• Home
  • »
  • News
  • »
  • education
  • »
  • IT Course: ಐಟಿ ಕೋರ್ಸ್​​ಗೆ ಹೆಚ್ಚಿದ ಬೇಡಿಕೆ; ಉಳಿದ ಕೋರ್ಸ್​ಗಳ ಭವಿಷ್ಯವೇನು?

IT Course: ಐಟಿ ಕೋರ್ಸ್​​ಗೆ ಹೆಚ್ಚಿದ ಬೇಡಿಕೆ; ಉಳಿದ ಕೋರ್ಸ್​ಗಳ ಭವಿಷ್ಯವೇನು?

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ಕಂಪ್ಯೂಟರ್ ಸೈನ್ಸ್ ಹೆಚ್ಚಿನ ಸಂಬಳವನ್ನು ನೀಡುವ ಉದ್ಯೋಗ ಅವಕಾಶವನ್ನು ನೀಡುವ ಕ್ಷೆತ್ರವಾಗಿದ್ದು ಹೊಸ ತಂತ್ರಜ್ಞಾನದೊಂದಿಗೆ ಉದ್ಯೋಗ ಅವಕಾಶಗಳು ಏರಿಕೆಯಾಗುತ್ತಿವೆ

  • Share this:

ಐಟಿ ಕೋರ್ಸ್‌ಗಳಿಗಾಗಿ ಕಾಲೇಜುಗಳು ಸೀಟ್ ಕೋಟಾಗಳನ್ನು ಹೆಚ್ಚಿಸುತ್ತಿದ್ದು ಇತರ ವಿಷಯಗಳಿಗೆ ದಾಖಲಾತಿ ಪ್ರಕ್ರಿಯೆಯು ತೂಗುಯ್ಯಾಲೆಯಲ್ಲಿದೆ. ವಿಶ್ವವು ತಂತ್ರಜ್ಞಾನದ (Technology) ಮೇಲೆ ಹೆಚ್ಚು ಹೆಚ್ಚು ಅವಲಂಬಿತಗೊಳ್ಳುತ್ತಿದ್ದಂತೆ ಕಾಲೇಜುಳಲ್ಲಿ ಐಟಿ ಆಧಾರಿತ ವಿಷಯಗಳಿಗೆ ಬೇಡಿಕೆ ಕೂಡ ಹೆಚ್ಚುತ್ತಿದೆ. ಆದರೆ ಕಾಲೇಜುಗಳಲ್ಲಿರುವ ಇತರ ವಿಷಯಗಳಿಗೆ ದಾಖಲಾತಿ ಮಾತ್ರ ನಿಧಾನಗತಿಯ ಪ್ರಕ್ರಿಯೆಯನ್ನು ತೆಗೆದುಕೊಳ್ಳುತ್ತಿದೆ.


25% ಹೆಚ್ಚಳ ಮಾಡಿರುವ ಕರ್ನಾಟಕ ಸರಕಾರ


ಕರ್ನಾಟಕ ಸರಕಾರವು, ಸರಕಾರಿ ಕೋಟಾ ಸೀಟ್‌ಗಳಲ್ಲಿ ಕಂಪ್ಯೂಟರ್ ಸೈನ್ಸ್ ಹಾಗೂ ಸಂಯುಕ್ತ ಕೋರ್ಸ್‌ಗಳಲ್ಲಿ ಇತ್ತೀಚೆಗೆ 25% ಹೆಚ್ಚಳವನ್ನು ಮಾಡಿದೆ. ಈ ಕೋರ್ಸ್‌ಗಳಿಗೆ ಇದ್ದ ಒಟ್ಟು ಸೀಟುಗಳ ಸಂಖ್ಯೆಯು 2021-22 ರಲ್ಲಿ 21,804 ರಿಂದ 2022-23 ರ ಶೈಕ್ಷಣಿಕ ಸಮಯದಲ್ಲಿ 27,193 ಕ್ಕೆ ಹೆಚ್ಚಳವಾಗಿದೆ. ಒಟ್ಟು 5,389 ಸೀಟುಗಳನ್ನು ಸೇರಿಸಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಮಂಡಳಿ ಬಿಡುಗಡೆ ಮಾಡಿದ ಅಂಕಿ ಅಂಶದಲ್ಲಿ ತಿಳಿಸಿದೆ.


ಇದು ಮಾತ್ರವಲ್ಲದೆ ಕಾಮೆಡ್-ಕೆ ಕೌನ್ಸಲಿಂಗ್‌ನ ಮೊದಲ ಸುತ್ತಿನಲ್ಲಿ 47% ದಷ್ಟು ಮೀಸಲಾತಿ ಸೀಟುಗಳನ್ನು ಕಂಪ್ಯೂಟರ್ ಸೈನ್ಸ್ ಎಜ್ಯುಕೇಶನ್ ಹಾಗೂ ಸಂಯುಕ್ತ ಪ್ರೊಗ್ರಾಮ್‌ಗಳಿಗೆ ಮಂಜೂರು ಮಾಡಲಾಗಿದೆ. ಉದ್ಯೋಗ ಅವಕಾಶಗಳು ಹಾಗೂ ಆರಾಮದಾಯಕ ಕೆಲಸದ ಪರಿಸ್ಥಿತಿಗಳಿಂದಾಗಿ ಈ ಕ್ಷೇತ್ರವನ್ನು ಆಯ್ಕೆಮಾಡಲು ಪ್ರಮುಖ ಕಾರಣಗಳು ಎಂದು ತಿಳಿಸಿದ್ದಾರೆ. ಇಂಜಿನಿಯರಿಂಗ್ ಮಹತ್ವಾಕಾಂಕ್ಷಿಯಾದ ಚೇತನ್ ಕೆ, ಈ ವರ್ಷ ಸಿಎಸ್‌ಇ ಗೆ ಸೇರ್ಪಡೆಗೊಳ್ಳಲು ಬಯಸಿದ್ದು ಕಂಪ್ಯೂಟರ್ ಸೈನ್ಸ್ ಹೆಚ್ಚಿನ ಸಂಬಳವನ್ನು ನೀಡುವ ಉದ್ಯೋಗ ಅವಕಾಶವನ್ನು ನೀಡುವ ಕ್ಷೆತ್ರವಾಗಿದ್ದು ಹೊಸ ತಂತ್ರಜ್ಞಾನದೊಂದಿಗೆ ಉದ್ಯೋಗ ಅವಕಾಶಗಳು ಏರಿಕೆಯಾಗುತ್ತಿವೆ ಹೆಚ್ಚು ಪ್ರಮುಖವಾಗಿ ಇದು ಯಾವುದೇ ಫೀಲ್ಡ್ ವರ್ಕ್ ಅನ್ನು ಒಳಗೊಳ್ಳುವುದಿಲ್ಲ ಹಾಗೂ ಕೆಲಸದ ಪರಿಸ್ಥಿತಿಗಳು ಉದ್ಯೋಗಿ ಸ್ನೇಹಿ ಮತ್ತು ಆರಾಮದಾಯಕವಾಗಿವೆ ಎಂದು ತಿಳಿಸಿದ್ದಾರೆ.


Online Drawing Course: ಚಿತ್ರಕಲೆಯಲ್ಲಿ ಆಸಕ್ತಿ ಇದ್ದವರು ಈ ಕೋರ್ಸ್ ಮಾಡಿ


ಕಂಪ್ಯೂಟರ್ ಕೌಶಲ್ಯವನ್ನು ಮೂಲ ಕೋರ್ಸ್‌ಗಳಿಗೆ ಸಂಯೋಜಿಸುವುದು


ಪ್ರಸ್ತುತ ಸನ್ನಿವೇಶದಿಂದ ಬದಲಾವಣೆಯು ಅಗತ್ಯವಿದೆ ಎಂದು ಪರಿಣಿತರು ತಿಳಿಸಿದ್ದಾರೆ. ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ವೈಸ್ ಚಾನ್ಸೆಲರ್ ಡಾ.ಕೆ ಬಾಲವೀರ ರೆಡ್ಡಿ ಹೇಳುವಂತೆ ಈ ಸಮಸ್ಯೆಯನ್ನು ಇತ್ತೀಚಿನ ಸಭೆಯಲ್ಲಿ ತಿಳಿಸಿದ್ದು 10 ಶೇಕಡಾ ಹೆಚ್ಚಳವು ಐಟಿ ಸಂಬಂಧಿತ ಸೀಟುಗಳಿಗೆ ಏಕೆ ಅಗತ್ಯವಿದೆ ಎಂದು ಕೇಳಿದ್ದಾರೆ. ಆದರೆ ಈ ಕೋರ್ಸ್‌ಗಳಿಗೆ ಬೇಡಿಕೆ ಹೆಚ್ಚಿದೆ ಎಂದು ಅಧಿಕಾರಿಗಳು ತಿಳಿಸಿರುವುದಾಗಿ ಬಾಲವೀರ ರೆಡ್ಡಿ ತಿಳಿಸಿದ್ದಾರೆ.


ಇಂದಿನ ಜಗತ್ತಿನಲ್ಲಿ ಕಂಪ್ಯೂಟರ್ ಕೌಶಲ್ಯ ಎಂಬುದು ಅತ್ಯಂತ ಮುಖ್ಯವಾದುದು. ಆದರೆ ಈ ಕಂಪ್ಯೂಟರ್ ಕೌಶಲ್ಯಗಳನ್ನು ಮೆಕ್ಯಾನಿಕಲ್, ಸಿವಿಲ್, ಇಲೆಕ್ಟ್ರಿಕಲ್, ಅಟೊಮೊಬೈಲ್ ಹಾಗೂ ಇತರ ಕೋರ್ಸ್‌ಗಳಿಗೆ ಹೊಂದಿಸಿದಾಗ ಉತ್ತಮ ಹಾಗೂ ವಿಫುಲ ಉದ್ಯೋಗ ಅವಕಾಶಗಳು ದೊರೆಯುತ್ತವೆ. ಏಕೆಂದರೆ ಈ ಎಲ್ಲಾ ಕ್ಷೇತ್ರಗಳಿಗೆ ಕಂಪ್ಯೂಟರ್ ಕೌಶಲ್ಯ ಮುಖ್ಯವಾಗಿದೆ ಎಂದು ರೆಡ್ಡಿ ತಿಳಿಸಿದ್ದಾರೆ.


ಸುಧಾರಿತ ತಂತ್ರಜ್ಞಾನಗಳ ಕೊರತೆ


ವಿದ್ಯಾಸಂಸ್ಥೆಗಳು ಹಾಗೂ ಪ್ರೊಫೆಸರ್‌ಗಳು ಕೂಡ ಈ ಎಲ್ಲಾ ಕೋರ್ಸ್‌ಗಳಿಂದ ವಿದ್ಯಾರ್ಥಿಗಳು ಮೂಲ ಕೌಶಲ್ಯವನ್ನು ಅರಿತುಕೊಳ್ಳುವಂತೆ ಮಾಡಬೇಕು ಎಂದು ತಿಳಿಸಿದ್ದು ಉದ್ಯೋಗ ಅವಕಾಶಗಳು ಹೆಚ್ಚಾಗಿರುತ್ತವೆ ಎಂಬುದು ರೆಡ್ಡಿ ಹೇಳಿಕೆಯಾಗಿದೆ.


ಈ ಮೂಲ ಕೋರ್ಸ್‌ಗಳಿಗೆ ಇರುವ ದಾಖಲಾತಿಯು ತಗ್ಗಲು ಕಾರಣವೆಂದರೆ ಈ ಬ್ರ್ಯಾಂಚ್‌ಗಳು ಸುಧಾರಿತ ಮುಖ್ಯ ತಂತ್ರಜ್ಞಾನಗಳನ್ನು ಒಳಗೊಳ್ಳದೇ ಇರುವುದರಿಂದ ಅವಕಾಶಗಳು ಸರಿಯಾಗಿ ದೊರೆಯುತ್ತಿಲ್ಲ ಎಂದು ತಿಳಿಸಿದ್ದಾರೆ. ಹೊಸ ಸುಧಾರಿತ ತಂತ್ರಜ್ಞಾನಗಳನ್ನು ಪ್ರಸ್ತುತ ಕೋರ್ಸ್‌ಗಳಿಗೆ ಜೋಡಿಸಬೇಕು ಎಂದು ತಿಳಿಸಿದ್ದಾರೆ.


ಮೆಕ್ಯಾನಿಕಲ್ ಬ್ರ್ಯಾಂಚ್‌ನಲ್ಲಿ ಸಂಯೋಜಕ ಉತ್ಪಾದನೆ ಮತ್ತು ಉದ್ಯಮ IOT ಅನ್ನು ಹೊಂದಿಸಿದ್ದು ವಿಪ್ರೋ 3 ಡಿ ಲ್ಯಾಬ್‌ನೊಂದಿಗೆ ಸಹಕರಿಸಿಕೊಂಡಿದ್ದೇವೆ. ವಿದ್ಯಾರ್ಥಿಗಳು ಈ ಕೌಶಲ್ಯದಲ್ಲಿ ಉತ್ತಮ ತರಬೇತಿಯನ್ನು ಪಡೆಯುವುದಕ್ಕಾಗಿಯೇ ಲ್ಯಾಬ್‌ಗಳನ್ನು ಸಂಘಟಿಸಿದ್ದೇವೆ ಎಂದು ತಿಳಿಸಿದ್ದಾರೆ. ಮೂಲ ಕೋರ್ಸ್‌ಗಳನ್ನು ಹೆಚ್ಚು ವಿವರವಾದ ತಾಂತ್ರಿಕ ಕೌಶಲ್ಯಗಳೊಂದಿಗೆ ಸಂಯೋಜಿಸುವುದರಿಂದ ವಿದ್ಯಾರ್ಥಿಗಳಿಗೆ ವಿಫುಲ ಉದ್ಯೋಗ ಅವಕಾಶಗಳನ್ನು ದೊರೆಯುವಂತೆ ಮಾಡಬಹುದು ಎಂದು ರೆಡ್ಡಿ ತಿಳಿಸಿದ್ದಾರೆ.

Published by:Seema R
First published: