NEET UG 2022 ಪರೀಕ್ಷೆಯ ಆನ್ಸರ್ ಕೀ ಬಿಡುಗಡೆ: ಇದನ್ನು ಇಲ್ಲಿ ಈ ರೀತಿ ಡೌನ್​ಲೋಡ್​​ ಮಾಡಿ

ಯಾವುದೇ ಪರೀಕ್ಷೆಯನ್ನು ಬರೆದ ನಂತರ ಆ ಪರೀಕ್ಷೆಯಲ್ಲಿ ಕೇಳಲಾದ ಪ್ರಶ್ನೆಗಳಿಗೆ ಸರಿಯಾದ ಉತ್ತರಗಳು ಯಾವುವು ಅಂತ ಅಧಿಕೃತವಾಗಿ ಪರೀಕ್ಷಾ ಮಂಡಳಿಯವರು ಬಿಡುಗಡೆ ಮಾಡುತ್ತಾರೆ. ಅಧಿಕೃತ ಅಧಿಸೂಚನೆಯ ಪ್ರಕಾರ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್ ಯುಜಿ 2022) ಗಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಆಗಸ್ಟ್ 30 ರ ಮಂಗಳವಾರದ ಅಂದ್ರೆ ಇಂದು ಈ ಕೀ ಉತ್ತರಗಳನ್ನು ಬಿಡುಗಡೆ ಮಾಡಲಿದೆ.

ನೀಟ್ ಯುಜಿ 2022

ನೀಟ್ ಯುಜಿ 2022

  • Share this:
ಸಾಮಾನ್ಯವಾಗಿ ವಿದ್ಯಾರ್ಥಿಗಳು ಯಾವುದೇ ಪ್ರವೇಶ ಪರೀಕ್ಷೆಗಳನ್ನು (Entrance Test) ಬರೆದರೆ, ಅವರಿಗೆ ಆ ಪರೀಕ್ಷೆಯಲ್ಲಿನ ಫಲಿತಾಂಶದ (Result) ಬಗ್ಗೆ ಸ್ವಲ್ಪನಾದರೂ ಕಾತುರತೆ, ಆತಂಕ ಇದ್ದೇ ಇರುತ್ತದೆ. ಈಗ ಇದೇ ರೀತಿಯ ನರ್ವಸ್ನೆಸ್ ಜುಲೈ 17 ರಂದು ನಡೆದ ನೀಟ್ ಯುಜಿ 2022 (NEET UG 2022) ಪರೀಕ್ಷೆಯನ್ನು ಬರೆದ ಲಕ್ಷಾಂತರ ವಿದ್ಯಾರ್ಥಿಗಳಿಗಿದೆ. ಇವರೆಲ್ಲಾ ತುಂಬಾನೇ ಕಾತುರತೆಯಿಂದ ಆ ಪರೀಕ್ಷೆಯಲ್ಲಿ ಕೇಳಲಾದ ಬಹು ಆಯ್ಕೆಯ ಪ್ರಶ್ನೆಗಳ ಉತ್ತರಗಳನ್ನು (Answers) ಯಾವಾಗ ಬಿಡುಗಡೆ ಮಾಡುತ್ತಾರೆ ಅಂತ ಎದುರು ನೋಡುತ್ತಿದ್ದಾರೆ. ಹೌದು.. ಯಾವುದೇ ಪರೀಕ್ಷೆಯನ್ನು ಬರೆದ ನಂತರ ಆ ಪರೀಕ್ಷೆಯಲ್ಲಿ ಕೇಳಲಾದ ಪ್ರಶ್ನೆಗಳಿಗೆ (Question) ಸರಿಯಾದ ಉತ್ತರಗಳು ಯಾವುವು ಅಂತ ಅಧಿಕೃತವಾಗಿ ಪರೀಕ್ಷಾ ಮಂಡಳಿಯವರು ಬಿಡುಗಡೆ ಮಾಡುತ್ತಾರೆ.

ಅಧಿಕೃತ ಅಧಿಸೂಚನೆಯ ಪ್ರಕಾರ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್ ಯುಜಿ 2022) ಗಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಆಗಸ್ಟ್ 30 ರ ಮಂಗಳವಾರದ ಅಂದ್ರೆ ಇಂದು ಈ ಕೀ ಉತ್ತರಗಳನ್ನು ಬಿಡುಗಡೆ ಮಾಡಲಿದೆ.

ನೀಟ್ ಕೀ ಉತ್ತರಗಳನ್ನು ನೋಡುವುದು ಹೇಗೆ
ನೀಟ್ ಯುಜಿ 2022 ಪ್ರಶ್ನೆ ಪತ್ರಿಕೆಯಲ್ಲಿನ ಪ್ರಶ್ನೆಗಳ ಕೀ ಉತ್ತರಗಳು ಅಪ್ಲಿಕೇಶನ್ ಸಂಖ್ಯೆ ಮತ್ತು ಪಾಸ್ವರ್ಡ್ ಬಳಸಿ neet.nta.nic.in ಅಧಿಕೃತ ವೆಬ್‌ಸೈಟ್ ನಲ್ಲಿ ಡೌನ್ಲೋಡ್ ಮಾಡಿಕೊಳ್ಳಲು ಲಭ್ಯವಿರುತ್ತದೆ. ನೀಟ್ ಕೀ ಉತ್ತರಗಳು 2022 ಹೊಂದಿರುವ ಪಿಡಿಎಫ್ ಫೈಲ್ ಪರದೆಯ ಮೇಲೆ ಕಾಣಿಸಿಕೊಳ್ಳುತ್ತದೆ, ಇದನ್ನು ಡೌನ್ಲೋಡ್ ಮಾಡಿಕೊಳ್ಳಿ ಮತ್ತು ಹೆಚ್ಚಿನ ಉಲ್ಲೇಖಕ್ಕಾಗಿ ಪ್ರಿಂಟ್ಔಟ್ ಅನ್ನು ಸಹ ನೀವು ತೆಗೆದುಕೊಳ್ಳಬಹುದು.

ಇ-ಮೇಲ್ ವಿಳಾಸಕ್ಕೆ ಬರಲಿದೆ ಸ್ಕ್ಯಾನ್ ಮಾಡಿದ ಉತ್ತರ ಪತ್ರಿಕೆಯ ಫೋಟೋ 
ಎನ್‌ಟಿಎ, ಅಭ್ಯರ್ಥಿಗಳಿಗೆ ಕೀ ಉತ್ತರಗಳ ಬಗ್ಗೆ ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶವನ್ನು ಸಹ ಒದಗಿಸುತ್ತದೆ, ಅವರು ಪ್ರತಿ ಪ್ರಶ್ನೆಗೆ 200 ರೂಪಾಯಿಗಳ ಶುಲ್ಕವನ್ನು ಪಾವತಿಸುವ ಮೂಲಕ ತಮಗಿರುವ ಆಕ್ಷೇಪಣೆಯನ್ನು ಸಲ್ಲಿಸಬಹುದು. "ಅಭ್ಯರ್ಥಿಗಳಿಗೆ ಅನುಕೂಲವಾಗುವಂತೆ, ನೀಟ್ (ಯುಜಿ) - 2022 ರ ಆನ್ಲೈನ್ ಅರ್ಜಿ ನಮೂನೆಯನ್ನು ಸಲ್ಲಿಸುವ ಸಮಯದಲ್ಲಿ ಅಭ್ಯರ್ಥಿಗಳು ನೀಡಿದ ನೋಂದಾಯಿತ ಇ-ಮೇಲ್ ವಿಳಾಸಕ್ಕೆ ಒಎಂಆರ್ ಉತ್ತರ ಪತ್ರಿಕೆಯ ಸ್ಕ್ಯಾನ್ ಮಾಡಿದ ಫೋಟೋವನ್ನು ಸಹ ಕಳುಹಿಸಲಾಗುತ್ತದೆ.

ಇದನ್ನೂ ಓದಿ: Career in UI/UX Designing: ಕಡಿಮೆ ಖರ್ಚಿನಲ್ಲಿ ಈ ಕೋರ್ಸ್ ಮಾಡಿ ಲಕ್ಷ ಲಕ್ಷ ಗಳಿಸಿ: ಬೆಂಗಳೂರಲ್ಲೇ ಓದಬಹುದು

"ಅಭ್ಯರ್ಥಿಗಳಿಗೆ ಪ್ರತಿ ಉತ್ತರಕ್ಕೆ 200 ರೂಪಾಯಿಗಳ ಮರುಪಾವತಿಸಲಾಗದ ಸಂಸ್ಕರಣಾ ಶುಲ್ಕವನ್ನು ಪಾವತಿಸುವ ಮೂಲಕ ತಾತ್ಕಾಲಿಕ ಕೀ ಉತ್ತರಗಳ ವಿರುದ್ಧ ಆನ್ಲೈನ್ ಸವಾಲನ್ನು ಮಾಡಲು ನಿರ್ದಿಷ್ಟ ಅವಧಿಯೊಳಗೆ ಅವಕಾಶ ನೀಡಲಾಗುವುದು" ಎಂದು ಎನ್‌ಟಿಎ ಅಧಿಸೂಚನೆ ತಿಳಿಸಿದೆ.

ನೀಟ್ ಯುಜಿ 2022 ಕೀ ಉತ್ತರಗಳು: ಡೌನ್ಲೋಡ್ ಮಾಡುವುದು ಹೇಗೆ?

  •  ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡಿ- neet.nta.nic.in

  • ನೀಟ್ ಯುಜಿ 2022 ಕೀ ಉತ್ತರಗಳನ್ನು ವೀಕ್ಷಿಸಿ ಮತ್ತು ಆ ಲಿಂಕ್ ಅನ್ನು ಕ್ಲಿಕ್ ಮಾಡಿ

  • ನಿಮ್ಮ ಲಾಗ್-ಇನ್ ರುಜುವಾತುಗಳನ್ನು ನಮೂದಿಸಿ

  •  ನೀಟ್ ಕೀ ಉತ್ತರಗಳು 2022 ಅನ್ನು ಪರದೆಯ ಮೇಲೆ ಪ್ರದರ್ಶಿಸಲಾಗುತ್ತದೆ

  • ಕೀ ಉತ್ತರಗಳನ್ನು ಡೌನ್ ಲೋಡ್ ಮಾಡಿ, ಮತ್ತು ಹೆಚ್ಚಿನ ಬಳಕೆಗಾಗಿ ಪ್ರಿಂಟ್ಔಟ್ ಸಹ ತೆಗೆದುಕೊಳ್ಳಿ.


ಅಂತಿಮ ಕೀ ಉತ್ತರ ಮತ್ತು ಫಲಿತಾಂಶ ಸೆಪ್ಟೆಂಬರ್ 7ಕ್ಕೆ ಪ್ರಕಟ
ನೀಟ್ ಯುಜಿ 2022 ಅಂತಿಮ ಕೀ ಉತ್ತರಗಳು ಮತ್ತು ಫಲಿತಾಂಶವನ್ನು ಸೆಪ್ಟೆಂಬರ್ 7 ರಂದು ಪ್ರಕಟಿಸಲಾಗುವುದು. ಈ ಫಲಿತಾಂಶದೊಂದಿಗೆ, ಎನ್‌ಟಿಎ ನೀಟ್ ಮೆರಿಟ್ ಪಟ್ಟಿಯನ್ನು ಸಹ ಬಿಡುಗಡೆ ಮಾಡುತ್ತದೆ.

ಇದನ್ನೂ ಓದಿ:  CBSC Board Exam 2023 Class 12: ಸಿಬಿಎಸ್​​ಸಿ ವಿದ್ಯಾರ್ಥಿಗಳೇ ಅಲರ್ಟ್: ಆ.30, 31 ನಿಮ್ಮ ಡೆಡ್​​ಲೈನ್​​

ಜುಲೈ 17 ರಂದು ನಡೆದ ನೀಟ್ ಯುಜಿ 2022 ಪರೀಕ್ಷೆಯಲ್ಲಿ 18 ಲಕ್ಷಕ್ಕೂ ಹೆಚ್ಚು (18,72,341) ಅಭ್ಯರ್ಥಿಗಳು ಹಾಜರಾಗಿದ್ದರು. ಭಾರತದ 497 ನಗರಗಳನ್ನು ಹೊರತುಪಡಿಸಿ, ಅಬುಧಾಬಿ, ಬ್ಯಾಂಕಾಕ್, ಕೊಲಂಬೊ, ದೋಹಾ, ಕಠ್ಮಂಡು, ಕೌಲಾಲಂಪುರ್, ಲಾಗೋಸ್, ಮನಾಮಾ, ಮಸ್ಕತ್, ರಿಯಾದ್, ಶಾರ್ಜಾ, ಸಿಂಗಾಪುರ್ ಮತ್ತು ದುಬೈ ಮತ್ತು ಕುವೈತ್ ನಗರಗಳಲ್ಲಿಯು ಸಹ ಈ ವೈದ್ಯಕೀಯ ಪ್ರವೇಶ ಪರೀಕ್ಷೆಯನ್ನು ನಡೆಸಲಾಗಿತ್ತು.
Published by:Ashwini Prabhu
First published: