• Home
  • »
  • News
  • »
  • education
  • »
  • Education: ಸೌತ್ ಇಂಡಿಯಾದಲ್ಲಿ ಹುಡುಗಿಯರು ಶಿಕ್ಷಣಕ್ಕೆ ಪ್ರಾಧಾನ್ಯತೆ ಕೊಡ್ತಾರಂತೆ!

Education: ಸೌತ್ ಇಂಡಿಯಾದಲ್ಲಿ ಹುಡುಗಿಯರು ಶಿಕ್ಷಣಕ್ಕೆ ಪ್ರಾಧಾನ್ಯತೆ ಕೊಡ್ತಾರಂತೆ!

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಶಿಕ್ಷಣವನ್ನು ಅರ್ಧದಲ್ಲಿಯೇ ತೊರೆಯುವಲ್ಲಿ ಹುಡುಗರಿಗಿಂತ ಹುಡುಗಿಯರ ಪ್ರಮಾಣವೇ ಹೆಚ್ಚಿದೆ. ಹೀಗಾಗಿ ಸ್ತ್ರೀ ಸಾಕ್ಷರತೆಯು ಪುರುಷ ಸಾಕ್ಷರತೆಗಿಂತ ಹಿಂದಿದೆ. ಇದಕ್ಕೆ ಕಾರಣಗಳು ಹಲವಿದ್ದು ಕೆಲವೊಂದು ಕಡೆಗಳಲ್ಲಿ ಸಂಪ್ರದಾಯಗಳು, ಪೋಷಣೆಯ ಕೊರತೆ, ದೈಹಿಕ ಅಸಾಮರ್ಥ್ಯಗಳು ಹುಡುಗಿಯರನ್ನು ಶಿಕ್ಷಣದಿಂದ ವಂಚಿತರಾಗುವಂತೆ ಮಾಡುತ್ತಿದೆ. ಆದರೆ ದಕ್ಷಿಣ ಭಾರತದಲ್ಲಿ ಹುಡುಗಿಯರು ಬದಲಾಗಿದ್ದಾರಂತೆ!

ಮುಂದೆ ಓದಿ ...
  • Share this:

ದಾಖಲಾತಿ ದರವನ್ನು ಹೆಚ್ಚಿಸುವಲ್ಲಿ ಹಾಗೂ ಶಾಲಾ ಶಿಕ್ಷಣವನ್ನು (Education) ಪೂರ್ತಿಗೊಳಿಸದೇ ಮಧ್ಯದಲ್ಲಿಯೇ ತೊರೆಯುವವರನ್ನು ತಡೆಯುವಲ್ಲಿ ಮಧ್ಯಾಹ್ನದ ಬಿಸಿಯೂಟ ಹಾಗೂ ಇತರ ಪ್ರೋತ್ಸಾಹ ಯೋಜನೆಗಳ ಪಾತ್ರ ಹಿರಿದಾದುದು. ಹುಡುಗ ಹಾಗೂ ಹುಡುಗಿಯರ ನಡುವಿನ ಅಂತರವನ್ನು ಕಡಿಮೆ ಮಾಡುವಲ್ಲಿ ಹಾಗೂ ಬಡ ಅಂತೆಯೇ ಹಿಂದುಳಿದ ಪ್ರದೇಶಗಳ ಮಕ್ಕಳು (Children) ಕೂಡ ಶಿಕ್ಷಣದಿಂದ ವಂಚಿತರಾಗುವುದನ್ನು ತಡೆಯುವಲ್ಲಿ ಕೂಡ ಈ ಯೋಜನೆಗಳು ಸಹಕಾರಿಯಾಗಿದೆ. ಕೇರಳ (Kerala) ರಾಜ್ಯವನ್ನು ಹೊರತುಪಡಿಸಿ ಭಾರತದಾದ್ಯಂತ ವಿಶ್ಲೇಷಿಸುವುದಾದರೆ ಶಿಕ್ಷಣವನ್ನು ಅರ್ಧದಲ್ಲಿಯೇ ತೊರೆಯುವಲ್ಲಿ ಹುಡುಗರಿಗಿಂತ ಹುಡುಗಿಯರ ಪ್ರಮಾಣವೇ ಹೆಚ್ಚಿದೆ. ಒಟ್ಟಿನಲ್ಲಿ ಹೇಳುವುದಾದರೆ ಸ್ತ್ರೀ ಸಾಕ್ಷರತೆಯು ಪುರುಷ ಸಾಕ್ಷರತೆಗಿಂತ ಹಿಂದಿದೆ. ಇದಕ್ಕೆ ಕಾರಣಗಳು ಹಲವಿದ್ದು ಕೆಲವೊಂದು ಕಡೆಗಳಲ್ಲಿ ಸಂಪ್ರದಾಯಗಳು, ಪೋಷಣೆಯ ಕೊರತೆ, ದೈಹಿಕ ಅಸಾಮರ್ಥ್ಯಗಳು ಹುಡುಗಿಯರನ್ನು (Girls) ಶಿಕ್ಷಣದಿಂದ ವಂಚಿತರಾಗುವಂತೆ ಮಾಡುತ್ತಿದೆ.


ಶಾಲಾ ಶಿಕ್ಷಣ ಅರ್ಧದಲ್ಲಿಯೇ ತ್ಯಜಿಸುವವರಲ್ಲಿ ಹುಡುಗಿಯರೇ ಹೆಚ್ಚು
ಹುಡುಗಿಯರನ್ನು ಶಿಕ್ಷಿತರನ್ನಾಗಿ ಮಾಡುವುದು ಅಭಿವೃದ್ಧಿಯ ಫಲಿತಾಂಶಗಳನ್ನು ಸುಧಾರಿಸಲು ಹೆಚ್ಚಿನ ಶಕ್ತಿ ಧಾತಕವಾಗಿದೆ. ಅಂತೆಯೇ ವಿದ್ಯಾವಂತ ಮಕ್ಕಳು ಕೂಡ ಶಿಕ್ಷಣದ ಮಹತ್ವವನ್ನು ಅರಿತುಕೊಳ್ಳುತ್ತಾರೆ. ಇದರಿಂದ ಉತ್ತಮ ಮೂಲಭೂತ ಆರೋಗ್ಯ ಸೇವೆಗಳು, ಉತ್ತಮ ಶಿಕ್ಷಣ ಹಾಗೂ ಹೆಚ್ಚಿನ ತಲಾ ಆದಾಯವನ್ನು ಹೊಂದಿರುವ ಕಡಿಮೆ ನವಜಾತ ಶಿಶುಗಳ ಸದ್ಗುಣ ಆವರ್ತನೆಯನ್ನು ಉತ್ಪಾದಿಸುತ್ತದೆ.


ಮಧ್ಯಾಹ್ನದ ಊಟ ಹಾಗೂ ಇತರ ಮೂಲಭೂತ ಸೌಲಭ್ಯಗಳಲ್ಲದೆ ಹುಡುಗಿಯರು ಶಾಲಾ ಶಿಕ್ಷಣವನ್ನು ಪಡೆಯಲು ಯಾವ ಅಂಶಗಳು ಸಹಕಾರಿಯಾಗಿವೆ. ಉತ್ತಮ ಶೌಚಾಲಯದ ವ್ಯವಸ್ಥೆ, ಮುಟ್ಟಿನ ನೈರ್ಮಲ್ಯ ಮೊದಲಾದ ಅಂಶಗಳು ಈ ನಿಟ್ಟಿನಲ್ಲಿ ಪ್ರಧಾನವಾಗಿವೆ. ತಮಿಳುನಾಡಿನ ಎಮ್‌ಜಿ ರಾಮಚಂದ್ರನ್ ಮಧ್ಯಾಹ್ನದ ಊಟದ ಯೋಜನೆಯನ್ನು ಮರುಪ್ರಾರಂಭಿಸಿದಾಗ ಅವರಿಗೆ ಟೀಕೆಗಳ ಮಹಾಪೂರವೇ ಹರಿದುಬಂದಿತು. ಈ ಸಮಯದಲ್ಲಿ ಮಹಿಳೆಯರಿಗೆ ಮತ್ತು ಹೆಣ್ಣುಮಕ್ಕಳಿಗೆ ಪೌಷ್ಟಿಕಾಂಶವನ್ನು ಒದಗಿಸುವ ನೀತಿಯನ್ನು ಪ್ರಸ್ತಾವಿಸಿ ಟೀಕಾಕಾರರ ಬಾಯಿಮುಚ್ಚಿಸಿದರು. ಅವರ ಪ್ರಕಾರ ಯುವತಿಯರು ಹೆಚ್ಚಿನ ಪ್ರಗತಿ ಸಾಧಿಸುವುದು ಲಾಭಗಳ ವಿಶ್ವಾಸಾರ್ಹ ಸೂಚಕವಾಗಿದೆ.


10 ವರ್ಷಗಳಿಗಿಂತ ಹೆಚ್ಚು ಶಾಲಾ ಶಿಕ್ಷಣ ಹೊಂದಿರುವ ಮಹಿಳೆಯರು
ಆಂಧ್ರ – 34%, ಅಸ್ಸಾಂ 26%, ಬಿಹಾರ 23%, ಛತ್ತೀಸ್‌ಗಡ 27%, ಗುಜರಾತ್ 33%, ಹರಿಯಾಣ 46%, ಹಿಮಾಚಲ ಪ್ರದೇಶ 59%, ಕರ್ನಾಟಕ 46% ಕೇರಳ 72%, ತಮಿಳು ನಾಡು 51% ಆಗಿದೆ.


ಇದನ್ನೂ ಓದಿ: Viral Video: ಉತ್ತರ ಪ್ರದೇಶದಲ್ಲಿ ಶಾಲೆ ಬಿಸಿಯೂಟಕ್ಕೆ ಕೇವಲ ಅನ್ನ ಉಪ್ಪು?


2006 ಮತ್ತು 2016 ರ ನಡುವೆ ಹತ್ತು ವರ್ಷಗಳ ಶಾಲಾ ಶಿಕ್ಷಣವನ್ನು ಪಡೆದ ಮಹಿಳೆಯರ ಶೇಕಡಾವಾರು ಸುಧಾರಣೆಗಳನ್ನು ನೋಡಿದರೆ, ದಕ್ಷಿಣ ಭಾರತವು ಮುಂಚೂಣಿಯಲ್ಲಿದೆ. ಅದಾಗ್ಯೂ ದೇಶದ ಕೆಲವೊಂದು ರಾಜ್ಯಗಳಲ್ಲಿ ಹುಡುಗಿಯರು ಪ್ರೌಢಾವಸ್ಥೆಯಿಂದಲೇ ಶಿಕ್ಷಣಕ್ಕೆ ತಿಲಾಂಜಲಿ ಇಡುತ್ತಿದ್ದಾರೆ. ಇದಕ್ಕೆ ಕಾರಣ ಮುಟ್ಟಿನ ನೈರ್ಮಲ್ಯ, ಶಾಲೆಯಲ್ಲಿ ಶೌಚಾಲಯಗಳ ಲಭ್ಯತೆಯ ಮೊದಲಾದ ಅಂಶಗಳನ್ನು ಪರಿಗಣಿಸಿ ಶಾಲೆಯನ್ನು ತ್ಯಜಿಸುತ್ತಾರೆ ಎಂಬುದು ಅಂಕಿಅಂಶಗಳಿಂದ ತಿಳಿದುಬಂದಿದೆ.


ಮುಟ್ಟಿನ ನೈರ್ಮಲ್ಯದ ಸೌಲಭ್ಯ ಹೊಂದಿರುವ 15-24 ವಯಸ್ಸಿನ ಮಹಿಳೆಯರು
15-24 ವಯಸ್ಸಿನ ಮಹಿಳೆಯರ ವಿಷಯದಲ್ಲಿ ಮುಟ್ಟಿದ ನೈರ್ಮಲ್ಯದ ಕಾಳಜಿ ಹಾಗೂ ಮೆಟ್ರಿಕ್ ಪ್ರವೇಶದಲ್ಲಿ ದಕ್ಷಿಣ ಭಾರತ ಮುಂದಿದೆ ಅಂತೆಯೇ ಹತ್ತು ವರ್ಷಗಳ ಶಾಲಾ ಶಿಕ್ಷಣದೊಂದಿಗೆ ಶೇಕಡಾವಾರು ಪ್ರಗತಿಯಲ್ಲೂ ಮುಂದಿದೆ. ಮುಟ್ಟಿನ ನೈರ್ಮಲ್ಯದ ಪ್ರಗತಿಯಲ್ಲಿ 15 ರಿಂದ 24 ರ ಹರೆಯದ ಮಹಿಳೆಯರಲ್ಲಿ ಆಂಧ್ರಪ್ರದೇಶ 68%, ಅಸ್ಸಾಂ 45%, ಬಿಹಾರ್ 31% ದಾಖಲಿಸಿದೆ.


ಇದನ್ನೂ ಓದಿ:  Passport: ಆರು ವರ್ಷ ಪಾಸ್‌ಪೋರ್ಟ್‌ಗಾಗಿ ಹೋರಾಟ, ಕೊನೆಗೂ ಗೆದ್ದ ಅನಾಥ ಬಾಲಕ!


ಅಂತೆಯೇ ಉಳಿದ ರಾಜ್ಯಗಳಾದ ಛತ್ತೀಸ್‌ಗಡ್ 47%, ಗುಜರಾತ್ 60%, ಹರಿಯಾಣ 78%, ಹಿಮಾಚಲ ಪ್ರದೇಶ 84%, ಜಮ್ಮು ಕಾಶ್ಮೀರ 67%, ಜಾರ್ಖಂಡ್ 50%, ಕರ್ನಾಟಕ 70%, ಕೇರಳ 90%, ಮಧ್ಯಪ್ರದೇಶ 37%, ಮಹಾರಾಷ್ಟ್ರ 66%, ಒಡಿಸ್ಸಾ 47%, ಪಂಜಾಬ್ 84%, ರಾಜಸ್ಥಾನ 55%, ತಮಿಳುನಾಡು 91% ದಾಖಲಿಸಿದೆ.

Published by:Ashwini Prabhu
First published: