• Home
  • »
  • News
  • »
  • education
  • »
  • Tech Skills: ಕೆರಿಯರ್‌ನಲ್ಲಿ ಅಭಿವೃದ್ಧಿ ಕಾಣಬೇಕೆ? ಹಾಗಿದ್ರೆ ಈ 5 ಟೆಕ್‌ ಸ್ಕಿಲ್ಸ್‌ ಬಗ್ಗೆ ಗೊತ್ತಿರಲಿ

Tech Skills: ಕೆರಿಯರ್‌ನಲ್ಲಿ ಅಭಿವೃದ್ಧಿ ಕಾಣಬೇಕೆ? ಹಾಗಿದ್ರೆ ಈ 5 ಟೆಕ್‌ ಸ್ಕಿಲ್ಸ್‌ ಬಗ್ಗೆ ಗೊತ್ತಿರಲಿ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ನಿಮ್ಮ ವೃತ್ತಿಜೀವನದಲ್ಲಿ ಅಭಿವೃದ್ಧಿ ಕಾಣಲು, ನೀವು ಸದ್ಯ ಚಾಲ್ತಿಯಲ್ಲಿರುವ ಟೆಕ್ನಾಲಜಿಯಲ್ಲಿ ಅಪ್‌ ಡೇಟ್‌ ಆಗಲೇಬೇಕು. 2022 ರಲ್ಲಿ ನಿಮ್ಮ ವೃತ್ತಿಜೀವನದ ಬೆಳವಣಿಗೆಯನ್ನು ಹೆಚ್ಚಿಸಲು 5 ಬೇಡಿಕೆಯಲ್ಲಿರುವ ತಾಂತ್ರಿಕ ಕೌಶಲ್ಯಗಳು ಇಲ್ಲಿವೆ.

  • Share this:

ವೃತ್ತಿ ಜೀವನದಲ್ಲಿ (Career) ಒಂದೊಂದೇ ಹಂತ ಮೇಲೇರಲು ನೀವು ಸಾಕಷ್ಟು ಶ್ರಮ ಪಡಬೇಕಾಗುತ್ತದೆ. ಶ್ರಮದ ಜೊತೆಗೆ ನೀವು ತಾಂತ್ರಿಕ ಕೌಶಲ್ಯವನ್ನೂ ಹೆಚ್ಚಿಸಿಕೊಳ್ಳುವುದು ಅತ್ಯಗತ್ಯ. ನಿಮ್ಮ ವೃತ್ತಿಜೀವನದಲ್ಲಿ ಅಭಿವೃದ್ಧಿ ಕಾಣಲು, ನೀವು ಸದ್ಯ ಚಾಲ್ತಿಯಲ್ಲಿರುವ ಟೆಕ್ನಾಲಜಿಯಲ್ಲಿ (Technology) ಅಪ್‌ ಡೇಟ್‌ ಆಗಲೇಬೇಕು. 2022 ರಲ್ಲಿ ನಿಮ್ಮ ವೃತ್ತಿಜೀವನದ ಬೆಳವಣಿಗೆಯನ್ನು ಹೆಚ್ಚಿಸಲು 5 ಬೇಡಿಕೆಯಲ್ಲಿರುವ ತಾಂತ್ರಿಕ ಕೌಶಲ್ಯಗಳು (Technical skill) ಇಲ್ಲಿವೆ.  ಕೃತಕ ಬುದ್ಧಿಮತ್ತೆಯ ವ್ಯಾಪ್ತಿಯು ಬೃಹತ್‌ ಪ್ರಮಾಣದಲ್ಲಿದ್ದು, ಅದು ಭವಿಷ್ಯದಲ್ಲಿ ಹೆಚ್ಚಿನ ಬೇಡಿಕೆಯುಳ್ಳದ್ದಾಗಿದೆ. ನಿಮಗೆ ಆಸಕ್ತಿಯಿರುವ ಕ್ಷೇತ್ರದಲ್ಲಿ ಕಲಿಯಲು ಮತ್ತು ಬೆಳೆಯಲು ನಿಮಗೆ ವ್ಯಾಪಕ ಅವಕಾಶಗಳನ್ನು ಒದಗಿಸುತ್ತದೆ ಅಂದರೆ ತಪ್ಪಾಗೋದಿಲ್ಲ.


1. ಮಷಿನ್‌ ಲರ್ನಿಂಗ್‌
ಮಷಿನ್‌ ಲರ್ನಿಂಗ್‌ ಅನ್ನೋದು ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ಅಥವಾ ಕೃತಕ ಬುದ್ಧಿಮತ್ತೆಯ ಒಂದು ನಿರ್ದಿಷ್ಟ ಶಾಖೆ. ಇದಕ್ಕೆ ವಿವಿಧ IT ವಲಯಗಳಲ್ಲಿ ಹೆಚ್ಚಿನ ಬೇಡಿಕೆಯಿದೆ.


ಯಂತ್ರಗಳು ಮನುಷ್ಯನಂತೆ ಕಾರ್ಯ ನಿರ್ವಹಿಸಲು ಪ್ರೋಗ್ರಾಂ ಹಾಗೂ ದೊಡ್ಡ ಡೇಟಾ ಅಗತ್ಯವಿರುತ್ತೆ. ಉದಾಹರಣೆಗೆ ಸ್ವಯಂ-ಚಾಲನಾ ಕಾರು ಅಥವಾ ಡಿಜಿಟಲ್ ಧ್ವನಿ ಸಹಾಯಕ ಗಳಂಥ ಪ್ರೋಗ್ರಾಂಗಳು.


ಮಷಿನ್‌ ಲರ್ನಿಂಗ್‌ ಇಂಜಿನಿಯರ್‌ಗಳು ಆರ್ಥಿಕ ಮುನ್ಸೂಚನೆ, ಇಮೇಜ್‌ ರೆಕಗ್ನಿಶನ್‌ ಮತ್ತು ನ್ಯಾಚುರಲ್‌ ಭಾಷೆ ಗಳಂತಹ ವಿವಿಧ ಸಾಧನಗಳನ್ನು ಬಳಸಿಕೊಂಡು ಯಂತ್ರಗಳನ್ನು ಕಲಿಯಲು ಮತ್ತು ಸುಧಾರಿಸಲು ಸಾಧ್ಯವಾಗುತ್ತದೆ. ಈ ಮಷಿನ್‌ ಲರ್ನಿಂಗ್‌ ಗೆ ಸದ್ಯ ತುಂಬಾ ಬೇಡಿಕೆಯಲ್ಲಿದೆ.


2. ಬಿಗ್‌ ಡೇಟಾ
"ಡೇಟಾ ಈಸ್ ದಿ ನ್ಯೂ ಆಯಿಲ್" ಅನ್ನೋದು ಪ್ರಸ್ತುತ ಚಾಲ್ತಿಯಲ್ಲಿರೋ ಗಾದೆ ಎನ್ನಬಹುದು. ನಿಮಗೆ ಆಶ್ಚರ್ಯ ಆಗಬಹುದು, ಪ್ರತಿ ಸೆಕೆಂಡಿಗೆ ಸಾವಿರಾರು ಟನ್‌ಗಳಷ್ಟು ಆನ್‌ಲೈನ್ ಡೇಟಾ ಉತ್ಪತ್ತಿಯಾಗುತ್ತವೆ.


ಇದನ್ನು ಪರಿಗಣಿಸಿ ಸರಿಯಾದ ಡೇಟಾವನ್ನು ಸರಿಯಾದ ಡ್ರೈವ್‌ ನಲ್ಲಿ ಹಾಕುವುದು ತುಂಬ ಮುಖ್ಯ. ಇದು ಪ್ರತಿ ಉದ್ಯಮ ಮತ್ತು ವಲಯದಲ್ಲಿ ದೊಡ್ಡ ಡೇಟಾ ಉದ್ಯೋಗಗಳ ಹೆಚ್ಚಳಕ್ಕೆ ಕಾರಣವಾಗಿದೆ.


ಇದನ್ನೂ ಓದಿ: Career Tips: ಸಂಗೀತವನ್ನೇ ವೃತ್ತಿಯಾಗಿ ತೆಗೆದುಕೊಳ್ಳುವುದಾದ್ರೆ; ಈ ವಿಷಯದ ಬಗ್ಗೆ ಇರಲಿ ಗಮನ


ಈ ವಿಶಾಲವಾದ ಪೂಲ್‌ನಿಂದ ಕೆಸರನ್ನು ತೆಗೆದು ಅತ್ಯಂತ ಸೂಕ್ತವಾದ ದತ್ತಾಂಶಗಳನ್ನು ಮಾತ್ರ ಇಡಬಲ್ಲಂತಹ ಡೇಟಾ ವಿಜ್ಞಾನಿಗಳಿಗೆ ಬಹಳ ಬೇಡಿಕೆಯಿದೆ.


3. ಯುಎಕ್ಸ್‌ ಡಿಸೈನ್‌
ನಿಮಗೆ ಗೊತ್ತಿರುವಂತೆ ಆನ್‌ಲೈನ್ ನಲ್ಲಿ ಮಾಹಿತಿಯ ಹಿಮಪಾತ ಆಗುತ್ತಿರುತ್ತೆ. ಬ್ರ್ಯಾಂಡ್‌ಗಳು ಮತ್ತು ಸಂಸ್ಥೆಗಳು ತಮ್ಮ ವೆಬ್‌ಸೈಟ್‌ಗಳು ಅಥವಾ ಸಾಮಾಜಿಕ ಮಾಧ್ಯಮದಲ್ಲಿ ಸಂದರ್ಶಕರನ್ನು ಉಳಿಸಿಕೊಳ್ಳಲು ಹೆಚ್ಚುವರಿ ಮೈಲಿ ಸಾಗಬೇಕಾಗುತ್ತೆ.


ಅಲ್ಲಿಯೇ ಬರುವುದು UX ವಿನ್ಯಾಸ. ಅದರಲ್ಲಿ ಪ್ರತಿಯೊಂದು ಉದ್ಯಮ ಹಾಗೂ ಪ್ರತಿ ವಲಯಗಳಿಗೆ ಅನ್ವಯವಾಗುವಂತೆ ವ್ಯಾಪಕವಾದ ಅಪ್ಲಿಕೇಷನ್‌ ಅನ್ನು ನೀಡಲಾಗಿದೆ. ಬಳಕೆದಾರರ ಅನುಭವಕ್ಕಾಗಿ ಬ್ರ್ಯಾಂಡ್‌ನ ವೆಬ್ ಉಪಸ್ಥಿತಿಯನ್ನು ಆಪ್ಟಿಮೈಜ್ ಮಾಡುವುದು ಗ್ರಾಹಕರ ನಿರೀಕ್ಷೆಗಳು, ನಡವಳಿಕೆಗಳು ಮತ್ತು ಅಗತ್ಯಗಳನ್ನು ಪೂರೈಸಲು ಸಾಫ್ಟ್‌ವೇರ್, ವೆಬ್‌ಸೈಟ್‌ಗಳು ಅಥವಾ ಅಪ್ಲಿಕೇಶನ್‌ಗಳ ತೆರೆಮರೆಯ ಕಾರ್ಯಗಳನ್ನು ಸುಧಾರಿಸುವುದನ್ನು ಇದು ಒಳಗೊಂಡಿರುತ್ತದೆ.


4. ರೊಬೊಟಿಕ್ಸ್
ರೊಬೊಟಿಕ್ಸ್ ಕ್ಷೇತ್ರವು ಡಿಸೈನಿಂಗ್‌, ಸ್ಟ್ರಕ್ಚರಿಂಗ್‌ ಜೊತೆಗೆ ಪರಮಾಣು ವಿಜ್ಞಾನ, ಸಮುದ್ರ ಪರಿಶೋಧನೆ ಮತ್ತು ಕೈಗಾರಿಕಾ ಉತ್ಪಾದನೆಯಂತಹ ಹಲವು ಕ್ಷೇತ್ರಗಳಲ್ಲಿ ವ್ಯವಹರಿಸುವಂಥದ್ದಾಗಿದೆ. ಈ ಕ್ಷೇತ್ರದ ಅಪ್ಲಿಕೇಶನ್‌ಗಳು ತಂತ್ರಜ್ಞಾನದ ಉತ್ಪಾದನೆ ಮತ್ತು ಅನುಷ್ಠಾನವನ್ನು ವೇಗಗೊಳಿಸಲು ಸಹಾಯ ಮಾಡುತ್ತವೆ.


5. ಕ್ಲೌಡ್ ಇಂಜಿನಿಯರಿಂಗ್‌
ಕ್ಲೌಡ್‌ಎಂಜಿನಿಯರ್‌ಗಳು ಸಾಮಾನ್ಯವಾಗಿ ಬೇರೆ ಬೇರೆ ರೋಲ್‌ ಗಳಿಗೆ ಬೇರೆ ಹೆಸರುಗಳನ್ನು ಹೊಂದಿರುತ್ತಾರೆ. ಇದರಲ್ಲಿ ಸೊಲ್ಯೂಷನ್‌ ಆರ್ಕಿಟೆಕ್ಟ್‌, ಕ್ಲೌಡ್ ಡೆವಲಪರ್‌ಗಳು ಮತ್ತು ಸಿಸೊಪ್ಸ್ ಎಂಜಿನಿಯರ್‌ಗಳು ಸೇರಿದ್ದಾರೆ.


ಇದನ್ನೂ ಓದಿ: Career Options: ನೀವೂ ಸಪ್ಲೈ ಚೈನ್ ಫೈನಾನ್ಸ್ ಪ್ರೊಫೆಷನಲ್ಸ್ ಆಗ್ಬೇಕಾ? ಇಲ್ಲಿದೆ ಮಾರ್ಗದರ್ಶಿ


ಆನ್‌ ಲೈನ್‌ ನಲ್ಲಿ ಪ್ರಕ್ರಿಯೆಗಳನ್ನು ಸ್ಥಳಾಂತರಿಸಲು, ಅಗತ್ಯ ಮೂಲಸೌಕರ್ಯಗಳನ್ನು ಕಾರ್ಯಗತಗೊಳಿಸಲು ಮತ್ತು ಕ್ಲೌಡ್-ಸಂಬಂಧಿತ ಕಾರ್ಯಗಳನ್ನು ನಿರ್ವಹಿಸುವ ಕೌಶಲ್ಯ ಮತ್ತು ಜ್ಞಾನವನ್ನು ಹೊಂದಿರುವವರಿಗೆ ಅವಕಾಶಗಳು ಬೇಕಾದಷ್ಟಿವೆ.

Published by:Ashwini Prabhu
First published: