• Home
  • »
  • News
  • »
  • education
  • »
  • Indeever Madireddy: ಮೊದಲ ಬಾರಿ ಏಂಜಲ್ ಮೀನಿನ DNA ಅನುಕ್ರಮಗೊಳಿಸಿದ ವಿದ್ಯಾರ್ಥಿ!

Indeever Madireddy: ಮೊದಲ ಬಾರಿ ಏಂಜಲ್ ಮೀನಿನ DNA ಅನುಕ್ರಮಗೊಳಿಸಿದ ವಿದ್ಯಾರ್ಥಿ!

ಮಡಿರೆಡ್ಡಿ, (ವಿದ್ಯಾರ್ಥಿ)

ಮಡಿರೆಡ್ಡಿ, (ವಿದ್ಯಾರ್ಥಿ)

17 ವರ್ಷದ ಈ ವಿದ್ಯಾರ್ಥಿ ಮಾಡಿದ ಸಾಧನೆ ನೋಡಿ. ಮೀನು ಸಾಕಣೆದಾರ ಮತ್ತು ಜೀವಶಾಸ್ತ್ರಜ್ಞರಾಗಿರುವ ಮಡಿರೆಡ್ಡಿ ಅವರು ಪ್ರತಿಷ್ಠಿತ ಡೇವಿಡ್ಸನ್ ಫೆಲೋಸ್ ವಿದ್ಯಾರ್ಥಿವೇತನ  ಸಹ ಪಡೆದಿದ್ದಾರೆ.

  • News18 Kannada
  • Last Updated :
  • New Delhi, India
  • Share this:

ಕೆಲ ವಿದ್ಯಾರ್ಥಿಗಳು (Students) ಎಲ್ಲರಂತೆ ಬರೀ ಪುಸ್ತಕದ ಹುಳು ಆಗಿರದೆ ಬೇರೆ ಏನಾದರೂ ಸ್ವಲ್ಪ ವಿಭಿನ್ನವಾದುದ್ದನ್ನ ಮಾಡಲು ಪ್ರಯತ್ನಿಸುತ್ತಾರೆ. ಹೀಗೆ ವಿಭಿನ್ನವಾಗಿ ಸಾಧನೆ ಮಾಡಿ ಈ ವಿದ್ಯಾರ್ಥಿ ಜನಪ್ರಿಯರಾಗಿದ್ದಾರೆ. ಸಿಲಿಕಾನ್ ವ್ಯಾಲಿಯ ಪ್ರಮುಖ ಖಾಸಗಿ ಶಾಲೆಯ ಭಾರತೀಯ ಮೂಲದ ವಿದ್ಯಾರ್ಥಿ ಇಂದೀವರ್ ಮಡಿರೆಡ್ಡಿ (Indeever Madireddy) ಅವರು ಈ ವರ್ಷದ ಮಾರ್ಚ್ ಆರಂಭದಲ್ಲಿ ತಮ್ಮ ಸಾಕು ಮೀನು ಕ್ಯಾಲ್ವಿನ್ ಸಾವನ್ನಪ್ಪಿದ ನಂತರ ಸಿಹಿ ನೀರಿನ  ಏಂಜಲ್ (Angelfish) ಮೀನಿನ ಟೆರೋಫಿಲ್ಲಮ್ ಸ್ಕೇಲೇರ್ ಜೀನೋಮ್ ಅನ್ನು ಯಶಸ್ವಿಯಾಗಿ ಅನುಕ್ರಮಗೊಳಿಸಿದ ಮೊದಲ ವ್ಯಕ್ತಿಯಾಗಿದ್ದಾರೆ.


ಕ್ಯಾಲಿಫೋರ್ನಿಯಾದ ಬೇಸಿಸ್ ಇಂಡಿಪೆಂಡೆಂಟ್ ಸಿಲಿಕಾನ್ ವ್ಯಾಲಿಯಲ್ಲಿ ಹಿರಿಯ ವಿದ್ಯಾರ್ಥಿಯಾಗಿರುವ ಮಡಿರೆಡ್ಡಿ, ಸಮುದಾಯ ಪ್ರಯೋಗಾಲಯದಲ್ಲಿ ಎರಡು ವಾರಗಳಲ್ಲಿ ಈ ಡಿಎನ್‌ಎಯನ್ನ ಅನುಕ್ರಮಗೊಳಿಸಿದರು ಮತ್ತು ಅಕ್ಟೋಬರ್ 18 ರಂದು ತಮ್ಮ ಈ ಕೆಲಸವನ್ನು ವಿವರಿಸುವ ಒಂದು ಕಿರು ಪ್ರಬಂಧವನ್ನು ಸಹ ಪ್ರಕಟಿಸಿದರು.


ಮೀನು ಸತ್ತಿದ್ದರೂ ಸಹ ಶಾಶ್ವತವಾಗಿ ಸಂರಕ್ಷಿಸಲು ಬಯಸಿದ್ರಂತೆ ಇಂದೀವರ್


"ನನ್ನ ಮೀನು ಸತ್ತಿದ್ದರೂ, ಅದನ್ನು ಶಾಶ್ವತವಾಗಿ ಸಂರಕ್ಷಿಸಲು ನಾನು ಬಯಸಿದೆ. ಆದ್ದರಿಂದ ನಾನು ಆ ಮಾಹಿತಿಯನ್ನು ವೈಜ್ಞಾನಿಕ ಸಮುದಾಯಕ್ಕೆ ಕೊಡುಗೆ ನೀಡಬಲ್ಲೆ ಎಂಬ ಭರವಸೆಯೊಂದಿಗೆ ಏಂಜೆಲ್ ಫಿಶ್ ನ ಜೀನೋಮ್ ಅನ್ನು ಅನುಕ್ರಮಗೊಳಿಸಲು ನಿರ್ಧರಿಸಿದೆ. ಜೊತೆಗೆ ನನ್ನ ಸಾಕುಪ್ರಾಣಿಗೆ ಇದನ್ನು ಮಾಡುವ ಮೂಲಕ ಒಂದು ಸಣ್ಣ ಗೌರವವನ್ನು ಅರ್ಪಿಸುತ್ತಿದ್ದೇನೆ" ಎಂದು 17 ವರ್ಷದ ಯುವಕ ಈ ಯೋಜನೆಯ ಮಹತ್ವವನ್ನು ವಿವರಿಸಿದ್ದಾರೆ.


ಸಿಹಿ ನೀರಿನ ಏಂಜಲ್ ಮೀನು ಅಮೆಜಾನ್ ಜಲಾನಯನ ಪ್ರದೇಶದ ಸ್ಥಳೀಯವಾಗಿದ್ದು, 10 ವರ್ಷಗಳ ಜೀವಿತಾವಧಿಯನ್ನು ಹೊಂದಿರುತ್ತದೆ. ಅವು ತಮ್ಮ ಉದ್ದವಾದ ರೆಕ್ಕೆಗಳು ಮತ್ತು ಆರೈಕೆಯ ಸುಲಭತೆಗಾಗಿ ವಿಶ್ವದಾದ್ಯಂತ ಉಷ್ಣವಲಯದ ಅಕ್ವೇರಿಯಂ ಮೀನುಗಳ ಅತ್ಯಂತ ಜನಪ್ರಿಯ ಪ್ರಭೇದಗಳಲ್ಲಿ ಒಂದಾಗಿದೆ.


ಇದನ್ನೂ ಓದಿ: ಪಾಸ್ ಆದರೂ ಮೆಡಿಕಲ್ ಓದಲು ಹಣವಿಲ್ಲದೆ ವಿದ್ಯಾರ್ಥಿನಿಯ ಪರದಾಟ!


ಏನಿದು ಜೀನೋಮ್ ಸೀಕ್ವೆನ್ಸಿಂಗ್?
ಜೀನೋಮ್ ಸೀಕ್ವೆನ್ಸಿಂಗ್ ಪ್ರಕ್ರಿಯೆಯು ಒಂದು ನಿರ್ದಿಷ್ಟ ಜೀವಿ, ಕೋಶ ಪ್ರಕಾರ ಅಥವಾ ಜೀನೋಮ್ ನ ಅಥವಾ ಡಿಎನ್ಎ ಅನುಕ್ರಮವನ್ನು ನಿರ್ಧರಿಸಲು ಸಹಾಯ ಮಾಡುತ್ತದೆ. ಸೀಕ್ವೆನ್ಸಿಂಗ್ ನ ಅಂದಾಜು ವೆಚ್ಚವು ಸುಮಾರು 2000 ಡಾಲರ್ ಆಗಿತ್ತು ಮತ್ತು ಮಡಿರೆಡ್ಡಿ ಕ್ರೌಡ್ ಫಂಡಿಂಗ್ ಮೂಲಕ 1000 ಡಾಲರ್ ಗೂ ಹೆಚ್ಚು ಹಣವನ್ನು ಸಂಗ್ರಹಿಸುವಲ್ಲಿ ಯಶಸ್ವಿಯಾದರು. ಎನ್ಇಬಿ ಮೊನಾರ್ಕ್ ಜೆನೋಮಿಕ್ ಡಿಎನ್ಎ ಶುದ್ಧೀಕರಣ ಕಿಟ್ ನ ಸಹಾಯದೊಂದಿಗೆ ಏಂಜೆಲ್ ಮೀನಿನ ಜೀನೋಮಿಕ್ ಡಿಎನ್ಎ ಹೊರ ತೆಗೆಯಲಾಗಿದೆ ಎಂದು ಹೈಸ್ಕೂಲ್ ವಿದ್ಯಾರ್ಥಿ ತನ್ನ ಸಂಶೋಧನಾ ಪ್ರಬಂಧದಲ್ಲಿ ವಿವರಿಸಿದ್ದಾನೆ.


ತನ್ನ ಕೆಲಸದ ಬಗ್ಗೆ ವಿದ್ಯಾರ್ಥಿ ಇಂದೀವರ್ ಹೇಳಿದ್ದೇನು?
"ಆಕ್ಸ್ಫರ್ಡ್ ನ್ಯಾನೊಪೋರ್ ಟೆಕ್ನಾಲಜೀಸ್ ನೊಂದಿಗೆ ಸಂಪೂರ್ಣ ಮೈಟೊಕಾಂಡ್ರಿಯಲ್ ಜೀನೋಮ್ ಜೊತೆಗೆ ಸಿಹಿ ನೀರಿನ ಏಂಜಲ್ ಮೀನಿನ ಸಂಪೂರ್ಣ ಜೀನೋಮ್ ಅನ್ನು ನಾನು ಅನುಕ್ರಮಗೊಳಿಸಿದ್ದೇನೆ, ಜೋಡಿಸಿದ್ದೇನೆ ಮತ್ತು ಟಿಪ್ಪಣಿ ಮಾಡಿದ್ದೇನೆ" ಎಂದು ಅವರು ಹೇಳಿದರು.


ಇದನ್ನೂ ಓದಿ: ರಾಷ್ಟ್ರೀಯ ಶಿಕ್ಷಣ ದಿನದ ಮಹತ್ವವೇನು? ಆಚರಣೆ ಹಿಂದಿನ ಕಾರಣ ಹೀಗಿದೆ


ಡಿಎನ್‌ಎ ಸಣ್ಣ ರಂಧ್ರಗಳ ಮೂಲಕ ಹಾದು ಹೋಗುತ್ತಿದ್ದಂತೆ ಈ ಅನುಕ್ರಮಗಳು ಅಣುಗಳ ಅನುಕ್ರಮವನ್ನು ಪತ್ತೆ ಹಚ್ಚಿದವು. ನ್ಯಾನೋಪೋರ್ ಅನುಕ್ರಮಗಳು ಇತರ ವಿಧಾನಗಳಿಗಿಂತ ತುಲನಾತ್ಮಕವಾಗಿ ಹೆಚ್ಚು ಆಧುನಿಕವಾಗಿವೆ. ಏಕೆಂದರೆ ಅವು ಡಿಎನ್ಎಯ ಹೆಚ್ಚು ಉದ್ದವಾದ ತುಣುಕುಗಳನ್ನು ಅನುಕ್ರಮಗೊಳಿಸಬಹುದು ಇದು ಅನುಕ್ರಮ ತಂತ್ರಾಂಶವು ವಿಶ್ಲೇಷಣೆಗಾಗಿ ಜೀನೋಮ್ ಅನ್ನು ಜೋಡಿಸಲು ಸುಲಭಗೊಳಿಸುತ್ತದೆ.


ಈ ಪ್ರಯೋಗಕ್ಕೂ ಮೊದಲು, ಮಡಿರೆಡ್ಡಿ ಜೀನೋಮ್ ಸೀಕ್ವೆನ್ಸಿಂಗ್ ನ ಬಗ್ಗೆ ತಯಾರಿ ನಡೆಸಲು ಮತ್ತು ಹೇಗೆ ಮಾಡುವುದೆಂದು ಕಲಿಯಲು ಒಂದು ತಿಂಗಳು ಸಮಯ ತೆಗೆದುಕೊಂಡರು. ಸೀಕ್ವೆನ್ಸಿಂಗ್ ಪೂರ್ಣಗೊಂಡ ನಂತರ, ಅವರು ಎರಡು ತಿಂಗಳಿಗೂ ಹೆಚ್ಚು ಕಾಲ ದತ್ತಾಂಶವನ್ನು ವಿಶ್ಲೇಷಿಸಿದರು ಮತ್ತು ಇದು ಇತರ ಸಂಬಂಧಿತ ಮೀನು ಪ್ರಭೇದಗಳಿಗಿಂತ ಯಾವುದೇ ವಿಭಿನ್ನ ಗುಣಲಕ್ಷಣಗಳನ್ನು ಬಹಿರಂಗಪಡಿಸದಿದ್ದರೂ, ಏಂಜೆಲ್ ಮೀನಿನ ನ್ಯೂಕ್ಲಿಯರ್ ಜೆನೆಟಿಕ್ಸ್ ಬಗ್ಗೆ ಬಹಳ ಕಡಿಮೆ ತಿಳಿದಿದ್ದರಿಂದ ಈ ಯೋಜನೆಯು ಗಮನಾರ್ಹ ಡೇಟಾವನ್ನು ಪರಿಚಯಿಸಿತು.


ಮಡಿರೆಡ್ಡಿ ಹೀಗೆ ಜಲಚರ ಜೀವಶಾಸ್ತ್ರದ ಬಗ್ಗೆ ಶೋಧಿಸಿದ್ದು ಮೊದಲೇನಲ್ಲ..


ಮಡಿರೆಡ್ಡಿ ಈ ರೀತಿಯಾದ ಜಲಚರ ಜೀವಶಾಸ್ತ್ರದ ಜಗತ್ತನ್ನು ಶೋಧಿಸುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಸಹ ಮೀನುಗಳ ಆಹಾರದಲ್ಲಿ ಪ್ರೋಟೀನ್ ಸಾಂದ್ರತೆ ಮತ್ತು ಇತರ ಯೋಜನೆಗಳಲ್ಲಿ ಜಲಮಾಲಿನ್ಯಗಳ ನಡುವಿನ ಸಂಬಂಧವನ್ನು ಅವರು ಅಧ್ಯಯನ ಮಾಡಿದ್ದರು. ಅವರು ಇಲಿಗಳು, ಕಶೇರುಕಗಳು, ವೈರಲ್ ಸೋಂಕುಗಳು, ಮೈಕ್ರೋಪ್ಲಾಸ್ಟಿಕ್ ಶೇಖರಣೆ ಮತ್ತು ಇನ್ನೂ ಹೆಚ್ಚಿನದನ್ನು ಸಹ ಅಧ್ಯಯನ ಮಾಡಿದ್ದಾರೆ.


ಮೀನು ಸಾಕಣೆದಾರ ಮತ್ತು ಜೀವಶಾಸ್ತ್ರಜ್ಞರಾಗಿರುವ ಮಡಿರೆಡ್ಡಿ ಅವರು ಪ್ರತಿಷ್ಠಿತ ಡೇವಿಡ್ಸನ್ ಫೆಲೋಸ್ ವಿದ್ಯಾರ್ಥಿವೇತನ  ಸಹ ಪಡೆದಿದ್ದಾರೆ, ಇದು ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್, ಗಣಿತ, ಸಾಹಿತ್ಯ ಮತ್ತು ಸಂಗೀತ ಕ್ಷೇತ್ರಗಳಲ್ಲಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ವಿದ್ಯಾರ್ಥಿಗಳ ಯೋಜನೆಗಳನ್ನು ಬೆಂಬಲಿಸುತ್ತದೆ.

First published: