• Home
  • »
  • News
  • »
  • education
  • »
  • Admission Open: ತುಮಕೂರು ಕರಾಮುವಿ ಪ್ರವೇಶ ಆರಂಭ, ನವೆಂಬರ್ 15ರ ಒಳಗೆ ಅರ್ಜಿ ಸಲ್ಲಿಸಿ

Admission Open: ತುಮಕೂರು ಕರಾಮುವಿ ಪ್ರವೇಶ ಆರಂಭ, ನವೆಂಬರ್ 15ರ ಒಳಗೆ ಅರ್ಜಿ ಸಲ್ಲಿಸಿ

ಅಪ್ಲೈ ಮಾಡಿ

ಅಪ್ಲೈ ಮಾಡಿ

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಪ್ರಾದೇಶಿಕ ಕೇಂದ್ರ ತುಮಕೂರಿನಲ್ಲಿ 2022-23ನೇ ಶೈಕ್ಷಣಿಕ ಸಾಲಿನ ಜುಲೈ ಆವೃತ್ತಿಯ ಯುಜಿಸಿ ಅನುಮೋದಿತ ಕೋರ್ಸ್‌ಗಳಿಗೆ ಪ್ರವೇಶಾತಿ ಆರಂಭವಾಗಿದೆ.

  • News18 Kannada
  • Last Updated :
  • Tumkur, India
  • Share this:

ತುಮಕೂರಿನಲ್ಲಿ (Tumkur) ಕಲಿಯಲು ಬಯಸುವ ವಿದ್ಯಾರ್ಥಿಗಳು ಇಲ್ಲಿ ಗಮನಿಸಿ. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಪ್ರಾದೇಶಿಕ ಕೇಂದ್ರ ತುಮಕೂರಿನಲ್ಲಿ 2022-23ನೇ ಶೈಕ್ಷಣಿಕ ಸಾಲಿನ ಜುಲೈ (July) ಆವೃತ್ತಿಯ ಯುಜಿಸಿ ಅನುಮೋದಿತ ಕೋರ್ಸ್‌ಗಳಿಗೆ ಪ್ರವೇಶಾತಿ ಆರಂಭವಾಗಿದೆ. ಪ್ರವೇಶಕ್ಕಾಗಿ ಆನ್‌ಲೈನ್‌ (Online) ಮೂಲಕ ಅರ್ಜಿ (Application) ಆಹ್ವಾನಿಸಲಾಗಿದ್ದು ಸೇರಬಯಸುವವರು ಈ ಕೂಡಲೇ ಅರ್ಜಿ ಸಲ್ಲಿಸಿ. ವಿವಿಧ ಕೋರ್ಸ್​ ಲಭ್ಯವಿದ್ದು ನಿಮ್ಮ ಆಸಕ್ತಿಯ ವಿಷಯಕ್ಕೆ ಅರ್ಜಿ ಸಲ್ಲಿಸಿ.


ಯುಜಿಸಿ ನಿಯಮಾವಳಿ ಪ್ರಕಾರ ಪೂರ್ಣಾವಧಿಯಲ್ಲಿ ಭೌತಿಕ, ಒಂದು ಕೋರ್ಸ್ ಮತ್ತು ದೂರ ಶಿಕ್ಷಣದಲ್ಲಿ ಇನ್ನೂಂದು ಕೋರ್ಸ್‌ಗಳನ್ನು ಏಕಕಾಲದಲ್ಲೇ ಒಂದೇ ವರ್ಷದಲ್ಲಿ ಅಧ್ಯಯನ ಮಾಡಲಿ ಇಲ್ಲಿ ಅವಕಾಶ ಕಲ್ಪಿಸಲಾಗಿದೆ. ಸ್ನಾತಕಕೋತ್ತರ ಕೋರ್ಸ್‌ಗಳ ಪ್ರಥಮ ವರ್ಷದ ಜುಲೈ ಆವೃತ್ತಿ ಪ್ರವೇಶಾತಿಗೆ ನವೆಂಬರ್ 15 ಕೊನೆಯ ದಿನಾಂಕವಾಗಿದೆ.


ಪದವಿ ಕೋರ್ಸ್‌ಗಳು
ಈ ಕೆಳಗಿನ ಪದವಿ ಕೋರ್ಸ್​ಗಳು ಲಭ್ಯವಿದೆ
ಬಿ.ಎ, ಬಿ.ಕಾಂ, ಬಿ.ಲಿಬ್.ಐ.ಎಸ್‌.ಸಿ, ಬಿಎಸ್ಸಿ, ಬಿಎಸ್ಸಿ ಹೋಮ್‌ ಸೈನ್ಸ್, ಬಿಎಸ್ಸಿ ಇನ್‌ಫರ್‌ಮೇಷನ್ ಸೈನ್ಸ್, ಬಿಸಿಎ, ಬಿಬಿಎ- ಮಾರ್ಕೆಟಿಂಗ್.


ಶೈಕ್ಷಣಿಕ ಅರ್ಹತೆ
ಆಯಾ ಕೋರ್ಸ್‌ಗಳಿಗೆ ನಿಗದಿಪಡಿಸಿರುವ ಶೈಕ್ಷಣಿಕ ಅರ್ಹತೆಯನುಸಾರ ದಾಖಲಾತಿಗಳೊಂದಿಗೆ ವಿವಿ ನಿಲಯದ ಕೇಂದ್ರ ಕಚೇರಿ ಮೈಸೂರು ಮತ್ತು ವಿವಿಧ ಪ್ರಾದೇಶಿಕ ಕೇಂದ್ರಗಳು ಮತ್ತು ಕಲಿಕಾರ್ಥಿ ಸಹಾಯ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಿ ಪ್ರವೇಶಾತಿ ಪಡೆದುಕೊಳ್ಳಿ.


ಇದನ್ನೂ ಓದಿ: ಈಗ ಪದವಿಯೊಂದೇ ಸಾಲದು, ಈ ವೃತ್ತಿಪರ ಕೋರ್ಸ್​ ಕೂಡ ಮಾಡಿ


ಲಭ್ಯವಿರುವ ಸ್ನಾತಕೋತ್ತರ ಪದವಿ ಕೋರ್ಸ್‌ಗಳು
ಎಂ.ಎ -ಕನ್ನಡ, ಇಂಗ್ಲಿಷ್, ಹಿಂದಿ, ಸಂಸ್ಕೃತ, ಉರ್ದು, ತೆಲಗು, ಎಂಎ -ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಸಮಾಜಶಾಸ್ತ್ರ, ಸಾರ್ವಜನಿಕ ಆಡಳಿತ, ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ, ಶಿಕ್ಷಣ. ಎಂ. ಕಾಂ. ಎಂಬಿಎ, ಎಂಲಿಬ್‌ಐಎಸ್ಸಿ,


MSC ಕೋರ್ಸ್‌ಗಳು - ಜೀವ ರಸಾಯನಶಾಸ್ತ್ರ, ಜೈವಿಕ ತಂತ್ರಜ್ಞಾನ, ರಸಾಯನಶಾಸ್ತ್ರ, ಕ್ಲಿನಿಕಲ್ ನ್ಯೂಟ್ರಿಷನ್ ಅಂಡ್ ಡಯಟೆಟಿಕ್ಸ್, ಪರಿಸರ ವಿಜ್ಞಾನ, ಕಂಪ್ಯೂಟರ್ ವಿಜ್ಞಾನ, ಭೂಗೋಳ ಶಾಸ್ತ್ರ, ಮಾಹಿತಿ ವಿಜ್ಞಾನ, ಗಣಿತಶಾಸ್ತ್ರ, ಸೂಕ್ಷ್ಮ ಜೀವಶಾಸ್ತ್ರ, ಭೌತಶಾಸ್ತ್ರ, ಮನೋವಿಜ್ಞಾನ, ಸಸ್ಯಶಾಸ್ತ್ರ, ಪ್ರಾಣಿಶಾಸ್ತ್ರ, ಫುಡ್ ಅಂಡ್ ನ್ಯೂಟ್ರಿಷನ್ ಸೈನ್ಸ್.


PG ಡಿಪ್ಲೊಮಾ ಕೋರ್ಸ್‌ಗಳು
ಕಮ್ಯೂನಿಕೇಟಿವ್ ಇಂಗ್ಲಿಷ್, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ, ಇಂಗ್ಲಿಷ್, ಕುವೆಂಪು ಸಾಹಿತ್ಯ, ವ್ಯವಹಾರಿಕ ಕಾನೂನು, ವ್ಯವಹಾರಿಕ ನಿರ್ವಹಣೆ, ಮಾನವ ಸಂಪನ್ಮೂಲ ನಿರ್ವಹಣೆ, ಹಣಕಾಸು ನಿರ್ವಹಣೆ, ಅಂಬೇಡ್ಕರ್ ಅಧ್ಯಯನ, ಮಾರುಕಟ್ಟೆ ನಿರ್ವಹಣೆ, ಅಂಬೇಡ್ಕರ್ ಅಧ್ಯಯನ, ಮಾರುಕಟ್ಟೆ ನಿರ್ವಹಣಾಶಾಸ್ತ್ರ, ನ್ಯೂಟ್ರಿಷನ್ ಅಂಡ್ ಡಯಟೆಟಿಕ್ಸ್‌ , ಮಾಹಿತಿ ತಂತ್ರಜ್ಞಾನ, ಕಂಪ್ಯೂಟರ್ ಅಪ್ಲಿಕೇಶನ್.


ಡಿಪ್ಲೊಮಾ ಕೋರ್ಸ್‌ಗಳು
10 ಹಾಗೂ 12ನೇ ತರಗತಿ ಪೂರ್ಣಗೊಳಿಸಿದವರಿಗೆ ಡಿಪ್ಲೊಮಾ -ಕನ್ನಡ, ಪತ್ರಿಕೋದ್ಯಮ, ನ್ಯೂಟ್ರಿಷನ್ ಅಂಡ್ ಹೆಲ್ತ್ ಎಜುಕೇಷನ್, ಮಾಹಿತಿ ತಂತ್ರಜ್ಞಾನ, ಕಂಪ್ಯೂಟರ್ ಅಪ್ಲಿಕೇಷನ್. ಅರ್ಲಿ ಚೈಲ್ಡ್‌ಹುಡ್‌ ಕೇರ್ ಅಂಡ್ ಎಜುಕೇಷನ್.


ಇದನ್ನೂ ಓದಿ: ಮೂರು ತಿಂಗಳ ಬೇಕಿಂಗ್ ತರಬೇತಿ ಪಡೆಯಿರಿ, ಆರಂಭದ ದಿನದಿಂದಲೇ ಲಾಭ ಗಳಿಸಿ


ಯುಜಿ ಸರ್ಟಿಫಿಕೇಟ್ ಕೋರ್ಸ್‌ಗಳು
10 ಹಾಗೂ 12ನೇtಹತಿ ಆಧರಿಸಿ : ಪಂಚಾಯತ್ ರಾಜ್, ಮಾಹಿತಿ ಸಂವಹನ ತಂತ್ರಜ್ಞಾನ, ನ್ಯೂಟ್ರಿಷನ್ ಅಂಡ್ ಫುಡ್, ಇಂಗ್ಲಿಷ್‌, ಎಂಪ್ಲಾಯ್‌ಮೆಂಟ್‌ ಮತ್ತು ಎಮಟರ್‌ಪ್ರೆನ್ಯುರ್‌ಷಿಪ್.


ಶುಲ್ಕದಲ್ಲಿ ರಿಯಾಯಿತಿ
1. ಬಿಪಿಎಲ್ ಕಾರ್ಡ್ ಹೊಂದಿರುವ ಮಹಿಳಾ ವಿದ್ಯಾರ್ಥಿಗಳಿಗೆ ಮತ್ತು ಡಿಫೆನ್ಸ್ / ಮಾಜಿ 2. ಸೈನಿಕ ವಿದ್ಯಾರ್ಥಿಗಳಿಗೆ ಸ್ನಾತಕ / ಸ್ನಾತಕೋತ್ತರ ಕೋರ್ಸ್‌ಗಳ ಬೋಧನಾ ಶುಲ್ಕದಲ್ಲಿ ಶೇಕಡ 15ರಷ್ಟು ರಿಯಾಯಿತಿ ನೀಡಲಾಗಿದೆ.
3. ಆಟೋ/ಕ್ಯಾಬ್ ಚಾಲಕರು ಮತ್ತು ಅವರ ಮಕ್ಕಳಿಗೆ ಸ್ನಾತಕ / ಸ್ನಾತಕೋತ್ತರ ಕೋರ್ಸ್‌ಗಳ ಬೋಧನಾ ಶುಲ್ಕದಲ್ಲಿ ಶೇಕಡ 30ರಷ್ಟು ರಿಯಾಯಿತಿ.
4. ಕೆಎಸ್‌ಆರ್‌ಟಿಸಿ / ಬಿಎಂಟಿಸಿ/ ಎನ್‌ಡಬ್ಲ್ಯೂಕೆಎಸ್‌ಆರ್‌ಟಿಸಿ / ಕೆಕೆಆರ್‌ಟಿಸಿ ನೌಕರರುಗಳಿಗೆ ಸ್ನಾತಕ / ಸ್ನಾತಕೋತ್ತರ ಕೋರ್ಸ್‌ಗಳ ಬೋಧನಾ ಶುಲ್ಕದಲ್ಲಿ ಶೇಕಡ 25ರಷ್ಟು ರಿಯಾಯಿತಿ ಇರುತ್ತದೆ.


ಕೋವಿಡ್ ನಿಂದ ಮರಣ ಹೊಂದಿದ ಪೋಷಕರ ಮಕ್ಕಳಿಗೆ ರಿಯಾಯಿತಿ
1. ಟ್ರಾನ್ಸ್ ಜೆಂಡರ್ ಅಥವಾ ತೃತೀಯ ಲಿಂಗಿಗಳಿಗೆ.
2. ದೃಷ್ಟಿ ಹೀನ ವಿದ್ಯಾರ್ಥಿಗಳಿಗೆ (ಬಿ.ಎಡ್/ಎಂಸಿಎ ಹೊರತು ಪಡಿಸಿ).
3. SC/ST/OBC ವಿದ್ಯಾರ್ಥಿಗಳು ಅಗತ್ಯ ದಾಖಲೆಗಳನ್ನು ಒದಗಿಸಿದಲ್ಲಿ SSP ಮು‌ಖಾಂತರ ವಿದ್ಯಾರ್ಥಿ ವೇತನ ಪಡೆಯಬಹುದು.


ಹೆಚ್ಚಿನ ಮಾಹಿತಿಗಾಗಿ ವಿಳಾಸ
ಹೆಚ್ಚಿನ ಮಾಹಿತಿಗಾಗಿ ಪ್ರಾದೇಶಿಕ ನಿರ್ದೇಶಕರು, ಕರಾಮುವಿ ತುಮಕೂರು ಪ್ರಾದೇಶಿಕ ಕೇಂದ್ರ ತುಮಕೂರು, ಮೇಳೆಕೋಟೆ, ಗಂಗಸಂದ್ರ ಮುಖ್ಯರಸ್ತೆ, ತುಮಕೂರು-572 105 ಸಂಪರ್ಕಿಸಬಹುದಾಗಿದೆ.


ಇಲ್ಲಿ ಕ್ಲಿಕ್ ಮಾಡಿ ಆನ್​​​ಲೈನ್ ಅಪ್ಲೈ ಮಾಡಿ


ದೂರವಾಣಿ ಸಂಖ್ಯೆ
0816-2955580, 9844506629, 9886112434, 7349474339 ಗೆ ಕರೆ ಮಾಡಿ

First published: