• Home
  • »
  • News
  • »
  • education
  • »
  • Medical Education: ಪ್ರಾದೇಶಿಕ ಭಾಷೆಗಳಲ್ಲಿ ವೈದ್ಯಕೀಯ ಕೋರ್ಸ್‌ಗಳನ್ನು ಪರಿಚಯಿಸುವ ಕುರಿತು ನಿಮ್ಮ ಅಭಿಪ್ರಾಯವೇನು?

Medical Education: ಪ್ರಾದೇಶಿಕ ಭಾಷೆಗಳಲ್ಲಿ ವೈದ್ಯಕೀಯ ಕೋರ್ಸ್‌ಗಳನ್ನು ಪರಿಚಯಿಸುವ ಕುರಿತು ನಿಮ್ಮ ಅಭಿಪ್ರಾಯವೇನು?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಉನ್ನತ ಶಿಕ್ಷಣದಲ್ಲಿ ಭಾರತೀಯ ಭಾಷೆಗಳನ್ನು ಬೋಧನಾ ಮಾಧ್ಯಮವಾಗಿ ಉತ್ತೇಜಿಸಲು ರಾಷ್ಟ್ರೀಯ ಶಿಕ್ಷಣ ನೀತಿ 2020 ರ ಪ್ರಮುಖ ಅಂಶಗಳಲ್ಲಿ ಇದು ಕೂಡ ಒಂದಾಗಿದೆ.

  • News18 Kannada
  • Last Updated :
  • New Delhi, India
  • Share this:

ಬ್ಯಾಚುಲರ್ ಆಫ್ ಮೆಡಿಸಿನ್ (Bachelor Of Medicine) ಮತ್ತು ಬ್ಯಾಚುಲರ್ ಆಫ್ ಸರ್ಜರಿ ಅಥವಾ ಎಂಬಿಬಿಎಸ್ ಪದವಿಗಾಗಿ ಮಧ್ಯಪ್ರದೇಶ ಸರಕಾರವು ಅಕ್ಟೋಬರ್ 17 ರಂದು ಹಿಂದಿಗೆ ಅನುವಾದ (Translate) ಮಾಡಿರುವ ಮೂರು ವೈದ್ಯಕೀಯ ಪಠ್ಯಪುಸ್ತಕಗಳನ್ನು (Notes And Books) ಬಿಡುಗಡೆ ಮಾಡಿದೆ. ಉನ್ನತ ಶಿಕ್ಷಣದಲ್ಲಿ ಭಾರತೀಯ ಭಾಷೆಗಳನ್ನು ಬೋಧನಾ ಮಾಧ್ಯಮವಾಗಿ ಉತ್ತೇಜಿಸಲು ರಾಷ್ಟ್ರೀಯ ಶಿಕ್ಷಣ ನೀತಿ 2020 ರ ಪ್ರಮುಖ ಅಂಶಗಳಲ್ಲಿ ಇದು ಕೂಡ ಒಂದಾಗಿದೆ.


ರಾಷ್ಟ್ರೀಯ ವೈದ್ಯಕೀಯ ಮಂಡಳಿಯು ಇತರ ಪ್ರಾದೇಶಿಕ ಭಾಷೆಗಳಲ್ಲಿಯೂ ವೈದ್ಯಕೀಯ ಶಿಕ್ಷಣವನ್ನು ಪರಿಚಯಿಸಲು ಶಿಕ್ಷಣ ಸಚಿವಾಲಯ ಮತ್ತು ಇತರ ಮಧ್ಯಸ್ಥಗಾರರೊಂದಿಗೆ ಮಾತುಕತೆ ನಡೆಸುತ್ತಿದೆ. ಅದಾಗ್ಯೂ ವೈದ್ಯ ಸಂಘಗಳು ಈ ಕ್ರಮಕ್ಕೆ ಅನುಮತಿ ನೀಡಿಲ್ಲ.


ಪ್ರಾದೇಶಿಕ ಭಾಷೆಗಳಲ್ಲಿ ಆಧುನಿಕ ವೈದ್ಯಶಾಸ್ತ್ರವನ್ನು ಪರಿಚಯಿಸುವ ಹಾಗೂ ಬೋಧಿಸುವುದರಿಂದ ಉಂಟಾಗುವ ಪರಿಣಾಮಗಳ ಕುರಿತು MGIMS ನಲ್ಲಿನ ವೈದ್ಯಕೀಯ ಪ್ರಾಧ್ಯಾಪಕ ಮತ್ತು ವಾರ್ಧಾದ ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಎಸ್.ಪಿ.ಕಲಾಂತ್ರಿ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಅವರಲ್ಲಿ ಕೆಲವೊಂದು ಪ್ರಶ್ನೆಗಳನ್ನು ಕೇಳಲಾಗಿದ್ದು ಅದಕ್ಕೆ ಉತ್ತರವನ್ನು ನೀಡಿದ್ದಾರೆ.


ನಿಮ್ಮ ಅನಿಸಿಕೆ ಏನು? 


ಪ್ರಾದೇಶಿಕ ಭಾಷೆಗಳಲ್ಲಿ ವೈದ್ಯಕೀಯ ಶಿಕ್ಷಣವನ್ನು ಪರಿಚಯಿಸಲು ಕಾರಣವೇನೆಂದರೆ ತಮ್ಮ ಮಾತೃಭಾಷೆಯಲ್ಲಿ ಶಿಕ್ಷಣ ಪಡೆದ ಬಹುಪಾಲು ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣವನ್ನು ಪಡೆಯಲು ಸಾಧ್ಯವಾಗದೇ ಇರುವುದಾಗಿದೆ. ನಿಮ್ಮ ಅನಿಸಿಕೆ ಏನು?


ಈ ಮಾತಿಗೆ ನನ್ನ ಅಂಗೀಕಾರ ಇದ್ದು, ಸ್ಥಳೀಯ ಭಾಷೆಗಳಲ್ಲಿ ಶಿಕ್ಷಣ ಪಡೆಯುವ ಅದೆಷ್ಟೋ ವಿದ್ಯಾರ್ಥಿಗಳು ಈ ಸವಾಲನ್ನು ಎದುರಿಸುತ್ತಲೇ ಬಂದಿದ್ದಾರೆ. ಉನ್ನತ ಶಿಕ್ಷಣದಂತಹ ವೈದ್ಯಕೀಯ ಶಿಕ್ಷಣ ಕ್ರಮದಲ್ಲಿ ಸಂವಹನ ನಡೆಸಲು ಹಾಗೂ ಅರ್ಥೈಸಿಕೊಳ್ಳಲು ಕಷ್ಟಕರವಾದ ಭಾಷೆಯಲ್ಲಿ ವೈದ್ಯಕೀಯ ಶಾಸ್ತ್ರವನ್ನು ಕರಗತ ಮಾಡಿಕೊಳ್ಳುವುದು ಸವಾಲಾಗಿದೆ. ಆತ್ಮವಿಶ್ವಾಸದ ಕೊರತೆ ಅವರಿಗೆ ಅಡ್ಡಿಯನ್ನುಂಟು ಮಾಡುತ್ತದೆ ಹಾಗೂ ಪಠ್ಯಕ್ರಮದ ಮೇಲೆ ಹಿಡಿತ ಸಾಧಿಸುವುದು ಕಠಿಣ ಎಂದೆನಿಸುತ್ತದೆ.


ಆಂಗ್ಲಮಾಧ್ಯಮದಲ್ಲಿ ಕಲಿತವರಿಗೆ ಇಂತಹ ತೊಂದರೆಗಳು ಇರುವುದಿಲ್ಲ. ಆದರೆ ದಶಕಗಳ ಅನುಭವದ ಮಾತಿನಲ್ಲಿ ಹೇಳುವುದಾದರೆ ಕೆಲವೇ ತಿಂಗಳುಗಳಲ್ಲಿ ಆಂಗ್ಲ ಹಾಗೂ ಸ್ಥಳೀಯ ಭಾಷೆಗಳಲ್ಲಿ ಕಲಿತ ವಿದ್ಯಾರ್ಥಿಗಳ ನಡುವಿನ ಕಂದಕ ಮಾಯವಾಗುತ್ತದೆ.


ಸ್ಥಳೀಯ ಭಾಷೆಗಳಲ್ಲಿ ಕಲಿತ ವಿದ್ಯಾರ್ಥಿಗಳು ಆಂಗ್ಲ ಮಾಧ್ಯಮದಲ್ಲಿ ಕಲಿತ ವಿದ್ಯಾರ್ಥಿಗಳಂತೆಯೇ ನಿರರ್ಗಳವಾಗಿ ಭಾಷೆಯ ಮೇಲೆ ಹಿಡಿತ ಸಾಧಿಸದೇ ಇದ್ದರೂ ತಕ್ಕಮಟ್ಟಿಗೆ ಸುಧಾರಣೆ ಕಂಡುಕೊಳ್ಳುತ್ತಾರೆ ಹಾಗೂ ಕಾಲಾನಂತರ ಸತತ ಪ್ರಯತ್ನದಿಂದ ಭಾಷೆಯ ಮೇಲೆ ಹಿಡಿತ ಸಾಧಿಸುತ್ತಾರೆ. ಹೀಗೆ ಪ್ರಯತ್ನಿಸುವ ಹೆಚ್ಚಿನ ವಿದ್ಯಾರ್ಥಿಗಳೇ ಉತ್ತಮ ಶಿಕ್ಷಕರು, ಸಂಶೋಧಕರು, ಸಾರ್ವಜನಿಕ ಆರೋಗ್ಯ ಕಾರ್ಯಕರ್ತರು ಮತ್ತು ವೈದ್ಯರಾಗುತ್ತಾರೆ.


ಗ್ರಾಮೀಣ ಭಾರತದಲ್ಲಿ ವೈದ್ಯರ ಕೊರತೆ ಇದ್ದು ದೂರದ ಪ್ರದೇಶಗಳಲ್ಲಿ ವೈದ್ಯರು ಸೇವೆ ಸಲ್ಲಿಸಲು ನಿರಾಕರಿಸುತ್ತಿರುವುದೇ ಇದರ ಹಿಂದಿರುವ ಕಾರಣವಾಗಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ವೈದ್ಯಕೀಯ ಶಿಕ್ಷಣ ದೊರೆತಲ್ಲಿ ಈ ಸಮಸ್ಯೆ ಕೊಂಚವಾದರೂ ಕಡಿಮೆಯಾಗಬಹುದು. ಇದಕ್ಕೆ ನಿಮ್ಮ ಅಭಿಪ್ರಾಯವೇನು?


ನನ್ನ ಪ್ರಕಾರ ಈ ಮಾತು ಸತ್ಯಕ್ಕೆ ಅಷ್ಟೊಂದು ಸನಿಹವಾದುದಲ್ಲ. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣ ಮುಗಿಸಿ ತಮ್ಮ ಗ್ರಾಮಕ್ಕೆ ಹೋಗಿ ಸೇವೆ ಸಲ್ಲಿಸುತ್ತಾರೆ ಎಂಬುದು ಮಿಥ್ಯವಾದ ಮಾತಾಗಿದೆ. ಹಳ್ಳಿಯಲ್ಲಿರುವ 53 ವರ್ಷದ ಹಳೆಯ ವೈದ್ಯಕೀಯ ಶಾಲೆ MGIMS ನಲ್ಲಿ ನಾನು ಶಿಕ್ಷಕನಾಗಿ ಕಲಿಸುತ್ತೇನೆ. NEET [ಸ್ನಾತಕಪೂರ್ವ ವೈದ್ಯಕೀಯ ಕೋರ್ಸ್‌ಗಳಿಗೆ ಪ್ರವೇಶಕ್ಕಾಗಿ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ] ಬಂದಾಗ, ಗ್ರಾಮೀಣ ಹಿನ್ನೆಲೆಯಿಂದ ಬರುವ ವಿದ್ಯಾರ್ಥಿಗಳಿಗೆ MBBS ಪ್ರವೇಶಕ್ಕಾಗಿ 64 ಸೀಟುಗಳಲ್ಲಿ ನಾಲ್ಕನ್ನು ಸೂಕ್ಷ್ಮವಾಗಿ ಕಾಯ್ದಿರಿಸಿತ್ತೇವೆ.


ಈ ಅವಕಾಶ ಹಾಗೂ ಸವಲತ್ತು ಪಡೆದ ಕೆಲವೇ ವಿದ್ಯಾರ್ಥಿಗಳು ತಮ್ಮ ಎಂಬಿಬಿಎಸ್ ಅಥವಾ ಎಂಡಿ ಪಡೆದ ನಂತರ ಹಳ್ಳಿಗಳಿಗೆ ಸೇವೆ ಸಲ್ಲಿಸಲು ಹಿಂತಿರುಗುತ್ತಾರೆ ಎಂಬುದು ನನ್ನ ಅನಿಸಿಕೆಯಾಗಿದೆ. ದೊಡ್ಡ ಪಟ್ಟಣಗಳಲ್ಲಿರುವ ಸ್ಪರ್ಧೆಗಳಿಂದಾಗಿ ಇಂದು ವೈದ್ಯರು ಸಣ್ಣ ಹಳ್ಳಿ ಅಥವಾ ಪಟ್ಟಣಗಳಲ್ಲಿ ಸೇವೆ ಸಲ್ಲಿಸುತ್ತಾರೆ. ವೈದ್ಯಕೀಯ ಶಾಲೆಯಿಂದ ಹೊಸದಾಗಿ ಪದವಿ ಪಡೆದವರು, ನಗರ, ಪಟ್ಟಣವನ್ನು ಆಯ್ಕೆ ಮಾಡುತ್ತಾರೆ ಮತ್ತು ಹಳ್ಳಿಯನ್ನಲ್ಲ.


ಹಿಂದಿ ಮತ್ತು ಇತರ ಪ್ರಾದೇಶಿಕ ಭಾಷೆಗಳಲ್ಲಿ ವೈದ್ಯಕೀಯ ಶಿಕ್ಷಣ ಮತ್ತು ಕಲಿಕೆಯನ್ನು ಆರಂಭಿಸಿದರೆ ಯಾವ ಸವಾಲುಗಳನ್ನು ನಿರೀಕ್ಷಿಸಬಹುದು?


ಭಾರತೀಯ ಸಂವಿಧಾನವು 22 ಅಧಿಕೃತ ಭಾಷೆಗಳನ್ನು ಗುರುತಿಸಿದೆ. ಭಾರತವು ಬಹುಭಾಷಾ ದೇಶವಾಗಿದೆ: ಭಾರತದಲ್ಲಿ ಮಾತನಾಡುವ ಭಾಷೆಗಳ ಬಹು ಸಂಖ್ಯೆಯಲ್ಲಿವೆ. ವೈದ್ಯಕೀಯ ಪ್ರವೇಶಗಳು ಒಂದು ಪ್ರದೇಶಕ್ಕೆ ಸೀಮಿತವಾಗಿರದೆ, ವೈವಿಧ್ಯಮಯ ಭಾಷೆಗಳನ್ನು ಮಾತನಾಡುವ ವಿದ್ಯಾರ್ಥಿಗಳು ವೈದ್ಯಕೀಯ ಶಾಲೆಗಳಲ್ಲಿ ಶಿಕ್ಷಣವನ್ನು ಪಡೆಯುತ್ತಾರೆ.


ತಮಿಳು ಮಾತನಾಡುವ ವಿದ್ಯಾರ್ಥಿಗೆ ಮಹಾರಾಷ್ಟ್ರದಲ್ಲಿ ದಾಖಲಾತಿ ದೊರೆತರೆ ಅಲ್ಲಿ ವೈದ್ಯಕೀಯ ಶಿಕ್ಷಣ ಮರಾಠಿ ಭಾಷೆಯಲ್ಲಿರುತ್ತದೆ. ಶಿಕ್ಷಕರಿಗೆ ಇಂಗ್ಲಿಷ್ ಹಾಗೂ ಪಂಜಾಬಿ ಭಾಷೆ ಮಾತ್ರ ತಿಳಿದಿದೆ. ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಅವರಿಗೆ ತಿಳಿಯದೇ ಇರುವ ಭಾಷೆಯಲ್ಲಿ ಹೇಗೆ ಸಂವಹನ ನಡೆಸಲು ಸಾಧ್ಯ? ಈ ಹೊರೆಯನ್ನು ಕಡಿಮೆ ಮಾಡುವ ಬದಲಿಗೆ ಇನ್ನೊಂದು ಭಾಷೆಯನ್ನು ಸೇರಿಸುತ್ತೇವೆ. ವೈದ್ಯಕೀಯ ಶಾಲೆಯನ್ನು ಪ್ರವೇಶಿಸುವವರೆಗೆ ಎಂದಿಗೂ ಕಲಿಯದ ಭಾಷೆಯನ್ನು ಕರಗತ ಮಾಡಿಕೊಳ್ಳಬೇಕಾದಂತಹ ಸ್ಥಿತಿ ನಿರ್ಮಾಣವಾಗುತ್ತದೆ ಅಷ್ಟೆ.


ವೈದ್ಯಕೀಯ ಎಂಬುದು ಶ್ರೀಮಂತ ಇತಿಹಾಸವನ್ನು ಹೊಂದಿದ್ದು 58% ವೈದ್ಯಕೀಯ ಪದಗಳು ಗ್ರೀಕ್‌ನಿಂದ, 22% ಲ್ಯಾಟೀನ್‌ನಿಂದ, 3% ಇಂಗ್ಲಿಷ್‌ನಿಂದ ಬಂದಿದೆ. ಗ್ರೀಕ್ ಹಾಗೂ ಲ್ಯಾಟೀನ್ ಅನ್ನು ಹಿಂದಿ ಅಥವಾ ತೆಲುಗಿಗೆ ಭಾಷಾಂತರಿಸುವುದು ಕಷ್ಟ. ಇನ್ನು ಸಂವಹನ ನಡೆಸುವ ಹಿಂದಿಗೆ ಹೋಲಿಸಿದಾಗ ಪಠ್ಯಪುಸ್ತಕಗಳಲ್ಲಿನ ಹಿಂದಿ ಬೇರೆಯದೇ ಆಗಿದೆ.


ರಾಜ್ಯದ ಹೊರಗಿನ ಪ್ರದೇಶಗಳಲ್ಲಿ ಕರ್ತವ್ಯ ನಿರ್ವಹಿಸುವ ವೈದ್ಯರ ಉದ್ಯೋಗಾವಕಾಶವನ್ನು ಪ್ರಶ್ನಿಸಲಾಗುವುದಿಲ್ಲವೇ? ಅವರ ಚಲನಶೀಲತೆಯನ್ನು ತೀವ್ರವಾಗಿ ನಿರ್ಬಂಧಿಸಿದಂತಾಗುತ್ತದೆ ಹಾಗಾಗಿ ಚಿಕಿತ್ಸಕರು/ವೈದ್ಯರು/ಸಂಶೋಧಕರಾಗಿ ಅವರ ಬೆಳವಣಿಗೆಯನ್ನು ತಡೆಹಿಡಿದಂತಾಗುವುದಿಲ್ಲವೇ?


ನಿಜವಾಗಿಯೂ. ದೆಹಲಿಯ AIIMSನಲ್ಲಿರುವ ಅಧ್ಯಾಪಕರನ್ನು AIIMS ಹೈದರಾಬಾದ್‌ಗೆ ವರ್ಗಾಯಿಸಿದರೆ ಮತ್ತು ಅವರು ನಂತರ ಭುವನೇಶ್ವರದ ವೈದ್ಯಕೀಯ ಶಾಲೆಗೆ ಸ್ಥಳಾಂತರಗೊಂಡರೆ ಹೋದ ಸ್ಥಳಗಳಲ್ಲೆಲ್ಲಾ ಅಲ್ಲಿನ ಭಾಷೆಯನ್ನು ಕರಗತ ಮಾಡಿಕೊಳ್ಳುತ್ತಾರೆ ಎಂದು ಹೇಳುವುದು ಕಷ್ಟ. ವಯಸ್ಸಾದಂತೆ ಪ್ಯಾರಿಸ್‌ನವರಂತೆ ಫ್ರೆಂಚ್ ಮಾತನಾಡುವುದು ಹಾಗೂ ಕಲಿಯುವುದು ಹೆಚ್ಚು ಕಷ್ಟಕರವಾಗಿರುತ್ತದೆ.


ಬಹುಪಾಲು ವೈದ್ಯಕೀಯ, ಔಷಧಶಾಸ್ತ್ರ ಸಾಹಿತ್ಯ, ಜರ್ನಲ್‌ಗಳು ಮತ್ತು ಇತರ ಪ್ರಕಟಣೆಗಳು ಇಂಗ್ಲಿಷ್‌ನಲ್ಲಿವೆ. ಪ್ರಾದೇಶಿಕ ಭಾಷೆಯಲ್ಲಿ ವೈದ್ಯಕೀಯ ಕಲಿಯುವ ವಿದ್ಯಾರ್ಥಿಗಳ ಮೇಲೆ ಇದು ಹೇಗೆ ಪ್ರಭಾವ ಬೀರುತ್ತದೆ?


ಕಳೆದ ಕೆಲವು ದಶಕಗಳಲ್ಲಿ ಅಂತಾರಾಷ್ಟ್ರೀಯ ಶೈಕ್ಷಣಿಕ ಪ್ರಕಟಣೆಗಳಲ್ಲಿ ಇಂಗ್ಲಿಷ್‌ನ ಪ್ರಾಬಲ್ಯವು ಹಲವು ಪಟ್ಟು ಹೆಚ್ಚಾಗಿದೆ. ಇತರ ಭಾಷೆಗಳಲ್ಲಿರುವ ವಿಜ್ಞಾನ ನಿಯತಕಾಲಿಕೆಗಳು ಇಂಗ್ಲಿಷ್‌ಗೆ ಅನುವಾದಗೊಂಡಿವೆ. ಪತ್ರಿಕೆಗಳು ವಿಶಾಲವಾದ ಅಂತರರಾಷ್ಟ್ರೀಯ ಓದುಗರನ್ನು ಪಡೆಯಲು ಮತ್ತು ಹೆಚ್ಚಿನ ಪ್ರಭಾವವನ್ನು ತಲುಪಲು ಇಂಗ್ಲಿಷ್ ಭಾಷೆಯನ್ನೇ ಬಳಸುತ್ತವೆ.


ಇದನ್ನೂ ಓದಿ: ಇನ್ಮುಂದೆ ಹಿಂದಿಯಲ್ಲೂ ಎಂಬಿಬಿಎಸ್ ಮಾಡ್ಬೋದು! ಎಲ್ಲಿ? ಹೇಗೆ? ಇಲ್ಲಿದೆ ವಿವರ


ಈ ಸಂದರ್ಭದಲ್ಲಿ ವೈದ್ಯಕೀಯ ವಿದ್ಯಾರ್ಥಿಗಳು ವೈದ್ಯಕೀಯ ಶಾಲೆಯಲ್ಲಿ ತರಬೇತಿ ಮತ್ತು ನಂತರದ ಅಭ್ಯಾಸದ ಸಮಯದಲ್ಲಿ ಪ್ರಾದೇಶಿಕ ಸಮಸ್ಯೆಗಳಲ್ಲಿ ಕಲಿಕೆಯನ್ನು ಪಡೆಯುವಾಗ ಜಾಗತೀಕರಣದ ತೀವ್ರ ಪ್ರಭಾವಕ್ಕೆ ವಿದ್ಯಾರ್ಥಿಗಳು ಒಳಪಡುವ ಸಾಧ್ಯತೆ ಇರುತ್ತದೆ.


ಇನ್ನು ಪಠ್ಯಪುಸ್ತಕಗಳ ವಿಚಾರಕ್ಕೆ ಬಂದಾಗ ಇಂಗ್ಲಿಷ್ ಮತ್ತು ಪ್ರಾದೇಶಿಕ ಪದಗಳನ್ನು ಒಳಗೊಂಡಿರುವ ಹೈಬ್ರಿಡ್ ಪುಸ್ತಕಗಳು ಯಾವಾಗಲೂ ಇರುತ್ತವೆ. ವೈದ್ಯಕೀಯ ಪದಗಳು ಮತ್ತು ಪರಿಭಾಷೆಗಳು ಯಾವಾಗಲೂ ಇಂಗ್ಲಿಷ್‌ನಲ್ಲಿರುತ್ತವೆ - ಅಂಗಗಳು, ಅಂಗಾಂಶಗಳು, ಸ್ನಾಯುಗಳು, ನರಗಳು, ಜೀವಕೋಶಗಳು, ಕಿಣ್ವಗಳು, ಔಷಧಗಳು ಮತ್ತು ರೋಗಗಳು ಇಂಗ್ಲಿಷ್ ಹೆಸರುಗಳನ್ನು ಹೊಂದಿವೆ.


ಎರಡೂ ಸನ್ನಿವೇಶಗಳ ಎಲ್ಲಾ ಸಾಧಕ-ಬಾಧಕಗಳನ್ನು ಪರಿಗಣಿಸಿ - ವೈದ್ಯಕೀಯ ಶಿಕ್ಷಣವನ್ನು ಇಂಗ್ಲಿಷ್‌ನಲ್ಲಿ ಮುಂದುವರಿಸುವುದು ಅಥವಾ ವೈದ್ಯಕೀಯ ಶಿಕ್ಷಣವನ್ನು ಪ್ರಾದೇಶಿಕ ಭಾಷೆಗಳಲ್ಲಿ ನೀಡುವುದು ನಿಮ್ಮ ಅಭಿಪ್ರಾಯದಲ್ಲಿ ಯಾವುದು ಉತ್ತಮ?


ರಾಷ್ಟ್ರೀಯ ಭಾಷೆಗಳ ಬಳಕೆಯು ಸಂವಹನ ಮತ್ತು ಶಿಕ್ಷಣ ಪ್ರಕ್ರಿಯೆ ಮತ್ತು ಆರೋಗ್ಯ ಪ್ರಚಾರವನ್ನು ಸುಗಮಗೊಳಿಸುತ್ತದೆ. ವೈದ್ಯಕೀಯ ಶಾಲೆಗಳು ಇಂಗ್ಲಿಷ್‌ನಲ್ಲಿ ಕಲಿಸುವುದನ್ನು ಮುಂದುವರಿಸಬೇಕು ಎಂಬುದೇ ನನ್ನ ಸಲಹೆ. ಪ್ರಾದೇಶಿಕ ಭಾಷೆಗಳಲ್ಲಿ ಉಲ್ಲೇಖ ಸಾಮಗ್ರಿಗಳನ್ನು ತಯಾರಿಸಲು ಮತ್ತು ಭಾಷಾಂತರಿಸಲು ಅಗಾಧವಾದ ಸಮಯ, ಕೌಶಲ್ಯ ಮತ್ತು ಪ್ರಯತ್ನಗಳನ್ನು ತೆಗೆದುಕೊಳ್ಳುತ್ತದೆ.


ಚೀನಾ, ಜಪಾನ್, ಜರ್ಮನಿ, ಉಕ್ರೇನ್, ರಷ್ಯಾಗಳನ್ನು ತಮ್ಮ ಭಾಷೆಗಳಲ್ಲಿ ವೈದ್ಯಕೀಯ ಶಿಕ್ಷಣವನ್ನು ನೀಡುತ್ತವೆ. ಇದು ಎಷ್ಟರ ಮಟ್ಟಿಗೆ ನಿಜ ಮತ್ತು ಭಾರತದೊಂದಿಗೆ ಹೋಲಿಕೆ ನ್ಯಾಯಯುತವಾಗಿದೆಯೆ?


ಚೀನಾ, ಜಪಾನ್, ಜರ್ಮನಿ, ಫ್ರಾನ್ಸ್ ಮತ್ತು ಇಟಲಿ ದೇಶಗಳು ತಮ್ಮ ಸ್ಥಳೀಯ ಭಾಷೆಗಳಲ್ಲಿ ಪ್ರಗತಿ ಸಾಧಿಸಿದ ಮತ್ತು ಅಭಿವೃದ್ಧಿ ಹೊಂದಿದ ದೇಶಗಳಾಗಿವೆ.


ಪೂರ್ವ ಯುರೋಪ್ ಮತ್ತು ಚೀನಾ ಹೊರತುಪಡಿಸಿ, ವೈದ್ಯಕೀಯವನ್ನು ಇಂಗ್ಲಿಷ್‌ನಲ್ಲಿ ಕಲಿಸಲಾಗುತ್ತದೆ. ಇಂಗ್ಲಿಷ್ ಜಾಗತಿಕ ಭಾಷೆ ಹಾಗೂ ಅಂತರ್ಜಾಲದ ಭಾಷೆಯಾಗಿದೆ. ವೈದ್ಯಕೀಯ ಶಿಕ್ಷಣದಲ್ಲಿ ಪ್ರಾದೇಶಿಕ ಭಾಷೆಗಳನ್ನು ತರಾತುರಿಯಲ್ಲಿ ಅಳವಡಿಸುವುದು, ವೈದ್ಯಕೀಯ ಶಿಕ್ಷಣದ ಗುಣಮಟ್ಟವನ್ನು ದುರ್ಬಲಗೊಳಿಸಬಹುದು, ಭಾಷಾ ಅಡೆತಡೆಗಳನ್ನು ತೀವ್ರಗೊಳಿಸಬಹುದು ಮತ್ತು ವಿಭಜನೆಯ ಭಾವನೆಗಳನ್ನು ಪ್ರಚೋದಿಸಬಹುದು. ಇದರಿಂದ ಪಾಶ್ಚಿಮಾತ್ಯ ದೇಶಗಳಲ್ಲಿ ಅಧ್ಯಯನ ಮಾಡಲು ಬಯಸುವ ವಿದ್ಯಾರ್ಥಿಗಳ ಆಯ್ಕೆಗಳು ಮಿತಿಗೊಳ್ಳಬಹುದು.


ಇದನ್ನೂ ಓದಿ: ಐಟಿ ಕೋರ್ಸ್​​ಗೆ ಹೆಚ್ಚಿದ ಬೇಡಿಕೆ; ಉಳಿದ ಕೋರ್ಸ್​ಗಳ ಭವಿಷ್ಯವೇನು?


ವಿದ್ಯಾರ್ಥಿಗಳು ಅಂತರರಾಷ್ಟ್ರೀಯ ಇಂಗ್ಲಿಷ್ ಭಾಷಾ ಪರೀಕ್ಷಾ ವ್ಯವಸ್ಥೆ [IELTS] ಪರೀಕ್ಷೆಯನ್ನು ತೆಗೆದುಕೊಳ್ಳಬೇಕಾಗುತ್ತದೆ - ಉನ್ನತ ಶಿಕ್ಷಣ ಮತ್ತು ಜಾಗತಿಕ ವಲಸೆಗಾಗಿ ವಿಶ್ವದ ಅತ್ಯಂತ ಜನಪ್ರಿಯ ಇಂಗ್ಲಿಷ್ ಭಾಷಾ ಪ್ರಾವೀಣ್ಯತೆಯ ಪರೀಕ್ಷೆಯಾಗಿದೆ. ಇದರಿಂದ ಇನ್ನಷ್ಟು ಸವಾಲುಗಳು ಉದ್ಭವಗೊಳ್ಳಬಹುದು ಎಂಬುದು ಪ್ರೊಫೆಸರ್ ಕಲಾಂತ್ರಿಯವರ ಅಭಿಪ್ರಾಯವಾಗಿದೆ.

First published: