• Home
  • »
  • News
  • »
  • education
  • »
  • Medical College: ಮೆಡಿಕಲ್ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್! ಶೇ.40ರಷ್ಟು ಶುಲ್ಕ ಕಡಿತಗೊಳಿಸಿದ ಕಾಲೇಜು ಸಂಸ್ಥೆ

Medical College: ಮೆಡಿಕಲ್ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್! ಶೇ.40ರಷ್ಟು ಶುಲ್ಕ ಕಡಿತಗೊಳಿಸಿದ ಕಾಲೇಜು ಸಂಸ್ಥೆ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ಶುಲ್ಕ ನಿಯಂತ್ರಣ ಪ್ರಾಧಿಕಾರದ ನೀತಿ ವಿದ್ಯಾರ್ಥಿಗಳಿಗೆ ನಿಜಕ್ಕೂ ದೊಡ್ಡ ವರದಾನವಾಗಿದೆ. ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಖಾಸಗಿ ವೈದ್ಯಕೀಯ ಕಾಲೇಜುವೊಂದು ತನ್ನ ವಿದ್ಯಾರ್ಥಿಗಳಿಗೆ ಭಾರಿ ಮೊತ್ತದ ಶುಲ್ಕವನ್ನು ಕಡಿತಗೊಳಿಸುವ ಮೂಲಕ ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ಗುಡ್‌ ನ್ಯೂಸ್ ನೀಡಿದೆ.

ಮುಂದೆ ಓದಿ ...
  • Share this:

ಮುಂಬೈ: ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಖಾಸಗಿ ವೈದ್ಯಕೀಯ ಕಾಲೇಜುವೊಂದು ತನ್ನ ವಿದ್ಯಾರ್ಥಿಗಳಿಗೆ ಭಾರಿ ಮೊತ್ತದ ಶುಲ್ಕವನ್ನು ಕಡಿತಗೊಳಿಸುವ ಮೂಲಕ ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ಗುಡ್‌ ನ್ಯೂಸ್ (Good news)‌ ನೀಡಿದೆ. ವೈದ್ಯಕೀಯ ವಿದ್ಯಾರ್ಥಿಗಳಿಗೆ ಶುಲ್ಕವೇ ದೊಡ್ಡ ಹೊರೆಯಾಗಿರುವಾಗ ಮಹಾರಾಷ್ಟ್ರದ (Maharashtra) ಸಾಂಗ್ಲಿಯ ಪ್ರಕಾಶ್ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಶುಲ್ಕ ನಿಯಂತ್ರಣ ಪ್ರಾಧಿಕಾರ ವಾರ್ಷಿಕ ಬೋಧನಾ ಶುಲ್ಕವನ್ನು ಶೇ.40ರಷ್ಟು ಕಡಿತಗೊಳಿಸಿದೆ. ಶೇ.40ರಷ್ಟು ಶುಲ್ಕ ಇಳಿಕೆಯಾಗುವುದರ ಮೂಲಕ ಈ ಕಾಲೇಜಿನಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದ (Academic Year) ಶುಲ್ಕ 8.4 ಲಕ್ಷ ರೂನಿಂದ 4.8 ಲಕ್ಷ ರೂಗೆ ಕಡಿತಗೊಂಡಿದೆ. ಶುಲ್ಕ ನಿಯಂತ್ರಣ ಪ್ರಾಧಿಕಾರದ ಈ ನೀತಿ ವಿದ್ಯಾರ್ಥಿಗಳಿಗೆ ನಿಜಕ್ಕೂ ದೊಡ್ಡ ವರದಾನವಾಗಿದೆ.


ರಾಜ್ಯದ ಆರು ಖಾಸಗಿ ಕಾಲೇಜುಗಳು ಈವರೆಗೆ ಶುಲ್ಕ ಹೆಚ್ಚಳಕ್ಕೆ ಬೇಡಿಕೆ ಇಟ್ಟಿಲ್ಲ, ಆದರೆ ಇನ್ನು ಕೆಲವು ಕಾಲೇಜುಗಳು 50,000 ರೂ.ನಿಂದ 1.5 ಲಕ್ಷ ರೂ.ವರೆಗೆ ಶುಲ್ಕವನ್ನು ಹೆಚ್ಚಿಸಿವೆ ಎನ್ನಲಾಗಿದೆ.


ಸಾಂಗ್ಲಿಯ ಪ್ರಕಾಶ್ ವೈದ್ಯಕೀಯ ವಿಜ್ಞಾನ ಕಾಲೇಜಿನಲ್ಲಿ 40% ಶುಲ್ಕ ಕಡಿತ


ಪ್ರಕಾಶ್ ಕಾಲೇಜು ಸಲ್ಲಿಸಿದ ಕಳೆದ ವರ್ಷದ ವೆಚ್ಚದ ದಾಖಲೆಗಳ ಆಧಾರದ ಮೇಲೆ ಎಫ್‌ಆರ್‌ಎ ಶುಲ್ಕದ ಮೊತ್ತವನ್ನು ನಿರ್ಧರಿಸಿದೆ. ಸಂಸ್ಥೆಯು ಸರಿಯಾದ ದಾಖಲಾತಿಗಳ ಆಧಾರದ ಮೇಲೆ ವಿಮರ್ಶೆಯನ್ನು ಸಹ ಪಡೆಯಬಹುದಾಗಿದೆ ಎಂದು ಶುಲ್ಕ ನಿಯಂತ್ರಣ ಪ್ರಾಧಿಕಾರ ಹೇಳಿದೆ. ರಾಜ್ಯದ ಬಹುತೇಕ ಖಾಸಗಿ ವೈದ್ಯಕೀಯ ಕಾಲೇಜುಗಳು ವಾರ್ಷಿಕ ಶುಲ್ಕದಲ್ಲಿ ಹೆಚ್ಚಳವನ್ನು ಕೋರಿದರೆ, ಎಫ್‌ಆರ್‌ಎ ವೆಚ್ಚದ ಕಾಲೇಜುಗಳ ಆಧಾರದ ಮೇಲೆ ಸಮಂಜಸವಾದ ಹೆಚ್ಚಳವನ್ನು ಮತ್ತು ಕಡಿತವನ್ನು ಸಹ ಅನುಮತಿಸಿದೆ.


ಕಳೆದ ವಾರ ನಿಗದಿಪಡಿಸಲಾದ ಸಭೆಗಳಲ್ಲಿ, ಮುಂಬರುವ ಪ್ರವೇಶ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಪ್ರಾಧಿಕಾರವು ಪದವಿಪೂರ್ವ ಮತ್ತು ಸ್ನಾತಕೋತ್ತರ ವೈದ್ಯಕೀಯ ಕಾಲೇಜು ಶುಲ್ಕವನ್ನು ನಿಗದಿಪಡಿಸಿದೆ.
ಹೆಚ್ಚುವರಿ ಆದಾಯವೆಂದು ಪರಿಗಣಿಸಲಾದ ಎನ್‌ಆರ್‌ಐ ವಿದ್ಯಾರ್ಥಿಗಳಿಂದ ಕಾಲೇಜುಗಳು ಸಂಗ್ರಹಿಸಿದ ಶುಲ್ಕವನ್ನು ಆಧರಿಸಿ, ಹೆಚ್ಚಳವನ್ನು ಸಮಂಜಸವಾಗಿ ಇರಿಸಲಾಗಿದೆ ಎಂದು ಎಫ್‌ಆರ್‌ಎ ಅಧ್ಯಕ್ಷ ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿ ವಿಜಯ್ ಲಖಿಚಂದ್ ಅಚ್ಲಿಯಾ ಹೇಳಿದ್ದಾರೆ. ಕಾಲೇಜುಗಳು ಸರಿಯಾದ ದಾಖಲಾತಿಗಳ ಆಧಾರದ ಮೇಲೆ ಪರಿಶೀಲಿಸಬಹುದು ಎಂದು ಅವರು ತಿಳಿಸಿದ್ದಾರೆ.


ಕಾಶಿಬಾಯಿ ನವಲೆ ಕಾಲೇಜಿನ ಶುಲ್ಕ ಏರಿಕೆ
ಇನ್ನೂ ರಾಜ್ಯದ ಖಾಸಗಿ ಕಾಲೇಜುಗಳಲ್ಲಿ ಎರಡನೇ ಅತಿ ಹೆಚ್ಚು ಎಂಬಿಬಿಎಸ್ ಶುಲ್ಕವನ್ನು ವಿಧಿಸುವ ಪುಣೆಯ ಕಾಶಿಬಾಯಿ ನವಲೆ ಕಾಲೇಜಿನ ಶುಲ್ಕವು 13.91 ಲಕ್ಷ ರೂ.ಗೆ ಸ್ವಲ್ಪ ಮಟ್ಟದಲ್ಲಿ ಏರಿಕೆಯಾಗಿದೆ.


ಇದನ್ನೂ ಓದಿ: ಉಡುಪಿಯಲ್ಲಿ ಕೆಲಸ ಹುಡುಕ್ತಿದ್ದೀರಾ? ಇಲ್ಲಿದೆ ಸುವರ್ಣಾವಕಾಶ


ರಾಜ್ಯದ ಆರು ಕಾಲೇಜುಗಳಲ್ಲಿ ಈ ವರ್ಷ ಶುಲ್ಕ ಹೆಚ್ಚಳ ಇಲ್ಲ
ತಾಲೆಗಾಂವ್‌ನ ಎಂಐಎಂಇಆರ್‌, ಲಾತೂರ್‌ನ ಎಂಐಎಂಎಸ್‌ಆರ್‌, ಸೊಲ್ಲಾಪುರದ ಅಶ್ವಿನಿ ವೈದ್ಯಕೀಯ ಕಾಲೇಜು, ನಾಸಿಕ್‌ನ ಎಸ್‌ಎಂಬಿಟಿ ಕಾಲೇಜು, ಚಿಪ್ಲುನ್‌ನ ವಾಲಾವಲ್ಕರ್ ಕಾಲೇಜು ಮತ್ತು ಜಲ್ನಾದ ಜೆಐಐಯುನ ಐಐಎಂಎಸ್‌ಆರ್ ಸೇರಿದಂತೆ ಆರು ಕಾಲೇಜುಗಳು ಈ ವರ್ಷ ಶುಲ್ಕ ಹೆಚ್ಚಳವನ್ನು ಆಯ್ಕೆ ಮಾಡಿಲ್ಲ ಮತ್ತು ಅವುಗಳು ಕಳೆದ ಬಾರಿಯ ಶುಲ್ಕವನ್ನೇ ಮುಂದುವರಿಸುವುದಾಗಿ ತಿಳಿಸಿವೆ.


ಇದನ್ನೂ ಓದಿ: ಕರ್ನಾಟಕದ ಟಾಪ್‌ 10 ಮೆಡಿಕಲ್​ ಕಾಲೇಜುಗಳ ಪಟ್ಟಿ ಇಲ್ಲಿದೆ


ಶುಲ್ಕ ನಿಗದಿಯಲ್ಲಿ ವಿಳಂಬ
ಇನ್ನುಳಿದಂತೆ ಎಸಿಪಿಎಂ ಧುಲೆ, ಸಿಂಧುದುರ್ಗದ ಎಸ್‌ಎಸ್‌ಪಿಎಂ ವೈದ್ಯಕೀಯ ಕಾಲೇಜು, ವೇದಾಂತ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (ಕಳೆದ ವರ್ಷ ರೂ. 16.3 ಲಕ್ಷ ಶುಲ್ಕವಿತ್ತು) ಸಂಸ್ಥೆಯ ಶುಲ್ಕ ಇನ್ನೂ ನಿಗದಿಯಾಗಿಲ್ಲ. ಕೆಲವು ಖಾಸಗಿ ಕಾಲೇಜುಗಳ ಶುಲ್ಕ ನಿಗದಿಯಲ್ಲಿ ವಿಳಂಬವಾಗುತ್ತಿದೆ. ಖಾಸಗಿ ಮತ್ತು ಡೀಮ್ಡ್ ಕಾಲೇಜುಗಳು ಸರ್ಕಾರಿ ಕಾಲೇಜುಗಳಲ್ಲಿನ ಶುಲ್ಕಕ್ಕೆ ಸರಿಸಮಾನವಾಗಿ 50% ಸೀಟುಗಳನ್ನು ತರಲು ರಾಷ್ಟ್ರೀಯ ವೈದ್ಯಕೀಯ ಆಯೋಗದ (NMC) ಶುಲ್ಕ ಜ್ಞಾಪಕ ಪತ್ರದ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಉಳಿದಿದೆ.

First published: