JEE Main Result 2022: ಜೆಇಇ ಮೇನ್​ ಫಲಿತಾಂಶ ಬಿಡುಗಡೆ; ವೆಬ್​ಸೈಟ್​ ಲಿಂಕ್​, ಟಾಪರ್​ ಲಿಸ್ಟ್​ ಇಲ್ಲಿದೆ

ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) JEE ಮೇನ್ ಫಲಿತಾಂಶವನ್ನು ಅಧಿಕೃತ ವೆಬ್‌ಸೈಟ್ ಆದ jeemain.nta.nic.in ನಲ್ಲಿ ಬಿಡುಗಡೆಗೊಳಿಸಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    2022ನೇ ಸಾಲಿನ ಜೆಇಇ (JEE Main Result) ಮುಖ್ಯ ಪರೀಕ್ಷೆಯ ಜೂನ್ ಸೆಷನ್​ನ ಫಲಿತಾಂಶ ಇಂದು ಬಿಡುಗೆಯಾಗಿದೆ. ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ( National Testing Agency- NTA) JEE ಮೇನ್ ಫಲಿತಾಂಶವನ್ನು ಅಧಿಕೃತ ವೆಬ್‌ಸೈಟ್ ಆದ jeemain.nta.nic.in ನಲ್ಲಿ ಬಿಡುಗಡೆಗೊಳಿಸಿದೆ. NTA ಈಗಾಗಲೇ JEE ಮುಖ್ಯ ಪರೀಕ್ಷೆಯ ಪ್ರಾವಿಷನಲ್ ಫೈನಲ್ ಆನ್ಸರ್ ಕೀಯನ್ನು ಜುಲೈ 6ರಂದು ಬಿಡುಗಡೆ ಮಾಡಿದೆ.

    ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಪ್ರಸಕ್ತ ಸಾಲಿನ ಅಂದರೆ, 2022ನೇ ಸಾಲಿನ ಜೆಇಇ ಮೇನ್​ ಫಲಿತಾಂಶವನ್ನು ಪ್ರಕಟಿಸಿದೆ. ಸಂಸ್ಥೆಯ ಅಧಿಕೃತ ವೆಬ್​ಸೈಟ್​ jeemain.nta.nic.in ನಲ್ಲಿ ಅಭ್ಯರ್ಥಿಗಳು ಫಲಿತಾಂಶ ನೋಡಬಹುದಾಗಿದೆ. ಕಳೆದ ವಾರ ಆಗಸ್ಟ್​ 3  ರಂದು ಜೆಇಇ ಮುಖ್ಯ ಪರೀಕ್ಷೆಯ ಕೀ ಆನ್ಸರ್​ ಅನ್ನು ಬಿಡುಗಡೆ ಮಾಡಲಾಗಿತ್ತು.

    ಜೆಇಇ ಮುಖ್ಯ ಅರ್ಹತೆ ಪಡೆದ ಟಾಪ್  ಅಭ್ಯರ್ಥಿಗಳು ಜೆಇಇ ಅಡ್ವಾನ್ಸ್ಡ್ ಪರೀಕ್ಷೆ ಎದುರಿಸಿದ್ದರು. ಈ ಅಭ್ಯರ್ಥಿಗಳ ಫಲಿತಾಂಶ ಇಂದು ಪ್ರಕಟವಾಗಿದೆ. ಅಭ್ಯರ್ಥಿಗಳು ಜೆಇಇನ ಅಧಿಕೃತ ವೆಬ್‌ಸೈಟ್ jeeadv.ac.in ನಲ್ಲೂ ಫಲಿತಾಂಶ ನೋಡಬಹುದಾಗಿದೆ.

    ಜೆಇಇ ಮೇನ್​ ಫಲಿತಾಂಶ ನೋಡುವುದು ಹೇಗೆ?

    -ಮೊದಲಿಗೆ ಅಭ್ಯರ್ಥಿಗಳು ಮುಖ್ಯ ಫಲಿತಾಂಶ ವೀಕ್ಷಣೆಗೆ ಎನ್​ಟಿಎ ಅಧಿಕೃತ ವೆಬ್‌ಸೈಟ್‌ಗೆ ಹೋಗಿ: jeemain.nta.nic.in 2022
    - ಇದಾದ ಬಳಿಕ ಜೆಇಇ ಮೇನ್​ 2 ಫಲಿತಾಂಶದ ಲಿಂಕ್ ಅನ್ನು ಕ್ಲಿಕ್ ಮಾಡಿ.
    - ಅಗತ್ಯವಿರುವ ಕ್ಷೇತ್ರಗಳಲ್ಲಿ ಅಪ್ಲಿಕೇಶನ್ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ನಮೂದಿಸಿ.
    - ಜೆಇಇ ಮುಖ್ಯ ಅಂಕಪಟ್ಟಿ 2022 ರಲ್ಲಿ ನಮೂದಿಸಲಾದ ಎಲ್ಲಾ ವಿವರಗಳನ್ನು ಪರಿಶೀಲಿಸಿ.
    - ಬಳಿಕ ಫಲಿತಾಂಶವನ್ನು ಡೌನ್‌ಲೋಡ್ ಮಾಡಿ

    ಜೆಇಇ ಮೇನ್ 2022 ಎರಡನೇ ಹಂತದ ಪರೀಕ್ಷೆಗಳನ್ನು ಜುಲೈ 25 ರಿಂದ 30 ರವರೆಗೆ ನಡೆಸಲಾಗಿತ್ತು. ಈ ಪರೀಕ್ಷೆಗೆ ಒಟ್ಟು 6.29 ಲಕ್ಷ ಅಭ್ಯರ್ಥಿಗಳು ಹಾಜರಾಗಿದ್ದರು.

    ಇದನ್ನು ಓದಿ: Jobs In HP: ಫ್ರೆಶರ್ಸ್​ಗೆ ಎಚ್​ಪಿಯಲ್ಲಿದೆ ಉದ್ಯೋಗ; ಯಾವುದೇ ವಿಷಯದಲ್ಲಿ ಡಿಗ್ರಿ ಆಗಿದ್ರೂ ಅರ್ಜಿ ಸಲ್ಲಿಸಿ

    ಇಲ್ಲಿದೆ ಟಾಪರ್ ಪಟ್ಟಿ

    ಜೆಇಇ ಪರೀಕ್ಷೆಯ ರಾಜ್ಯ ಮತ್ತು ರಾಷ್ಟ್ರೀಯ ಟಾಪರ್​ ಲಿಸ್ಟ್​ ಈ ರೀತಿ ಇದೆ.  ಅಸ್ಸಾಂನ  ಸ್ನೇಹಾ ಪರೀಕ್,  ಬಿಹಾರದ ಆದಿತ್ಯ ಅಜೇಯ್, ಜಮ್ಮು ಮತ್ತು ಕಾಶ್ಮೀರದ ದಿವ್ಯಾಂಶ್ ವರ್ಮಾ, ದಮನ್ ಮತ್ತು ದಿಯು—ದಿಶಾಂತ್ ಕುಮಾರ್ ಹಿಮಾಚಲ ಪ್ರದೇಶದ ಚೇತನ್ ಕುಕ್ರೇಜಾ​​ ಟಾಪರ್​ಗಳಾಗಿ ಹೊರ ಹೊಮ್ಮಿದ್ದಾರೆ.

    ಗುರುಗ್ರಾಮ್ ಮೂಲದ ಸಾರ್ಥಕ್ ಮಹೇಶ್ವರಿ ಜೆಇಇ ಮೇನ್ 2022 ಸೆಷನ್ 1 ರಲ್ಲಿ 100 ಪರ್ಸೆಂಟೈಲ್ ಸ್ಕೋರ್ ಗಳಿಸಿದ್ದಾರೆ. ಅಷ್ಟೇ ಅಲ್ಲದೇ, ಇವರು ಪರೀಕ್ಷೆ ಎದುರಿಸದ 8.5 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗಿಂತ ಉತ್ತಮ ಸಾಧನೆ ತೋರಿದ್ದಾರೆ.

    ಇದನ್ನು ಓದಿ: ಯಾವಾಗಲೂ ಕೂಗಾಡೋ ಬಾಸ್ ಅನ್ನು ನಿಭಾಯಿಸೋದು ಹೇಗೆ?

    ಎನ್‌ಟಿಎ ಬಿಡುಗಡೆ ಮಾಡಿದ ಟಾಪರ್‌ಗಳ ಪಟ್ಟಿಯಲ್ಲಿ ಕರ್ನಾಟಕದ ಅಭ್ಯರ್ಥಿ ಕೂಡ ಸ್ಥಾನ ಪಡೆದಿದ್ದಾರೆ. ಜೆಇಇ ಮೇನ್ 4 ರಲ್ಲಿ 100 ಪರ್ಸೆಂಟೈಲ್ ಗಳಿಸಿದ 14 ವಿದ್ಯಾರ್ಥಿಗಳಲ್ಲಿ ಮೊದಲ ಸ್ಥಾನದಲ್ಲಿ ತೆಲಂಗಾಣ, ನಂತರದ ಸ್ಥಾನ ಆಂಧ್ರ ಪ್ರದೇಶ (3). ಅಸ್ಸಾಂ, ಉತ್ತರ ಪ್ರದೇಶ, ರಾಜಸ್ಥಾನ, ಹರಿಯಾಣ, ಜಾರ್ಖಂಡ್, ಪಂಜಾಬ್ ಮತ್ತು ಕರ್ನಾಟಕದಲ್ಲಿ ತಲಾ ಒಬ್ಬಬ್ಬ ಅಭ್ಯರ್ಥಿ ಸ್ಥಾನ ಪಡೆದಿದ್ದಾರೆ.

    ತನ್ಮಯ್​ ರಾಜ್ಯಕ್ಕೆ ಪ್ರಥಮ

    ಕರ್ನಾಟಕದಿಂದ ತನ್ಮಯ್ ಗೆಜಪತಿ ಶೇ 99.94 ಅಂಕ ಪಡೆಯುವ ಮೂಲಕ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.

    ಬಿಇ ಮತ್ತು ಬಿಟೆಕ್​ ಪ್ರವೇಶಾತಿಗೆ ಎನ್​ಟಿಎ ಈ ಜೆಇಇ ಪರೀಕ್ಷೆಯನ್ನು ದೇಶಾದ್ಯಂತ ನಡೆಸಲಾಗುತ್ತದೆ. ಈ ಬಾರಿ ಪರೀಕ್ಷೆಗೆ ಒಟ್ಟು 8,72,432 ವಿದ್ಯಾರ್ಥಿಗಳು ನೊಂದಾಯಿಸಿಕೊಂಡಿದ್ದರು. ಇದರಲ್ಲಿ 2,57,533 ವಿದ್ಯಾರ್ಥಿಗಳು ಮಹಿಳೆಯರು, 6,14,896 ಪುರುಷರು ಮತ್ತು ಮೂವರು ತೃತೀಯ ಲಿಂಗಿಗಳು. ಒಟ್ಟು ನೋಂದಾಯಿತ ವಿದ್ಯಾರ್ಥಿಗಳ ಪೈಕಿ 769589 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.
    Published by:Seema R
    First published: