• Home
  • »
  • News
  • »
  • education
  • »
  • Education System: 6 ವರ್ಷದವರೆಗಿನ ಮಕ್ಕಳಿಗೆ ಕಥೆ, ಆಟಿಕೆಗಳೇ ಸಾಕು; ಮೋದಿ ಸರ್ಕಾರದಿಂದ ಹೊಸ ಶಿಕ್ಷಣ ಕ್ರಮ

Education System: 6 ವರ್ಷದವರೆಗಿನ ಮಕ್ಕಳಿಗೆ ಕಥೆ, ಆಟಿಕೆಗಳೇ ಸಾಕು; ಮೋದಿ ಸರ್ಕಾರದಿಂದ ಹೊಸ ಶಿಕ್ಷಣ ಕ್ರಮ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Education System: ಭಾರತೀಯ ನೀತಿಕಥೆಗಳು ಮತ್ತು ಜಾನಪದ ಕಥೆಗಳ ಸಂಗ್ರಹ ಸಂಯೋಜಿಸಿಕೊಂಡು ಶಾಲಾ ಪಠ್ಯಕ್ರಮದಲ್ಲಿ ಬದಲಾವಣೆಗಳನ್ನು ಮಾಡಲು ಶಿಕ್ಷಣ ಸಚಿವಾಲಯವು ಸಲಹೆ ನೀಡಿದೆ.

  • News18 Kannada
  • Last Updated :
  • New Delhi, India
  • Share this:

3 ರಿಂದ 6 ವರ್ಷ ವಯಸ್ಸಿನ ಮಕ್ಕಳಿಗೆ ಯಾವುದೇ ಪಠ್ಯಪುಸ್ತಕಗಳನ್ನು ಬಳಸಬಾರದು ಎಂದು ಶಿಫಾರಸು ಮಾಡುವುದರಿಂದ ಹಿಡಿದು 6-8 ವರ್ಷ ವಯಸ್ಸಿನ ಮಕ್ಕಳಿಗೆ ಪಾಠಗಳಲ್ಲಿ ಬೋರ್ಡ್ ಆಟಗಳು ಮತ್ತು ಪಂಚತಂತ್ರದ ಕಥೆಗಳನ್ನು (ಭಾರತೀಯ ನೀತಿಕಥೆಗಳು ಮತ್ತು ಜಾನಪದ ಕಥೆಗಳ ಸಂಗ್ರಹ) ಸಂಯೋಜಿಸಿಕೊಂಡು ಶಾಲಾ ಪಠ್ಯಕ್ರಮದಲ್ಲಿ ಬದಲಾವಣೆಗಳನ್ನು ಮಾಡಲು ಶಿಕ್ಷಣ ಸಚಿವಾಲಯವು ಸಲಹೆ ನೀಡಿದೆ.


360 ಪುಟಗಳ ಡಾಕ್ಯುಮೆಂಟ್


ಫೌಂಡೇಶನಲ್ ಸ್ಟೇಜ್ (3 ರಿಂದ 8 ವರ್ಷ ವಯಸ್ಸಿನವರು) ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟನ್ನು (NCF) ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಬಿಡುಗಡೆ ಮಾಡಿದರು. 2020 ರಲ್ಲಿ ಬಿಡುಗಡೆಯಾದ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ (ಎನ್‌ಇಪಿ) ಮುಖ್ಯ ಭಾಗವೆನಿಸಿದ್ದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಮಾಜಿ ಮುಖ್ಯಸ್ಥ ಕೆ ಕಸ್ತೂರಿರಂಗನ್ ನೇತೃತ್ವದ ತಜ್ಞರ ಸಮಿತಿಯು ಇದನ್ನು ಅಭಿವೃದ್ಧಿಪಡಿಸಿದೆ. 360 ಪುಟಗಳ ದಾಖಲೆಯು ಶಿಕ್ಷಣ ತಜ್ಞರಿಂದ ಮಿಶ್ರ ಪ್ರತಿಕ್ರಿಯೆಯನ್ನು ಪಡೆದುಕೊಂಡಿದ್ದು ವೈಜ್ಞಾನಿಕವಾಗಿ ವಿನ್ಯಾಸಗೊಳಿಸಲಾಗಿರುವ ಪಠ್ಯಪುಸ್ತಕಗಳನ್ನು ಕಾರ್ಯಗತಗೊಳಿಸುವುದು ಸವಾಲಾಗಿದೆ ಎಂದು ತಜ್ಞರ ಸಮೂಹ ತಿಳಿಸಿದೆ.


ಡಾಕ್ಯುಮೆಂಟ್ ಪ್ರಕಾರ, "ಫೌಂಡೇಶನ್ ಹಂತದ ಮೊದಲ ಮೂರು ವರ್ಷಗಳಲ್ಲಿ, 3 ರಿಂದ 6 ವರ್ಷ ವಯಸ್ಸಿನವರಿಗೆ, ಮಕ್ಕಳಿಗೆ ಯಾವುದೇ ನಿಗದಿತ ಪಠ್ಯಪುಸ್ತಕಗಳು ಇರಬಾರದು". ಈ ವಯಸ್ಸಿನ ವಿದ್ಯಾರ್ಥಿಗಳ ಪಠ್ಯಕ್ರಮದ ಗುರಿಗಳನ್ನು ಪೂರೈಸಲು ಸರಳವಾದ ವರ್ಕ್‌ಶೀಟ್‌ಗಳು ಹೆಚ್ಚು ಸಾಕಾಗುತ್ತದೆ ಎಂದು ಸಮಿತಿ ತಿಳಿಸಿದೆ.


ಮೂಢನಂಬಿಕೆಗಳ ನಿವಾರಣೆ


ಮೂಢನಂಬಿಕೆಗಳನ್ನು ತಪ್ಪಿಸಲು ಕೆಲವೊಂದು ಕಾಳಜಿಯನ್ನು ತೆಗೆದುಕೊಳ್ಳಬೇಕು ಎಂದು ಸಮಿತಿ ಹೇಳಿದ್ದು, ಉದಾಹರಣೆಗೆ ಗೂಬೆ, ಹಾವುಗಳನ್ನು ದುಷ್ಟರು ಎಂದು ಚಿತ್ರೀಕರಿಸುವುದು, ಕಪ್ಪು ಬಣ್ಣದ ತ್ವಚೆಯವರನ್ನು ಮಕ್ಕಳ ಮನಸ್ಸಲ್ಲಿ ಭೀತಿಗೊಳ್ಳುವಂತೆ ವೈಭವೀಕರಿಸುವುದು, ತಾಯಿಯು ಗೃಹಕತ್ಯಗಳನ್ನು ಮಾತ್ರವೇ ನಿರ್ವಹಿಸುತ್ತಾರೆ ಎಂಬುದನ್ನು ಬೋಧಿಸುವುದು ಮೊದಲಾದ ಅಂಶಗಳಿಗೆ ಸಮಿತಿ ಒತ್ತು ನೀಡಿದೆ.


ಇದನ್ನೂ ಓದಿ: ಕಲಿತದ್ದು ಮರೆತು ಹೋಗಬಹುದು ಎಂಬ ಭಯವೇ? ಹಾಗಿದ್ದರೆ ಸುಲಭ ಕಲಿಕೆಗೆ ಈ ವಿಧಾನ ಬಳಸಿ


ಮಕ್ಕಳಿಗೆ ಕಥೆ ಹೇಳುವ ವಿಧಾನದಲ್ಲಿ ಕೆಲವೊಂದು ನೀತಿಗಳನ್ನು ತಿಳಿಸಿರುವ ಸಮಿತಿಯು, ನಿಜ ಜೀವನದ ಅನುಭವಗಳನ್ನು ಬಳಸಿಕೊಂಡು ವಿವಿಧ ಹಂತಗಳಲ್ಲಿ ಸಂವಾದಾತ್ಮಕ ಪಠ್ಯಕ್ರಮಗಳನ್ನು ಅಭಿವೃದ್ಧಿಪಡಿಸುವ ವಿಧಾನಗಳನ್ನು ಡಾಕ್ಯುಮೆಂಟ್ ಸೂಚಿಸಿದೆ. 6 ರಿಂದ 8 ವರ್ಷ ವಯಸ್ಸಿನ ಮಕ್ಕಳಿಗೆ ಸರಳವಾದ ಹಾಗೂ ಆಕರ್ಷಕ ಪಠ್ಯಪುಸ್ತಕಗಳನ್ನು ಪರಿಗಣಿಸಬೇಕು ಎಂದು ಸಮಿತಿ ಸೂಚಿಸಿದೆ. ತರಗತಿಯಲ್ಲಿ ಬೋಧಿಸುವುದಕ್ಕೆ ಮಾತ್ರವೇ ಒತ್ತು ನೀಡದೇ ಮಕ್ಕಳಿಗೆ ಸ್ವಂತವಾಗಿ ಯೋಜನೆಗಳನ್ನು ನಿರ್ಮಿಸಲು ಹಾಗೂ ಕೆಲಸದ ದಾಖಲೆಯಾಗಿ ಕಾರ್ಯಪುಸ್ತಕಗಳನ್ನು ತಯಾರಿಸುವ ಉದ್ದೇಶ ಪಠ್ಯಕ್ರಮದಲ್ಲಿರಬೇಕು ಎಂದು ತಿಳಿಸಿದ್ದಾರೆ.


ಶಿಕ್ಷಣ ಅಡಿಪಾಯದ ಹಂತದಲ್ಲಿ ರೂಪುಗೊಂಡ ಪರಿಕಲ್ಪನೆಗಳು ಹೆಚ್ಚಾಗಿ ಗ್ರಹಿಸುವ ಮತ್ತು ಪ್ರಾಯೋಗಿಕವಾಗಿದೆ ಆದರೆ ಸಿದ್ಧಾಂತಕ್ಕೆ ಪೂರಕವಾದುದಲ್ಲ ಎಂದು ಸಮಿತಿ ತಿಳಿಸಿದೆ. ವಿಷಯವು ಮಗುವಿನ ಇಂದ್ರಿಯಗಳನ್ನು ಸಕ್ರಿಯಗೊಳಿಸಬೇಕು ಹಾಗೂ ಅಭಿವೃದ್ಧಿ ಹೊಂದುತ್ತಿರುವ ಮತ್ತು ಬೆಳೆಯುತ್ತಿರುವ ಸಾಂಸ್ಕೃತಿಕ, ಭೌಗೋಳಿಕ ಮತ್ತು ಸಾಮಾಜಿಕ ಸಂದರ್ಭವನ್ನು ಪ್ರತಿಬಿಂಬಿಸಬೇಕು ಎಂದು ಅದು ಸೇರಿಸುತ್ತದೆ.


ಅನುಷ್ಟಾನದ ಬಗ್ಗೆ ಚಿಂತಿಸಿರುವ ತಜ್ಞರು


DLF ಫೌಂಡೇಶನ್ ಶಾಲೆಗಳ ಶಿಕ್ಷಣದ (ನಾವೀನ್ಯತೆಗಳು ಮತ್ತು ತರಬೇತಿ) ಅಧ್ಯಕ್ಷೆ ಮತ್ತು ಕಾರ್ಯನಿರ್ವಾಹಕ ನಿರ್ದೇಶಕರಾದ ಅಮೀತಾ ಮುಲ್ಲಾ ವಾಟಾಲ್ ಅವರು ತಿಳಿಸಿರುವಂತೆ ಶಿಕ್ಷಣ ಡಾಕ್ಯುಮೆಂಟ್ ಅನ್ನು ಹೆಚ್ಚು ವೈಜ್ಞಾನಿಕವಾಗಿ ವಿನ್ಯಾಸಗೊಳಿಸಲಾಗಿದೆ ಮತ್ತು ಮಕ್ಕಳಿಗೆ ಬೋಧನೆಗೆ ಪೂರಕವಾಗಿರುವ ಮುಖ್ಯವಾದ ಅಂಶಗಳನ್ನು ಒಳಗೊಂಡಿದೆ. ಆದರೆ ಇವುಗಳನ್ನು ಕಾರ್ಯಗತಗೊಳಿಸುವುದು ಒಂದು ಸವಾಲಾಗಿದೆ ಎಂದು ತಿಳಿಸಿದ್ದಾರೆ.


ಇದನ್ನೂ ಓದಿ: ವಿದೇಶದಲ್ಲಿ ಕಲಿತವರು ವೃತ್ತಿ ಜೀವನದಲ್ಲಿ ಹೆಚ್ಚು ಯಶಸ್ವಿಯಾಗಲು ಕಾರಣ ಇಲ್ಲಿದೆ


ಡಾಕ್ಯುಮೆಂಟ್ ಅನ್ನು ಮಕ್ಕಳಿಗೆ ಬೋಧಿಸುವ ಮೊದಲು ಶಿಕ್ಷಕರಿಗೆ ಇದರ ಬಗ್ಗೆ ಸರಿಯಾದ ತರಬೇತಿ ನೀಡಬೇಕು ಎಂಬುದು ಅಮೀತಾ ಅವರ ಸಲಹೆಯಾಗಿದೆ. ಶಿಕ್ಷಕರಿಗೆ ಕನಿಷ್ಟ ಪಕ್ಷ 3-5 ವರ್ಷಗಳ ತರಬೇತಿಯನ್ನು ನೀಡಬೇಕು ಎಂದು ಅಮೀತಾ ಸೂಚಿಸಿದ್ದಾರೆ.


ವಿಷಯವನ್ನು ಹೇಗೆ ಸುಧಾರಿಸಲಾಗಿದೆ


ಮಕ್ಕಳ ವೈಯಕ್ತಿಕ ಗುಣಲಕ್ಷಣಗಳನ್ನು ವಿಷಯವು ಹೊಂದುವಂತಿರಬೇಕು. ಅಡುಗೆ, ಪ್ರಯಾಣ, ಮತ್ತು ಜಾನಪದ ಹಾಡುಗಳು, ಕಥೆಗಳು, ಹಬ್ಬಗಳು ಮತ್ತು ನಿರ್ದಿಷ್ಟ ಸಮುದಾಯ ಅಥವಾ ಗುಂಪಿನ ಆಚರಣೆಗಳಂತಹ ಚಟುವಟಿಕೆಗಳು ಬೋಧನೆಗೆ ಯೋಗ್ಯವಾಗಿವೆ ಮತ್ತು ಪಠ್ಯಕ್ರಮದ ಭಾಗವಾಗಿರಬೇಕು ಎಂದು ಡಾಕ್ಯುಮೆಂಟ್ ತಿಳಿಸಿದೆ.

First published: