• Home
  • »
  • News
  • »
  • education
  • »
  • Jio Scholarship: ಜಿಯೋ ಬರೀ ಸಿಮ್ ಮಾತ್ರ ಅಲ್ಲ, 55 ಸಾವಿರ ಸ್ಕಾಲರ್ ಶಿಪ್​ ಕೂಡ ಕೊಡುತ್ತೆ

Jio Scholarship: ಜಿಯೋ ಬರೀ ಸಿಮ್ ಮಾತ್ರ ಅಲ್ಲ, 55 ಸಾವಿರ ಸ್ಕಾಲರ್ ಶಿಪ್​ ಕೂಡ ಕೊಡುತ್ತೆ

ಅಪ್ಲೈ ಮಾಡಿ

ಅಪ್ಲೈ ಮಾಡಿ

ರಿಲಯನ್ಸ್ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುತ್ತಿದೆ. ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುವ ಸಲುವಾಗಿ ರಿಲಯನ್ಸ್ ಫೌಂಡೇಶನ್ ಅರ್ಜಿ ಆಹ್ವಾನಿಸಿದೆ.

  • News18 Kannada
  • Last Updated :
  • Karnataka, India
  • Share this:

ರಿಲಯನ್ಸ್ (Reliance)​ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ (Scholarship)  ನೀಡುತ್ತಿದೆ. ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುವ ಸಲುವಾಗಿ ರಿಲಯನ್ಸ್ ಫೌಂಡೇಶನ್ (Reliance Foundation) ಅರ್ಜಿ ಆಹ್ವಾನಿಸಿದೆ. 10 ರಿಂದ ಪದವಿ ಓದುತ್ತಿರುವ ವಿದ್ಯಾರ್ಥಿಗಳೆಲ್ಲರೂ ಸಹ ಈ ವಿದ್ಯಾರ್ಥಿ ವೇತನಕ್ಕೆ ಅಪ್ಲೈ ಮಾಡಬಹುದಾಗಿದೆ. ವಿದ್ಯಾರ್ಥಿಗಳನ್ನು ಗುರುತಿಸಿ ಅವರನ್ನು ಬೆಂಬಲಿಸುವುದು ಇದರ ಮುಖ್ಯ ಧ್ಯೇಯವಾಗಿದೆ. ಈ ಮೂಲಕ ಭಾರತದ ತಾಂತ್ರಿಕ ಬೆಳವಣಿಗೆಯಲ್ಲಿ ಮುನ್ನಡೆಸಲು ಮತ್ತು ಮುಂಚೂಣಿಯಲ್ಲಿರಲು ಬಯಸುವ ವಿದ್ಯಾರ್ಥಿಗಳಲ್ಲಿನ ಕೌಶಲ್ಯವನ್ನು (SKill) ರಿಲಯನ್ಸ್ ಪೋಷಿಸಲು ಸಿದ್ದವಾಗಿದೆ. 

ಸಂಸ್ಥೆರಿಲಯನ್ಸ್​ ಜಿಯೋ
ವಿದ್ಯಾರ್ಥಿ ವೇತನದ ಹೆಸರುಜಿಯೋ ಸ್ಕಾಲರ್‌ಶಿಪ್ 2022
ಅಧಿಕೃತ ವೆಬ್​ಸೈಟ್​jio.com
ಅರ್ಜಿ ಸಲ್ಲಿಕೆ ಕೊನೆ ದಿನಾಂಕ31 ಡಿಸೆಂಬರ್ 2022
ಉದ್ದೇಶವಿದ್ಯಾರ್ಥಿಗಳಿಗೆ ಧನ ಸಹಾಯ ಮಾಡುವುದು.
ವಿದ್ಯಾರ್ಹತೆ10 /11/ 12 ಪದವಿ

ಈ ಮೇಲಿನ ಅಂಶಗಳನ್ನು ಆಧರಿಸಿ ನೀವೂ ಅರ್ಹರಾಗಿದ್ದರೆ ಈ ವಿದ್ಯಾರ್ಥಿ ವೇತನಕ್ಕೆ ಅಪ್ಲೈ ಮಾಡಬಹುದು. ಭಾರತದಾದ್ಯಂತ ಯಾವುದೇ ಶಿಕ್ಷಣ ಸಂಸ್ಥೆಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳೂ ಸಹ ಇದಕ್ಕೆ ಅಪ್ಲೈ ಮಾಡಬಹುದು. ಈ ವಿದ್ಯಾರ್ಥಿ ವೇತನದ ಪ್ರಯೋಜನ ಪಡೆಯಬಹುದು.


ಅಪ್ಲೈ ಮಾಡಲು ಬೇಕಾದ ಅಗತ್ಯ ದಾಖಲೆಗಳು:
1. ಶಿಕ್ಷಣ ಅರ್ಹತಾ ಪ್ರಮಾಣಪತ್ರ
2. ಆರ್ಥಿಕ ದುರ್ಬಲ ವಿಭಾಗ
3. ಶಾಲೆಯ ಗುರುತಿನ ಚೀಟಿ
4. ಬ್ಯಾಂಕ್ ಪಾಸ್ಬುಕ್
5. ಭಾವಚಿತ್ರ
6. ಮೊಬೈಲ್ ನಂಬರ
7. ಆಧಾರ್ ಕಾರ್ಡ್
8. ತರಗತಿ 10/ 11/ 12/ ಪದವಿ/ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು


ಇದನ್ನೂ ಓದಿ: ಒಮ್ಮೆ ಅಪ್ಲೈ ಮಾಡಿದರೆ ಸಾಕು 4 ವರ್ಷ ಬರುತ್ತೆ 42 ಸಾವಿರ ಸ್ಕಾಲರ್ ಶಿಪ್​!


ವಿದ್ಯಾರ್ಥಿ ವೇತನದ ಮೊತ್ತ:
10ನೇ ತರಗತಿ/ಪ್ರೌಢಶಾಲೆಗೆ – 35,000/ ರೂ


12ನೇ ತರಗತಿ – 45,000/ರೂ


11ನೇ ತರಗತಿ – 38,000/-ರೂ


ಪದವಿ – 52,000/-ರೂ


ಸ್ನಾತಕೋತ್ತರ ಪದವಿ – 55,000/- ರೂ



ಸಂಪರ್ಕ ಸಂಖ್ಯೆ: 
ವಿದ್ಯಾರ್ಥಿ ವೇತನದ ಕುರಿತು ಹೆಚ್ಚಿನ ವಿವರಗಳನ್ನು ತಿಳಿಯಲು ಅಭ್ಯರ್ಥಿಗಳು ಸಹಾಯವಾಣಿ ಸಂಖ್ಯೆ 18008909999 ಗೆ ಕರೆಮಾಡಿ ಇನ್ನಿತರ ಮಾಹಿತಿ ಪಡೆಯಬಹುದು.


ಅರ್ಜಿ ಸಲ್ಲಿಸುವುದು ಹೇಗೆ?
ನೀವು ಅರ್ಜಿ ಸಲ್ಲಿಸುವ ಮುನ್ನ ಮೇಲೆ ನೀಡಿದ ಅರ್ಹತೆಗಳನ್ನು ಹೊಂದಿದ್ದೀರಾ ಎಂದು ಪರಿಶೀಲಿಸಿಕೊಳ್ಳಿ ನಂತರ ಈ ಕೆಳಗೆ ನೀಡಿರುವ ಮಾಹಿತಿಯಂತೆ ಅರ್ಜಿ ಭರ್ತಿಮಾಡಿ.
1. ನೀವು ಅರ್ಹರಾಗಿದ್ದೀರಿ ಎಂದು ನಿಮಗೆ ತಿಳಿದಿದ್ದರೆ ಅಪ್ಲಿಕೇಶನ್ ಸಲ್ಲಿಕೆ ಆರಂಭಿಸಿ. ಆನ್​ಲೈನ್​ ಪಾರ್ಮ್​​ ಅನ್ನು ಭರ್ತಿಮಾಡಿ. ಇಲ್ಲವಾದರೆ ಹತ್ತಿರದ ರಿಲಯನ್ಸ್ ಕಚೇರಿಗೆ ಭೇಟಿ ನೀಡಲು ಸಹ ನೀವು ಆಯ್ಕೆ ಮಾಡಬಹುದು.


ಇದನ್ನೂ ಓದಿ: 12 ಸಾವಿರ ವಿದ್ಯಾರ್ಥಿ ವೇತನ! ನವೆಂಬರ್ 15ರ ಮೊದಲು ಅಪ್ಲೈ ಮಾಡಿ


2. ಸಂಸ್ಥೆಯ ಅಧಿಕೃತ ವೆಬ್‌ಸೈಟ್‌ಗೆ ಹೋಗಿ – www.jio.com ಆನ್‌ಲೈನ್‌ನಲ್ಲಿ ಅರ್ಜಿ ನಮೂನೆಯನ್ನು ನಿಮ್ಮ ವಿವರಗಳೊಂದಿಗೆ ಭರ್ತಿ ಮಾಡಿ ಅಥವಾ ಸಹಾಯವಾಣಿಯನ್ನು ಬಳಸಿ – 1800-890-9999 ರಿಲಯನ್ಸ್ ಜಿಯೋ ಸ್ಕಾಲರ್‌ಶಿಪ್‌ಗಳು 2022 ಕುರಿತು ಇನ್ನಷ್ಟು ಮಾಹಿತಿ ಪಡೆಯಿರಿ.
3. ನೀವು ಅಪ್ಲಿಕೇಶನ್ ಅನ್ನು ಭರ್ತಿ ಮಾಡಲು ಆಯ್ಕೆ ಮಾಡಿ  ಸರಿಯಾದ ವಿವರಗಳನ್ನು ನಮೂದಿಸಿದ್ದೀರಾ ಎಂಬುದನ್ನು ಖಚಿತಪಡಿಸಿಕೊಳ್ಳಿ.
4. ಸೇವ್ ಬಟನ್ ಕ್ಲಿಕ್ ಮಾಡುವ ಮೊದಲು ನಮೂದಿಸಿದ ಎಲ್ಲಾ ವಿವರಗಳನ್ನು ಪರಿಶೀಲಿಸುವುದನ್ನು ಖಚಿತಪಡಿಸಿಕೊಳ್ಳಿ.
5. ಒಮ್ಮೆ ನೀವು ಫಾರ್ಮ್ ಸಲ್ಲಿಕೆಯನ್ನು ಪೂರ್ಣಗೊಳಿಸಿದ ನಂತರ ಮುಂದಿನ ಸಂಪರ್ಕಕ್ಕಾಗಿ ಸರಿಯಾದ ಧೂರವಾಣಿ ಸಂಖ್ಯೆ ನೀಡಿ.
6. ಒಂದು  ಹಾರ್ಡ್‌ಕಾಪಿಯನ್ನು ತೆಗೆಸಿ ನಿಮ್ಮಬಳಿ ಇಟ್ಟುಕೊಳ್ಳಿ.


ಅಂಕ:


SSLC: 70% ಕ್ಕಿಂತ ಹೆಚ್ಚು ಅಂಕಗಳಿಸಿರಬೇಕು.
CBSE/ICSE: 85% ಕ್ಕಿಂತ ಹೆಚ್ಚು ಅಂಕಗಳಿಸಿರಬೇಕು.


11 ನೇ ತರಗತಿ:
ಮಂಡಳಿ: 70% ಕ್ಕಿಂತ ಹೆಚ್ಚು ಅಂಕಗಳಿಸಿರಬೇಕು.
CBSE/ICSE: 85% ಕ್ಕಿಂತ ಹೆಚ್ಚುಅಂಕಗಳಿಸಿರಬೇಕು.


12 ನೇ ತರಗತಿ:
ಮಂಡಳಿ: 65% ಕ್ಕಿಂತ ಹೆಚ್ಚು ಅಂಕಗಳಿಸಿರಬೇಕು.
CBSE/ICSE: 80% ಕ್ಕಿಂತ ಹೆಚ್ಚು ಅಂಕಗಳಿಸಿರಬೇಕು.


ಪದವಿ
ಆಯಾ ವಿಶ್ವವಿದ್ಯಾಲಯದ ಪರೀಕ್ಷೆಗಳಲ್ಲಿ ಕನಿಷ್ಠ 75% ಅಂಕಗಳಿಸಿರಬೇಕು.
ಸ್ನಾತಕೋತ್ತರ ಮಟ್ಟ:
ಆಯಾ ವಿಶ್ವವಿದ್ಯಾಲಯ ಪರೀಕ್ಷೆಯಲ್ಲಿ ಕನಿಷ್ಠ 75% ಅಂಕಗಳಿಸಿರಬೇಕು.


ಈ ಮೇಲೆ ನಿಗದಿಪಡಿಸಿದಷ್ಟು ಅಂಕಗಳಿಸಿದ್ದರೆ ನೀವು ಅಪ್ಲೈ ಮಾಡಬಹುದು.

First published: