• Home
  • »
  • News
  • »
  • education
  • »
  • UPSC Exam: ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ NCERT ಪುಸ್ತಕ ಪಡೆಯಲು ಇಲ್ಲಿದೆ ಮಾಹಿತಿ

UPSC Exam: ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ NCERT ಪುಸ್ತಕ ಪಡೆಯಲು ಇಲ್ಲಿದೆ ಮಾಹಿತಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

NCERT Books for Free: ಹಿಂದಿನ ವರ್ಷಗಳ ಯುಪಿಎಸ್‌ಸಿ ಮತ್ತು ಸಿಎಸ್ಇ ಪ್ರಶ್ನೆ ಪತ್ರಿಕೆಗಳ ವಿಶ್ಲೇಷಣೆಯು ಯುಪಿಎಸ್‌ಸಿ ಪರೀಕ್ಷೆಯಲ್ಲಿ ಎನ್‌ಸಿಇಆರ್‌ಟಿಯ ಪ್ರಾಮುಖ್ಯತೆಯನ್ನು ಒತ್ತಿ ಹೇಳುತ್ತದೆ.

  • Share this:

ಎಷ್ಟೋ ಜನ ವಿದ್ಯಾರ್ಥಿಗಳು ಅನೇಕ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ (Compitative Exam) ಅನೇಕ ವರ್ಷಗಳಿಂದ ತಯಾರಿ ನಡೆಸುತ್ತಿರುವುದನ್ನು ನಾವು ನೋಡುತ್ತೇವೆ. ಈ ವಿದ್ಯಾರ್ಥಿಗಳು ಪರೀಕ್ಷೆಗೆ ಸಹಾಯವಾಗುವ ಪಠ್ಯ ಪುಸ್ತಕಗಳನ್ನು ಮತ್ತು ಕೈಗೆ ಸಿಕ್ಕಿರುವ ದಿನಪತ್ರಿಕೆಗಳನ್ನು ಸಹ ಸ್ವಲ್ಪವೂ ಬಿಟ್ಟು ಬಿಡದೆ ಓದುತ್ತಿರುತ್ತಾರೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಈ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಎಷ್ಟೋ ಜನ ದುಡ್ಡಿರುವ ವಿದ್ಯಾರ್ಥಿಗಳು ಒಳ್ಳೆಯ ಕಡೆಯಲ್ಲಿ ಕೋಚಿಂಗ್ ಸಹ ಪಡೆಯುತ್ತಾರೆ. ಇನ್ನೊಂದು ಕಡೆ ಎಷ್ಟೋ ಜನ ಬಡ ವಿದ್ಯಾರ್ಥಿಗಳು ಕೋಚಿಂಗ್ (Coaching)  ಹೋಗದೆ ಕೇವಲ ಪುಸ್ತಕಗಳ ಮೇಲೆ ಅವಲಂಬಿತರಾಗಿರುತ್ತಾರೆ.


ಈ ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ಮತ್ತು ನಾಗರಿಕ ಸೇವಾ ಪರೀಕ್ಷೆ (ಸಿಎಸ್ಇ) ಗಾಗಿ ತಯಾರಿ ನಡೆಸುತ್ತಿರುವ ಪ್ರತಿಯೊಬ್ಬ ವಿದ್ಯಾರ್ಥಿಯೂ ಅವರಿಗೆ ಹೆಚ್ಚು ಸಹಾಯ ಮಾಡುವ ಪುಸ್ತಕಗಳನ್ನು ಹುಡುಕುತ್ತಾರೆ ಅಂತ ಹೇಳಬಹುದು. ಸಾಕಷ್ಟು ಆಯ್ಕೆಗಳು ಲಭ್ಯವಿದ್ದರೂ, ಅಡಿಪಾಯವನ್ನು ಸರಿಯಾಗಿ ಪಡೆಯುವುದು ಬಹಳ ಮುಖ್ಯವಾಗುತ್ತದೆ. ಐಎಎಸ್ ಅಧಿಕಾರಿಗಳ ಪ್ರಕಾರ, ನ್ಯಾಷನಲ್ ಕೌನ್ಸಿಲ್ ಆಫ್ ಎಜುಕೇಷನಲ್ ರಿಸರ್ಚ್ ಆಂಡ್ ಟ್ರೈನಿಂಗ್ (ಎನ್‌ಸಿಇಆರ್‌ಟಿ) ಪುಸ್ತಕಗಳನ್ನು ವಿಷಯಗಳ ಮೂಲಭೂತ ಅಂಶಗಳನ್ನು ಕಲಿಯಲು ಬಳಸಬಹುದು.


ಎನ್ಸಿಇಆರ್ಟಿ ಪಠ್ಯಪುಸ್ತಕಗಳ ಬಗ್ಗೆ ಐಎಎಸ್ ಅಧಿಕಾರಿಗಳ ಅಭಿಪ್ರಾಯ ನೋಡಿ..


"ಎನ್‌ಸಿಇಆರ್‌ಟಿ ಪಠ್ಯಪುಸ್ತಕಗಳನ್ನು ನಿಮ್ಮ ಗೋ-ಟು ರಿಸೋರ್ಸ್ ಬುಕ್ ಆಗಿ ಬಳಸಬೇಕು. 9ನೇ ತರಗತಿಯ ಪುಸ್ತಕಗಳಿಂದ ಪ್ರಾರಂಭಿಸಿ 12ನೇ ತರಗತಿಯವರೆಗೆ ಇರುವ ವಿಷಯಗಳನ್ನು ಅಭ್ಯಾಸ ಮಾಡಲು ಈ ಪುಸ್ತಕಗಳು ತುಂಬಾನೇ ಸಹಾಯ ಮಾಡುತ್ತವೆ. ಈ ಪುಸ್ತಕಗಳನ್ನು ಬಳಸುವಾಗ, ನಿಮ್ಮ ಮುಂದೆ ಪಠ್ಯಕ್ರಮವಿದೆ ಎಂದು ಖಚಿತಪಡಿಸಿಕೊಳ್ಳಿ ಮತ್ತು ನೀವು ಪೂರ್ಣಗೊಳಿಸಬೇಕಾದ ವಿಷಯಗಳನ್ನು ಮೊದಲು ಟಿಕ್ ಮಾಡಿಕೊಳ್ಳಿರಿ" ಎಂದು ಐಎಎಸ್ ಅಧಿಕಾರಿ ತೇಜಸ್ವಿ ರಾಣಾ ಅವರು ಹೇಳಿದರು.


ಎನ್‌ಸಿಇಆರ್‌ಟಿ ಪುಸ್ತಕಗಳು ಯುಪಿಎಸ್‌ಸಿ ಪಠ್ಯಕ್ರಮದಲ್ಲಿ ಒಳಗೊಂಡಿರುವ ಹೆಚ್ಚಿನ ವಿಷಯಗಳ ಬಗ್ಗೆ ಒಂದು ಅಡಿಪಾಯವನ್ನು ನಿಮಗೆ ನೀಡುತ್ತವೆ ಎಂದು ಹೇಳಬಹುದು.


"ಎನ್‌ಸಿಇಆರ್‌ಟಿ ಪಠ್ಯಪುಸ್ತಕಗಳು ಐಎಎಸ್ ಪ್ರಿಲಿಮ್ಸ್ ನಲ್ಲಿ ಕೇಳುವ ವಿಷಯಗಳಿಗೆ ಉತ್ತಮ ಮೂಲ ಮತ್ತು ಪರಿಚಯವಾಗಿದೆ" ಎಂದು ಪೂರ್ವ-ಸಿಎಸ್ಇಗೆ ಅರ್ಹತೆ ಪಡೆದ ವಿವೇಕ್ ಕುಮಾರ್ ಶ್ರೀವಾಸ್ತವ ಅವರು ಕೋರಾ ಪೋಸ್ಟ್ ನಲ್ಲಿ ಬರೆದಿದ್ದಾರೆ.


ಇದನ್ನೂ ಓದಿ: ಕಾನ್ಸ್​ಟೇಬಲ್ ಹುದ್ದೆಗಳ ನೇಮಕಾತಿ, ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ


ಪರ್ಮಾರ್ ನಿಖಿಲ್ ಅವರ ಮತ್ತೊಂದು ಕೋರಾ ಪೋಸ್ಟ್ "ಎನ್‌ಸಿಇಆರ್‌ಟಿ ಪುಸ್ತಕಗಳು ನಿಮಗೆ ಪರೀಕ್ಷೆಯಲ್ಲಿ ಕೇಳಬಹುದಾದ ಅನೇಕ ವಿಷಯಗಳ ಬಗ್ಗೆ ಒಂದು ಕಲ್ಪನೆ ಮತ್ತು ತಿಳುವಳಿಕೆಯನ್ನು ನೀಡುತ್ತವೆ. ಎನ್‌ಸಿಇಆರ್‌ಟಿ ಈ ವಿಷಯಗಳನ್ನು ಸರಳೀಕರಿಸುತ್ತದೆ, ಇದರಿಂದ ನೀವು ಅವುಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಬಹುದು" ಎಂದು ಅವರು ಹೇಳಿದರು.


ಎನ್ಸಿಇಆರ್ಟಿಯ ಪ್ರಾಮುಖ್ಯತೆಯ ಬಗ್ಗೆ ಏನ್ ಹೇಳುತ್ತೇ ಕರಿಯರ್ ಲಾಂಚರ್?


ವರ್ಷಗಳ ಯುಪಿಎಸ್‌ಸಿ ಮತ್ತು ಸಿಎಸ್ಇ ಪ್ರಶ್ನೆ ಪತ್ರಿಕೆಗಳ ವಿಶ್ಲೇಷಣೆಯು ಯುಪಿಎಸ್‌ಸಿ ಪರೀಕ್ಷೆಯಲ್ಲಿ ಎನ್‌ಸಿಇಆರ್‌ಟಿಯ ಪ್ರಾಮುಖ್ಯತೆಯನ್ನು ಒತ್ತಿ ಹೇಳುತ್ತದೆ.


"ಎನ್‌ಸಿಇಆರ್‌ಟಿ ಪುಸ್ತಕಗಳಿಂದ ನೇರವಾಗಿ ಅಥವಾ ಪರೋಕ್ಷವಾಗಿ ಪ್ರಶ್ನೆಗಳನ್ನು ನಿರಂತರವಾಗಿ ಕೇಳಲಾಗುತ್ತದೆ ಎಂದು ವಿಶ್ಲೇಷಣೆಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಇದಲ್ಲದೆ, ಯುಪಿಎಸ್‌ಸಿ ನಾಗರಿಕ ಸೇವೆಗಳ ಪಠ್ಯಕ್ರಮದಲ್ಲಿ ಉಲ್ಲೇಖಿಸಲಾದ ಹೆಚ್ಚಿನ ವಿಷಯಗಳ ಸಂಕ್ಷಿಪ್ತ ಕವರೇಜ್ ಅನ್ನು ಎನ್‌ಸಿಇಆರ್‌ಟಿ ಪುಸ್ತಕಗಳು ನೀಡುತ್ತವೆ" ಎಂದು ಕರಿಯರ್ ಲಾಂಚರ್ ವರದಿ ಹೇಳುತ್ತದೆ.


ಎನ್ಸಿಇಆರ್ಟಿ ಪುಸ್ತಕಗಳನ್ನು ಉಚಿತವಾಗಿ ಈ ವೆಬ್ಸೈಟ್ ಗಳಿಂದ ಡೌನ್ಲೋಡ್ ಮಾಡಿಕೊಳ್ಳಿ..


https://ncert.nic.in/


ಇಲ್ಲಿ ನೀವು 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಠ್ಯಪುಸ್ತಕಗಳ ಉಚಿತ ಇ-ಪುಸ್ತಕಗಳನ್ನು ಪಡೆಯಬಹುದು.


ಇದನ್ನೂ ಓದಿ: ಮಾಸಿಕ ವೇತನ 1 ಲಕ್ಷ, ಬೆಂಗಳೂರಿನಲ್ಲಿ ಉದ್ಯೋಗ, ಇಂದೇ ಅರ್ಜಿ ಸಲ್ಲಿಸಿ


www.epathshala.nic.in


ಈ ವೆಬ್‌ಸೈಟ್ ನಲ್ಲಿ ನೀವು ಎಲ್ಲಾ ಪಠ್ಯಪುಸ್ತಕಗಳನ್ನು ಉಚಿತವಾಗಿ ಪಡೆಯಬಹುದು.


www.cbse.nic.in


ಎನ್‌ಸಿಇಆರ್‌ಟಿ ಪ್ರಕಟಿಸಿದ ಪುಸ್ತಕಗಳು ಈ ವೆಬ್‌ಸೈಟ್ ನಲ್ಲಿ ಉಚಿತ ಡೌನ್ಲೋಡ್ ಗೆ ಲಭ್ಯವಿದೆ.

Published by:Sandhya M
First published: