• Home
  • »
  • News
  • »
  • education
  • »
  • Brain Games: ನಿಮ್ಮ ಮಕ್ಕಳಿಗೆ ಈ ಆ್ಯಪ್​ ಡೌನ್ಲೋಡ್​ ಮಾಡಿಕೊಡಿ, ಬುದ್ಧಿ ಚುರುಕಾಗುತ್ತೆ!

Brain Games: ನಿಮ್ಮ ಮಕ್ಕಳಿಗೆ ಈ ಆ್ಯಪ್​ ಡೌನ್ಲೋಡ್​ ಮಾಡಿಕೊಡಿ, ಬುದ್ಧಿ ಚುರುಕಾಗುತ್ತೆ!

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಮೆದುಳನ್ನು ಚುರುಕುಗೊಳಿಸಲು ಮತ್ತು ಉತ್ತೇಜಿಸಲು ಈ ಅಪ್ಲಿಕೇಶನ್ ನಿಮಗೆ ಸಹಕಾರಿ. ನಿಮ್ಮ ಮಕ್ಕಳಿಗೆ ಈ ರೀತಿ ಆಡಲು ಬಿಡಿ.

  • Share this:

ಮೆದುಳಿಗೆ (Mind) ಚುರುಕು ಮುಟ್ಟಿಸುವ ಈ ಆಟಗಳನ್ನು ನೀವು ಆಡಿದರೆ ಚುರುಕಾಗುತ್ತೀರಿ ಮತ್ತು ಈ ಆಟಗಳು ನಿಮ್ಮ ಜಾಣತವನ್ನು ಹೆಚ್ಚು ಮಾಡುತ್ತದೆ. ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ಮೊಬೈಲ್ (Mobile) ಬಳಕೆ ಹೆಚ್ಚಾಗಿದ್ದು ಮಕ್ಕಳು ಯಾವಾಗಲು ಮೊಬೈಲ್  ಗೇಮ್ (Game)​ ಆಡಲು ಬಯಸುತ್ತಾರೆ. ಆದ್ದರಿಂದ ಅವರಿಗೆ ಈ ಕೆಳಗೆ ನೀಡಲಾದ ಗೇಮಿಂಗ್ ಆ್ಯಪ್ (Gaming App) ನೀಡಿ ಅವರು ಮೊಬೈಲ್ ನೋಡುತ್ತಲೇ ತಮ್ಮ ಬುದ್ಧಿ ಚುರುಕುಗೊಳಿಸಿಕೊಳ್ಳಬಹುದು. 


1. ಲುಮೋಸಿಟಿ ಬ್ರೇನ್ ಟ್ರೈನರ್
ಮೆದುಳನ್ನು ಚುರುಕುಗೊಳಿಸಲು ಮತ್ತು ಉತ್ತೇಜಿಸಲು ಈ ಅಪ್ಲಿಕೇಶನ್ ನಿಮಗೆ ಹಲವಾರು ಆಯ್ಕೆಗಳನ್ನು ತಿಳಿಸುತ್ತದೆ. ನಿಮ್ಮ ಮೆದುಳು ಕ್ರಿಯಾತ್ಮಕ ಅಂಗವಾಗಿದ್ದು ಅದಕ್ಕೆ ನಾವು ಯಾವುದೇ ಹಂತದಲ್ಲಿ ಬೇಕಾದರೂ ತರಬೇತಿ ನೀಡಬಹುದು. ಇದು ನಮ್ಮ ಬೆಳವಣಿಗೆಯ ಹಂತಗಳಲ್ಲಿ ಬದಲಾಗುವ ಕ್ರಿಯಾತ್ಮಕ ಅಂಗವಾಗಿದೆ. 


2. ಬ್ರಿಲಿಯಂಟ್
ಗಣಿತ ಹಾಗೂ ವಿಜ್ಷಾನವನ್ನು ನಿಮಗೆ ಕಠಿಣ ಎನಿಸಬಹುದು ಹಾಗಾಗಿ ಅದನ್ನು ಈ ಗೇಮ್ ಆಡುವ ಮೂಲಕ ಸುಭವಾಗಿಸಿಕೊಳ್ಳಬಹುದು. ಇದರಲ್ಲಿ ರಸಪ್ರಶ್ನೆ ಕೇಳಲಾಗುತ್ತದೆ. ಅದಕ್ಕೆ ತಕ್ಕ ಉತ್ತರವನ್ನೂ ಸಹ ಅವರೇ ನೀಡುತ್ತಾರೆ. ನೀವು ಕಲಿತ ವಿಷಯಗಳನ್ನೇ ಮತ್ತೆ ರಿಫ್ರೇಶ್ ಆಗಿಸಲು ಈ ಆ್ಯಪ್ ಖಂಡಿತ ಸಹಾಯ ಮಾಡುತ್ತದೆ.


ಇದನ್ನೂ ಓದಿ: ಪಿಯುಸಿ ಆದ ನಂತರ ಮುಂದೇನು? ಚಿಂತೆ ಬೇಡ ಈ ಕೋರ್ಸ್​ ಮಾಡಿ


3. ಟೆಡ್
ಇದು ಆಯಾ ಕ್ಷೇತ್ರಗಳಲ್ಲಿ ಪ್ರಮುಖ ವ್ಯಕ್ತಿಗಳು ನೀಡಿದ ಉಪನ್ಯಾಸಗಳ ವೀಡಿಯೊ ಸರಣಿಯಾಗಿದೆ. ನಿರೂಪಕರಲ್ಲಿ ಯುವ ಉದ್ಯಮಿಗಳು, ವಿಜ್ಞಾನಿಗಳು, CEO ಗಳು, ಎಲ್ಲಾ ರೀತಿಯ ಕಲಾವಿದರು, ಶಿಕ್ಷಕರು ಮತ್ತು ಸಾಕಷ್ಟು ಡಾಕ್ಟರೇಟ್‌ಗಳು ನೀಡಿದ ಉಪನ್ಯಾಸಗಳು ಇದರಲ್ಲಿ ದೊರೆಯುತ್ತವೆ. ಈ ವೀಡಿಯೊಗಳನ್ನು ನೋಡುವುದು ನಿಮ್ಮ ಜ್ಞಾನದ ವ್ಯಾಪ್ತಿಯನ್ನು ತೊಡಗಿಸಿಕೊಳ್ಳುವ ಮತ್ತು ಸೌಹಾರ್ದಯುತ ರೀತಿಯಲ್ಲಿ ನಿಮ್ಮ ಬುದ್ದಿ ಹೆಚ್ಚಿಸಲು ಉತ್ತಮ ಮಾರ್ಗವಾಗಿದೆ.


4. ಡ್ಯುಲಿಂಗೋ
ಎರಡು ಅಥವಾ ಎರಡಕ್ಕಿಂತ ಹೆಚ್ಚು ಭಾಷೆಯನ್ನು ಕಲಿಯಲು ನೀವು ಆಸೆ ಪಡುತ್ತೀರಿ ಎಂದರೆ ಈ ಆ್ಯಪ್ ಮೂಲಕ ನೀವು ಕಲಿಯಬಹುದು. ಇಲ್ಲಿ ಹಲವು ಭಾಷೆಗಳನ್ನು ಕಲಿಯುವ ಅವಕಾಶ ನಿಮಗಿದೆ. ಸುಲಭ ಹಾಗೂ ಸರಳ ವಿಧಾನದಲ್ಲಿ ನಿಮಗೆ ಹಲವು ಭಾಷೆ ಕಲಿಸಲಾಗುತ್ತದೆ. ಮೋಜಿನ ಪ್ರಶ್ನೆಗಳನ್ನು ಕೇಳುವ ಮೂಲಕ ನಿಮ್ಮನ್ನು ರಂಜಿಸಲಾಗುತ್ತದೆ. ಅದಕ್ಕೆ ತಕ್ಕ ಉತ್ತರ ನೀಡುತ್ತಾ ಹೋದಂತೆ ನಿಮಗೆ ಭಾಷಾ ಜ್ಷಾನ ಹೆಚ್ಚುತ್ತದೆ.


5. ವೆಸ್ಟರ್ನ್ ಫಿಲಾಸಫರ್ಸ್
ಇದರಲ್ಲಿ ನೀವು ಹಲವವಾರು ತರದ ಪುಸ್ತಕಗಳನ್ನು ಓದಬಹುದು. ಇತಿಹಾಸದ ಕುರಿತು ಆಸಕ್ತಿ ಹೊಂದಿರುವವರಿಗೆ ಈ ಆ್ಯಪ್ ಒಂದು ಉತ್ತಮ ಅವಕಾಶವಾಗಿದೆ. ಹಲವಾರು ತತ್ವಜ್ಷಾನಿಗಳ ಪುಸ್ತಕಗಳು ಮತ್ತು ಆಸಕ್ತಿದಾಯಕ ಹಲವು ವಿಷಯಗಳನ್ನು ನೀವು ಇದರಲ್ಲಿ ಕಾಣಬಹುದಾಗಿದೆ.


ಇದನ್ನೂ ಓದಿ: ಗಣಿತದ ಸೂತ್ರ ನೆನಪಾಗುತ್ತಿಲ್ಲವೇ? ಹಾಗಾದ್ರೆ ಹೀಗೆ ಮಾಡಿ


 6.ಸ್ಕೈವ್ಯೂ
ನಿಮ್ಮ ಶಬ್ಧಕೋಶವನ್ನು ಹೆಚ್ಚಿಸಲು ಮತ್ತು ಹಲವು ಪದಗಳ ಅರ್ಥ ತಿಳಿಯಲು ಈ ಆ್ಯಪ್ ಉತ್ತಮವಾಗಿದೆ. ಎಲಿವೇಟ್ ಎನ್ನುವುದು ನಿಮ್ಮ ಸಾಮರ್ಥ್ಯ ಮತ್ತು ದೌರ್ಬಲ್ಯಗಳ ಆಧಾರದ ಮೇಲೆ ಸರಿಹೊಂದಿಸುವ ಮೆದುಳಿನ ತರಬೇತಿ ಅಪ್ಲಿಕೇಶನ್ ಆಗಿದೆ. ಉತ್ತಮ ಸಂವಹನ ಸಾಮರ್ಥ್ಯ ಹೊಂದಲು ಈ ಆ್ಯಪ್ ಉತ್ತಮವಾಗಿದೆ.


7. ಎಲಿವೇಟ್ - ಬ್ರೈನ್ ಟ್ರೈನಿಂಗ್
ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ Google ಉತ್ತಮ ಸಂಪನ್ಮೂಲವಾಗಿದ್ದರೂ ಸಹ ಪ್ರಶ್ನೆಗಳನ್ನು ಕೇಳದೆಯೇ ಚುರುಕಾಗಲು ಕ್ಯೂರಿಯಾಸಿಟಿ ಹೆಚ್ಚಿಸಲಿ ಈ ಆ್ಯಪ್ ಉತ್ತಮ ಮಾರ್ಗವಾಗಿದೆ. ಆಸಕ್ತಿಯನ್ನು ಹುಟ್ಟುಹಾಕುವ ಲೇಖನಗಳನ್ನು ನಿಮಗೆ ಇದರಲ್ಲಿ ನೀಡಲಾಗುತ್ತದೆ.

First published: