• Home
  • »
  • News
  • »
  • education
  • »
  • Education: 14ನೇ ಸ್ಥಾನದಲ್ಲಿದೆ ಕರ್ನಾಟಕ, ಶೈಕ್ಷಣಿಕ ಸೂಚ್ಯಂಕದಲ್ಲಿ ಪ್ರಗತಿ

Education: 14ನೇ ಸ್ಥಾನದಲ್ಲಿದೆ ಕರ್ನಾಟಕ, ಶೈಕ್ಷಣಿಕ ಸೂಚ್ಯಂಕದಲ್ಲಿ ಪ್ರಗತಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಈಗ ಸರ್ಕಾರ ಎಲ್ಲರಿಗೂ ಸಮಾನ ಶಿಕ್ಷ ನೀಡುವತ್ತ ಗಮನಹರಿಸಬೇಕಾದ ಸಮಯ ಬಂದಿದೆ. ಹೀಗೆ ಮಾಡಿದಲ್ಲಿ ಸಮಾನ ಶಿಕ್ಷಣ ಕ್ಷೇತ್ರದಲ್ಲೂ ಪ್ರಗತಿ ಸಾಧಿಸಲು ಸಾಧ್ಯವಾಗುತ್ತದೆ.

  • News18 Kannada
  • Last Updated :
  • Karnataka, India
  • Share this:



ಕರ್ನಾಟಕದ ಶೈಕ್ಷಣಿಕ (Education) ಸೂಚ್ಯಂಕದಲ್ಲಿ ಈ ಬಾರಿ ಸುಧಾರಣೆ ಕಂಡು ಬಂದಿದೆ ಹಿಂದಿನ ವರ್ಷಕ್ಕಿಂತ ಈ ವರ್ಷ ಹೆಚ್ಚಿನ ಸುಧಾರಣೆ ಕಂಡುಬಂದಿದೆ. ಕಾರ್ಯಕ್ಷಮತೆ ಶ್ರೇಣೀಕರಣ ಸೂಚ್ಯಂಕದ ಪ್ರಕಾರ ದೇಶದಲ್ಲಿ ಕರ್ನಾಟಕ (Karnataka) ಈಗ 14 ನೇ ಸ್ಥಾನದಲ್ಲಿದೆ ಎಂದು ತಿಳಿದು ಬಂದಿದೆ. ಇದೊಂದು ಉತ್ತಮ ಬೆಳವಣಿಗೆಯಾಗಿದ್ದು (Growth), ಶೈಕ್ಷಣಿಕ ಕ್ಷೇತ್ರದಲ್ಲಿ ಉತ್ತಮ ಸಾಧನೆಯಾಗಿದೆ. 2018-19 ರಲ್ಲಿ 5 ನೇ ಹಂತದಿಂದ (751-800) 3ನೇ ಹಂತ(ಅಂಕ  851-900) ಗ್ರೇಡ್​ ಪಡೆದುಕೊಂಡಿದೆ.


ಕರ್ನಾಟಕದಲ್ಲಿ ಒಟ್ಟಾರೆಯಾಗಿ ಶಾಲಾ ಶಿಕ್ಷಣದಲ್ಲಿ ಸುಧಾರಣೆ.
ಶಿಕ್ಷಣ ಮತ್ತು ಸಮಾನ ಶಿಕ್ಷಣದಲ್ಲಿ ಸರ್ಕಾರದ ಒಳಗೊಳ್ಳುವಿಕೆಯಲ್ಲಿ ರಾಜ್ಯವು ನಿಧಾನಗತಿಯ ಬೆಳವಣಿಗೆಯನ್ನು ತೋರಿಸಿದೆ. ವಿವಿಧ ಕ್ಷೇತ್ರಗಳಲ್ಲಿ, ಕರ್ನಾಟಕವು ವಿದ್ಯಾರ್ಥಿಗಳ ದಾಖಲಾತಿ ಮತ್ತು ಧಾರಣದಲ್ಲಿ ಶೇಕಡಾ 5ರಷ್ಟು ಹೆಚ್ಚಳಕಂಡು ಬಂದಿದೆ. ಸುಧಾರಿತ ಮೂಲಸೌಕರ್ಯ ಸೌಲಭ್ಯಗಳಲ್ಲಿ ರಾಜ್ಯವು ಶೇಕಡಾ 25 ರಷ್ಟು ಹೆಚ್ಚಳವನ್ನು ಕಂಡುಬಂದಿದೆ. ಆದರೆ ಸಮಾನ ಶಿಕ್ಷಣದಲ್ಲಿ ಯಾವುದೇ ಏರಿಕೆ ಕಂಡುಬಂದಿಲ್ಲ.


ಸಮಾನ ಶಿಕ್ಷಣ ನೀಡುವತ್ತ ಗಮನ


ಈಗ ಸರ್ಕಾರ ಎಲ್ಲರಿಗೂ ಸಮಾನ ಶಿಕ್ಷಣ ನೀಡುವತ್ತ ಗಮನಹರಿಸಬೇಕಾದ ಸಮಯ ಬಂದಿದೆ. ಹೀಗೆ ಮಾಡಿದಲ್ಲಿ ಸಮಾನ ಶಿಕ್ಷಣ ಕ್ಷೇತ್ರದಲ್ಲೂ ಪ್ರಗತಿ ಸಾಧಿಸಲು ಸಾಧ್ಯವಾಗುತ್ತದೆ. ಸಮಾನ ಶಿಕ್ಷಣದಲ್ಲಿ ಶೇಕಡಾ 5 ಕ್ಕಿಂತ ಕಡಿಮೆಯಾಗಿದೆ. ಸಮಾಜಿಕ ಅಂತರವನ್ನು ಕಡಿಮೆ ಮಾಡುವ ಸಲುವಾಗಿ ಎಲ್ಲರಿಗೂ ಸಮಾನ ಗುಣಮಟ್ಟದ ಶಿಕ್ಷಣವನ್ನು ಒದಗಿಸುವುದರ ಮೇಲೆ ಕೇಂದ್ರೀಕರಿಸಿದೆ. ಸರ್ಕಾರಿ ಭಾಗದಲ್ಲಿ ಪ್ರಗತಿ ಶೇಕಡಾ 4ರಷ್ಟು ಮಾತ್ರ ಪ್ರಗತಿಯಿದೆ.


ಇದನ್ನೂ ಓದಿ: ವಕೀಲರಾಗುವ ಆಸೆ ಇದೆಯೇ? ಇಲ್ಲಿದೆ ನೋಡಿ ಒಳ್ಳೆಯ ಅವಕಾಶ


ಇದು ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಡಿಜಿಟಲ್ ಹಾಜರಾತಿ, ಡಿಜಿಟಲ್‌ನಲ್ಲಿ ಹಣ ವರ್ಗಾವಣೆ, ಹಣವನ್ನು ಬಿಡುಗಡೆ ಮಾಡಲು ರಾಜ್ಯ ಸರ್ಕಾರ ತೆಗೆದುಕೊಂಡ ಸಮಯ, ಖಾಲಿ ಹುದ್ದೆಗಳನ್ನು ಭರ್ತಿ ಮಾಡುವುದು ಮತ್ತು ಪಾರದರ್ಶಕ ಮೂಲಕ ಶಿಕ್ಷಕರ ವರ್ಗಾವಣೆಯ ಅಡಚಣೆಗಳನ್ನು ಬಿಂಬಿಸುತ್ತಿದೆ.


ಶಿಕ್ಷಣ ಕ್ಷೇತ್ರದಲ್ಲಿ ಪರಿವರ್ತನೆ
ಇದು ಶಾಲಾ ಶಿಕ್ಷಣ ಕ್ಷೇತ್ರದಲ್ಲಿ ಪರಿವರ್ತನೆಯ ಬದಲಾವಣೆಯನ್ನು ವೇಗಗೊಳಿಸಲು ರಾಜ್ಯಗಳು ಅಥವಾ ವಿಶ್ವವಿದ್ಯಾಲಯಗಳ ಕಾರ್ಯಕ್ಷಮತೆಯನ್ನು ಏಕರೂಪದ ಪ್ರಮಾಣದಲ್ಲಿ ಅಳೆಯುತ್ತದೆ. ಶಾಲಾ ವ್ಯವಸ್ಥೆಗಳ ಒಳನೋಟವನ್ನು ಇದು ವಿವರಿಸುತ್ತದೆ. ಆದರೆ ಈ ಎಲ್ಲಾ ಬದಲಾವಣೆಗಳು ಮುಂದಿನ ವರ್ಷದಲ್ಲೇ ಆಗಬೇಕಿದೆ.


ಇದನ್ನೂ ಓದಿ: ಇನ್ಮುಂದೆ ಶಾಲಾ-ಕಾಲೇಜುಗಳಲ್ಲಿ ಮೆಡಿಟೇಶನ್ ಕ್ಲಾಸ್! 10 ನಿಮಿಷ ಧ್ಯಾನ ಕಡ್ಡಾಯ


ಒಟ್ಟಿನಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಸಾಧನೆ ಕರ್ನಾಟಕದ್ದಾಗಬೇಕು ಎಂಬ ಆಶಯ ಹೊಂದಿದೆ. ವ್ಯವಸ್ಥೆಯಲ್ಲಿನ ಕಾರ್ಯಕ್ಷಮತೆ ಮತ್ತು ಅಂತರಗಳ ನಿರ್ಣಾಯಕ ಕ್ಷೇತ್ರಗಳನ್ನು ಒಳಗೊಂಡಂತೆ ಶಾಲೆಯ ಸ್ಥಿತಿಯ ಒಳನೋಟಗಳನ್ನು ತೋರಿಸುವುದು ಸೂಚ್ಯಂಕವಾಗಿದೆ.


ಶಿಕ್ಷಣ ಮತ್ತು ಕೌಶಲ್ಯ


ಮಕ್ಕಳಲ್ಲಿ ಶಿಕ್ಷಣದೊಟ್ಟಿಗೆ ಇತರ ಕೌಶಲ್ಯಗಳನ್ನೂ ಸಹ ಅಭಿವೃದ್ಧಿ ಪಡಿಸುವುದು ಉತ್ತಮ ಕಾರ್ಯ. ಇದೀಗ ಪ್ರತಿನಿತ್ಯ 10 ನಿಮಿಷಗಳನ್ನು ಧ್ಯಾನಕ್ಕಾಗಿ ಮೀಸಲಿಡುವ ಕುರಿತು ಹೇಳಲಾಗಿದೆ. ಇದೇ ರೀತಿ ಹಲವಾರು ತರದಲ್ಲಿ ಶೈಕ್ಷಣಿಕ ಸುಧಾರಣೆ ಸಾಧ್ಯವಾದರೆ ಕರ್ನಾಟಕ ಶೈಕ್ಷಣಿಕ ಸೂಚ್ಯಂಕದಲ್ಲಿ ಇನ್ನೂ ಹೆಚ್ಚಿನ ಶ್ರೇಯಾಂಕ ಕರ್ನಾಟಕಕ್ಕೆ ಬರಲಿದೆ.


ಕೋವಿಡ್ 19 ವೈರಸ್‌ನಿಂದಾಗಿ ಶೈಕ್ಷಣಿಕ ವಲಯದ ಸ್ಥಿತಿ ಏರುಪೇರಾಗಿತ್ತು. ಆದರೆ ಇದೀಗ ನಿಧಾನವಾಗಿ ಕೊರೊನಾ ಭೀತಿ ಇಳಿಕೆಯಾದ ನಂತರ ಮತ್ತೆ ಶಾಲೆಗಳತ್ತ ಚಿಣ್ಣರು ಹೆಜ್ಜೆ ಹಾಕಲು ಆರಂಭಿಸಿದ್ದಾರೆ. ಮಕ್ಕಳನ್ನ ಶಾಲೆಗಳತ್ತ ಸೆಳೆಯಲು ವಿವಿಧ ಚಟುವಟಿಕೆಗಳನ್ನು ಸಹ ಹಮ್ಮಿಕೊಳ್ಳಲಾಗಿದೆ. ಇದಕ್ಕೆ ಸರ್ಕಾರ ಮತ್ತು ಖಾಸಗಿ ಸಂಘ ಸಂಸ್ಥೆಗಳು‌ ಸಹ ಸಾಥ್ ನೀಡಿವೆ. ಕೊರೊನಾದ ನಡುವೆಯೂ ಕರ್ನಾಟಕ ಶಿಕ್ಷಣ ಪ್ರಗತಿಯಲ್ಲಿರುವು ಸಂತೋಷಕರ ಸುದ್ಧಿ.


First published: