• Home
  • »
  • News
  • »
  • education
  • »
  • Medical Study In China: ಚೀನಾದಲ್ಲಿ ಮೆಡಿಕಲ್ ಓದ್ತಾ ಇದ್ದೀರಾ? ಹಾಗಿದ್ರೆ ಭಾರತದಲ್ಲಿ ನೀವು ಡಾಕ್ಟರ್ ಆಗೋದು ಕಷ್ಟ!

Medical Study In China: ಚೀನಾದಲ್ಲಿ ಮೆಡಿಕಲ್ ಓದ್ತಾ ಇದ್ದೀರಾ? ಹಾಗಿದ್ರೆ ಭಾರತದಲ್ಲಿ ನೀವು ಡಾಕ್ಟರ್ ಆಗೋದು ಕಷ್ಟ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ವಿದೇಶಿ ಮೂಲದ ವಿಶ್ವವಿದ್ಯಾನಿಲಯಗಳಲ್ಲಿ ವೈದ್ಯಕೀಯ ಅಧ್ಯಯನ ಮಾಡಿದ್ರೆ ಭಾರತದಲ್ಲಿ ವೈದ್ಯಕೀಯ ಅಭ್ಯಾಸ ಮಾಡಲು ಸಾಧ್ಯವಿಲ್ಲ ಎಂದು ಇತ್ತಿಚೀಗೆ ಈ ಸುದ್ದಿಯು ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿದೆ. ಇದು ಯಾಕೆ ಹೀಗೆ? ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.

  • News18 Kannada
  • Last Updated :
  • New Delhi, India
  • Share this:

ಇತ್ತೀಚಿಗೆ ಭಾರತೀಯ ವಿಧ್ಯಾರ್ಥಿಗಳು (Student) ವಿದೇಶದಲ್ಲಿ ಉನ್ನತ ವ್ಯಾಸಂಗ ಮಾಡಲು ಹಾತೊರೆಯುವುದು ಹೆಚ್ಚಾಗಿದೆ. ವಿದೇಶದ ಶಿಕ್ಷಣ (Education) ವ್ಯವಸ್ಥೆ ಅಲ್ಲಿನ ಶಿಕ್ಷಣ ಸಂಸ್ಥೆಗಳ ನಿರ್ವಹಣೆಗೆ ಭಾರತೀಯ ವಿದ್ಯಾರ್ಥಿಗಳು ಮಾರು ಹೋಗಿದ್ದಾರೆ. ಆದರೆ ವಿದೇಶಿ ಮೂಲದ ವಿಶ್ವವಿದ್ಯಾನಿಲಯಗಳಲ್ಲಿ ವೈದ್ಯಕೀಯ ಅಧ್ಯಯನ ಮಾಡಿದ್ರೆ ಭಾರತದಲ್ಲಿ ವೈದ್ಯಕೀಯ ಅಭ್ಯಾಸ (Medical Study) ಮಾಡಲು ಸಾಧ್ಯವಿಲ್ಲ ಎಂದು ಇತ್ತಿಚೀಗೆ ಈ ಸುದ್ದಿಯು ಸಾಮಾಜಿಕ ಜಾಲತಾಣದಲ್ಲಿ (Social Media) ಕಾಣಿಸಿಕೊಂಡಿದೆ. ಇದು ಯಾಕೆ ಹೀಗೆ? ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.


ಚೀನಾ ಮೂಲದ ವಿಶ್ವವಿದ್ಯಾನಿಲಯಗಳಲ್ಲಿ ವೈದ್ಯಕೀಯ ವ್ಯಾಸಂಗ ಮಾಡುತ್ತಿರುವ ಭಾರತೀಯ ವಿದ್ಯಾರ್ಥಿಗಳು ವೈದ್ಯಕೀಯ ಅಭ್ಯಾಸ ಮಾಡಲು ಸಾಧ್ಯವಾಗದಿರಬಹುದು. ಅದರ ಬಗ್ಗೆ ಮುಂದೆ ಕಂಪ್ಲೀಟ್‌ ಆಗಿ ತಿಳಿಯೋಣ.


ಭಾರತದ ರಾಯಭಾರಿ ಕಚೇರಿ ನೀಡಿದ ಹೇಳಿಕೆಯೇನು?


"ನವೆಂಬರ್ 2021 ರ ನಂತರ ಚೀನಾದಲ್ಲಿ ಕ್ಲಿನಿಕಲ್ ಮೆಡಿಸಿನ್ ಕಾರ್ಯಕ್ರಮಕ್ಕೆ ಸೇರಿದ ಯಾವುದೇ ವಿದ್ಯಾರ್ಥಿ ಆಗಿದ್ದರೂ ಸಹ ಮತ್ತು ಚೀನಾದಲ್ಲಿ ವೈದ್ಯಕೀಯ ವೈದ್ಯರಾಗಿ ಅಭ್ಯಾಸ ಮಾಡಲು ಪರವಾನಗಿ ಪಡೆಯಲು ವಿಫಲವಾದ ವಿದ್ಯಾರ್ಥಿಗಳು, ವಿದೇಶಿ ವೈದ್ಯಕೀಯ ಪದವಿ ಪರೀಕ್ಷೆಗೆ ಹಾಜರಾಗಲು ಅನರ್ಹರಾಗುತ್ತಾರೆ" ಎಂದು ಭಾರತೀಯ ರಾಯಭಾರ ಕಚೇರಿಯ ಅಧಿಕಾರಿಯೊಬ್ಬರು ಹೇಳಿಕೆ ನೀಡಿದ್ದಾರೆ. ಬೀಜಿಂಗ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಚೀನಾದಲ್ಲಿ ವೈದ್ಯಕೀಯ ಅಧ್ಯಯನ ಮಾಡಲು ಯೋಜಿಸುತ್ತಿರುವ ವಿದ್ಯಾರ್ಥಿಗಳಿಗೆ ಸಮಗ್ರ ಸಲಹೆಯನ್ನು ನೀಡಿದೆ.


ರಾಷ್ಟ್ರೀಯ ವೈದ್ಯಕೀಯ ಆಯೋಗ


ಕ್ಲಿನಿಕಲ್ ಮೆಡಿಸಿನ್ ಕಾರ್ಯಕ್ರಮಗಳಿಗಾಗಿ ಚೀನಾಕ್ಕೆ ಬರುವ ಎಲ್ಲಾ ಭಾರತೀಯ ವಿದ್ಯಾರ್ಥಿಗಳು ಅದಕ್ಕೆ ತಕ್ಕಂತಹ ಶಿಕ್ಷಣ, ತರಬೇತಿ ಮತ್ತು ಸೌಲಭ್ಯಗಳನ್ನು ಹೊಂದಿದ್ದಾರೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಚೀನಾದ ಅಧಿಕಾರಿಗಳು ಮತ್ತು ವೈದ್ಯಕೀಯ ಕಾಲೇಜುಗಳಿಗೆ ಭಾರತದ  ಕಚೇರಿಯು ವಿನಂತಿಸಿದೆ. ಇದರಿಂದ ಭಾರತೀಯ ವಿದ್ಯಾರ್ಥಿಗಳು ಭಾರತ ರಾಷ್ಟ್ರೀಯ ವೈದ್ಯಕೀಯ ಆಯೋಗದ ವೈದ್ಯಕೀಯದ ಅವಶ್ಯಕತೆಗಳನ್ನು ಪೂರೈಸಬಹುದು.


ಭಾರತೀಯ ವಿದ್ಯಾರ್ಥಿಗಳು ಚೀನಾದಲ್ಲಿ ತಮ್ಮ ವೈದ್ಯಕೀಯ ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ "ಸಹಾಯಕ ವೈದ್ಯ" ಕೆಲಸಗಳಲ್ಲಿ ಚೀನಾದ ಆಸ್ಪತ್ರೆಗಳಲ್ಲಿ ಕೆಲಸ ಮಾಡಬಹುದೇ ಎಂಬ ಪ್ರಶ್ನೆಗೆ ರಾಯಭಾರ ಕಚೇರಿ ಮಾರ್ಗದರ್ಶನ ನೀಡಿದೆ.


ಪ್ರಕಟಣೆಯಲ್ಲಿ ತಿಳಿದು ಬಂದ ಮಾಹಿತಿ


"ರಾಯಭಾರ ಕಚೇರಿಯು ಔಪಚಾರಿಕವಾಗಿ ಅಂತಹ ಆಯ್ಕೆಯನ್ನು ಖಚಿತಪಡಿಸಲು ಸಂಬಂಧಿತ ಚೀನೀ ಅಧಿಕಾರಿಗಳನ್ನು ಸಂಪರ್ಕಿಸಿದೆ. ಚೀನಾದ ಕಡೆಯಿಂದ ಯಾವುದೇ ಮಾಹಿತಿಯನ್ನು ಸ್ವೀಕರಿಸಿದಾಗ ಕಚೇರಿಯು ತನ್ನ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳಲ್ಲಿ ಈ ವಿಷಯವನ್ನು ಹಂಚಿಕೊಳ್ಳುವುದಾಗಿ" ಪ್ರಕಟಣೆಯಲ್ಲಿ ತಿಳಿಸಿದೆ.


ಇದನ್ನೂ ಓದಿ: ಸ್ವೀಟ್ ಮಾರುವವರ ಮಗ ಈಗ ಇಂಟರ್ ನ್ಯಾಷನಲ್ ಕ್ರೀಡಾಪಟು, 15ರ ಬಾಲಕನ ಸಾಧನೆ


ರಾಷ್ಟ್ರೀಯ ವೈದ್ಯಕೀಯ ಆಯೋಗ


"ಭಾರತೀಯ ರಾಷ್ಟ್ರೀಯ ವೈದ್ಯಕೀಯ ಆಯೋಗವು ನಡೆಸುವ ಅರ್ಹತಾ ಪರೀಕ್ಷೆಯಲ್ಲಿ ಪಾಲ್ಗೊಳ್ಳಲು ಚೀನಾದಲ್ಲಿ ಕ್ಲಿನಿಕಲ್ ಮೆಡಿಸಿನ್ ಪ್ರೋಗ್ರಾಂ ಅನ್ನು ಅನುಸರಿಸುತ್ತಿರುವ ಭಾರತೀಯ ವಿದ್ಯಾರ್ಥಿಗಳಿಗೆ ಅರ್ಹತೆಯ ಬಗ್ಗೆ ರಾಯಭಾರ ಕಚೇರಿಯು ಭಾರತೀಯ ವಿದ್ಯಾರ್ಥಿಗಳು ಮತ್ತು ಅವರ ಪೋಷಕರಿಂದ ಪ್ರಶ್ನೆಗಳನ್ನು ಸ್ವೀಕರಿಸುವುದನ್ನು ಮುಂದುವರೆಸಿದೆ" ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ.


ವೈದ್ಯಕೀಯ ಅಭ್ಯಾಸ ಮಾಡಲು ಪರವಾನಗಿ


"ವಿದೇಶಿ ವೈದ್ಯಕೀಯ ವಿದ್ಯಾರ್ಥಿಗಳು ಆಯಾ ವೃತ್ತಿಪರ ನಿಯಂತ್ರಕ ಸಂಸ್ಥೆಯಲ್ಲಿ ನೋಂದಾಯಿಸಿಕೊಳ್ಳಬೇಕು ಅಥವಾ ವೈದ್ಯಕೀಯ ಪದವಿಯನ್ನು ನೀಡುವ ದೇಶದ ಆಯಾ ಅಧಿಕಾರ ವ್ಯಾಪ್ತಿಯಲ್ಲಿ ವೈದ್ಯಕೀಯ ಅಭ್ಯಾಸ ಮಾಡಲು ಪರವಾನಗಿ ಪಡೆಯಲು ಸಮರ್ಥರಾಗಿರಬೇಕು ಎಂದು ಭಾರತದ ರಾಯಭಾರ ಕಚೇರಿ ಹೇಳಿದೆ ಮತ್ತು ಅದು ಆ ದೇಶದ ನಾಗರಿಕರಿಗೆ ನೀಡಲಾದ ವೈದ್ಯಕೀಯ ಅಭ್ಯಾಸದ ಪರವಾನಗಿಗೆ ಸಮನಾಗಿರುತ್ತದೆ ”ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.


ಇದನ್ನೂ ಓದಿ: ಈಗ ಪದವಿಯೊಂದೇ ಸಾಲದು, ಈ ವೃತ್ತಿಪರ ಕೋರ್ಸ್​ ಕೂಡ ಮಾಡಿ


ಮರು ದೃಢೀಕರಣ ಅಗತ್ಯ


"ಇದಕ್ಕೆ ಸಂಬಂಧಪಟ್ಟ ವಿದ್ಯಾರ್ಥಿಗಳು/ಪೋಷಕರು ಅಂತಹ ಪ್ರವೇಶವನ್ನು ಸ್ವೀಕರಿಸುವ ಮೊದಲು ಚೀನಾದಲ್ಲಿನ ಸಂಬಂಧಿತ ವಿಶ್ವವಿದ್ಯಾನಿಲಯದಿಂದ ನೇರವಾಗಿ ಪ್ರವೇಶದ ಎಲ್ಲಾ ನಿಯಮಗಳನ್ನು ಮರು-ದೃಢೀಕರಿಸಲು ಸಲಹೆ ನೀಡಲಾಗುತ್ತದೆ" ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

First published: