Career: ವೃತ್ತಿ ಜೀವನದ ಯಶಸ್ಸಿಗೆ ಅಧಿಕ ಜನರ ಸಂಪರ್ಕ ಬೆಳೆಸುವುದು ಹೇಗೆ ಸಹಾಯಕ?

ನಿಮಗೆ ವೃತ್ತಿ ಮಾರ್ಗಗಳನ್ನು ಬದಲಾಯಿಸುವ ನಿರ್ಧಾರವು ಬಲವಾದ ಭರವಸೆ ಮತ್ತು ಹೆಚ್ಚು ಅರ್ಥಪೂರ್ಣ ಮಾರ್ಗವನ್ನು ತೆರೆಯುತ್ತದೆ ಎನ್ನುವುದು ಸತ್ಯ. ಆದರೆ ನೀವು ಬೇಗನೆ ಹೊಸ ಉದ್ಯೋಗವನ್ನು ಪಡೆಯಬೇಕೆಂದರೆ ನಿಮ್ಮ ವೃತಿಜೀವನದ ನೆಟ್‌ವರ್ಕ್‌ ಚೆನ್ನಾಗಿರಬೇಕು.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಜೀವನದಲ್ಲಿ (Life) ಶಾಶ್ವತವಾಗಿ ಇರುವುದು ಎಂದರೆ ಅದು ಬದಲಾವಣೆ  (Changes) ಮಾತ್ರ. ಕಾಲ ಕಾಲಕ್ಕೆ ಬದಲಾಗಬೇಕು ಎನ್ನುವ ಹಿರಿಯರ ಮಾತಿನ ಮರ್ಮದ ಹಿಂದಿನ ಕಾರಣವೇ ಇದು. ಯಾವುದು ಶಾಶ್ವತವಲ್ಲ‌ ಆದರೆ ಬದಲಾವಣೆ ಮಾತ್ರ ಶಾಶ್ವತ ಎಂದು ಆಗಾಗ ಎಲ್ಲರೂ ಹೇಳುವುದನ್ನು ಕೇಳುತ್ತಲೆ ಇರುತ್ತೇವೆ. ನೀವು ಕೆಲಸಕ್ಕೆ ಹೋಗುವಾಗ ಧರಿಸುವ ಬಟ್ಟೆಯನ್ನು (Clothes) ಬದಲಾಯಿಸುವ ಸಣ್ಣ ಬದಲಾವಣೆಯಿಂದ ಹಿಡಿದು ಪ್ರಮುಖ ವೃತ್ತಿಜೀವನದ ದೊಡ್ಡ ಜವಬ್ದಾರಿಗಳನ್ನು (Responsibility) ನಿರ್ವಹಿಸುವಂತಹ ದೊಡ್ಡ ಬದಲಾವಣೆಗಳಿಗೂ ಈ ಬದಲಾವಣೆ ಅನಿವಾರ್ಯ ಆಗಿದೆ. ಆ ಬದಲಾವಣೆಯನ್ನು ನೀವು ತುಂಬು ಮನಸ್ಸಿನಿಂದ ಸ್ವೀಕರಿಸಲು ಪ್ರಯತ್ನಿಸಬೇಕಷ್ಟೆ.

ವೃತಿಜೀವನದ ನೆಟ್‌ವರ್ಕ್‌ ಏಕೆ ಮುಖ್ಯ 
ನಿಮಗೆ ವೃತ್ತಿ ಮಾರ್ಗಗಳನ್ನು ಬದಲಾಯಿಸುವ ನಿರ್ಧಾರವು ಬಲವಾದ ಭರವಸೆ ಮತ್ತು ಹೆಚ್ಚು ಅರ್ಥಪೂರ್ಣ ಮಾರ್ಗವನ್ನು ತೆರೆಯುತ್ತದೆ ಎನ್ನುವುದು ಸತ್ಯ. ಆದರೆ ನೀವು ಬೇಗನೆ ಹೊಸ ಉದ್ಯೋಗವನ್ನು ಪಡೆಯಬೇಕೆಂದರೆ ನಿಮ್ಮ ವೃತಿಜೀವನದ ನೆಟ್‌ವರ್ಕ್‌ ಚೆನ್ನಾಗಿರಬೇಕು. ನಿಮ್ಮ ವೃತ್ತಿ ಮಾರ್ಗಗಳನ್ನು ಬದಲಾಯಿಸಲು ನಿಮ್ಮ ನೆಟ್‌ವರ್ಕ್ ನಿಮಗೆ ಹೇಗೆ ಸಹಾಯ ಮಾಡಬಹುದಾಗಿದೆ ಎಂಬುದರ ಬಗ್ಗೆ ವೃತ್ತಿಜೀವನದ ತಜ್ಞರಾದ ಜೋಸೆಫ್‌ ಲಿಯು ಅವರು ಈ ಲೇಖನದಲ್ಲಿ ಕೆಲವು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.

“ನೀವು ನಿಮ್ಮ ನೆಟ್‌ವರ್ಕ್ ಅನ್ನು ನಿರ್ಮಿಸುವುದು ಕೇವಲ ಹೊಸ ಸಂಬಂಧಗಳನ್ನು ಸೃಷ್ಟಿಸುವ ಅಥವಾ ವೃತ್ತಿಪರ ಅವಕಾಶಗಳನ್ನು ಬೇಗನೆ ಪಡೆಯುವ ಸಲುವಾಗಿ ಅಲ್ಲ. ನೆಟ್‌ವರ್ಕಿಂಗ್ ನಿಮ್ಮ ವೃತ್ತಿ ಬೆಂಬಲ ಸಮುದಾಯವನ್ನು ಉತ್ತಮ ರೀತಿಯಲ್ಲಿ ನಿರ್ಮಿಸಲು ಸಹಾಯ ಮಾಡುತ್ತದೆ” ಎಂದು ಜೋಸೆಫ್‌ ಲಿಯು ಹೇಳುತ್ತಾರೆ.

ನೀವು ಉದ್ದೇಶಪೂರ್ವಕವಾಗಿ ಜನರೊಂದಿಗೆ ಸಂಪರ್ಕ ಸಾಧಿಸಲು ಮುಂದಾದರೆ ಅದು ಉತ್ತಮ ನೆಟ್‌ವರ್ಕಿಂಗ್‌ ಎಂದೇ ಹೇಳಬಹುದು. ನಿಮ್ಮ ನೆಟ್‌ವರ್ಕ್‌ ನಲ್ಲಿರುವ ಯಾರೋ ಒಬ್ಬ ವ್ಯಕ್ತಿಯ ಸ್ವಲ್ಪ ಸಹಾಯದಿಂದ ನೀವು ಎಷ್ಟು ಪ್ರಗತಿ ಸಾಧಿಸಬಹುದು ಎಂಬುದು ನಿಮಗೆ ಅಚ್ಚರಿಯನ್ನುಂಟು ಮಾಡುತ್ತದೆ.

ಕಷ್ಟಕಾಲದಲ್ಲಿ ಈ ಸಂಬಂಧಗಳು ಹೇಗೆ ಸಹಕಾರಿಯಾಗುತ್ತದೆ
ನಮ್ಮ ವ್ಯವಹಾರದಲ್ಲಿ ಅಥವಾ ವೈಯಕ್ತಿಕ ಜೀವನದಲ್ಲಿ ಸಮಸ್ಯೆಗಳು ಬಂದಾಗ ಅವುಗಳನ್ನು ನಮ್ಮಷ್ಟಕ್ಕೆ ನಾವೇ ಎದುರಿಸುವುದು ತಪ್ಪು. ಅವುಗಳನ್ನು ಬೇರೆಯವರ ಹತ್ತಿರ ಚರ್ಚಿಸಿ ಅವುಗಳನ್ನು ಬಗೆಹರಿಸಿಕೊಳ್ಳುವುದು ಹೆಚ್ಚು ಸೂಕ್ತ. ಇದಕ್ಕೂ ಸಹ ನಮ್ಮ ನೆಟ್‌ವರ್ಕ್‌ ಉತ್ತಮವಾಗಿದ್ದಾಗ ಮಾತ್ರ ಸಾಧ್ಯ.

ಇದನ್ನೂ ಓದಿ:  Mid-career women: ವೃತ್ತಿ ಜೀವನದ ಮಧ್ಯದಲ್ಲಿ ಮಹಿಳೆಯರ ಕೆಲ್ಸಕ್ಕೆ ಬ್ರೇಕ್ ಹಾಕೋರು ಯಾರು?

ನಾವು ಹೆಚ್ಚು ಜನರನ್ನು ತಲುಪಿದಷ್ಟು ಹೆಚ್ಚು ವ್ಯತ್ಯಾಸಗಳನ್ನು ಕಾಣಬಹುದು. ನಮ್ಮ ಉದ್ಯೋಗ ಅಥವಾ ವ್ಯವಹಾರಕ್ಕೆ ಸಂಬಂಧಪಟ್ಟ ತಜ್ಞರೊಂದಿಗಿನ ಮಾತುಕತೆಯು ನಮ್ಮ ಸ್ವಂತ ಸಂಶೋಧನೆಯ ಗಂಟೆಗಳಿಗಿಂತ ಹೆಚ್ಚು ಉಪಯುಕ್ತವಾಗಿರುತ್ತದೆ. ಭಾವನಾತ್ಮಕ ಮಟ್ಟದಲ್ಲಿ, ವೃತ್ತಿಜೀವನದ ದಿಕ್ಕುಗಳನ್ನು ಬದಲಿಸಿದ ಇತರ ಜನರೊಂದಿಗೆ ಸಂಪರ್ಕ ಸಾಧಿಸುವುದು ಬಹಳಷ್ಟು ಸಹಾಯಕಾರಿ ಎಂಬುದು ತಜ್ಞರ ಸಲಹೆ ಆಗಿದೆ.

ಆರ್ಥಿಕ ವ್ಯವಸ್ಥೆಗೂ ಸಹಕಾರಿ 
ನೀವು ನಿಮಗಾಗಿ ಇರುವ ಒಂದು ಬೆಂಬಲ ನೆಟ್ವರ್ಕ್ ಅನ್ನು ರಚಿಸುವುದು ನಿಮ್ಮ ಆರ್ಥಿಕ ವ್ಯವಸ್ಥೆಗೆ ಬಹಳ ಮುಖ್ಯವಾಗಿದೆ. ವೃತ್ತಿ ಬದಲಾವಣೆಯ ಮಧ್ಯೆ ಇರುವ ಬಹಳಷ್ಟು ಜನರಿಗೆ ಅವರ ನೆಟ್ವರ್ಕ್ ನಿಂದ ಸಾಕಷ್ಟು ಸಹಾಯ ದೊರೆಯಬಹುದು. ನೀವು ನಿಮ್ಮ ಜೊತೆ ನಡೆಸುವ ಆತ್ಮಾವಲೋಕನವು ನಿಮ್ಮ ಅರ್ಹತೆಗಳೇನು ಎಂಬುದರ ಬಗ್ಗೆ ಸ್ಪಷ್ಟ ಅರಿವನ್ನು ಮೂಡಿಸುತ್ತದೆ. ಆದರೆ ಅದಕ್ಕಿಂತ ಉತ್ತಮ ಎಂದರೆ ಕೆಲವು ಸಮಸ್ಯೆಗಳ ಬಗ್ಗೆ ಯಾರೊಂದಿಗಾದರೂ ಮಾತನಾಡುವುದರಿಂದ ನಿಮ್ಮ ಕೆಲಸ ಇನ್ನು ಹೆಚ್ಚು ಸ್ಪಷ್ಟವಾಗುತ್ತದೆ.

ನೀವು ಏನು ಮಾಡುತ್ತಿದ್ದೀರಿ ಎಂಬುದನ್ನು ಅರ್ಥಮಾಡಿಕೊಳ್ಳುವ ಮತ್ತು ದಾರಿಯುದ್ದಕ್ಕೂ ನಿಮ್ಮನ್ನು ಬೆಂಬಲಿಸಲು ಸಹಾಯ ಮಾಡುವ, ಸರಿಯೆನಿಸುವ ಕೆಲವು ಜನರೊಂದಿಗೆ ಇರುವುದು ನಿಮ್ಮ ವೃತ್ತಿ ಜೀವನಕ್ಕೆ ನೀವು ನೀಡಬಹುದಾದ ಕೊಡುಗೆಯಾಗಿದೆ. ಆದ್ದರಿಂದ ಉದ್ಯೋಗ ಅಥವಾ ವ್ಯವಹಾರದಲ್ಲಿ ಎಷ್ಟು ಮೌಲ್ಯವನ್ನು ಗಳಿಸಬಹುದೆಂದು ಅನುಭವದ ಆಧಾರದ ಮೇಲೆ ನಿಮಗೆ ತಿಳಿಯುತ್ತದೆ.

ಇದನ್ನೂ ಓದಿ: Cope With Stress: ವೃತ್ತಿಜೀವನದಲ್ಲಿ ಕಾಣಿಸಿಕೊಳ್ಳುವ ಮಿಡ್‌-ಲೈಫ್‌ ಸಮಸ್ಯೆಯನ್ನು ಪರಿಹರಿಸುವುದು ಹೇಗೆ?

ಕೊನೆಯದಾಗಿ ಯಾವುದೇ ಜಾಗವಿರಲಿ, ಯಾರೇ ಆಗಿರಲಿ, ಅವರ ಜೊತೆ ಉತ್ತಮ ಸಂಪರ್ಕದಲ್ಲಿರಲು ಯಾವಾಗಲೂ ಪ್ರಯತ್ನಿಸಿ. ಏಕೆಂದರೆ ಯಾವ ಸಮುಯದಲ್ಲಿ ಯಾರ ಅಗತ್ಯ ನಿಮಗೆ ಬೇಕಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಜೀವನ ಒಂದು ನಿರಂತರ ಬದಲಾವಣೆ ಅಲ್ಲವೇ?
Published by:Ashwini Prabhu
First published: