• Home
  • »
  • News
  • »
  • education
  • »
  • CAT 2022: ಬೆಂಗಳೂರು MBA ಪ್ರವೇಶ ಪರೀಕ್ಷೆ ಮಾದರಿ ಪ್ರಶ್ನೆ ಪತ್ರಿಕೆ ಬಿಡುಗಡೆ

CAT 2022: ಬೆಂಗಳೂರು MBA ಪ್ರವೇಶ ಪರೀಕ್ಷೆ ಮಾದರಿ ಪ್ರಶ್ನೆ ಪತ್ರಿಕೆ ಬಿಡುಗಡೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಈ ವರ್ಷ ಪರೀಕ್ಷೆಗೆ ನೋಂದಾಯಿಸಿದ ಅಭ್ಯರ್ಥಿಗಳು ತಮ್ಮ ಅಪ್ಲಿಕೇಶನ್ ಐಡಿ ಮತ್ತು ಪಾಸ್‌ವರ್ಡ್ ಅನ್ನು ಬಳಸಿಕೊಂಡು ಅಧಿಕೃತ ವೆಬ್‌ಸೈಟ್‌ನಲ್ಲಿ ಮಾದರಿ ಪರೀಕ್ಷಾ ಪತ್ರಿಕೆಯನ್ನು ಪಡೆಯಬಹುದು.

  • News18 Kannada
  • Last Updated :
  • Karnataka, India
  • Share this:

CAT ಪರೀಕ್ಷೆ ಬರೆಯುವವರಿಗೆ ಸಹಾಯವಾಗಲೆಂದು ಮಾದರಿ ಪ್ರಶ್ನೆ ಪತ್ರಿಕೆ (Question Paper) ಬಿಡುಗಡೆ ಮಾಡಿದೆ ಎಂದು ತಿಳಿಸಿದೆ. ಅದರಂತೆಯೇ ಹಿಂದಿನ ವರ್ಷದ ಪ್ರಶ್ನೆ ಪತ್ರಕೆಯ ಮಾದರಿಯಲ್ಲೇ  ಪ್ರಶ್ನೆಗಳನ್ನು ಹೊಂದಿದ್ದು ಅಭ್ಯರ್ಥಿಗಳಿಗೆ ಸಾಮಾನ್ಯವಾಗಿ ಪರೀಕ್ಷೆಯಲ್ಲಿ (Exam) ಕೇಳಲಾಗುವ ಪ್ರಶ್ನೆಗಳ ಪ್ರಕಾರ ಮತ್ತು ಉತ್ತರಗಳನ್ನು (Answer) ಬರೆಯುವ ವಿಧಾನದ ಬಗ್ಗೆ ಒಂದು ನೋಟವನ್ನು ನೀಡಲಾಗಿದೆ. ಎಂದು IIM ಬೆಂಗಳೂರು ಅಧಿಕೃತ ಪ್ರಕಟಣೆ ತಿಳಿಸಿದೆ.


ಈ ವರ್ಷ MBA ಪ್ರವೇಶ ಪರೀಕ್ಷೆಯನ್ನು ನಡೆಸುತ್ತಿರುವ ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (IIM ) ಸಾಮಾನ್ಯ ಪ್ರವೇಶ ಪರೀಕ್ಷೆಯ (CAT) ಅಣಕು ಪರೀಕ್ಷೆಯ ಪೇಪರ್‌ಗಳನ್ನು ಬಿಡುಗಡೆ ಮಾಡಿದೆ . ಈ ವರ್ಷ ಪರೀಕ್ಷೆಗೆ ನೋಂದಾಯಿಸಿದ ಅಭ್ಯರ್ಥಿಗಳು ತಮ್ಮ ಅಪ್ಲಿಕೇಶನ್ ಐಡಿ ಮತ್ತು ಪಾಸ್‌ವರ್ಡ್ ಅನ್ನು ಬಳಸಿಕೊಂಡು iimcat.ac.in ನಲ್ಲಿ ಅಧಿಕೃತ ವೆಬ್‌ಸೈಟ್‌ನಲ್ಲಿ ಮಾದರಿ ಪರೀಕ್ಷಾ ಪತ್ರಿಕೆಯನ್ನು ಪಡೆಯಬಹುದು.


ಪರೀಕ್ಷಾ ವೇಳಾಪಟ್ಟಿ ಹೀಗಿದೆ


CAT 2022 ನವೆಂಬರ್ 27 ರಂದು ಮೂರು ಹಂತದಲ್ಲಿ ನಡೆಯಲಿದೆ - ಬೆಳಿಗ್ಗೆ 8:30 ರಿಂದ 10:30 ರವರೆಗೆ, ಮಧ್ಯಾಹ್ನ 12:30 ರಿಂದ 2:30 ರವರೆಗೆ ಮತ್ತು ಸಂಜೆ 4:30 ರಿಂದ 6:30 ರವರೆಗೆ. CAT ಅಣಕು ಪರೀಕ್ಷೆಯು ಹಿಂದಿನ ವರ್ಷದ ಪತ್ರಿಕೆಯ ಪ್ರಶ್ನೆಗಳನ್ನು ಹೊಂದಿದ್ದು ಅಭ್ಯರ್ಥಿಗಳಿಗೆ ಸಾಮಾನ್ಯವಾಗಿ ಪರೀಕ್ಷೆಯಲ್ಲಿ ಕೇಳಲಾಗುವ ಪ್ರಶ್ನೆಗಳ ಪ್ರಕಾರ ಮತ್ತು ಉತ್ತರಗಳನ್ನು ಬರೆಯುವ ವಿಧಾನದ ಬಗ್ಗೆ ಒಂದು ನೋಟವನ್ನು ನೀಡುತ್ತದೆ ಎಂದು IIM ಅಧಿಕೃತ ಸೂಚನೆಯಲ್ಲಿ ತಿಳಿಸಲಾಗಿದೆ.


ಇದನ್ನೂ ಓದಿ: ಚೀನಾದಲ್ಲಿ ಮೆಡಿಕಲ್ ಓದ್ತಾ ಇದ್ದೀರಾ? ಹಾಗಿದ್ರೆ ಭಾರತದಲ್ಲಿ ನೀವು ಡಾಕ್ಟರ್ ಆಗೋದು ಕಷ್ಟ!


ಪರೀಕ್ಷೆ ಯಾವ ರೀತಿ ನಡೆಯುತ್ತದೋ ಅದೇ ರೀತಿಯಲ್ಲಿ ನೀವು ತಯಾರಿ ನಡೆಸಬಹುದು.  40 ನಿಮಿಷಗಳ ನಿಗದಿತ ಸಮಯ ಮುಗಿಯುವ ಮೊದಲೇ ಅಭ್ಯರ್ಥಿಯು ಮುಂದಿನ ವಿಭಾಗಕ್ಕೆ ಹೋಗಲು ಇದು ಸಹಾಯ ಮಾಡುತ್ತದೆ. ಅದೇ ರೀತಿ ನಿಜವಾದ ಪರೀಕ್ಷೆಯಲ್ಲಿ, ಅಭ್ಯರ್ಥಿಯು ಮುಂದಿನ ವಿಭಾಗಕ್ಕೆ 40 ನಿಮಿಷಗಳ ನಂತರ ಮಾತ್ರ ಹೋಗಬಹುದು" ಎಂದು ಇಲ್ಲಿ ತಿಳಿಸಲಾಗಿದೆ.


ಮಾದರಿ ಪ್ರಶ್ನೆ ಪತ್ರಿಕೆ ಪಡೆಯಲು ಹೀಗೆ ಮಾಡಿ
1: IIM CAT ಅಧಿಕೃತ ವೆಬ್‌ಸೈಟ್‌ಗೆ ಹೋಗಿ
2: ನ್ಯಾವಿಗೇಟ್ ಮಾಡಿ ಮತ್ತು CAT 2022 ಮಾಕ್ ಟೆಸ್ಟ್ ಲಿಂಕ್ ಅನ್ನು ಕ್ಲಿಕ್ ಮಾಡಿ
3: ನಿಮ್ಮ ಅಪ್ಲಿಕೇಶನ್ ಐಡಿ ಮತ್ತು ಪಾಸ್‌ವರ್ಡ್ ಅನ್ನು ನಮೂದಿಸಿ. ಲಾಗ್ ಇನ್ ಮಾಡಿ
4: ಈಗ ಪರೀಕ್ಷಾ ಪೇಪರ್ ನಿಮ್ಮ ಪರದೆಯ ಮೇಲೆ ಕಾಣಿಸುತ್ತದೆ.


ಇದನ್ನೂ ಓದಿ: ಸುಧಾಮೂರ್ತಿ ಅವರು ಬರೆದ ಕಥೆಗಳನ್ನು ಮಕ್ಕಳಿಗೆ ಕೇಳಿಸಲು ಇಲ್ಲಿ ಕ್ಲಿಕ್ ಮಾಡಿ


ಅಧಿಕೃತ ಸೂಚನೆಯ ಪ್ರಕಾರ ಮಾದರಿ ಪರೀಕ್ಷೆಯು ಅಭ್ಯರ್ಥಿಗಳಿಗೆ ಸಾಮಾನ್ಯವಾಗಿ CAT MCQ ಗಳು / MCQ ಅಲ್ಲದ ಮತ್ತು ಪರೀಕ್ಷೆಯ ಕನ್ಸೋಲ್‌ನಲ್ಲಿ ಕೇಳಲಾಗುವ ವಿವಿಧ ರೀತಿಯ ಪ್ರಶ್ನೆಗಳನ್ನು ಪರಿಚಯಿಸುವ ಗುರಿಯನ್ನು ಹೊಂದಿದೆ.


ಮಾದರಿ ಪರೀಕ್ಷೆ ಉದ್ದೇಶ


“ನೀಡಿರುವ ಮಾದರಿ ಪರೀಕ್ಷೆಯನ್ನು ಕಳೆದ ವರ್ಷದಲ್ಲಿ ಅನುಸರಿಸಿದ ಮಾದರಿಯ ಆಧಾರದ ಮೇಲೆ PWD ಅಲ್ಲದ ಅಭ್ಯರ್ಥಿಗೆ ಮೂರು ವಿಭಾಗಗಳಿಗೆ ತಲಾ 40 ನಿಮಿಷಗಳು ಒಟ್ಟು 120 ನಿಮಿಷಗಳ ಅವಧಿಯೊಂದಿಗೆ ವಿನ್ಯಾಸಗೊಳಿಸಲಾಗಿದೆ. ಈ ಮಾದರಿ ಪರೀಕ್ಷೆಯ ಉದ್ದೇಶವು CAT 2022 ರ ಪರೀಕ್ಷೆಯ ಮಾದರಿಯನ್ನು ಬಹಿರಂಗಪಡಿಸುವುದಲ್ಲ ಅದರ ಬದಲಾಗಿ ಪರೀಕ್ಷೆಯು ಹೇಗೆ ನಡೆಯುತ್ತದೆ ಎಂದು ಮಾದರಿ ತಿಳಿಸಿಕೊಡುವುದಾಗಿದೆ ಎಂದು ತಿಳಿಸಲಾಗಿದೆ.

First published: