• Home
 • »
 • News
 • »
 • education
 • »
 • Scholarships: 12ನೇ ತರಗತಿ ಪಾಸ್​ ಆಗಿದ್ರೆ ​ಸಾಕು, 19 ಸಾವಿರ ಸ್ಕಾಲರ್​​ ಶಿಪ್ ಪಡೆಯಬಹುದು

Scholarships: 12ನೇ ತರಗತಿ ಪಾಸ್​ ಆಗಿದ್ರೆ ​ಸಾಕು, 19 ಸಾವಿರ ಸ್ಕಾಲರ್​​ ಶಿಪ್ ಪಡೆಯಬಹುದು

ಅಪ್ಲೈ ಮಾಡಿ

ಅಪ್ಲೈ ಮಾಡಿ

ಹಣದ ಕಾರಣದಿಂದ ಆರ್ಥಿಕವಾಗಿ ಹಿಂದುಳಿದು ಶಿಕ್ಷಣದಿಂದ ವಂಚಿತರಾದ ಮಕ್ಕಳಿಗೆ 3 ವರ್ಷಗಳವರೆಗೆ ಈ ವಿದ್ಯಾರ್ಥಿ ವೇತನ ಬೆಂಬಲ ನೀಡುತ್ತದೆ. 

 • News18 Kannada
 • Last Updated :
 • Karnataka, India
 • Share this:

ವಿದ್ಯಾರ್ಥಿಗಳಿಗೆ ಆರ್ಥಿಕವಾಗಿ (Economic) ಬೆಂಬಲ ನೀಡುವ ಸಲುವಾಗಿ ಈ ವಿದ್ಯಾರ್ಥಿ ವೇತನ ನೀಡಲಾಗುತ್ತದೆ. ಅದರಂತೆಯೇ ಹೆಲ್ಪ್ ಒನ್  ಸ್ಕಾಲರ್‌ಶಿಪ್ ಪ್ರೋಗ್ರಾಂ 2022 (Helf one Scholarship Program) ಕೂಡಾ ವಿದ್ಯಾರ್ಥಿಗಳಿಗೆ ಸಹಾಯವಾಗಲೆಂದು ಈ ಯೋಜನೆಯನ್ನು ಜಾರಿಗೆ ತಂದಿದೆ.  ಸಾಂಕ್ರಾಮಿಕ ಸಮಯದಲ್ಲಿ (Time) ಕೆಲ ಕುಟುಂಬಗಳು ಬಿಕ್ಕಟ್ಟಿನಲ್ಲಿ ಸಿಲುಕಿಕೊಂಡಿತ್ತು ತಮ್ಮ ಮಕ್ಕಳ ಶಿಕ್ಷಣದಲ್ಲಿ (Education) ಹೂಡಿಕೆ ಮಾಡಲು ಸಾಧ್ಯವಾಗದ ಸಂದರ್ಭ ಎದುರಾಗಿದೆ ಅದಕ್ಕಾಗಿ ಈ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ. 

ವಿದ್ಯಾರ್ಥಿ ವೇತನಹೆಲ್ಪ್ ಒನ್ ಸ್ಕಾಲರ್‌ಶಿಪ್
ಮೊತ್ತ19 ಸಾವಿರ
ಆರಂಭ ದಿನಾಂಕ01/11/2022
ಕೊನೆ ದಿನಾಂಕ30/11/202
ಪ್ರಯೋಜನಉನ್ನತ ಶಿಕ್ಷಣಕ್ಕೆ ಸಹಾಯವಾಗಲಿದೆ

ಇದು ಯಾವುದೆ ಜಾತಿ ಅಥವಾ ಲಿಂಗಾಧಾರಿತ ವಿದ್ಯಾರ್ಥಿ ವೇತನವಲ್ಲ. ಯಾರು ಬೇಕಾದರೂ ಅಪ್ಲೈ ಮಾಡಬಹುದು. ಹಣದ ಕಾರಣದಿಂದ ಆರ್ಥಿಕವಾಗಿ ಹಿಂದುಳಿದು ಶಿ ಕ್ಷಣದಿಂದ ವಂಚಿತರಾದ ಮಕ್ಕಳಿಗೆ 3 ವರ್ಷಗಳವರೆಗೆ ಈ ವಿದ್ಯಾರ್ಥಿ ವೇತನ ಬೆಂಬಲ ನೀಡುತ್ತದೆ.  ಈ ಮೇಲೆ ನೀಡಿರುವ ಮಾಹಿತಿಯಂತೆ ನೀವು ಸ್ಕಾಲರ್ಶಿಪ್​ ಪಡೆಯುತ್ತೀರಿ. ಅರ್ಜಿ ಸಲ್ಲಿಸಲು ನೀಡಿರುವ ಕೊನೆಯದಿನದ ಒಳಗಾಗಿ ಅರ್ಜಿ ಸಲ್ಲಿಸಿ ವಿದ್ಯಾರ್ಥಿ ವೇತನ ನಿಮ್ಮದಾಗಿಸಿಕೊಳ್ಳಿ. 


ಇದನ್ನೂ ಓದಿ: ವೃತ್ತಿ ಜೀವನಕ್ಕೆ ಇಂಟರ್ನ್​ಶಿಪ್ ಎಷ್ಟು ಸಹಕಾರಿ? ಇಲ್ಲಿದೆ ಮಾಹಿತಿ


1. ಪ್ರಾರಂಭ ದಿನಾಂಕ: 01/11/2022
2. ಕೊನೆಯ ದಿನಾಂಕ: 30/11/202


ಈ ವಿದ್ಯಾರ್ಥಿ ವೇತನ ಪಡೆಯಲು ಇರಬೇಕಾದ ಅರ್ಹತಾ ಮಾನದಂಡ


 1. 12 ನೇ ತರಗತಿಯಲ್ಲಿ ಕನಿಷ್ಠ 35% ಅಥವಾ ಡಿಪ್ಲೊಮಾದಲ್ಲಿ ಕನಿಷ್ಠ 35% ಅಂದರೆ ಪಾಸ್ ಆಗಿರಬೇಕು

 2. ಲಿಂಗ: ಗಂಡು, ಹೆಣ್ಣು, ಇತರೆ
  3. ಕುಟುಂಬದ ಆದಾಯ 5ಲಕ್ಷಕ್ಕಿಂತ ಕಡಿಮೆ ಇರುವ ವಿದ್ಯಾರ್ಥಿಗೆ ಮಾತ್ರ ಯೋಜನೆ ಲಭ್ಯವಿದೆ. 


ವಿದ್ಯಾರ್ಥಿ ವೇತನದ ಒಟ್ಟೂ ಮೊತ್ತ
ವಿದ್ಯಾರ್ಥಿಗಳು ವರ್ಷಕ್ಕೆ ರೂ.19,000 ವಿದ್ಯಾರ್ಥಿವೇತನವನ್ನು ಪಡೆಯುತ್ತಾರೆ.


ಅರ್ಜಿಸಲ್ಲಿಸಲು ಬೇಕಾಗಿರುವ ಅಗತ್ಯ ದಾಖಲೆಗಳು
1. ಅರ್ಜಿದಾರರ ಫೋಟೋ
2. ಗುರುತಿನ ಆಧಾರ
3. ವಿಳಾಸದ ಪುರಾವೆ
4. ಆದಾಯದ ಪುರಾವೆ
5. ಫಲಾನುಭವಿ ಬ್ಯಾಂಕ್ ಪಾಸ್‌ಬುಕ್ ಅಥವಾ ಚೆಕ್ ಮಾಹಿತಿ ತರಬೇಕು
6. ಪ್ರವೇಶದ ಪ್ರಸ್ತುತ ಪುರಾವೆ - ಪ್ರವೇಶ ಪತ್ರ / ಸಂಸ್ಥೆಯಿಂದ ಬೋನಾಫೈಡ್ ಪ್ರಮಾಣಪತ್ರ / ಶಾಲಾ ಶುಲ್ಕ ರಶೀದಿ
7. ಇತ್ತೀಚಿನ ಕಾಲೇಜು ಅಂಕಪಟ್ಟಿಗಳು (ಮೊದಲ ವರ್ಷದ ವಿದ್ಯಾರ್ಥಿಗಳನ್ನು ಹೊರತುಪಡಿಸಿ)
8. ಬಿಕ್ಕಟ್ಟಿನ ಪುರಾವೆ - ಮರಣ ಪ್ರಮಾಣಪತ್ರ / ವೈದ್ಯಕೀಯ ವರದಿ
ಆಸ್ಪತ್ರೆಗೆ ದಾಖಲಾದ/ಮೃತರೊಂದಿಗಿನ ಸಂಬಂಧದ ಪುರಾವೆ (ಜನನ ಪ್ರಮಾಣಪತ್ರ/ ಪಡಿತರ ಚೀಟಿ/ ಶಾಲಾ ಪ್ರಮಾಣಪತ್ರ)
9. ಅಪ್‌ಲೋಡ್ ಮಾಡಿದ ಎಲ್ಲಾ ದಾಖಲೆಗಳು ಸ್ಪಷ್ಟವಾಗಿರಬೇಕು ಮತ್ತು .jpeg .png ಫೈಲ್‌ನಲ್ಲಿ ಮಾತ್ರ ಇರಬೇಕು
10. ಪ್ಯಾನ್ ಸಂಖ್ಯೆ / ನಿವಾಸ ಪ್ರಮಾಣಪತ್ರ


ಇದನ್ನೂ ಓದಿ: ಪಿಯುಸಿ ಆದ ನಂತರ ಮುಂದೇನು? ಚಿಂತೆ ಬೇಡ ಈ ಕೋರ್ಸ್​ ಮಾಡಿ


ವಿದ್ಯಾರ್ಥಿ ವೇತನಕ್ಕೆ ಅಪ್ಲೈ ಮಾಡುವುದು ಹೀಗೆ


 ಇಲ್ಲಿ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ. - ಇಲ್ಲಿ ಕ್ಲಿಕ್ ಮಾಡಿ
2. ನಿಮ್ಮ ಖಾತೆಯನ್ನು ನೋಂದಾಯಿಸಿ.
3. ಅರ್ಜಿ ನಮೂನೆಯನ್ನು ಭರ್ತಿ ಮಾಡಿ.
4. ಮುಂದಿನ ಉಲ್ಲೇಖಕ್ಕಾಗಿ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿ.


ಇದು ಯಾವುದೆ ಜಾತಿ ಅಥವಾ ಲಿಂಗಾಧಾರಿತ ವಿದ್ಯಾರ್ಥಿ ವೇತನವಲ್ಲ. ಯಾರು ಬೇಕಾದರೂ ಅಪ್ಲೈ ಮಾಡಬಹುದು. ಆದರೆ ಈಗ ಪದವಿ ಶಿಕ್ಷಣ ಪಡೆಯುವವರಾಗಿದ್ದರೆ ಸಾಕು. 12 ನೇ ತರಗತಿ ಅಥವಾ ಡಿಪ್ಲೋಮಾ ಮಾಡಿರುವ ವಿದ್ಯಾರ್ಥಿಗಳು ಇದಕ್ಕೆ ಅಪ್ಲೈ ಮಾಡಬಹುದು. ಆನ್​​ಲೈನ್ ಮೂಲಕ ಅರ್ಜಿ ಸಲ್ಲಿಸುವ ಸೌಲಭ್ಯ ಇರುವುದರಿಂದ ಆದಷ್ಟು ಬೇಗ ಅಪ್ಲೈ ಮಾಡಿ ಇದರ ಪ್ರಯೋಜನ ಪಡೆದುಕೊಳ್ಳಿ.

First published: