NEET 2022 Result: ಕರ್ನಾಟಕದ ಯುವಕ ದೇಶಕ್ಕೆ 3ನೇ ಸ್ಥಾನ! ಟಾಪ್ 10 ರ‍್ಯಾಂಕ್​ನಲ್ಲಿ 3 ಕನ್ನಡಿಗರು

NEET-2022 ಫಲಿತಾಂಶ ಇಂದು ಪ್ರಕಟವಾಗಿದ್ದು ಕರ್ನಾಟಕದ ಮೂವರು ವಿದ್ಯಾರ್ಥಿಗಳು ಅಖಿಲ ಭಾರತ ಶ್ರೇಣಿ ಪಟ್ಟಿಯಲ್ಲಿ ಮೊದಲ ಹತ್ತರೊಳಗೆ ಸ್ಥಾನ ಪಡೆದಿದ್ದಾರೆ. ಕರ್ನಾಟಕದ ಹೃಷಿಕೇಶ ನಾಗಭೂಷಣ ಗಂಗೂಲೆ (99.99%) ಅವರು ರಾಜ್ಯದ ಟಾಪರ್ ಮತ್ತು ಅಖಿಲ ಭಾರತ ರ‍್ಯಾಂಕ್ ಪಟ್ಟಿಯಲ್ಲಿ 3 ನೇ ಟಾಪರ್ ಆಗಿದ್ದಾರೆ.

ಹೃಷಿಕೇಶ್ ನಾಗಭೂಷಣ ಗಂಗೂಲೆ

ಹೃಷಿಕೇಶ್ ನಾಗಭೂಷಣ ಗಂಗೂಲೆ

  • Share this:
ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) NEET-2022 Results ಫಲಿತಾಂಶವನ್ನು  ಪ್ರಕಟಿಸಿದ್ದು, ಕರ್ನಾಟಕದ (Karnataka) ಮೂವರು ವಿದ್ಯಾರ್ಥಿಗಳು ಅಖಿಲ ಭಾರತ ಶ್ರೇಣಿ (AIR) ಪಟ್ಟಿಯಲ್ಲಿ ಮೊದಲ ಹತ್ತರೊಳಗೆ ಸ್ಥಾನ ಪಡೆದಿದ್ದಾರೆ. ಕರ್ನಾಟಕದ ಹೃಷಿಕೇಶ ನಾಗಭೂಷಣ ಗಂಗೂಲೆ (99.99%) (Hrishikesh Nagbhushan Gangule) ಅವರು ರಾಜ್ಯದ ಟಾಪರ್ ಮತ್ತು ಅಖಿಲ ಭಾರತ ರ‍್ಯಾಂಕ್ ಪಟ್ಟಿಯಲ್ಲಿ 3 ನೇ ಟಾಪರ್ ಆಗಿದ್ದಾರೆ. ಹೃಷಿಕೇಶ್ ನಾಗಭೂಷಣ ಗಂಗೂಲೆ ಅವರು BNYS (ಬ್ಯಾಚುಲರ್ ಆಫ್ ನ್ಯಾಚುರೋಪತಿ ಮತ್ತು ಯೋಗಿಕ್ ಸೈನ್ಸಸ್) ಮತ್ತು BVSC (ಬ್ಯಾಚುಲರ್ ಆಫ್ ವೆಟರ್ನರಿ ಸೈನ್ಸಸ್) ಸ್ಟ್ರೀಮ್‌ಗಳಲ್ಲಿ (Stream) ಜುಲೈನಲ್ಲಿ ಘೋಷಿಸಲಾದ CET ಫಲಿತಾಂಶದಲ್ಲಿ ಕೂಡ ಟಾಪರ್ ಆಗಿದ್ದರು.

ರುಚಾ ಪವಾಶೆ ರಾಜ್ಯದಲ್ಲಿ ಎರಡನೇ ಟಾಪರ್ ಮತ್ತು ಎಐಆರ್ (AIR) ಪಟ್ಟಿಯಲ್ಲಿ 4 ನೇ ಟಾಪರ್ ಆಗಿದ್ದಾರೆ. ಮಹಿಳಾ ವಿಭಾಗದಲ್ಲಿ 2ನೇ AIR ಲಿಸ್ಟ್ ಟಾಪರ್ ಎಂದೆನಿಸಿದ್ದಾರೆ. ಕೃಷ್ಣ ಎಸ್.ಆರ್. ರಾಜ್ಯದಲ್ಲಿ 3ನೇ ಟಾಪರ್ ಆಗಿದ್ದು, AIR ಪಟ್ಟಿಯಲ್ಲಿ 8ನೇ ಟಾಪರ್ ಆಗಿದ್ದಾರೆ. AIR ಪಟ್ಟಿಯಲ್ಲಿ ಕರ್ನಾಟಕದ ಒಂಭತ್ತು ವಿದ್ಯಾರ್ಥಿಗಳು ಟಾಪ್ 50ರಲ್ಲಿ ಸ್ಥಾನ ಪಡೆದಿದ್ದಾರೆ.

72,262 ವಿದ್ಯಾರ್ಥಿಗಳು ಅರ್ಹತೆ ಪಡೆದಿದ್ದಾರೆ
ಈ ವರ್ಷ ಕರ್ನಾಟಕದಿಂದ ಒಟ್ಟು 1,33,255 ವಿದ್ಯಾರ್ಥಿಗಳು NEET-2022 ಗೆ ನೋಂದಾಯಿಸಿಕೊಂಡಿದ್ದರು ಮತ್ತು 1,22,423 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಅವರಲ್ಲಿ, 2022-23ರ ಶೈಕ್ಷಣಿಕ ವರ್ಷಕ್ಕೆ ಒಟ್ಟು 72,262 ವಿದ್ಯಾರ್ಥಿಗಳು ವೈದ್ಯಕೀಯ ಸೀಟುಗಳಿಗೆ ಅರ್ಹತೆ ಪಡೆದಿದ್ದಾರೆ.

ಇದನ್ನೂ ಓದಿ: Mahalaskhmi Ravindar: 2ನೇ ಮದುವೆಗೂ ಮುನ್ನ ಆ ನಟನ ಜೊತೆ ​ಮಹಾಲಕ್ಷ್ಮಿ ಲವ್ವಿ-ಡವ್ವಿ, ಈ ಮ್ಯಾಟರ್​ ರವೀಂದರ್​ಗೂ ಗೊತ್ತಿತ್ತಂತೆ!

ವೈದ್ಯಕೀಯ ಕೋರ್ಸ್‌ಗೆ ಅರ್ಹತೆ
NEET-2022 ಪರೀಕ್ಷೆಯು ಜುಲೈ 17 ರಂದು ಭಾರತದ ಹೊರಗಿನ 14 ನಗರಗಳು ಸೇರಿದಂತೆ ದೇಶದ 497 ನಗರಗಳಲ್ಲಿ ನೆಲೆಗೊಂಡಿರುವ 3,570 ವಿವಿಧ ಕೇಂದ್ರಗಳಲ್ಲಿ ನಡೆಯಿತು. ಈ ವರ್ಷ, ಭಾರತದಾದ್ಯಂತ ಒಟ್ಟು 18,72,343 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು ಮತ್ತು 17,64,571 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಅವರಲ್ಲಿ 9,93,069 ವಿದ್ಯಾರ್ಥಿಗಳು ವೈದ್ಯಕೀಯ ಕೋರ್ಸ್‌ಗಳಿಗೆ ಅರ್ಹತೆ ಪಡೆದಿದ್ದಾರೆ.

AIR ಪಟ್ಟಿಯಲ್ಲಿ1 ನೇ ರ‍್ಯಾಂಕ್ ಗಳಿಸಿದ ತನಿಷ್ಕಾ 
ನೀಟ್ ಪರೀಕ್ಷೆಯಲ್ಲಿ ಅಗ್ರ ಸ್ಪರ್ಧಿಗಳಲ್ಲಿ ಒಬ್ಬರಾದ ತನಿಷ್ಕಾ ಅವರು AIR ಪಟ್ಟಿಯಲ್ಲಿ 1 ನೇ ರ‍್ಯಾಂಕ್ ಅನ್ನು ಗಳಿಸಿದ್ದಾರೆ. AIR ಪಟ್ಟಿಯಲ್ಲಿ ವತ್ಸಾ ಆಶಿಶ್ ಬಾತ್ರಾ 2 ನೇ ರ‍್ಯಾಂಕ್ ಗಳಿಸಿದ್ದರೆ 3 ನೇ ರ‍್ಯಾಂಕ್ ಅನ್ನು ಹೃಷಿಕೇಶ್ ನಾಗಭೂಷಣ ಗಂಗೂಲೆ ಮತ್ತು ರುಚಾ ಪಾವಾಶೆ 4 ನೇ ರ‍್ಯಾಂಕ್ ಗಳಿಸಿದ್ದಾರೆ. NEET ಫಲಿತಾಂಶಗಳು 2022 ರಲ್ಲಿ ಅವರೆಲ್ಲರೂ ಒಂದೇ ಸ್ಕೋರ್ ಗಳಿಸಿದರೆ, NTA ಯ ಹೊಸ ಟೈ-ಬ್ರೇಕರ್ ನೀತಿಯಿಂದಾಗಿ ತನಿಷ್ಕಾ ಶ್ರೇಯಾಂಕದಲ್ಲಿ ಅಗ್ರಸ್ಥಾನ ಪಡೆದರು.

ಈ ಬಗ್ಗೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಅಧಿಕಾರಿಯವರು ಏನು ಹೇಳಿದ್ದಾರೆ?
ಒಂಭತ್ತು ಅಭ್ಯರ್ಥಿಗಳು 720 ರಲ್ಲಿ 710 ಅಂಕಗಳನ್ನು ಗಳಿಸಿದರು ಮತ್ತು ಆಲ್ ಇಂಡಿಯಾ 6 ರಿಂದ 14 ನೇ ಸ್ಥಾನವನ್ನು ಪಡೆದರು. "ಟೈ ಬ್ರೇಕರ್ ನಿಯಮದ ಪ್ರಕಾರ ಒಂದೇ ರೀತಿಯ ಅಂಕಗಳನ್ನು ಗಳಿಸಿದ ಅಭ್ಯರ್ಥಿಗಳಿಗೆ ಶ್ರೇಣಿಗಳನ್ನು ನೀಡಲಾಗುತ್ತದೆ, ಅಲ್ಲಿ ಜೀವಶಾಸ್ತ್ರದಲ್ಲಿ ಹೆಚ್ಚಿನ ಅಂಕಗಳನ್ನು ಹೊಂದಿರುವ ಅಭ್ಯರ್ಥಿಯು ಉಳಿದವರಿಗಿಂತ ಹೆಚ್ಚಿನ ಸ್ಥಾನದಲ್ಲಿರುತ್ತಾರೆ. ಜೀವಶಾಸ್ತ್ರದಲ್ಲಿ ಒಂದೇ ರೀತಿಯ ಅಂಕಗಳಿದ್ದಲ್ಲಿ, ಭೌತಶಾಸ್ತ್ರ, ನಂತರ ರಸಾಯನಶಾಸ್ತ್ರಕ್ಕೆ ಅದೇ ನಿಯಮವನ್ನು ಅನ್ವಯಿಸಲಾಗುತ್ತದೆ. ಇದರ ನಂತರವೂ ಅಂಕಗಳು ಒಂದೇ ಆಗಿದ್ದರೆ, ಹಿರಿಯ ಅಭ್ಯರ್ಥಿಯು ಉನ್ನತ ಶ್ರೇಣಿಯನ್ನು ಪಡೆಯುತ್ತಾನೆ" ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ:  Teachers Day Special : ಯಾವ ದೇಶದಲ್ಲಿ ಶಿಕ್ಷಕರಿಗೆ ಹೆಚ್ಚಿನ ಸಂಬಳ, ಸೌಲಭ್ಯಗಳಿವೆ ನೋಡಿ

ಇದಲ್ಲದೆ, ಗರಿಷ್ಠ ಸಂಖ್ಯೆಯ ಟಾಪರ್‌ಗಳು ಕರ್ನಾಟಕದಿಂದ ಏಳು ವಿದ್ಯಾರ್ಥಿಗಳು 1-25 ರ ನಡುವೆ AIR ರ‍್ಯಾಂಕಿಂಗ್ ಅನ್ನು ಪಡೆದುಕೊಂಡಿದ್ದಾರೆ, ನಂತರ ಪಶ್ಚಿಮ ಬಂಗಾಳ ಮತ್ತು ಮಹಾರಾಷ್ಟ್ರ, ತಲಾ ಮೂವರು ರ‍್ಯಾಂಕ್ ಪಡೆದುಕೊಂಡಿದ್ದಾರೆ.
Published by:Ashwini Prabhu
First published: