• Home
  • »
  • News
  • »
  • education
  • »
  • Medicale Education: ಉಕ್ರೇನ್ ತೊರೆದ ಭಾರತೀಯ ವಿದ್ಯಾರ್ಥಿಗಳು ರಷ್ಯಾದಲ್ಲೂ ಅಧ್ಯಯನ ಮುಂದುವರಿಸಬಹುದಂತೆ!

Medicale Education: ಉಕ್ರೇನ್ ತೊರೆದ ಭಾರತೀಯ ವಿದ್ಯಾರ್ಥಿಗಳು ರಷ್ಯಾದಲ್ಲೂ ಅಧ್ಯಯನ ಮುಂದುವರಿಸಬಹುದಂತೆ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ವೈದ್ಯಕೀಯ ಪಠ್ಯಕ್ರಮವು ಒಂದೇ ಆಗಿರುವುದರಿಂದ ಉಕ್ರೇನ್ ತೊರೆದ ಭಾರತೀಯ ವಿದ್ಯಾರ್ಥಿಗಳು ರಷ್ಯಾದಲ್ಲಿ ತಮ್ಮ ಶಿಕ್ಷಣವನ್ನು ಮುಂದುವರಿಸಬಹುದು.

  • Trending Desk
  • Last Updated :
  • Karnataka, India
  • Share this:

ರಷ್ಯಾ ಉಕ್ರೇನ್ ಯುದ್ಧದಿಂದ (War) ಭಾರತೀಯ ವೈದ್ಯಕೀಯ ವಿದ್ಯಾರ್ಥಿಗಳ ಸ್ಥಿತಿ ಅಡಕತ್ತರಿಯಲ್ಲಿ ಸಿಲುಕಿಕೊಂಡಂತಾಗಿತ್ತು. ಉಕ್ರೇನ್‌ನಲ್ಲಿ (Ukraine) ಯುದ್ಧಭಯದಿಂದ ಅದೆಷ್ಟೋ ವಿದ್ಯಾರ್ಥಿಗಳು ಮರಳಿ ತಾಯ್ನಾಡಿಗೆ ಮರಳಿದ್ದರು ಹಾಗೂ ದೇಶದಲ್ಲಿ ತಮ್ಮ ಶಿಕ್ಷಣವನ್ನು (Education) ಮುಂದುವರಿಸಲು ಸಾಧ್ಯವಾಗದೇ ವೈದ್ಯಕೀಯ ಶಿಕ್ಷಣಕ್ಕೆ ತಿಲಾಂಜಲಿ ಇಟ್ಟು ಬೇರೆ ಕೋರ್ಸ್‌ಗಳನ್ನು(Course) ಆಯ್ದುಕೊಳ್ಳುವ ತೀರ್ಮಾನ ನಡೆಸಿದವರೂ ಇದ್ದಾರೆ. ಆದರೆ ಈ ವಿದ್ಯಾರ್ಥಿಗಳಿಗೆ (Student) ಕೊಂಚ ಸಮಾಧಾನಕರ ಸುದ್ದಿಯೊಂದು ದೊರಕಿದೆ.


ವೈದ್ಯಕೀಯ ಶಿಕ್ಷಣಕ್ಕೆ ರಷ್ಯಾದಲ್ಲಿ ಪ್ರವೇಶ
ಉಕ್ರೇನ್‌ನಲ್ಲಿ ಯುದ್ಧ ಪ್ರಾರಂಭವಾಗಿ ಇದೇ ಮೊದಲ ಬಾರಿಗೆ ರಷ್ಯಾ ಹೇಳಿಕೆಯೊಂದನ್ನು ನೀಡಿದ್ದು, ಉಕ್ರೇನ್ ತೊರೆದ ಭಾರತೀಯ ವಿದ್ಯಾರ್ಥಿಗಳು ರಷ್ಯಾದಲ್ಲಿ ತಮ್ಮ ಶಿಕ್ಷಣವನ್ನು ಮುಂದುವರಿಸಬಹುದು ಏಕೆಂದರೆ ಎರಡೂ ದೇಶಗಳಲ್ಲಿ ವೈದ್ಯಕೀಯ ಪಠ್ಯಕ್ರಮವು ಒಂದೇ ಆಗಿರುತ್ತದೆ ಎಂದು ತಿಳಿಸಿದೆ.


ವೈದ್ಯಕೀಯ ಪಠ್ಯಕ್ರಮವು ಒಂದೇ ಆಗಿದೆ
ವೈದ್ಯಕೀಯ ಪಠ್ಯಕ್ರಮವು ಒಂದೇ ಆಗಿರುವುದರಿಂದ ಉಕ್ರೇನ್ ತೊರೆದ ಭಾರತೀಯ ವಿದ್ಯಾರ್ಥಿಗಳು ರಷ್ಯಾದಲ್ಲಿ ತಮ್ಮ ಶಿಕ್ಷಣವನ್ನು ಮುಂದುವರಿಸಬಹುದು. ಉಕ್ರೇನ್‌ನಲ್ಲಿದ್ದಾಗ ಅಲ್ಲಿನ ಭಾಷೆ ಮಾತನಾಡುವಂತೆ ಹೆಚ್ಚಿನವರು ರಷ್ಯಾ ಭಾಷೆಯನ್ನು ಮಾತನಾಡುತ್ತಾರೆ. ಜನರ ಭಾಷೆಯನ್ನು ವಿದ್ಯಾರ್ಥಿಗಳು ಬೇಗನೇ ಕಲಿತುಕೊಳ್ಳುತ್ತಾರೆ. ಅವರಿಗೆ ರಷ್ಯಾಕ್ಕೆ ತುಂಬು ಹೃದಯದ ಸ್ವಾಗತ ಎಂದು ರಷ್ಯಾದ ಕಾನ್ಸುಲ್ ಜನರಲ್ ಒಲೆಗ್ ಅವ್ದೀವ್ ತಿಳಿಸಿದ್ದಾರೆ.


ಕಷ್ಟದ ಪರಿಸ್ಥಿತಿ ಎದುರಾದ ಸಮಯ
ಫೆಬ್ರವರಿ 2022 ರ ಕೊನೆಯಲ್ಲಿ ಉಕ್ರೇನ್ ಮೇಲೆ ರಷ್ಯಾ ದಾಳಿನಡೆಸಿದಾಗ ಸಾವಿರಾರು ಭಾರತೀಯ ವೈದ್ಯಕೀಯ ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಿತ್ತು ಒಂದು ರೀತಿಯಲ್ಲಿ ತೂಗುಗತ್ತಿಯ ಮೇಲೆ ಅವರ ಶಿಕ್ಷಣ ಓಲಾಡುತ್ತಿತ್ತು. ಪ್ರಾಣರಕ್ಷಣೆಯ ಭಯದಿಂದ ಹೆಚ್ಚಿನ ವಿದ್ಯಾರ್ಥಿಗಳನ್ನು ಭಾರತಕ್ಕೆ ಕರೆತರಲಾಯಿತು.


ರಷ್ಯಾದ ಕಚ್ಚಾತೈಲು ರಫ್ತು ಏರಿಕೆ
ರಷ್ಯಾದ ಕಚ್ಚಾತೈಲ ರಫ್ತು ಕುರಿತು ಪ್ರಶ್ನೆಗೆ ಪ್ರತಿಕ್ರಿಯಿಸಿದ ರಷ್ಯಾದ ರಾಜತಾಂತ್ರಿಕರು ಈ ವರ್ಷದ ಆರಂಭದಿಂದ ರಷ್ಯಾದ ತೈಲ ರಫ್ತು 2 ರಿಂದ 22 ಪಿಸಿಗೆ ಹೆಚ್ಚಾಗಿದ್ದು ಇದು ಗಣನೀಯ ಏರಿಕೆ ಎಂದು ತಿಳಿಸಿದ್ದಾರೆ. ರಷ್ಯಾದ ಕಾನ್ಸುಲ್ ಜನರಲ್ ಒಲೆಗ್ ಅವ್ದೀವ್ ತಿಳಿಸಿರುವಂತೆ ಈ ವರ್ಷದ ಆರಂಭದಿಂದ ರಷ್ಯಾದ ತೈಲ ರಫ್ತು 2 ರಿಂದ 22 ಪಿಸಿಗೆ ಹೆಚ್ಚಾಗಿದ್ದು ಇದು ಗಣನೀಯ ಹೆಚ್ಚಳ ಎಂದೆನಿಸಿದೆ. ಇದೀಗ ರಷ್ಯಾವು ಪ್ರಮುಖ ತೈಲ ಉತ್ಪಾದಕರಾದ ಇರಾಕ್ ಹಾಗೂ ಸೌದಿ ಅರೇಬಿಯಾದ ಸ್ಥಾನವನ್ನು ಆಕ್ರಮಿಸಿಕೊಂಡಿದೆ.


ಭಾರತ-ರಷ್ಯಾ ಸಂಬಂಧ
ಭಾರತದ ಸರಕಾರವು ಜವಬ್ದಾರಿಯುತ ಸರಕಾರವಾಗಿದ್ದು ಅದು ಭಾರತೀಯ ಗ್ರಾಹಕರ ಹಿತಾಸಕ್ತಿಗಳ ಕಾಳಜಿ ವಹಿಸಬೇಕಾಗುತ್ತದೆ ಎಂಬ ರಷ್ಯಾದ ತೈಲ ಆಮದುಗಳ ಕುರಿತು ಜೈಶಂಕರ್ ಅವರ ಹೇಳಿಕೆಯನ್ನು ಒಲೆಗ್ ಶ್ಲಾಘಿಸಿದ್ದಾರೆ.


ವಿದೇಶಾಂಗ ವ್ಯವಹಾರಗಳ ಸಚಿವರಾದ ಜೈಶಂಕರ್, ಭಾರತ ಹಾಗೂ ರಷ್ಯಾದ ನಡುವಿನ ಆಳವಾದ ಸಂಬಂಧವನ್ನು ಪುನರುಚ್ಛರಿಸಿದ್ದಾರೆ. ರಷ್ಯಾದೊಂದಿಗಿನ ಭಾರತದ ಸಂಬಂಧವು ದೇಶದ ಪ್ರಯೋಜನಕ್ಕೆ ಕೆಲಸ ಮಾಡಿದೆ ಹಾಗೂ ನವದೆಹಲಿ ಅದನ್ನು ಮುಂದುವರಿಸಲು ಬಯಸುತ್ತದೆ ಎಂದು ತಿಳಿಸಿದ್ದಾರೆ.


ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿಗಳು ರಷ್ಯಾಕ್ಕೆ ಹೋಗಬಹುದಾದ ಅಂಶಕ್ಕೆ ಒತ್ತು ನೀಡಿದ್ದು ಹಾಗೂ ಇದು ಉನ್ನತ ಬೆಳವಣಿಗೆಯಾಗಿದೆ ಎಂದು ರಷ್ಯಾದ ಕಾನ್ಸುಲ್ ತಿಳಿಸಿದ್ದಾರೆ. ವಿದ್ಯಾರ್ಥಿಗಳ ಅಧ್ಯಯನಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು ರಷ್ಯಾಗೆ ಪ್ರಯಾಣಿಸುತ್ತಲೇ ಇರುತ್ತಾರೆ ಇದು ಉನ್ನತ ಬೆಳವಣಿಗೆಯಾಗಿದೆ.


ಭಾರತೀಯ ವಿದ್ಯಾರ್ಥಿಗಳ ಅರ್ಜಿ
ರಷ್ಯಾದಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ವಿದ್ಯಾರ್ಥಿವೇತನಕ್ಕಾಗಿ ಅರ್ಜಿ ಸಲ್ಲಿಸುತ್ತಿದ್ದಾರೆ. ಪ್ರತಿ ವರ್ಷ, ಹಲವಾರು ಭಾರತೀಯ ವಿದ್ಯಾರ್ಥಿಗಳು ವೈದ್ಯಕೀಯ ಮತ್ತು ಇತರ ವಿಶೇಷ ಕೋರ್ಸ್‌ಗಳನ್ನು ಅಧ್ಯಯನ ಮಾಡಲು ಉಕ್ರೇನ್ ಮತ್ತು ರಷ್ಯಾ ಎರಡೂ ದೇಶಕ್ಕೂ ಪ್ರಯಾಣಿಸುತ್ತಾರೆ ಎಂಬುದು ಒಲೆಗ್ ಹೇಳಿಕೆಯಾಗಿದೆ.


ರಷ್ಯಾದ ಮಿಲಿಟರಿ ಕಾರ್ಯಾಚರಣೆಗೆ ಖಂಡನೆ
ಮಾಸ್ಕೋ ಉಕ್ರೇನ್‌ನ ಬೇರ್ಪಟ್ಟ ಪ್ರದೇಶಗಳಾದ ಡೊನೆಟ್ಸ್ಕ್ ಮತ್ತು ಲುಹಾನ್ಸ್ಕ್ ಅನ್ನು ಸ್ವತಂತ್ರ ಘಟಕಗಳಾಗಿ ಗುರುತಿಸಿದ ಮೂರು ದಿನಗಳ ನಂತರ ಗಮನಾರ್ಹವಾಗಿ, ಫೆಬ್ರವರಿ 24 ರಂದು ರಷ್ಯಾದ ಪಡೆಗಳು ಉಕ್ರೇನ್‌ನಲ್ಲಿ ಮಿಲಿಟರಿ ಕಾರ್ಯಾಚರಣೆಗಳನ್ನು ಪ್ರಾರಂಭಿಸಿದವು.


ಸಹಾಯ ಮಾಡುವುದಾಗಿ ಭರವಸೆ
ಯುಕೆ, ಯುಎಸ್, ಕೆನಡಾ ಮತ್ತು ಯುರೋಪಿಯನ್ ಯೂನಿಯನ್ ಸೇರಿದಂತೆ ಹಲವಾರು ದೇಶಗಳು ಉಕ್ರೇನ್‌ನಲ್ಲಿ ರಷ್ಯಾದ ಮಿಲಿಟರಿ ಕಾರ್ಯಾಚರಣೆಯನ್ನು ಖಂಡಿಸಿವೆ ಮತ್ತು ಮಾಸ್ಕೋ ಮೇಲೆ ನಿರ್ಬಂಧಗಳನ್ನು ವಿಧಿಸಿವೆ. ಈ ದೇಶಗಳು ರಷ್ಯಾದ ವಿರುದ್ಧ ಹೋರಾಡಲು ಮಿಲಿಟರಿ ನೆರವಿನೊಂದಿಗೆ ಉಕ್ರೇನ್‌ಗೆ ಸಹಾಯ ಮಾಡುವುದಾಗಿ ಭರವಸೆ ನೀಡಿವೆ.

First published: