ್ಲಿರುವವರಿಗೂ ಅನ್ವಯಿಸಲಾಗುತ್ತದೆ" ಎಂದು ಗಾವೊಂಕರ್ ತಿಳಿಸಿದ್ದಾರೆ.

Published by:Seema R
First published: