• Home
  • »
  • News
  • »
  • education
  • »
  • Parenting: ನಿಮ್ಮ ಮಕ್ಕಳ ಬಳಿ ಈ ನಾಲ್ಕು ವಿಷಯಗಳನ್ನು ಕೇಳಲೇ ಬೇಡಿ

Parenting: ನಿಮ್ಮ ಮಕ್ಕಳ ಬಳಿ ಈ ನಾಲ್ಕು ವಿಷಯಗಳನ್ನು ಕೇಳಲೇ ಬೇಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

95% ಅಂಕಗಳಿಸುವುದು ಕೆಟ್ಟದಲ್ಲ ಹಾಗೆ ಗಳಿಸದೆ ಇರುವುದು ಕೂಡ ಕೆಟ್ಟದಲ್ಲ. ಕೆಲವೊಮ್ಮೆ ಆ ಹೇರಿಕೆಯನ್ನು ಹೇರಿದಾಗ ಅವರು ಒತ್ತಡಕ್ಕೆ ಒಳಗಾಗುತ್ತಾರೆ.

  • News18 Kannada
  • Last Updated :
  • Karnataka, India
  • Share this:

ಶಾಲೆಗೆ (School) ಹೋಗುತ್ತಿರುವ ಮಕ್ಕಳ (Children) ಬಳಿ ಕೆಲವೊಂದು ವಿಷಯಗಳನ್ನು ಕೇಳಬಾರದು. ಮತ್ತು ಕೆಲವು ಸಂಗತಿಗಳನ್ನು ಅವರ ಮೇಲೆ ಹೇರಿಕೆ ಮಾಡಬಾರದು. ಹಾಗೆ ಮಾಡಿದರೆ ನಿಮ್ಮ ಮಕ್ಕಳ ಬಾಲ್ಯದ ಬೆಳವಣಿಗೆ (Growth) ಮೇಲೆ ಅಡ್ಡ ಪರಿಣಾಮ ಉಂಟಾಗುತ್ತದೆ. ಹಾಗಾಗಿ ಈ ಕೆಳಗೆ ನೀಡಿರುವ ವಿಷಯಗಳನ್ನು (Subject) ಖಂಡಿತ ನಿಮ್ಮ ಮಕ್ಕಳ ಬಳಿ ಚರ್ಚೆ ಮಾಡಬೇಡಿ. ಒತ್ತಾಯ ಪೂರ್ವಕವಾಗಿ ಹೇರಿಕೆ ಮಾಡಬೇಡಿ. 95% ಅಂಕಗಳಿಸಬೇಕು (Marks) ಎನ್ನುವುದು ಒಂದು ಸಾಮಾನ್ಯ ಮಾತಾಗಿ ಬಿಟ್ಟಿದೆ ಪ್ರತಿಯೊಂದು ಮಗುವಿಗೂ ಅದರದೇ ಆದ ನಿಗದಿತ ಸಾಮರ್ಥ್ಯವಿರುತ್ತದೆ ಅದನ್ನು ಮೀರಿ ಹೇರಿಕೆ ಮಾಡಿದರೆ ಅದು ಖಂಡಿತ ತಪ್ಪಾಗುತ್ತದೆ.


95% ಅಂಕಗಳಿಸುವುದು ಕೆಟ್ಟದಲ್ಲ ಹಾಗೆ ಗಳಿಸದೆ ಇರುವುದು ಕೂಡ ಕೆಟ್ಟದಲ್ಲ. ಕೆಲವೊಮ್ಮೆ ಆ ಹೇರಿಕೆಯನ್ನು ಹೇರಿದಾಗ ಅವರು ಒತ್ತಡಕ್ಕೆ ಒಳಗಾಗುತ್ತಾರೆ. ಗಟ್ಟಿಹೊಡೆದು ಬಾಯಿಪಾಠ ಮಾಡಿ ಪರೀಕ್ಷೆಯಲ್ಲಿ ಬರೆದಾಗ ಕ್ಲಾಸ್ಗೆ ಮೊದಲ ಸ್ಥಾನ ಪಡೆಯಬಹುದು. ಆದರೆ ಅವರಿಗೆ ಆ ಒಂದು ವಿಷಯದ ತೀವ್ರತೆ ಅರ್ಥವಾಗುವುದಿಲ್ಲ. ಸ್ಪರ್ಧಾತ್ಮಕ ಪರೀಕ್ಷೆ ಇಂತವರಿಗೆ ಕಷ್ಟ ಎನಿಸುತ್ತದೆ.‌ ಓದಿ ಅರ್ಥ ಮಾಡಿಕೊಂಡಾಗ ಮಾತ್ರ ವಿಷಯದ ಜ್ಞಾನ ನಿಮ್ಮ ಮಕ್ಕಳಲ್ಲಿ ಬೆಳೆಯುತ್ತದೆ. ಹಾಗಾಗಿ ಹೆಚ್ಚು ಅಂಕದ ಹೇರಿಕೆ ಮಾಡಬೇಡಿ.


ದಡ್ಡರ ಜೊತೆ ಸೇರ ಬೇಡ
ಓದುವ ಮಕ್ಕಳ ಜೊತೆ ಮಾತನಾಡಬೇಕು, ದಡ್ದರ ಜೊತೆ ಸೇರಬಾರದು ಎಂದು ಎಲ್ಲಾ ಪಾಲಕರೂ ಸಹ ತಮ್ಮ ಮಕ್ಕಳ ಬಳಿ ಹೇಳಿರುತ್ತಾರೆ.‌ ಈ ಮಾತೂ ಸಹ ಖಂಡಿತ ತಪ್ಪು. ಎಲ್ಲಾ ವಿದ್ಯಾವಂತರು ಒಳ್ಳೆಯರಲ್ಲ ಮತ್ತು ಎಲ್ಲಾ ದಡ್ಡರು ಕೆಟ್ಟವರಲ್ಲ. ನಾನು ಜಾಣ ಎಂಬ ಕಾರಣಕ್ಕೆ ಅವರಿಗೆ ಜಂಬವಿದ್ದು ಓದುವ ಹವ್ಯಾಸ ಜೊತೆಗೆ ಆ ಜಂಬವನ್ನು ಸಹ ಅವರು ಅಳವಡಿಸಿಕೊಂಡಿರಬಹುದು. ಆ ಗುಣ ನಿಮ್ಮ ಮಕ್ಕಳಲ್ಲಿಯೂ ಬೆಳೆಯಬಹುದು. ದಡ್ಡರ ಜೊತೆ ಬರೆತರೆ ಅವರಿಗೆ ಗೊತ್ತಿರದ ವಿಷಯಗಳನ್ನು ಹೇಳಿ ತಿಳಿಸಿ ತಮ್ಮ ಜ್ಞಾನವನ್ನು ಬೆಳಗಿಸಲು ಸಾಧ್ಯವಾಗಬಹುದು.


ಇದನ್ನೂ ಓದಿ: ಪರೀಕ್ಷೆಯ ಹಿಂದಿನ ರಾತ್ರಿ ಎಷ್ಟು ಗಂಟೆ ನಿದ್ರೆ ಮಾಡಿದ್ರೆ ಒಳ್ಳೆಯ ಮಾರ್ಕ್ಸ್ ಸಿಗುತ್ತೆ


ಪ್ರತಿ ವಿಷಯದಲ್ಲೂ ಗೆಲ್ಲಲೇಬೇಕು
'ನೀನು ಗೆಲ್ಲುತ್ತಿಯೋ ಅಥವಾ ಸೋಲುತ್ತಿಯೋ ಅದು ಬೇಡವಾದ ವಿಷಯ. ನಿನ್ನ ಪರಿಶ್ರಮ ನಿನ್ನ ಕೈಯಲ್ಲಿ ಎಷ್ಟು ಆಗುತ್ತೋ ಅದನ್ನು ಮಾಡು ಸಾಕು'. ಎಂದು ಹೇಳಬೆಕು ಹೊರತಾಗಿ ಎಲ್ಲದರಲ್ಲೂ ನೀನೆ ಗೆಲ್ಲಬೇಕು ಎಂದು ಹೇಳಿಕೊಡಬಾರದು ಒಮ್ಮೆ ಸೋತರೂ ಕೂಡ ನಿಮ್ಮ ಮಕ್ಕಳು ಖಿನ್ನರಾಗುತ್ತಾರೆ. ನಿರಾಸೆ ಮೂಡುತ್ತದೆ.


ಇದನ್ನೂ ಓದಿ: ನಿಮ್ಮಿಷ್ಟದ ವಿಷಯವನ್ನು ಈಗ ನೀವೇ ಕಲಿಯಬಹುದು!


ಜೀವನದಲ್ಲಿ ಪರಿಶ್ರಮ ಹಾಕಿದ ಎಲ್ಲಾ ಕೆಲಸಗಳಲ್ಲಿ ನಮಗೆ ಯಶಸ್ಸು ಸಿಗುವುದಿಲ್ಲ. ಕೆಲವೊಮ್ಮೆ ಶಕ್ತಿ ಮೀರಿ ಪರಿಶ್ರಮ ಹಾಕಿದರು ಅದಕ್ಕೆ ತಕ್ಕ ಫಲ ಸಿಗುವುದಿಲ್ಲ. ಈ ವಿಷಯವನ್ನು ಚಿಕ್ಕ ಮಕ್ಕಳಿಗೆ ಹೇಳಲು ಆಗುವುದಿಲ್ಲ ಮತ್ತು ಹೇಳಿದರು ಅವರಿಗೆ ಅರ್ಥ ಆಗುವುದಿಲ್ಲ. ಹಾಗಾಗಿ ಈ ವಿಚಾರದ ಬಗ್ಗೆ ಈ ರೀತಿ ಅಭಿಪ್ರಾಯ ಸೃಷ್ಟಿಸಬಾರದು.


ಇನ್ನೊಂದು ಮಗುವಿನೊಂದಿಗೆ ಹೋಲಿಕೆ ಬೇಡ
ನೀನು ಅವನಂತಾಗಬೇಕು ಅಥವಾ ಅವಳಂತಾಗಬೇಕು ಎನ್ನುವುದಕ್ಕಿಂತ ನೀನು ನಿನ್ನಂತಾಗು ಎನ್ನುವುದು ಸೂಕ್ತ.

First published: