NEET UG Result 2022: ನೀಟ್​ ಯುಜಿ ಫಲಿತಾಂಶ ಬಿಡುಗಡೆ; ಕರ್ನಾಟಕದ ಹೃಷಿಕೇಶ್​​ ದೇಶಕ್ಕೆ ಮೂರನೇ ಸ್ಥಾನ

Neet UG 2022 Result List: ಕರ್ನಾಟಕದ ಹೃಷಿಕೇಶ್​ ನಾಗಭೂಷಣ್​ ಗಂಗೂಲೆ ದೇಶಕ್ಕೆ ಮೂರನೇ ಸ್ಥಾನ ಪಡೆಯುವ ಮೂಲಕ ರಾಜ್ಯದಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
     ಪದವಿ ಪೂರ್ವ ವೈದ್ಯಕೀಯ ಕೋರ್ಸ್​ಗಳ (Medical course) ಪ್ರವೇಶಕ್ಕೆ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA)  ನಡೆಸುವ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (NEET UG-2022) ಫಲಿತಾಂಶ ಪ್ರಕಟವಾಗಿದೆ. ಫಲಿತಾಂಶದ ಜೊತೆಗೆ, NEET 2022 ಗಾಗಿ ಕ್ಯಾಟಗರಿಯ ಕಟ್ಆಫ್ ಅನ್ನು ಕೂಡ ಬಿಡುಗಡೆ ಮಾಡಲಾಗಿದೆ. ಈ ಬಾರಿ ನೀಟ್​ ಪರೀಕ್ಷೆಯಲ್ಲಿ ರಾಜಸ್ಥಾನದ ತನಿಷ್ಕಾ ಮೊದಲ ಸ್ಥಾನ ಪಡೆದಿದ್ದಾರೆ. ನಂತರದ ಸ್ಥಾನದಲ್ಲಿ ವತ್ಸ ಆಶಿಶ್ ಬಾತ್ರಾ ಮತ್ತು ಹೃಷಿಕೇಶ್ ನಾಗಭೂಷಣ್ ಗಂಗೂಲೆ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಪಡೆದಿದ್ದಾರೆ.

    ಕರ್ನಾಟಕದ ಹೃಷಿಕೇಶ್​ ನಾಗಭೂಷಣ್​ ಗಂಗೂಲೆ ದೇಶಕ್ಕೆ ಮೂರನೇ ಸ್ಥಾನ ಪಡೆಯುವ ಮೂಲಕ ರಾಜ್ಯದಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ. ಯುವತಿಯರಲ್ಲಿ ಕರ್ನಾಟಕದ ರುಚ ಪಾಶ್ವೆ ಮತ್ತು ಶುಭ ಕೌಶಿಕ್​ ಕೂಡ ಟಾಪರ್​ ಸ್ಥಾನದಲ್ಲಿ ಹೊರ ಹೊಮ್ಮಿದ್ದಾರೆ.
    ಅಭ್ಯರ್ಥಿಗಳು ಇನ್ನು ನೀಟ್​ ಫಲಿತಾಂಶವನ್ನು ಎನ್​ಟಿಎ ಅಧಿಕೃತದ ವೆಬ್​ಸೈಟ್​ನಲ್ಲಿ neet.nta.nic.in, ಅಥವಾ nta.ac.in ಪಡೆಯಬಹುದಾಗಿದೆ. ನೀಟ್​ ಮೂಲಕ ಅಭ್ಯರ್ಥಿಗಳು ಎಂಬಿಬಿಎಸ್​, ಬಿಡಿಎಸ್​, ಬಿಎಸ್ಸಿ ನರ್ಸಿಂಗ್​ ಮತ್ತು ಆಯುಷ್​ ಕೋರ್ಸ್​ಗೆ ಪ್ರವೇಶ ಪಡೆಯಬಹುದಾಗಿದೆ.

    ಉತ್ತರವನ್ನು ಈ ರೀತಿ ಪರಿಶೀಲಿಸಿ
    -ನೀಟ್‌ ಅಧಿಕೃತ ವೆಬ್‌ಸೈಟ್‌ neet.nta.nic.inಗೆ ಭೇಟಿ ನೀಡಿ.
    -ಮುಖಪುಟದಲ್ಲಿ "NEET UG 2022 Result" ಲಿಂಕ್‌ ಮೇಲೆ ಕ್ಲಿಕ್‌ ಮಾಡಿ.
    -ನಂತರ ನಿಮ್ಮ ಲಾಗಿನ್‌ ಐಡಿ, ಜನ್ಮ ದಿನಾಂಕ, ನೋಂದಣಿ ಸಂಖ್ಯೆಯನ್ನು ನಮೂದಿಸಿ.
    -ಆಗ ನಿಮಗೆ ನೀಟ್‌ ಯುಜಿ ಕೀ ಉತ್ತರಗಳು ಪರದೆಯ ಮೇಲೆ ಕಾಣಿಸುತ್ತದೆ.ಅದನ್ನು ಡೌನ್‌ಲೋಡ್‌ ಮಾಡಿಕೋಂಡು, ಪ್ರಿಂಟ್‌ ತೆಗೆದುಕೊಳ್ಳಿ

    ಇದನ್ನು ಓದಿ: ಬಿಇಎಲ್​ನಲ್ಲಿ 50 ಅಪ್ರೆಂಟಿಸ್​ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ; ಲಿಖಿತ ಪರೀಕ್ಷೆ ಇಲ್ಲ

    ಉಮಾಂಗ್​ ಆ್ಯಪ್​ನಲ್ಲೂ ಪಡೆಯಬಹುದು ಫಲಿತಾಂಶ
    -ಅಭ್ಯರ್ಥಿಗಳು ತಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯೊಂದಿಗೆ UMANG ಅಪ್ಲಿಕೇಶನ್‌ಗೆ ಲಾಗ್ ಇನ್ ಮಾಡಿ
    -ಬಳಿಕ, 'ಎಲ್ಲಾ ಸೇವೆಗಳು' ಕ್ಲಿಕ್ ಮಾಡಿ
    -ಮೆನುವಿನಲ್ಲಿ NEET 2022 ಆಯ್ಕೆಯನ್ನು ಆರಿಸಿ
    -ಫಲಿತಾಂಶದ ಲಿಂಕ್ ಅನ್ನು ಕ್ಲಿಕ್ ಮಾಡಿ
    -ನಿಮ್ಮ ನೋಂದಣಿ ಸಂಖ್ಯೆ ಮತ್ತು ಇತರ ಅಗತ್ಯವಿರುವ ರುಜುವಾತುಗಳನ್ನು ನಮೂದಿಸಿ
    ಫಲಿತಾಂಶವನ್ನು ಪರದೆಯ ಮೇಲೆ ಪ್ರದರ್ಶಿಸಲಾಗುತ್ತದೆ.

    ಜುಲೈನಲ್ಲಿ ನಡೆದಿದ್ದ ಪರೀಕ್ಷೆ
    ಈ ವರ್ಷ ಪೆನ್​ ಅಂಡ್​ ಪೇಪರ್​ ಮಾದರಿಯಲ್ಲಿ ನೀಟ್​ ಯುಜಿ ಪರೀಕ್ಷೆಯನ್ನು ಎನ್​ಟಿಎ ನಡೆಸಿತ್ತು. ಜುಲೈ 17ರಂದು ದೇಶಾದ್ಯಂತ ಏಕಕಾಲದಕ್ಕೆ 497 ನಗರದಲ್ಲಿ 3570 ಕೇಂದ್ರದಲ್ಲಿ ಈ ಪರೀಕ್ಷೆ ನಡೆದಿತ್ತು. ಜೊತೆಗೆ ದೇಶದ ಹೊರಗೆ 14 ನಗರದಲ್ಲೂ ಕೂಡ ಈ ಪರೀಕ್ಷೆಗೆ ಅಭ್ಯರ್ಥಿಗಳು ಹಾಜರಾಗಿದ್ದರು. ಸರಿಸುಮಾರು 18 ಲಕ್ಷ ವಿದ್ಯಾರ್ಥಿಗಳು ಈ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು. ಇದರಲ್ಲಿ ಶೇ 90ರಷ್ಟು ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.

    ಇದನ್ನು ಓದಿ: ಇಂದು ನೀಟ್​ ಯುಜಿ ಕೀ ಉತ್ತರ ಬಿಡುಗಡೆ ಸಾಧ್ಯತೆ; ಈ ರೀತಿ ಫಲಿತಾಂಶ ಪರೀಕ್ಷಿಸಿ

    ಶೇಕಡಾವಾರು ಆಧಾರದ ಮೇಲೆ NEET​ ಲೆಕ್ಕಾಚಾರ

    NEET ಫಲಿತಾಂಶವನ್ನು ಶೇಕಡಾವಾರು ಆಧಾರದ ಮೇಲೆ ಲೆಕ್ಕಹಾಕಲಾಗುತ್ತದೆ ಹೊರತು ಪರ್ಸಂಟೈಲ್​ ಅಂಕಗಳ ಮೇಲೆ ಅಲ್ಲ. ಶೇಕಡಾವಾರು ಸ್ಕೋರಿಂಗ್ ಪ್ರಮುಖವಾಗಿದೆ. ಪದವಿ ಪೂರ್ವ ವೈದ್ಯಕೀಯ ಕೋರ್ಸ್‌ಗಳಿಗೆ ಪ್ರವೇಶಕ್ಕಾಗಿ NEET ನಲ್ಲಿ ಅಖಿಲ ಭಾರತ ಸಾಮಾನ್ಯ ಮೆರಿಟ್ ಪಟ್ಟಿಯಲ್ಲಿ ಗಳಿಸಿದ ಅತ್ಯಧಿಕ ಅಂಕಗಳ ಆಧಾರದ ಮೇಲೆ ಶೇಕಡಾವಾರು ನಿರ್ಧರಿಸಲಾಗುತ್ತದೆ. ಉತ್ತೀರ್ಣರಾಗಲು, ಕಾಯ್ದಿರಿಸದ ವರ್ಗಕ್ಕೆ ಅಭ್ಯರ್ಥಿಗಳಿಗೆ ಶೇಕಡಾ 50 ಅಂಕಗಳ ಅಗತ್ಯವಿದೆ.

    ನೀಟ್​ ಯುಜಿ 2022ರ ಅಂಕಗಳನ್ನು ಸಾಮಾನ್ಯ ಮೆರಿಟ್​ ಲಿಸ್ಟ್​ ಆಧಾರದ ಮೇಲೆ ಅತಿ ಹೆಚ್ಚು ಅಂಕಗಳಿಸಿದವರ ಆಯ್ಕೆ ನಡೆಸಲಾಗುವುದು. ಸಾಮಾನ್ಯ ವರ್ಗದ ಅಭ್ಯರ್ಥಿಗಳು ನೀಟ್​ನ ಕಟ್​ ಆಫ್​ ಅಂಕಗಳಿಗಿಂತ ಹೆಚ್ಚು ಅಂಕ ಪಡೆಬೇಕಿದೆ. ಅಂದರೆ, 720 -138 ಶ್ರೇಣಿ. ಇನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗದ ಅಭ್ಯರ್ಥಿಗಳು 137-108 ಅಂಕಗಳನ್ನು ಪಡೆಬೇಕಿದೆ.
    Published by:Seema R
    First published: