• Home
  • »
  • News
  • »
  • education
  • »
  • Competitive Exams: ಸ್ಪರ್ಧಾತ್ಮಕ ಪರೀಕ್ಷೆಗೆ ನಿಮ್ಮ ತಯಾರಿ ಹೀಗಿರಲಿ

Competitive Exams: ಸ್ಪರ್ಧಾತ್ಮಕ ಪರೀಕ್ಷೆಗೆ ನಿಮ್ಮ ತಯಾರಿ ಹೀಗಿರಲಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಪ್ರಶ್ನೆ ಪತ್ರಿಕೆ ನೋಡಿದ ತಕ್ಷಣ ಆತಂಕಕ್ಕೊಳಗಾಗದಂತೆ ಅಭ್ಯಾಸ ಮಾಡಿ. ಯಾವುದೇ ಉತ್ತರ ಆಯ್ಕೆಗಳನ್ನು ನೋಡಿದರು ಹೋಲಿಕೆ ಇದ್ದು ಇದೇ ಸರಿಯುತ್ತರ ಇರಬಹುದು ಎನಿಸುತಿರುತ್ತದೆ.

  • News18 Kannada
  • Last Updated :
  • Karnataka, India
  • Share this:

ಸ್ಪರ್ಧಾತ್ಮಕ ಪರೀಕ್ಷೆಗೆ (Competitive Exams) ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳು ಗಮನವಿಟ್ಟು ಈ ಸಲಹೆಗಳನ್ನು (Tips) ಪಾಲಿಸಿ. ಅಥವಾ ಇನ್ನು ಮುಂದೆ ಪರೀಕ್ಷೆ ಬರೆಯಲು ಬಯಸುವವರು ಈ ರೀತಿ ಮಾಡಿದರೆ ಖಂಡಿತ ಉತ್ತಮ ಅಂಕಗಳಿಸುತ್ತೀರಿ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ (Exam) ಹೆಚ್ಚು ಅಂಕಗಳಿಸಲು ಎಲ್ಲ ಪ್ರಶ್ನೆಗಳಿಗೂ ಸರಿ ಉತ್ತರ ನೀಡುವುದು ಒಂದು ಕಡೆ ಮುಖ್ಯವಾದರೆ. ಮತ್ತೊಂದು ಕಡೆ ಹಲವು ರೀತಿ ಎಚ್ಚರ ವಹಿಸುವ ಅಗತ್ಯವೂ ಇರುತ್ತದೆ ಹಾಗಾಗಿ ಸರಿಯಾದ ರೀತಿಯಲ್ಲಿ ತಯಾರಿನಡೆಸಿ ಉತ್ತಮ ಅಂಕ (Marks) ಗಳಿಸಿ.


ಪ್ರಶ್ನೆ ಪತ್ರಿಕೆ ನೋಡಿದ ತಕ್ಷಣ ಆತಂಕಕ್ಕೊಳಗಾಗದಂತೆ ಅಭ್ಯಾಸ ಮಾಡಿ. ಯಾವುದೇ ಉತ್ತರ ಆಯ್ಕೆಗಳನ್ನು ನೋಡಿದರು ಹೋಲಿಕೆ ಇದ್ದು ಇದೇ ಸರಿಯುತ್ತರ ಇರಬಹುದು ಎನಿಸುತಿರುತ್ತದೆ. ಯಾವುದೇ ಕಾಂಪಿಟೇಟಿವ್ ಪರೀಕ್ಷೆಗಳ ಪ್ರಶ್ನೆಗಳನ್ನೂ ಸಹ ತುಂಬಾ ಸೂಕ್ಷ್ಮವಾಗಿ ವಿನ್ಯಾಸಗೊಳಿಸಿರುತ್ತಾರೆ. ಕೆಲವೇ ಅಭ್ಯರ್ಥಿಗಳು ಮಾತ್ರ ಸುಲಭವಾಗಿ ಈ ಪ್ರಶ್ನೆಗಳನ್ನು ಅರ್ಥ ಮಾಡಿಕೊಂಡು ನಿಗದಿತ ಸಮಯದ ಒಳಗೆ ಉತ್ತರ ನೀಡಬಲ್ಲರು. ಯಾವುದೇ ಸ್ಮರ್ಧಾತ್ಮಕ ಪರೀಕ್ಷೆಗಳು ಅಥವಾ ಪ್ರವೇಶ ಪರೀಕ್ಷೆಗಳಲ್ಲಿ ಹೆಚ್ಚು ಅಂಕಗಳಿಸಲು ಈ ಕೆಳಗಿನ ಸಲಹೆಗಳನ್ನು ತಪ್ಪದೇ ಫಾಲೋ ಮಾಡಿರಿ.


ಬಹುತೇಕ ಪರೀಕ್ಷೆಯ ಪ್ರಶ್ನೆಗಳು ಬಹು ಆಯ್ಕೆ ಮಾದರಿಯ ಪ್ರಶ್ನೆಗಳಾಗಿರುತ್ತವೆ. ಪ್ರಶ್ನೆಗಳಿಗೆ ಉತ್ತರ ನೀಡುವ ಮುನ್ನ ಪತ್ರಿಕೆಯ ಮೇಲಿರುವ ಸೂಚನೆಗಳನ್ನು ಓದಿಕೊಳ್ಳಿ. ಹಲವು ಪರೀಕ್ಷೆಗಳಲ್ಲಿ ಹೆಚ್ಚು ಸೆಕ್ಷನ್‌ಗಳು ಮತ್ತು ಹೆಚ್ಚು  ಪ್ರಶ್ನೆಗಳು ಇರುತ್ತವೆ. ಸೂಚನೆಯಲ್ಲಿ ಎಷ್ಟು ಪ್ರಶ್ನೆಗಳಿಗೆ ಉತ್ತರ ನೀಡಬೇಕು ಯಾವ ಪ್ರಶ್ನೆಗಳು ಯಾರಿಗೆ ಎಂದು ತಿಳಿಸಿರುತ್ತಾರೆ ಅಷ್ಟಕ್ಕೆ ಮಾತ್ರ ಉತ್ತರಿಸಿದರೆ ಸಾಕು.


ಇದನ್ನೂ ಓದಿ: ಗಣಿತದ ಸೂತ್ರ ನೆನಪಾಗುತ್ತಿಲ್ಲವೇ? ಹಾಗಾದ್ರೆ ಹೀಗೆ ಮಾಡಿ


1. ಮೊದಲು ಪರೀಕ್ಷೆಯ ಪಠ್ಯಕ್ರಮವನ್ನು ಸಂಗ್ರಹಿಸಿ.

2. ಅಧ್ಯಯನ ಸಾಮಗ್ರಿಗಳನ್ನು ಸಂಗ್ರಹಿಸಿ.


3. ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಗಳಗಳನ್ನು ಸಂಗ್ರಹಿಸಿ


4. ಮಾದರಿ ಪ್ರಶ್ನೆಗಳು ಹೇಗಿರುತ್ತದೆ ಎಂದು ಪರಿಶೀಲಿಸಿ.

5. ಪರೀಕ್ಷೆಗೆ ಒಂದು ತಿಂಗಳ ಮೊದಲು ಎಲ್ಲಾ ಅಧ್ಯಯನ ಸಾಮಗ್ರಿಗಳನ್ನು ಅಧ್ಯಯನ ಮಾಡಿ.


6. ಎಲ್ಲಾ ಅಪರಿಚಿತ ಪ್ರಶ್ನೆಗಳನ್ನು ಪರಿಹರಿಸಲು ಶಿಕ್ಷಕರು, ಸ್ನೇಹಿತರು ಮತ್ತು ಗೂಗಲ್ ಸಹಾಯ ಪಡೆಯಿರಿ.


7. ಎಲ್ಲಾ ಪ್ರಶ್ನೆ ಪತ್ರಿಕೆಗಳನ್ನು ಪರೀಕ್ಷೆಯ ಮೊದಲು ನಿಗದಿತ ಸಮಯದೊಳಗೆ ಪರಿಹರಿಸಲು ಸಾಧ್ಯವೇ ನೋಡಿ.


8. ಯಶಸ್ಸು ಮತ್ತು ವೈಫಲ್ಯ ಎರಡನ್ನೂ ಒಂದೇ ರೀತಿಯಲ್ಲಿ ಸ್ವೀಕರಿಸಲು ಸಿದ್ಧರಾಗಿರಿ.


ಅಲ್ಲದೇ ಯಾವ ವಿಭಾಗದ ಪ್ರಶ್ನೆಗಳಿಗೆ ಎಷ್ಟು ಸಮಯದೊಳಗೆ ಉತ್ತರಿಸಿ ಮುಗಿಸಬೇಕು ಎಂದು ಸಹ ತಿಳಿಸಿರುತ್ತಾರೆ. ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಆಪ್ಟಿಟ್ಯೂಡ್ ಸೆಕ್ಷನ್‌ನ ಪ್ರಶ್ನೆಗಳನ್ನು ಹೆಚ್ಚು ಗಮನಹರಿಸಿ ಓದಿಕೊಳ್ಳಬೇಕು. ಉತ್ತರ ನೀಡುವ ಮುನ್ನ ಎರಡು ಬಾರಿ ಓದಿ ಅರ್ಥಮಾಡಿಕೊಂಡ ನಂತರ ಉತ್ತರ ನೀಡಬೇಕು. ಈ ಸೆಕ್ಷನ್‌ನಲ್ಲಿ ಸಣ್ಣ ತಪ್ಪುಗಳು ಸಹ ಸಂಪೂರ್ಣ ಪರೀಕ್ಷೆ ಪತ್ರಿಕೆಗೆ ನೀಡಿದ ಪ್ರಯತ್ನವನ್ನು ವ್ಯರ್ಥಮಾಡಿಬಿಡಬಹುದು.


ಆನ್‌ಲೈನ್‌ ಆಪ್ಟಿಟ್ಯೂಡ್‌ ಟೆಸ್ಟ್‌ನಲ್ಲಿ ಸಮಯ ಬಹುಮುಖ್ಯ. ಆದ್ದರಿಂದ ಉತ್ತರಗೊತ್ತಿಲ್ಲದ ಅರ್ಥವಾಗದ ಪ್ರಶ್ನೆಯಲ್ಲಿ ಹೆಚ್ಚು ಸಮಯ ಯೋಚಿಸುತ್ತಾ ಕೂರಬೇಡಿ. ಮೊದಲು ಗೊತ್ತಿರುವ ಪ್ರಶ್ನೆಗಳಿಗೆ ಬೇಗ ಉತ್ತರ ಬರೆದುಕೊಳ್ಳಿ. ನಂತರ ಉಳಿದ ಸಮಯದಲ್ಲಿ ಹಿಂದೆ ಬಿಟ್ಟ ಎಲ್ಲ ಪ್ರಶ್ನೆಗಳಿಗೂ ಉತ್ತರ ಬರೆಯಿರಿ.


ಇದನ್ನೂ ಓದಿ: 14ನೇ ಸ್ಥಾನದಲ್ಲಿದೆ ಕರ್ನಾಟಕ, ಶೈಕ್ಷಣಿಕ ಸೂಚ್ಯಂಕದಲ್ಲಿ ಪ್ರಗತಿ


ಹಲವು ಸ್ಪರ್ಧಾತ್ಮಕ ಪರೀಕ್ಷೆಗಳು ತಪ್ಪು ಉತ್ತರಗಳಿಗೆ ನೆಗೆಟಿವ್ ಅಂಕಗಳನ್ನು ಹೊಂದಿರುತ್ತವೆ. ಆದ್ದರಿಂದ ಕೇವಲ ಊಹೆ ಮಾಡುವ ಮೂಲಕ ಉತ್ತರ ನೀಡಬೇಡಿ. ನಿಮಗೆ ಗೊತ್ತಿಲ್ಲದಿರುವ ಉತ್ತರದ ಮೇಲೆ ವಿಶ್ವಾಸ ಇಲ್ಲದಿದ್ದಲ್ಲಿ ಅಂತಹ ಪ್ರಶ್ನೆಗಳಿಗೆ ಉತ್ತರ ನೀಡದೆ ಹಾಗೇ ಬಿಟ್ಟುಬಿಡುವುದು ಉತ್ತಮ.

First published: