• Home
 • »
 • News
 • »
 • education
 • »
 • Innovation School: ತ್ರಿ ಇಡಿಯೆಟ್ಸ್ ಸಿನಿಮಾದಲ್ಲಿರುವಂತೆ ಡಿಫರೆಂಟ್ ಶಾಲೆ, ಮಾಸ್ಟರ್ ಇಲ್ಲಿದ್ದಾರೆ ನೋಡಿ

Innovation School: ತ್ರಿ ಇಡಿಯೆಟ್ಸ್ ಸಿನಿಮಾದಲ್ಲಿರುವಂತೆ ಡಿಫರೆಂಟ್ ಶಾಲೆ, ಮಾಸ್ಟರ್ ಇಲ್ಲಿದ್ದಾರೆ ನೋಡಿ

ಸಿನಿಮಾದ ಪೋಸ್ಟರ್, ಮಕ್ಕಳೊಂದಿಗೆ ಶಿಕ್ಷಕ ಅನಿಲ್​ ಪ್ರಧಾನ್​

ಸಿನಿಮಾದ ಪೋಸ್ಟರ್, ಮಕ್ಕಳೊಂದಿಗೆ ಶಿಕ್ಷಕ ಅನಿಲ್​ ಪ್ರಧಾನ್​

ಮಕ್ಕಳಿಗೆ ಸಾಮಾನ್ಯ ಜ್ಞಾನ ನೀಡುವಂತಹ ಒಂದು ಪ್ರಯೋಗಿಕವಾದ ವಿನೂತನ ಮಾದರಿ ಮತ್ತು ಪಠ್ಯ ಪುಸ್ತಕಗಳಿಗಿಂತಲೂ ವಿಭಿನ್ನವಾದ ಶಿಕ್ಷಣ ನೀಡುತ್ತಿರುವ ಶಾಲೆ ಇದಾಗಿದೆ.

 • Trending Desk
 • Last Updated :
 • Bangalore [Bangalore], India
 • Share this:

  ನಿಜ ಜೀವನದ ರಾಂಚೋ (Rancho) ಅಂತ ಅಂದ್ರೆ ಅನೇಕರಿಗೆ ಬೇಗನೆ ಅರ್ಥವಾಗಲಿಕ್ಕಿಲ್ಲ. ನೀವು ಬಾಲಿವುಡ್ ನಟ ಆಮೀರ್ ಖಾನ್ ( Actor Aamir Khan) ಅಭಿನಯದ ಹಿಂದಿ ಚಿತ್ರ ‘ತ್ರಿ ಇಡಿಯೆಟ್ಸ್’ (Three Idiots Movie) ನೋಡಿದ್ದರೆ, ಈ ರಾಂಚೋ ಪಾತ್ರ ಚೆನ್ನಾಗಿ ನೆನಪಿರುತ್ತದೆ. ಮೊದಲಿನಿಂದಲೂ ವಿದ್ಯಾರ್ಥಿಗಳು ಪುಸ್ತಕದ ಹುಳು ಆಗುವ ಬದಲು ಪರಿಸರದಲ್ಲಿ ಕಲಿಯುವುದು ತುಂಬಾನೇ ಇದೆ. ನಮ್ಮ ಸುತ್ತಮುತ್ತಲಿನ ಸಮಸ್ಯೆಗಳನ್ನು ಹೇಗೆ ಬಗೆಹರಿಸಿಕೊಳ್ಳಬೇಕು ಅಂತ ಕಲಿಯುವುದೇ ನಿಜವಾದ ಶಿಕ್ಷಣ ಅಂತ ಆ ಚಿತ್ರದಲ್ಲಿ ಹೇಳಿ ಕೊನೆಯಲ್ಲಿ ಎಲ್ಲೋ ಬೆಟ್ಟಗುಡ್ಡಗಳಲ್ಲಿ ಮಕ್ಕಳಿಗೆ ಸಾಮಾನ್ಯ ಜ್ಞಾನ ನೀಡುವಂತಹ ಒಂದು ಪ್ರಯೋಗಿಕವಾದ ವಿನೂತನ ಮಾದರಿ ಮತ್ತು ಪಠ್ಯ ಪುಸ್ತಕಗಳಿಗಿಂತಲೂ ವಿಭಿನ್ನವಾದ ಶಿಕ್ಷಣ ನೀಡುತ್ತಿರುವ ಶಾಲೆಯನ್ನು ನೋಡಿದ್ದೆವು.


  ಇಲ್ಲಿಯೂ ಸಹ ಅದೇ ರೀತಿಯಾಗಿ ಒಬ್ಬ ವ್ಯಕ್ತಿ ತನ್ನದೇ ಆದ ವಿಭಿನ್ನವಾದ ಶಾಲೆಯೊಂದನ್ನು ಬಡ ಮಕ್ಕಳಿಗಾಗಿ ಶುರು ಮಾಡಿದ್ದಾರೆ. ನಮ್ಮ ಪಠ್ಯಪುಸ್ತಕ ಆಧಾರಿತ ಶಿಕ್ಷಣ ವ್ಯವಸ್ಥೆ ಮತ್ತು ಕಲಿಕೆಯನ್ನು ದಿನಾ ಬೆಳಗಾದರೆ ಟೀಕೆ ಮಾಡುವವರೇ ಹೆಚ್ಚಿರುವ ಈ ಸಂದರ್ಭದಲ್ಲಿ ಮಕ್ಕಳಿಗೆ ಹೇಗೆ ವಿಭಿನ್ನವಾದ ಶಿಕ್ಷಣ ನೀಡಬಹುದು. ಹೇಗೆ ಅವರ ಕಲಿಕೆಯನ್ನು ಇನ್ನೂ ಉತ್ತಮವಾಗಿಸಬಹುದು ಅಂತ ಮಾಡಿ ತೋರಿಸುವವರು ಬೆರಳೆಣಿಕೆಯಷ್ಟು ಮಾತ್ರ ಅಂತ ಹೇಳಬಹುದು.


  ಒಡಿಶಾದ ಪದವೀಧರ ಶುರು ಮಾಡಿದ್ರು ನೋಡಿ ವಿಭಿನ್ನವಾದ ಶಾಲೆ


  ಒಡಿಶಾದ 26 ವರ್ಷದ ಅನಿಲ್​ ಪ್ರಧಾನ್​ ಒಡಿಶಾದ ಬರಲ್ ಗ್ರಾಮದ ಮಕ್ಕಳಿಗಾಗಿ ವಿಭಿನ್ನ ಮಾದರಿಯ ಶಾಲೆಯೊಂದನ್ನು ತೆರೆಯುವ ಮೂಲಕ ನಿಜ ಜೀವನದ ರಾಂಚೋ ಆಗಿ ಹೊರ ಹೊಮ್ಮಿದ್ದಾರೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಇವರು ಶುರು ಮಾಡಿದ ವಿನೂತನ ಮಾದರಿಯ ಶಾಲೆ "ನಿಜ ಜೀವನದ ಸಮಸ್ಯೆಗಳನ್ನು ಪರಿಹರಿಸುವ" ಬಗ್ಗೆ ಹೆಚ್ಚು ಗಮನ ಹರಿಸುತ್ತದೆ ಎಂದು ಹೇಳಬಹುದು. ಅವರು ಸಿವಿಲ್ ಎಂಜಿನಿಯರಿಂಗ್ ಪದವೀಧರರಾಗಿದ್ದಾರೆ, ಅವರ ತಂದೆ ಮೊದಲು ಒಬ್ಬ ಬಟ್ಟೆ ಹೊಲೆಯುವ ಟೈಲರ್ ಆಗಿದ್ದು ಈಗ ಸಿ‌ಆರ್‌ಪಿಎಫ್ ನಲ್ಲಿ ಒಬ್ಬ ಜವಾನನಾಗಿ ಕೆಲಸ ಮಾಡುತ್ತಿದ್ದಾರೆ.


  ಅನಿಲ್ ಗೆ ಬಾಲ್ಯದಿಂದಲೂ ತಂತ್ರಜ್ಞಾನ ಮತ್ತು ಆವಿಷ್ಕಾರಗಳ ಕಡೆಗೆ ಒಲವು ಜಾಸ್ತಿ


  ಅನಿಲ್ ಅವರು ತಮ್ಮ ಬಾಲ್ಯದಲ್ಲಿ ತಂತ್ರಜ್ಞಾನ ಮತ್ತು ಆವಿಷ್ಕಾರಗಳ ಕಡೆಗೆ ತಮ್ಮ ಒಲವನ್ನು ಕಂಡುಕೊಂಡರು. ಅವರು ಕಾಲೇಜಿಗೆ ಹೋದಾಗ, ಅವರು ಉಪಗ್ರಹವನ್ನು ನಿರ್ಮಿಸಿದರು ಮತ್ತು ರೋಬೋಟ್ ಅನ್ನು ವಿನ್ಯಾಸಗೊಳಿಸಿದರು. ಪದವಿ ಪಡೆದ ನಂತರ, ಅವರು ತಮ್ಮ ಕುಟುಂಬದ ಭೂಮಿಯಲ್ಲಿ ಒಂದು ಶಾಲೆಯನ್ನು ಪ್ರಾರಂಭಿಸಲು ನಿರ್ಧರಿಸಿದರು.


  ಇದನ್ನೂ ಓದಿ: IITಗೆ ಸೇರಲು ಬಯಸುವ ವಿದ್ಯಾರ್ಥಿಗಳು JEE ಪರೀಕ್ಷೆಗೆ ಈ ರೀತಿ PUಯಿಂದಲೇ ತಯಾರಿ ನಡೆಸಿ


  ಇಂಟರ್ನ್ಯಾಷನಲ್ ಸ್ಕೂಲ್ ಫಾರ್ ರೂರಲ್ ಇನ್ನೋವೇಶನ್ ಅದರ ಕೆಲಸದ ವಿಧಾನದಿಂದಾಗಿ ಕೆಲವೇ ಕೆಲವು ವಿದ್ಯಾರ್ಥಿಗಳೊಂದಿಗೆ ಪ್ರಾರಂಭವಾಯಿತು. ಪಠ್ಯಪುಸ್ತಕ ಕಲಿಕೆಗಿಂತ ಹೆಚ್ಚಾಗಿ ಕರಕುಶಲತೆ ಮತ್ತು ಪ್ರಯೋಗಗಳನ್ನು ಉತ್ತೇಜಿಸುವ ಶಾಲೆಗೆ ತಮ್ಮ ಮಕ್ಕಳನ್ನು ಕಳುಹಿಸಲು ಮೊದಲು ಸುತ್ತಮುತ್ತಲಿನ ಪೋಷಕರು ಅಷ್ಟೊಂದು ಆಸಕ್ತಿ ಹೊಂದಿರಲಿಲ್ಲ ಎಂದು ಅನಿಲ್ ಹೇಳುತ್ತಾರೆ.


  ಈ ಶಾಲೆಯಲ್ಲಿದ್ದಾರೆ 250ಕ್ಕೂ ಹೆಚ್ಚು ವಿದ್ಯಾರ್ಥಿಗಳು


  ಆದರೆ ಈಗ, ಇದು 250 ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿದೆ, ಅವರು ಯಾವುದೇ ಪರೀಕ್ಷೆಗಳನ್ನು ತೆಗೆದುಕೊಳ್ಳುವುದಿಲ್ಲ. ಆದರೆ ಪ್ರತಿದಿನ ಹೊಸ ವಿಷಯಗಳನ್ನು ಕಲಿಯುತ್ತಾರೆ. ಈ ಶಾಲೆ ಈಗ ಒಡಿಶಾ ರಾಜ್ಯ ಮಂಡಳಿಯೊಂದಿಗೆ ಸಂಯೋಜಿತವಾಗಿದೆ ಮತ್ತು 16 ಶಿಕ್ಷಕರು ಅಥವಾ ಸ್ವಯಂಸೇವಕರನ್ನು ಸಹ ಹೊಂದಿದೆ. ಇವರೆಲ್ಲರೂ ಕಾಲೇಜು ಪದವೀಧರರು ಅಥವಾ ಪದವಿಯ ಅಂತಿಮ ವರ್ಷದಲ್ಲಿ ಓದುತ್ತಿರುವವರು ಆಗಿದ್ದಾರೆ ಎಂದು ಹೇಳಲಾಗುತ್ತಿದೆ.


  ಶಾಲೆ ಶುರುಮಾಡಿದ್ದರ ಬಗ್ಗೆ ಏನ್ ಹೇಳ್ತಾರೆ ಅನಿಲ್?


  "ನಾನು 42 ಮೌಜಾದಲ್ಲಿ ಜನಿಸಿದೆ ಮತ್ತು ಉತ್ತಮ ಶಿಕ್ಷಣವನ್ನು ಪಡೆಯಲು ಆ ಪ್ರದೇಶವನ್ನು ತೊರೆದೆ. ಆದರೆ ಜನರು ಉತ್ತಮ ಶಿಕ್ಷಣಕ್ಕಾಗಿ ನಗರಗಳ ಕಡೆಗೆ ವಲಸೆ ಹೋಗುವುದು ನನಗೆ ಇಷ್ಟವಾಗಲಿಲ್ಲ. ಅವರು ತಮ್ಮ ಹಳ್ಳಿಯಲ್ಲಿಯೇ ಆ ಎಲ್ಲಾ ಸೌಲಭ್ಯಗಳನ್ನು ಹೊಂದಿರಬೇಕು, ವಿಶೇಷವಾಗಿ ಬಡ ವಿದ್ಯಾರ್ಥಿಗಳಿಗೆ ಎಲ್ಲಾ ರೀತಿಯ ಸೌಲಭ್ಯಗಳು ಸಿಗಬೇಕು. ಸಾಂಪ್ರದಾಯಿಕ ಶಾಲಾ ಪಠ್ಯಕ್ರಮವು ವಿದ್ಯಾರ್ಥಿಗಳ ಮೇಲೆ ಒತ್ತಡ ಹೇರುತ್ತದೆ ಎಂದು ನಾನು ಕಂಡುಕೊಂಡೆ. ಅಂತಹ ವ್ಯವಸ್ಥೆಯು ಸಮಾಜಕ್ಕೆ ಪರಿಹಾರಗಳನ್ನು ಕಂಡುಕೊಳ್ಳಬಲ್ಲ ಸೃಜನಶೀಲ ಮತ್ತು ನವೀನ ವಿದ್ಯಾರ್ಥಿಗಳನ್ನು ಉತ್ಪಾದಿಸುವುದಿಲ್ಲ. ಈ ಸಮಸ್ಯೆಯನ್ನು ಪರಿಹರಿಸಲು, ನಾನು ಈ ಶಾಲೆಯನ್ನು ಪ್ರಾರಂಭಿಸಿದೆ" ಎಂದು ಅನಿಲ್ ಹೇಳಿದರು.

  Published by:Kavya V
  First published: