PUC Supplementary Results: ಪಿಯು ಪೂರಕ ಪರೀಕ್ಷೆ ರಿಸಲ್ಟ್ ಪ್ರಕಟ! ಫಲಿತಾಂಶ ನೋಡೋದಕ್ಕೆ ಹೀಗೆ ಮಾಡಿ

ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆಯು ಪಿಯುಸಿಯ ಪೂರಕ ಪರೀಕ್ಷೆಗಳನ್ನು ಆಗಸ್ಟ್ 12 ರಿಂದ ಆಗಸ್ಟ್ 25, 2022 ರವರೆಗೆ ನಡೆಸಿತ್ತು. ಇದರ ಫಲಿತಾಂಶವನ್ನು ಇಂದು ಪ್ರಕಟಿಸಿದೆ. ವಿದ್ಯಾರ್ಥಿಗಳು karresults.nic.in ನಲ್ಲಿ ಕರ್ನಾಟಕದ ದ್ವೀತಿಯ ಪೂರಕ ಫಲಿತಾಂಶ 2022 ಅನ್ನು ಆನ್‌ಲೈನ್‌ನಲ್ಲಿ ಪರಿಶೀಲಿಸಬಹುದು.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಪದವಿ ಪೂರ್ವ ಶಿಕ್ಷಣ ಇಲಾಖೆಯು ಕರ್ನಾಟಕ ಪಿಯುಸಿ ಪೂರಕ ಪರೀಕ್ಷೆಯ ಫಲಿತಾಂಶ-2022 ಇದರ ಫಲಿತಾಂಶವನ್ನು (Results) ಇಂದು ಪ್ರಕಟಿಸಿದೆ. ವಿದ್ಯಾರ್ಥಿಗಳು karresults.nic.in ನಲ್ಲಿ ಕರ್ನಾಟಕದ ದ್ವೀತಿಯ ಪೂರಕ ಫಲಿತಾಂಶ 2022 ಅನ್ನು ಆನ್‌ಲೈನ್‌ನಲ್ಲಿ (Online) ಪರಿಶೀಲಿಸಬಹುದು. ಕರ್ನಾಟಕ ಪೂರಕ ಫಲಿತಾಂಶ 2022 ಅನ್ನು ಪರಿಶೀಲಿಸಲು ಪರೀಕ್ಷೆ ಬರೆದ ವಿದ್ಯಾರ್ಥಿಗಳು (Students) ತಮ್ಮ ನೋಂದಣಿ ಸಂಖ್ಯೆಯನ್ನು ನಮೂದಿಸಬೇಕಾಗುತ್ತದೆ. ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆಯು ಪಿಯುಸಿಯ ಪೂರಕ ಪರೀಕ್ಷೆಗಳನ್ನು (Supplementary Exams) ಆಗಸ್ಟ್ 12 ರಿಂದ ಆಗಸ್ಟ್ 25, 2022 ರವರೆಗೆ ನಡೆಸಿತ್ತು. ಈ ಪೂರಕ ಪರೀಕ್ಷೆಯನ್ನು ಎದುರಿಸಿದ ವಿದ್ಯಾರ್ಥಿಗಳಿಗೆ ಮಾತ್ರ ದ್ವೀತಿಯ ಪಿಯುಸಿ ಪೂರಕ ಫಲಿತಾಂಶ 2022 ಅನ್ನು ಪರಿಶೀಲಿಸಲು ಸಾಧ್ಯವಾಗುತ್ತದೆ.

ಕರ್ನಾಟಕ 2 ನೇ ಪಿಯುಸಿ ಪರೀಕ್ಷೆಯ ಫಲಿತಾಂಶ ಚೆಕ್ ಮಾಡುವುದು ಹೇಗೆ:

  • ಅಧಿಕೃತ ವೆಬ್‌ಸೈಟ್‌ಗೆ ಹೋಗಿ, karresults.nic.in

  • ವೆಬ್‌ ಸೈಟ್‌ ಮುಖಪುಟದಲ್ಲಿ, 'ಫಲಿತಾಂಶ' ವಿಭಾಗದ ಮೇಲೆ ಕ್ಲಿಕ್ ಮಾಡಿ.

  • ‘ಕರ್ನಾಟಕ ದ್ವೀತಿಯ ಪಿಯುಸಿ ಪೂರಕ ಫಲಿತಾಂಶ 2022’ ರ ಲಿಂಕ್ ಅನ್ನು ಕ್ಲಿಕ್ ಮಾಡಿ.

  • ಲಾಗಿನ್ ಪುಟದಲ್ಲಿ, ನಿಮ್ಮ ನೋಂದಣಿ ಸಂಖ್ಯೆಯನ್ನು ನಮೂದಿಸಿ ಮತ್ತು ವಿಷಯಗಳ ಸಂಯೋಜನೆಯನ್ನು ಆಯ್ಕೆಮಾಡಿ.

  • ‘ಸಲ್ಲಿಸು’ ಬಟನ್ ಕ್ಲಿಕ್ ಮಾಡಿ ಮತ್ತು ಕರ್ನಾಟಕ ಪೂರಕ ಫಲಿತಾಂಶ 2022 ಅನ್ನು ಡೌನ್‌ಲೋಡ್ ಮಾಡಿ.


ಕರ್ನಾಟಕ ದ್ವೀತಿಯ ಪಿಯುಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಲು ವಿದ್ಯಾರ್ಥಿಗಳು ಕನಿಷ್ಟ 35% ಅಂಕಗಳನ್ನು ಪಡೆಯಬೇಕು. ಆನ್‌ಲೈನ್ ಕರ್ನಾಟಕ ಪಿಯುಸಿ ಪೂರಕ ಫಲಿತಾಂಶವು ತಾತ್ಕಾಲಿಕ ಸ್ವರೂಪದ್ದಾಗಿದೆ. ವಿದ್ಯಾರ್ಥಿಗಳು ಫಲಿತಾಂಶದಲ್ಲಿ ನಮೂದಿಸಿರುವ ಎಲ್ಲಾ ವಿವರಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಬೇಕು.

ಪದವಿ ಪೂರ್ವ ಶಿಕ್ಷಣ ಇಲಾಖೆ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ:
ಈ ಇಲಾಖೆಯು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣದಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. 1229 ಸರ್ಕಾರಿ ಪದವಿ ಪೂರ್ವ ಕಾಲೇಜುಗಳು, 797 ಅನುದಾನಿತ ಪದವಿ ಪೂರ್ವ ಕಾಲೇಜುಗಳು, 3147 ಅನುದಾನರಹಿತ ಪದವಿ ಪೂರ್ವ ಕಾಲೇಜುಗಳು, 165 ವಿಭಜಿತ ಪದವಿ ಪೂರ್ವ ಕಾಲೇಜುಗಳು, ಮತ್ತು 13 ಮಹಾನಗರಪಾಲಿಕೆ ಪದವಿ ಪೂರ್ವ ಕಾಲೇಜುಗಳು ರಾಜ್ಯದಲ್ಲಿ ನಡೆಯುತ್ತಿವೆ.

ಇದನ್ನೂ ಓದಿ:  Girl Funeral: ಅಂತ್ಯಸಂಸ್ಕಾರದ ವೇಳೆ ಜೀವಂತವಾದ 3 ವರ್ಷದ ಕಂದಮ್ಮ! ಬಳಿಕ ಆಗಿದ್ದೇನು ನೋಡಿ

ಪಿಯುಸಿ ನಂತರ ಮುಂದೇನು? ಎಂಬ ಚಿಂತೆ ಕಾಡುತ್ತಿದೆಯೇ? ಅದಕ್ಕೆ ಇಲ್ಲಿದೆ ಪರಿಹಾರ:
ಇಂದಿನ ಆಧುನಿಕ, ಯಾಂತ್ರಿಕ ಬದುಕಿಗೆ ಶಿಕ್ಷಣ ಅತ್ಯಗತ್ಯ ಜೊತೆಗೆ ಉತ್ತಮ ಕೆಲಸವೂ ಅಗತ್ಯ. ಜೀವನವನ್ನು ಉನ್ನತ ರೀತಿಯಲ್ಲಿ ಸಾಗಿಸಲು ಎಷ್ಟು ಸಂಬಳವಿದ್ದರೂ ಸಾಲುವುದಿಲ್ಲ ಹಾಗಾಗಿ ಪಿಯುಸಿ ಓದಿದ ವಿದ್ಯಾರ್ಥಿಗಳು ಯಾವೆಲ್ಲಾ ಕೋರ್ಸ್ ಮಾಡಿದ್ರೆ ಕೈ ತುಂಬಾ ಸಂಬಳ ಪಡೆಯಬಹುದು.

ಪಿಯುಸಿ ನಂತರ ಮುಂದೇನು ಎಂದು ಚಿಂತಿಸುತ್ತಿರುವ ವಿದ್ಯಾರ್ಥಿಗಳಿಗೆ ಇಲ್ಲಿದೆ ಅತ್ಯುತ್ತಮ ಆಯ್ಕೆಗಳು. ಸಾಮಾನ್ಯವಾಗಿ ಪ್ರತಿಯೊಬ್ಬರು ಎಂಜಿನಿಯರ್, ಡಾಕ್ಟರ್, ಬಿಕಾಂ, ಬಿಎಸ್ಇ ಪದವಿಗಳ ಬಗ್ಗೆಯೇ ಆಲೋಚನೆ ಮಾಡುತ್ತಾರೆ. ಆದರೆ ಅವುಗಳನ್ನು ಹೊರತುಪಡಿಸಿ ಬೇರೆ ಪದವಿಗಳನ್ನು ಮಾಡಿದರೆ ಇನ್ನು ಹೆಚ್ಚಿನ ಅವಕಾಶ ಸಿಗುತ್ತದೆ. ಆ ಪದವಿಗಳೆಂದರೆ ಇಲ್ಲಿವೆ ನೋಡಿ.

ಫ್ಯಾಷನ್ ಡಿಸೈನಿಂಗ್ : ತಾಂತ್ರಿಕ ಕೆಲಸಗಳ ಬದಲು ಕಲಾತ್ಮಕ ಕೆಲಸಗಳನ್ನು ಮಾಡುವ ಬಯಕೆ ಇದ್ದರೆ ನೀವು ಈ ಕೋರ್ಸ್ ಮಾಡಬಹುದು. ಫ್ಯಾಷನ್ ಡಿಸೈನಿಂಗ್ನಲ್ಲಿ ಡಿಪ್ಲೊಮೊ ಮಾಡಬಹುದು. ಇದರ ಜೊತೆ ಆಭರಣಗಳ ಡಿಸೈನಿಂಗ್ ಸಹ ಕಲಿಯಲು ಅವಕಾಶವಿದೆ. ಇತ್ತೀಚಿನ ದಿನಗಳಲ್ಲಿ ಜನರು ಡಿಸೈನರ್ ಬಟ್ಟೆಗಳನ್ನು ಧರಿಸಲು ಇಷ್ಟಪಡುತ್ತಿರುವುದರಿಂದ ಒಳ್ಳೆಯ ಕೆಲಸದ ಜೊತೆ ಸಂಬಳವೂ ಸಿಗುತ್ತದೆ.

ಬಿಎಸ್ಸಿ ವಿಷುಯಲ್ ಮೀಡಿಯಾ/ಕಮ್ಯೂನಿಕೇಷನ್: ಇನ್ನು ಚಿತ್ರರಂಗದಲ್ಲಿ ಮತ್ತು ಮಾಧ್ಯಮಗಳಲ್ಲಿ ಆಸಕ್ತಿ ಇರುವ ವಿದ್ಯಾರ್ಥಿಗಳಿಗೆ ಈ ಕೋರ್ಸ್ ಉತ್ತಮವಾಗಿದೆ. ಈ ಕೋರ್ಸ್ನಲ್ಲಿ ವಿಡಿಯೋ ಎಡಿಟಿಂಗ್, ಕ್ಯಾಮೆರಾದಿಂದ ಹಿಡಿದು ಮಾಧ್ಯಕ್ಕೆ ಬೇಕಾಗುವ ವಿಷಯಗಳನ್ನು ಸಹ ಕಲಿಸಲಾಗುತ್ತದೆ.

ಇದನ್ನೂ ಓದಿ:  Exam Preparation Tips: ವಿದ್ಯಾರ್ಥಿಗಳೇ ಕೇಳಿ: ಪರೀಕ್ಷೆಗಳಲ್ಲಿ ಸುಲಭವಾಗಿ ಮಾರ್ಕ್ಸ್ ಗಳಿಸಲು ಸಿಂಪಲ್ 5 ಸೂತ್ರ ಬಳಸಿ

ಇನ್ನು ಅನೇಕ ಕೋರ್ಸ್‌ಗಳು ಲಭ್ಯ ಇರುತ್ತವೆ. ಎಲ್ಲ ಕೋರ್ಸ್‌ಗಳ ಬಗ್ಗೆ ಸೂಕ್ತವಾಗಿ ತಿಳಿದುಕೊಂಡು, ನಿಮ್ಮ ಶಿಕ್ಷಣದ ಮುಂದಿನ ಹೆಜ್ಜೆಯನ್ನು ಎಚ್ಚರಿಕೆಯಿಂದ ಇರಿಸಿ.
Published by:Ashwini Prabhu
First published: