• Home
  • »
  • News
  • »
  • education
  • »
  • Education: ಭಾರತದ ಖಾಸಗಿ ಶಿಕ್ಷಣ ಸಂಸ್ಥೆಗಳಿಗಿಂತ ಅಗ್ಗವಾಗಿದೆ ಫ್ರಾನ್ಸ್‌ನ ಉನ್ನತ ಶಿಕ್ಷಣ

Education: ಭಾರತದ ಖಾಸಗಿ ಶಿಕ್ಷಣ ಸಂಸ್ಥೆಗಳಿಗಿಂತ ಅಗ್ಗವಾಗಿದೆ ಫ್ರಾನ್ಸ್‌ನ ಉನ್ನತ ಶಿಕ್ಷಣ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಯುರೋಪ್‌ನಲ್ಲಿ ಉನ್ನತ ವ್ಯಾಸಂಗಕ್ಕೆ ಭಾರತೀಯರಿಗೆ ಹೆಚ್ಚು ಸೂಕ್ತವಾಗುವ ದೇಶವನ್ನಾಗಿ ಫ್ರಾನ್ಸ್‌ ಅನ್ನು ಸಿದ್ದಗೊಳಿಸುತ್ತಿದ್ದಾರೆ.

  • Share this:

ಪ್ರತಿಯೊಬ್ಬ ಭಾರತೀಯ ( Indian) ವಿದ್ಯಾರ್ಥಿಯ ಕನಸೆಂದರೆ ಅದುವೇ ವಿದೇಶದಲ್ಲಿ ಉನ್ನತ ಶಿಕ್ಷಣ (Education) ಪಡೆಯುವುದು. ಇದಕ್ಕೆ ಸಾಕಷ್ಟು ವಿದ್ಯಾರ್ಥಿಗಳು (Students) ಹಗಲು ರಾತ್ರಿ ಕಷ್ಟ ಪಟ್ಟು ವಿದೇಶದಲ್ಲಿರುವ ವಿಶ್ವವಿದ್ಯಾಲಯದಲ್ಲಿ ಸೀಟ್‌ ಗಿಟ್ಟಿಸಿಕೊಳ್ಳಲು ಹರಸಾಹಸವನ್ನೆ ಪಡುತ್ತಾರೆ. ಅದರಲ್ಲೂ ಯುರೋಪ್‌ ದೇಶದ ವಿಶ್ವವಿದ್ಯಾಲಯಗಳು (University) ಎಂದ್ರೆ ಸಾಕು ನಮ್ಮ ಭಾರತೀಯ ವಿದ್ಯಾರ್ಥಿಗಳು ಕಣ್ಣರಳಿಸಿ ನೋಡುತ್ತಾರೆ.


ಆದರೆ ನಮ್ಮ ವಿದ್ಯಾರ್ಥಿಗಳು ಅಲ್ಲಿ ಓದಬೇಕೆಂದು ಹೇಗೆ ಹಪಹಪಿಸುತ್ತಾರೋ ಹಾಗೆಯೇ ಆ ಯುರೋಪ್‌ ರಾಷ್ಟ್ರಗಳು ತಮ್ಮ ದೇಶಗಳಲ್ಲಿ ಓದಲು ಭಾರತೀಯ ವಿದ್ಯಾರ್ಥಿಗಳನ್ನು ಓಲೈಸುತ್ತಿವೆ. ಈ ಪಟ್ಟಿಯಲ್ಲಿ ಫ್ರಾನ್ಸ್ ದೇಶವು ಅಗ್ರಸ್ಥಾನದಲ್ಲಿದೆ. ಯುರೋಪ್‌ನಲ್ಲಿ ಉನ್ನತ ವ್ಯಾಸಂಗಕ್ಕೆ ಭಾರತೀಯರಿಗೆ ಹೆಚ್ಚು ಸೂಕ್ತವಾಗುವ ದೇಶವನ್ನಾಗಿ ಫ್ರಾನ್ಸ್‌ ಅನ್ನು ಸಿದ್ದಗೊಳಿಸುತ್ತಿದ್ದಾರೆ. ಹೆಚ್ಚಿನ ವಿದ್ಯಾರ್ಥಿಗಳು ನಮ್ಮ ದೇಶಕ್ಕೆ ಬರಲೆಂದು ಅಲ್ಲಿನ ಫ್ರೆಂಚ್‌ ಶಿಕ್ಷಕರು ವಿದ್ಯಾರ್ಥಿಗಳಿಗೆ ಇಂಗ್ಲಿಷ್‌ನಲ್ಲಿಯೇ ಪಾಠಗಳನ್ನು ಕಲಿಸಲು ಸಿದ್ಧರಿದ್ದಾರೆ ಎಂಬುದು ಆಶ್ವರ್ಯ ತರುವ ಸಂಗತಿ.


ಇದರ ಕುರಿತು ಅಧ್ಯಯನ ಮಾಡಲೆಂದು ಅನೇಕ ಕಾರ್ಯಕ್ರಮಗಳು ಆಗಾಗ ನಡೆಯುತ್ತಲೇ ಇರುತ್ತವೆ. ಅದರಲ್ಲಿ ದೆಹಲಿಯಲ್ಲಿ ಇದೇ ಭಾನುವಾರದಂದು 'ಚೂಸ್ ಫ್ರಾನ್ಸ್ ಟೂರ್ 2022' ಎಂಬ ಕಾರ್ಯಕ್ರಮ ಮುಕ್ತಾಯವಾಯಿತು. ಇದರಲ್ಲಿ 37 ಪ್ರಮುಖ ವಿಶ್ವವಿದ್ಯಾನಿಲಯಗಳು, ಗ್ರಾಂಡೆಸ್ ಎಕೋಲ್ಸ್ ಮತ್ತು ಕಾಲೇಜುಗಳ ಪ್ರತಿನಿಧಿಗಳು ವಿದ್ಯಾರ್ಥಿಗಳ ಅಗತ್ಯತೆಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಅವರ ಆಕಾಂಕ್ಷೆಗಳಿಗೆ ಸೂಕ್ತವಾದ ಮಾಹಿತಿಗಳನ್ನು ನೀಡಲು ದೇಶದ ನಾಲ್ಕು ಮಹಾನಗರಗಳಿಗೆ ಪ್ರಯಾಣಿಸಿದ್ದಾರೆ. ಅಲ್ಲಿಗೆ ಹೋಗಿ ವಿದ್ಯಾರ್ಥಿಗಳ ಅಗತ್ಯತೆಗಳ ತಿಳಿದುಕೊಳ್ಳುವ ಉದ್ದೇಶ ಹೊಂದಿದ್ದಾರೆ.


ಇದನ್ನೂ ಓದಿ: ಗೂಗಲ್​ನಲ್ಲಿದೆ ಉದ್ಯೋಗ! ಪದವಿ ಪೂರ್ಣಗೊಳಿಸಿದವರಿಗೆ ಅವಕಾಶ


ಈ ಕಲಿಕಾ ಕೇಂದ್ರಗಳು 72 ಪ್ರಶಸ್ತಿಗಳೊಂದಿಗೆ ವಿಶ್ವದ ಅತ್ಯುತ್ತಮ ಶಿಕ್ಷಣ ಕೇಂದ್ರಗಳಾಗಿವೆ. ಇಲ್ಲಿನ ಪಿಎಚ್‌ಡಿ ಕಾರ್ಯಕ್ರಮಗಳಿಗೆ ದಾಖಲಾದ 42 ಪ್ರತಿಶತ ಸ್ಕಾಲರ್ಸ್‌ಗಳು ವಿದೇಶಿಯರಾಗಿದ್ದಾರೆ.


ಇಂಡೋ-ಫ್ರೆಂಚ್ ಅಂತರಾಷ್ಟ್ರೀಯ ಸಂಬಂಧ


ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಉತ್ತಮ ಸಂಬಂಧವನ್ನು ಗಮನಿಸಿದರೆ, ಎರಡು ರಾಷ್ಟ್ರಗಳ ನಡುವೆ ಬೆಳೆಯುತ್ತಿರುವ ಬಾಂಧವ್ಯವು ಸ್ಪಷ್ಟವಾಗುತ್ತದೆ.


“2025 ರ ವೇಳೆಗೆ ಫ್ರಾನ್ಸ್‌ನಲ್ಲಿ 20,000 ಭಾರತೀಯ ವಿದ್ಯಾರ್ಥಿಗಳನ್ನು ಅಧ್ಯಯನಕ್ಕೆ ಕರೆ ತರುವ ಗುರಿಯನ್ನು ಹೊಂದಿದ್ದೇವೆ. ”ಎಂದು ಫ್ರಾನ್ಸ್‌ನ ಯುರೋಪ್ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವೆ ಕ್ಯಾಥರೀನ್ ಕೊಲೊನ್ನಾ ಅವರು ದೆಹಲಿಯ ಶ್ರೀರಾಮ್ ಮಹಿಳಾ ಕಾಲೇಜಿನ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಹೇಳಿದರು.


ಇದನ್ನೂ ಓದಿ: ಸೈನಿಕ ಕಲ್ಯಾಣ ಇಲಾಖೆಯಲ್ಲಿ ಎಸ್​ಡಿಎ ಹುದ್ದೆ ನೇಮಕಾತಿ


ಫ್ರಾನ್ಸ್‌ನಲ್ಲಿ ಉದ್ಯೋಗದ ಭರವಸೆ


ಭಾರತದಲ್ಲಿರುವ ಫ್ರಾನ್ಸ್ ರಾಯಭಾರಿ ಎಮ್ಯಾನುಯೆಲ್ ಲೆನೈನ್ ಅವರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದಾಗ, ಫ್ರಾನ್ಸ್‌ನಲ್ಲಿ ಉನ್ನತ ಶಿಕ್ಷಣದ ಉತ್ತಮ ಅವಕಾಶವನ್ನು ಬಳಸಿಕೊಳ್ಳುವಂತೆ ಪ್ರೋತ್ಸಾಹಿಸಿದರು.


ಕಾಲೇಜಿನಲ್ಲಿ ಎಲ್ಲಾ ಕೋರ್ಸ್‌ಗಳನ್ನು 75% ರಷ್ಟು ಇಂಗ್ಲಿಷ್‌ನಲ್ಲಿ ಕಲಿಸಲಾಗುತ್ತದೆ. ವಿದ್ಯಾರ್ಥಿಗಳು ತಮ್ಮ ಉನ್ನತ ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ ಕೆಲಸವನ್ನು ಸಹ ಅಲ್ಲಿಯೇ ಮಾಡಬಹುದು.


ಫ್ರಾನ್ಸ್‌ನಲ್ಲಿನ ಕೆಲಸದ ಅನುಭವವು ಭಾರತೀಯ ವಿದ್ಯಾರ್ಥಿಗಳಿಗೆ ಭಾರತದಲ್ಲಿ ಕೆಲಸ ಮಾಡುವ ಫ್ರೆಂಚ್ ಕಂಪನಿಗಳಲ್ಲಿ ಉದ್ಯೋಗಗಳನ್ನು ಹುಡುಕಲು ಅನುಕೂಲವನ್ನು ಮಾಡಿ ಕೊಡುತ್ತದೆ.


ಭಾರತದಲ್ಲಿ ಫ್ರೆಂಚ್ ಅಥವಾ ಫ್ರೆಂಚ್ ಉದ್ಯಮದ ಸಹಯೋಗದೊಂದಿಗೆ 1000 ಕ್ಕೂ ಹೆಚ್ಚು ಕಂಪನಿಗಳು ಕಾರ್ಯನಿರ್ವಹಿಸುತ್ತಿವೆ. ಅದರಲ್ಲಿ ಪ್ರಮುಖವಾಗಿ Airbus, Renault, Decathlon, L'Oréal ನಂತಹ ಕಂಪನಿಗಳು ಇವೆ.


ಈ ಕಂಪನಿಗಳು ಫ್ರಾನ್ಸ್‌ನಲ್ಲಿ ಅಧ್ಯಯನ ಮಾಡಿದ ವಿದ್ಯಾರ್ಥಿಗಳಿಗೆ ಸಾಂಸ್ಕೃತಿಕವಾಗಿ ಹೊಂದಾಣಿಕೆಯಾಗಲು ಉದ್ಯೋಗಗಳನ್ನು ನೀಡಲು ಒಲವು ತೋರುತ್ತವೆ.


ಭಾರತೀಯ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್‌ಗಳು


ಭಾರತದಲ್ಲಿನ ಕ್ಯಾಂಪಸ್ ಫ್ರಾನ್ಸ್‌ನ ರಾಷ್ಟ್ರೀಯ ಸಂಯೋಜಕ ಮಾರ್ಗೊ ಗಿರಾರ್ಡ್ ಅವರು “500 ಭಾರತೀಯ ವಿದ್ಯಾರ್ಥಿಗಳಿಗೆ ಮಾತ್ರ ವಿದ್ಯಾರ್ಥಿವೇತನಕ್ಕಾಗಿ 11 ಕೋಟಿಗಳನ್ನು ಮೀಸಲಿಡಲಾಗಿದೆ. ಹೆಚ್ಚುವರಿಯಾಗಿ, ಸಾಮಾಜಿಕ ಭದ್ರತೆ, ಸಬ್ಸಿಡಿ ಜೀವನ ಮತ್ತು ಆರೋಗ್ಯ ಪ್ರಯೋಜನಗಳಂತಹ ಇತರ ಪ್ರಯೋಜನಗಳನ್ನು ಸಹ ನೀಡಲಾಗುತ್ತದೆ” ಎಂದು ಹೇಳಿದ್ದಾರೆ.

First published: