• Home
  • »
  • News
  • »
  • education
  • »
  • Education Loan: ಶೈಕ್ಷಣಿಕ ಸಾಲ ತೀರಿಸಲು ಇಲ್ಲಿದೆ ಸುಲಭ ಮಾರ್ಗ!

Education Loan: ಶೈಕ್ಷಣಿಕ ಸಾಲ ತೀರಿಸಲು ಇಲ್ಲಿದೆ ಸುಲಭ ಮಾರ್ಗ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ನೀವು ಈ ಸಾಲ ತೀರಿಸಲು ನಿಮ್ಮ ವಿದ್ಯಾಭ್ಯಾಸ ಮುಗಿದ ತಕ್ಷಣ ಯಾವುದಾದರೂ ಕೆಲಸ ಸೇರಿಕೊಳ್ಳಿ. ಯಾವುದೇ ಉತ್ತಮ ಕೆಲಸಕ್ಕಾಗಿ ಕಾಯುತ್ತಾ ಕೂರಬೇಡಿ.

  • News18 Kannada
  • Last Updated :
  • Karnataka, India
  • Share this:

ಹಲವಾರು ವಿದ್ಯಾರ್ಥಿಗಳು (Students) ಕಲಿಕೆಯ ಸಂದರ್ಭದಲ್ಲಿ ಶೈಕ್ಷಣಿಕ ಸಾಲ ಮಾಡಿರುತ್ತಾರೆ. ನಂತರ ಅದನ್ನು ತೀರಿಸಲು ಕಷ್ಟಪಡುತ್ತಾರೆ. ಭಾರತ (India) ಅಥವಾ ವಿದೇಶದಲ್ಲಿ ಹೆಚ್ಚಿನ ಅಧ್ಯಯನವನ್ನು ಮುಂದುವರಿಸಲು ವಿದ್ಯಾರ್ಥಿಗಳು ಶೈಕ್ಷಣಿಕ ಸಾಲ (Education Loan) ಪಡೆದಿರುತ್ತಾರೆ. ಉನ್ನತ ಶಿಕ್ಷಣದ (Education) ಹಂತದಲ್ಲಿ ಹೆಚ್ಚು ಜನ ವಿದ್ಯಾರ್ಥಿಗಳು ಸಾಲ ಮಾಡುತ್ತಾರೆ. ಕೆಲವೊಂದು ಸಾಲಗಳು ವಿದ್ಯಾರ್ಥಿಗಳಿಗೆಂದೇ ಕಡಿಮೆ ಬಡ್ಡಿದರದಲ್ಲಿ ಲಭ್ಯವಿರುತ್ತದೆ. ಆದರೆ ಈ ಹಣವನ್ನು ತೀರಿಸಲೇ ಬೇಕು.


ಕೆಲವು ಸಾಲ ಸೌಲಭ್ಯಗಳು ವಿದ್ಯಾರ್ಥಿಗಳಿಗೆ ಮೊದಲು ಸುಲಭವೆನಿಸಿದರೂ ಮುಂದೆ ಇದು ಹೊರೆಯೆನಿಸಬಹುದು. ಮರುಪಾವತಿಯ ಅವಧಿಯು ಬ್ಯಾಂಕಿನಿಂದ ಬ್ಯಾಂಕ್‌ಗೆ ಮತ್ತು ನೀವು ಪಡೆದಿರುವ ಸಾಲದ ಮೊತ್ತದ ಆಧಾರದ ಮೇಲೆ ಬದಲಾಗುತ್ತದೆ. ವಿದೇಶದಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಮರುಪಾವತಿಯ ಅವಧಿಯು 15 ವರ್ಷಗಳಷ್ಟು ದೀರ್ಘವಾಗಿರುತ್ತದೆ. ಅವರಿಗೆ ಸಣ್ಣ ಕಂತುಗಳಲ್ಲಿ ನಿಧಾನವಾಗಿ ಮರುಪಾವತಿ ಮಾಡಲು ಸಾಕಷ್ಟು ಸಮಯಾವಕಾಶ ನೀಡಿರುತ್ತಾರೆ.


ಸಾಲ ತೀರಿಸಲು ಇದು ಸರಿಯಾದ ಸಮಯ
ಕೋವಿಡ್ 19 ಸಾಂಕ್ರಾಮಿಕವು ಕಳೆದ ವರ್ಷ ಉದ್ಯೋಗ ಮಾರುಕಟ್ಟೆಯನ್ನು ತೀವ್ರವಾಗಿ ಹೊಡೆತ ಬಿದ್ದಿದೆ. ಇದು ವಿದ್ಯಾರ್ಥಿಗಳಿಗೆ ಶಿಕ್ಷಣ ಸಾಲವನ್ನು ಸಮಯಕ್ಕೆ ಮರುಪಾವತಿಸಲು ಸರಿಯಾದ ಉದ್ಯೋಗ ಪಡೆಯಲು ಕಷ್ಟವಾಗುತ್ತಿದೆ. ಆದರೆ ಈ ವರ್ಷ ಸ್ವಲ್ಪ ಸುಧಾರಣೆ ಕಂಡಿದೆ ಆದ್ದರಿಂದ ನೀವು ಈಗ ಸಾಲ ತೀರಿಸಲು ಉತ್ತಮ ಸಮಯ.


ಆದಷ್ಟು ಬೇಗ ಸಾಲ ತೀರಿಸಿ
ನೀವೂ ಸಹ ವಿದ್ಯಾಭ್ಯಾಸಕ್ಕೆಂದು ಸಾಲ ಮಾಡಿದ್ದರೆ ಅದನ್ನು ಆದಷ್ಟು ಬೇಗ ಮರುಪಾವತಿಸುವುದು ಒಳಿತು. ಏಕೆಂದರೆ ಇದು ನಿಮ್ಮ ಮೇಲೆನ ಜವಾಬ್ಧಾರಿಯನ್ನು ಕಡಿಮೆ ಮಾಡುತ್ತದೆ. ಶಿಕ್ಷಣ ಸಾಲಗಳ ಪೂರ್ವಪಾವತಿಗೆ ಬ್ಯಾಂಕ್‌ಗಳು ಶುಲ್ಕ ವಿಧಿಸುವುದಿಲ್ಲ. ಏಕೆಂದರೆ ಶಿಕ್ಷಣ ಸಾಲಗಳಲ್ಲಿ ನೀವು ಸೆಕ್ಷನ್ 80E ಪ್ರಕಾರ ಬಡ್ಡಿಯ ಮೇಲೆ ತೆರಿಗೆ ವಿನಾಯಿತಿಗಳನ್ನು ಪಡೆಯಬಹುದು.


ನೀವು ಈ ಸಾಲ ತೀರಿಸಲು ನಿಮ್ಮ ವಿದ್ಯಾಭ್ಯಾಸ ಮುಗಿದ ತಕ್ಷಣ ಯಾವುದಾದರೂ ಕೆಲಸ ಸೇರಿಕೊಳ್ಳಿ. ಯಾವುದೇ ಉತ್ತಮ ಕೆಲಸಕ್ಕಾಗಿ ಕಾಯುತ್ತಾ ಕೂರಬೇಡಿ. ಒಂದು ವೇಳೆ ನೀವೂ ಕಡಿಮೆ ಆದಾಯ ಹೊಂದಿದ್ದರೂ ಸಹ ಸ್ವಲ್ಪ ಉಳಿತಾಯ ಮಾಡಿ. ಆ ಸಾಲ ತೀರಿಸಿಬಿಡಿ.


ಮಿತವ್ಯಯಿಯಾಗಿರಿ
ನಿಮ್ಮ ಅಗತ್ಯ ವೆಚ್ಚಗಳು ಏನೆಂದು ಪರಿಶೀಲಿಸಿ ಉದಾಹರಣೆಗೆ ಆಹಾರ, ಬಾಡಿಗೆ, ಬಟ್ಟೆ, ಇತ್ಯಾದಿ, ಮತ್ತು ನಿಮಗೆ ಯಾವುದು ಅನಿವಾರ್ಯವಲ್ಲವೋ ಅಂತಹ ವಸ್ತುಗಳನ್ನು ನಿಮ್ಮ ಆಯ್ಕೆ ಪಟ್ಟಿಯಿಂದ ತೆಗೆದು ಹಾಕಿ. ನೀವೂ ಕಲಿಕೆಯ ಸಂದರ್ಭದಲ್ಲಿ ಲ್ಯಾಪ್​ಟಾಪ್​ ಖರೀದಿಸಿದ್ದರೆ ಈ ಅದನ್ನು ಮಾರಿ ಬಂದ ಹಣದಿಂದ ಸಾಲ ತೀರಿಸಿ.


ಉಳಿತಾಯ ಖಾತೆ ಸ್ಥಾಪಿಸಿ
ನಿಮ್ಮದೇ ಆದ ಒಂದು ಉಳಿತಾಉ ಖಾತೆ ಸ್ಥಾಪಿಸಿ ಮತ್ತು ಅದರಲ್ಲಿ ಶಾಲ ತೀರಿಸುವ ಸಲುವಾಗಿಯೇ ಪ್ರತಿ ತಿಂಗಳು ಸ್ವಲ್ಪ ಹಣವನ್ನು ಕೂಡಿಡುತ್ತಾ ಬನ್ನಿ. ಒಮ್ಮೆಯೇ ನಿಮ್ಮ ಬಳಿ ಸಾಲ ತೀರಿಸಲು ಸಾಧ್ಯವಾಗದಿದ್ದರೂ ಬಡ್ಡಿ ಹಣವನ್ನಾದರೂ ತುಂಬಿ. ಮುಂದೇ ಇದೇ ವಿಷಯ ನಿಮ್ಮ ಮಾನಸಿಕ ನೆಮ್ಮದಿ ಕೆಡಿಸದಂತೆ ನೋಡಿಕೊಳ್ಳಿ.


ದೀರ್ಘಾವಧಿ ಸೌಲಭ್ಯ ಪಡೆಯಿರಿ
ಬ್ಯಾಂಕ್ ಆಫ್ ಬರೋಡಾ ನಿಮಗೆ ಆಕರ್ಷಕ ಬಡ್ಡಿದರಗಳಲ್ಲಿ ಶಿಕ್ಷಣ ಸಾಲಗಳನ್ನು ನೀಡುತ್ತದೆ. ಸುಲಭ ಮತ್ತು ಆರಾಮದಾಯಕ ಮರುಪಾವತಿಗಾಗಿ ನೀವು 15 ವರ್ಷಗಳವರೆಗಿನ ಅವಧಿಗಳ ಅವಕಾಶ ಪಡೆಯಬಹುದು. ಈ ರೀತಿಯ ಆಯ್ಕೆ ಮಾಡಿ ಆಗ ನಿಮಗೇ ಸುಲಭವೆನಿಸುತ್ತದೆ.


ನೀವು ಕಲಿಯುತ್ತಿರುವ ಸಂದರ್ಭದಲ್ಲೇ ಪಾರ್ಟ್​ ಟೈಮ್​ ಉದ್ಯೋಗ ಮಾಡಿ ಆಗ ಸ್ವಲ್ಪ ಹಣ ನಿಮ್ಮ ಖಾತೆಯಲ್ಲಿ ಉಳಿಯುತ್ತದೆ. ಆ ಹಣವನ್ನು ಸಾಲ ಮರುಪಾವತಿಸಲು ಉಪಯೋಗಿಸಿ.

First published: