• Home
  • »
  • News
  • »
  • education
  • »
  • Self Learning: ನಿಮ್ಮಿಷ್ಟದ ವಿಷಯವನ್ನು ಈಗ ನೀವೇ ಕಲಿಯಬಹುದು!

Self Learning: ನಿಮ್ಮಿಷ್ಟದ ವಿಷಯವನ್ನು ಈಗ ನೀವೇ ಕಲಿಯಬಹುದು!

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ನಿಮಗೆ ನೀವೇ ಪ್ರೇರಣೆಯಾಗಿ ಯಾರದೂ ಮಾರ್ಗದರ್ಶನವಿಲ್ಲದೆ ಕಲಿಯುವ ಕಲಿಕೆಯೇ ಸ್ವಯಂ ಕಲಿಕೆ. ನೀವು ಕಲಿಯಬೇಕೆಂಬ ಗುರಿ ಹೊಂದಿದರೆ ಸಾಕು ವಾಸ್ತವವಾಗಿ ಅದನ್ನು ಸಾಧಿಸಬಹುದು.

  • News18 Kannada
  • Last Updated :
  • Karnataka, India
  • Share this:

ಸ್ವಯಂ ಕಲಿಕೆಯು ಕಲಿಕೆಯ ಒಂದು ವಿಧಾನ ಅಲ್ಲಿ ವ್ಯಕ್ತಿಯು (Person) ತನ್ನ ಸ್ವಂತ ಕಲಿಕೆಯ ಅಗತ್ಯಗಳನ್ನು ಗುರುತಿಸಿ ತನಗೆ ಬೇಕಾದ ವಿಷಯವನ್ನು ತಾನೇ ಕಲಿಯುತ್ತಾನೆ. ನಿಮಗೂ ಕೆಲವು ವಿಷಯದ (Subject) ಕುರಿತು ಕಲಿಕೆಯ ಆಸಕ್ತಿ (Interest) ಇರಬಹುದು. ನೀವೂ ನಿಮ್ಮಷ್ಟದ ವಿಷಯಗಳನ್ನು ಕಲಿಯಬೇಕೆಂದರೆ ಇಲ್ಲಿ ಕೆಲವು ಸಲಹೆ ನೀಡಲಾಗಿದೆ. ಇವುಗಳನ್ನು ಅನುಸರಿಸಿದರೆ ನೀವೂ ಸ್ವಯಂ ಕಲಿಕೆಯಲ್ಲಿ (Self learning) ತೊಡಗಿಕೊಳ್ಳಬಹುದು. ಅದೂ ಸಹ ಯಾವುದೇ ಟೀಚರ್​ ಸಹಾಯವಿಲ್ಲದೆ.  


ನಿಮಗೆ ನೀವೇ ಪ್ರೇರಣೆಯಾಗಿ ಯಾರದೂ ಮಾರ್ಗದರ್ಶನವಿಲ್ಲದೆ ಕಲಿಯುವ ಕಲಿಕೆಯೇ ಸ್ವಯಂ ಕಲಿಕೆ. ನೀವು ಕಲಿಯಬೇಕೆಂಬ ಗುರಿ ಹೊಂದಿದರೆ ಸಾಕು ವಾಸ್ತವವಾಗಿ ಅದನ್ನು ಸಾಧಿಸಬಹುದು. ಉದಾಹರಣೆಗೆ, ನೀವು ಹೊಸ ಭಾಷೆಯನ್ನು ಕಲಿಯುತ್ತಿದ್ದರೆ ನಿಮಗೆ ನೀವೇ ಸ್ಪೂರ್ತಿಯಾಗಬೇಕು.


ಇನ್ನೊಬ್ಬ ವ್ಯಕ್ತಿಯೊಂದಿಗೆ ನಿಮ್ಮ ಜ್ಞಾನವನ್ನು ಹಂಚಿಕೊಳ್ಳಿ ಹಲವರಿಂದ ಮಾಹಿತಿ ಪಡೆಯಿರಿ. ಆಂತರಿಕವಾಗಿ ನೀವು ತಿಳಿದ ಮಾಹಿತಿಯನ್ನು ಅನುಭವಿಸಿ. ನೀವು ಸಮಾನ ಮನಸ್ಕ ವ್ಯಕ್ತಿಗಳೊಂದಿಗೆ ಸಂಪರ್ಕ ಸಾಧಿಸಿ ಆಗ ನಿಮ್ಮ ಕಲಿಕೆಗೆ ಅವರೂ ಸಹಾಯ ಮಾಡುತ್ತಾರೆ. ಆನ್​ಲೈನ್ ಸಮುದಾಯ ಮತ್ತು ಸೋಶಿಯಲ್​ ಮೀಡಿಯಾದಲ್ಲಿ ಸಕ್ರಿಯರಾಗಿರಿ ಆಗ ಹೊಸ ವಿಷಯ ಕಲಿಯಬಹುದು.


ಇದನ್ನೂ ಓದಿ: ಶಿಕ್ಷಕರ ಅರ್ಹತಾ ಪರೀಕ್ಷೆ ಕುರಿತು ಇಲ್ಲಿದೆ ಲೇಟೆಸ್ಟ್ ಅಪ್​ಡೇಟ್ಸ್


ಇದು ನಿಮಗೆ ಹೆಚ್ಚಿನ ಸಂಪನ್ಮೂಲಗಳನ್ನು ಅನ್ವೇಷಿಸಲು ಸಹಾಯ ಮಾಡುತ್ತದೆ ನಿಮ್ಮ ಆಸಕ್ತಿಯ ವಿಷಯದ ಬಗ್ಗೆ ಹೊಸ ಒಳನೋಟವನ್ನು ಪಡೆಯಲು ಸಹಾಯ ಮಾಡುತ್ತದೆ.  ಮತ್ತು ನಿಮ್ಮ ಕಲಿಕೆಯ ವಿಷಯಗಳಿಗೆ ಉತ್ತರಗಳನ್ನು ಹುಡುಕಲು ಸಹಾಯ ಮಾಡುತ್ತದೆ.


ನಿಮ್ಮ ಕಲಿಕೆಗೆ ಮಿತಿ ಇಲ್ಲ.
ಕೆಲವು ಜನರು ಪ್ರಶ್ನೆಗಳಿಂದ ಕಿರಿಕಿರಿಗೊಳ್ಳುತ್ತಾರೆ. ವಾಸ್ತವವಾಗಿ ಒಬ್ಬ ವ್ಯಕ್ತಿಗೆ ಎಲ್ಲಾ ವಿಷಯವು ಅಷ್ಟು ಸರಿಯಾಗಿ ತಿಳಿದಿರುವುದಿಲ್ಲ. ಹಲವು ಜನರನ್ನು ನೀವು ಕೇಳಿದಾಗ ನಿಮ್ಮ ಕಲಿಕೆಗೆ ಹೊಸ ಆಯಾಮ ದೊರೆಯುತ್ತದೆ. ತಾಳ್ಮೆ ಹೆಚ್ಚಿರುವ ವ್ಯಕ್ತಿಗಳ ಬಳಿ ಹಲವಾರು ಪ್ರಶ್ನೆ ಕೇಳಿ ನಿಮ್ಮ ಕಲಿಕೆ ಹೆಚ್ಚುತ್ತದೆ.


ನಿಮಗೆ ಗೊತ್ತಿಲ್ಲದ ವಿಷಯಗಳನ್ನು ಓದಿ
ನಿಮಗೆ ಗೊತ್ತಿಲ್ಲದ ವಿಷಯ ವೀಕ್ಷಿಸಿ ಮತ್ತು ಕೇಳಿ ತಿಳಿದುಕೊಳ್ಳಿ. ನಿಮ್ಮ ಆರಾಮ ವಲಯವನ್ನು ಮೀರಿ ಕಲಿಯುವ ಮೂಲಕ ಮತ್ತು ಇತರ ಜನರು ಹೇಗೆ ಯೋಚಿಸುತ್ತಾರೆ ಎಂಬುದನ್ನು ಗ್ರಹಿಸುವ ಮೂಲಕ ಹೆಚ್ಚು ಕಲಿಯಿರಿ.  ನಿಮ್ಮ ಮನಸ್ಸನ್ನು ವಿಸ್ತರಿಸಲು ಪ್ರಯತ್ನಿಸಿ.


ಸಾಕ್ಷ್ಯಚಿತ್ರ ವೀಕ್ಷಿಸಿ: 
ನೀವು ಮನರಂಜನೆಯ ವಿಷಯಕ್ಕೆ ಒತ್ತು ಕೊಡುವುದನ್ನು ಬಿಟ್ಟು ಅದರ ಬದಲಿಗೆ ಸಾಕ್ಷ್ಯಚಿತ್ರವನ್ನು ನೋಡಿ ಹೆಚ್ಚಿನ ಜ್ಷಾನ ಸಂಪಾದಿಸಬಹುದು.
ನೀವು ಎಂದಾದರೂ ಕಾಮಿಕ್ಸ್ ಅನ್ನು ಮಾತ್ರ ಓದುತ್ತಿದ್ದರೆ ಅದರ ಬದಲಿಗೆ ಕಾದಂಬರಿಯನ್ನು ಓದಲು ಪ್ರಯತ್ನಿಸಿ.
ಮ್ಯೂಸಿಯಂಗಳಿಗೆ ಭೇಟಿ ನೀಡಿ.


ಇದನ್ನೂ ಓದಿ: ನಿಮಗೆ ಇಷ್ಟವಿಲ್ಲದ ಕೆಲಸ ಸೇರಿದ್ದೀರಾ? ಹಾಗಾದ್ರೆ ಹೀಗೆ ಮಾಡಿ


ಇಂಗ್ಲಿಷ್ ಸಾಹಿತ್ಯವನ್ನು ಓದಿ
ಇಂಗ್ಲಿಷ್ ಸಾಹಿತ್ಯವನ್ನು ಓದಿ ಮತ್ತು ನಿಮ್ಮ ವ್ಯಾಕರಣವನ್ನು ಸಾಧ್ಯವಾದಷ್ಟು ಸುಧಾರಿಸಿ. ಪ್ರಪಂಚದ ವಿವಿಧ ಭಾಗಗಳಿಂದ ಬೇರೆ ಬೇರೆ ಇಂಗ್ಲಿಷ್ ಓದಿ. ನಿಮ್ಮ ದೇಶದ ಲೇಖಕರ ಪುಸ್ತಕ  ಮಾತ್ರ ಓದಲು ಯೋಗ್ಯರು ಎಂದು ಭಾವಿಸಬೇಡಿ. ನಿಮ್ಮ ಓದುವಿಕೆಯನ್ನು ಪ್ರಪಂಚದ ಬೇರೆಡೆಗೆ ವಿಸ್ತರಿಸುವ ಮೂಲಕ ಇನ್ನೊಂದು ಭಾಷೆಯಲ್ಲಿಯೂ ಸಹ ನಿಮ್ಮ ಆಲೋಚನೆ ಸುಧಾರಿಸಿ.


ಯಾವಾಗಲು ಕಲಿಕೆಯ ಕುರಿತು ಆಸಕ್ತಿ ಕಳೆದುಕೊಳ್ಳಬೇಡಿ
ನಿಮ್ಮ ಆಸಕ್ತಿಯನ್ನು ಎಂದೂ ಕಳೆದುಕೊಳ್ಳಬೇಡಿ. ಕಲಿಯುವ ಮನಸ್ಸದ್ದರೆ ನೀವು ಪ್ರತಿ ದಿನವೂ ಹೊಸ ಹೊಸ ವಿಷಯಗಳನ್ನು ಕಲಿಯುತ್ತಿರುತ್ತೀರಿ. 

First published: