• Home
  • »
  • News
  • »
  • education
  • »
  • Ekalavya Scholarship: ಏಕಲವ್ಯ ಸ್ಕಾಲರ್​​ ಶಿಪ್​ಗೆ ಅರ್ಜಿ ಆಹ್ವಾನ, ನೀವೂ ಅಪ್ಲೈ ಮಾಡಿ

Ekalavya Scholarship: ಏಕಲವ್ಯ ಸ್ಕಾಲರ್​​ ಶಿಪ್​ಗೆ ಅರ್ಜಿ ಆಹ್ವಾನ, ನೀವೂ ಅಪ್ಲೈ ಮಾಡಿ

ಅಪ್ಲೈ ಮಾಡಿ

ಅಪ್ಲೈ ಮಾಡಿ

1ನೇ ಆಗಸ್ಟ್ 2022 ರಿಂದ 31ನೇ ಜನವರಿ 2023 ರವರೆಗೆ ಆನ್‌ಲೈನ್ ಅರ್ಜಿಯನ್ನು ಸ್ವೀಕರಿಸಲಾಗುತ್ತದೆ. 

  • News18 Kannada
  • Last Updated :
  • Karnataka, India
  • Share this:

ಏಕಲವ್ಯ ಸ್ಕಾಲರ್‌ಶಿಪ್ (Ekalavya Scholarship 2022) ಬಿಡುಗಡೆ ಮಾಡಲಾಗಿದೆ. ಸ್ನಾತಕೋತ್ತರ ಶಿಕ್ಷಣಕ್ಕೆ ಪ್ರವೇಶ ಪಡೆದ ವಿದ್ಯಾರ್ಥಿಗಳು ಯಾವುದೇ ವಿಷಯದಲ್ಲಿ ಅದಂರೆ ವಾಣಿಜ್ಯ, ವಿಜ್ಞಾನ, ಕಾನೂನು ಮತ್ತು ಆರ್ಟ್ಸ್​ ಪದವಿ (Graduation) ಪೂರ್ಣಗೊಳಿಸಿದ ವಿದ್ಯಾರ್ಥಿಗಳು (Student) ಈ ಸ್ಕಾಲರ್​ಶಿಪ್​ಗೆ ಅಪ್ಲೈ ಮಾಡಬಹುದು. ವಿದ್ಯಾರ್ಥಿ ವೇತನ ಆರಂಭ ದಿನಾಂಕ ಘೋಷಣೆಯಾಗಿದ್ದು, ಅರ್ಹ ಹಾಗೂ ಆಸಕ್ತ (Interested) ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಉನ್ನತ ಶಿಕ್ಷಣ ನಿರ್ದೇಶನಾಲಯವು ಈ ಸ್ಲಾಲರ್​ಶಿಪ್ ನೀಡುತ್ತಿದೆ. 

ವಿದ್ಯಾರ್ಥಿ ವೇತನಏಕಲವ್ಯ ಸ್ಕಾಲರ್‌ಶಿಪ್
ಸಂಸ್ಥೆಉನ್ನತ ಶಿಕ್ಷಣ ನಿರ್ದೇಶನಾಲಯ
ವಿದ್ಯಾರ್ಹತೆಸ್ನಾತಕೋತ್ತರ ಪದವಿಗೆ ಸೇರಿದವರು
ಅಧಿಕೃತ ವೆಬ್​ಸೈಟ್ಇಲ್ಲಿ ಕ್ಲಿಕ್ ಮಾಡಿ

ವಿದ್ಯಾರ್ಹತೆ: ಯಾವುದೇ ವಿಷಯದಲ್ಲಿ ಪದವಿ ಪೂರ್ಣಗೊಳಿಸಿ ಸ್ನಾತಕೋತ್ತರ ಪದವಿಗೆ ಸೇರಿವಾಗಿರಬೇಕು. ಇಂತಹ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ ಮಾಡುವ ಸಲುವಾಗಿ ಈ ವಿದ್ಯಾರ್ಥಿ ವೇತನವನ್ನು ಆರಂಭಿಸಲಾಗಿದೆ. ಅರ್ಹರು ಇದರ ಪ್ರಯೋಜನ ಪಡೆದುಕೊಳ್ಳ ಬೇಕು. 1ನೇ ಆಗಸ್ಟ್ 2022 ರಿಂದ 31ನೇ ಜನವರಿ 2023 ರವರೆಗೆ ಆನ್‌ಲೈನ್ ಅರ್ಜಿಯನ್ನು ಸ್ವೀಕರಿಸಲಾಗುತ್ತದೆ.


ಇದನ್ನೂ ಓದಿ: 487 ಹುದ್ದೆಗಳ ನೇಮಕಾತಿಗೆ ಮುಂದಾದ ಕೆಎಂಎಫ್​​


ವಿವರಗಳು:
ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕಾಗಿ ಧನ ಸಹಾಯ ಮಾಡುವ ಉದ್ದೇಶದಿಂದ ಏಕಲವ್ಯ ಸ್ಕಾಲರ್​​ಶಿಪ್ ಬಿಡುಗಡೆ ಮಾಡಲಾಗಿದೆ. ಆನ್​ಲೈನ್ ಮೂಲಕ ನೀವು ಇದಕ್ಕೆ ಅರ್ಜಿ ಸಲ್ಲಿಸಿ ನೀವೂ ಇದರ ಪ್ರಯೋಜನ ಪಡೆದುಕೊಳ್ಳಬಹುದು.


ಅರ್ಹತಾ ಮಾನದಂಡ:
ಮೆರಿಟ್ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ

ವಿದ್ಯಾರ್ಥಿ ವೇತನ ಮೊತ್ತ
INR 5,000

ಏಕಲವ್ಯ ವಿದ್ಯಾರ್ಥಿವೇತನ



  • ಮುಖಪುಟದಲ್ಲಿ ನೀವೇ ನೋಂದಾಯಿಸಿಕೊಳ್ಳಬೇಕು.

  • ಇದಕ್ಕಾಗಿ ನೀವು ನಿಮ್ಮ ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಮತ್ತು ಇತರ ಸಂಬಂಧಿತ ಮಾಹಿತಿಯನ್ನು ಒದಗಿಸಬೇಕಾಗುತ್ತದೆ.

  • ನೀವು ಪೋಸ್ಟ್ ಮೆಟ್ರಿಕ್ ವಿಭಾಗಕ್ಕೆ ಹೋಗಬೇಕು ಮತ್ತು ಉನ್ನತ ಶಿಕ್ಷಣ ನಿರ್ದೇಶನಾಲಯದ ಮೇಲೆ ಕ್ಲಿಕ್ ಮಾಡಬೇಕು.

  • ಈಗ ನೀವು ಸ್ನಾತಕೋತ್ತರ ಶಿಕ್ಷಣದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನಕ್ಕಾಗಿ ಏಕಲವ್ಯ ವಿದ್ಯಾರ್ಥಿವೇತನದ ಆಯ್ಕೆಯನ್ನು ಸೆಲೆಕ್ಟ್ ಮಾಡಿ

  • ಈ ವಿದ್ಯಾರ್ಥಿವೇತನಕ್ಕೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ನಿಮ್ಮ ಮುಂದೆ
    ಲಾಗಿನ್" ಬಟನ್ ಅನ್ನು ಕ್ಲಿಕ್ ಮಾಡಬೇಕು.

  • ನಿಮ್ಮ ಹೆಸರು, ಪಾಸ್‌ವರ್ಡ್ ಅನ್ನು ನಮೂದಿಸುವ ಮೂಲಕ ನೀವು ಎಲ್ಲಿ ಲಾಗ್ ಇನ್ ಆಗಬೇಕು.

  • ನಂತರ ನೀವು ಲಾಗಿನ್ ಬಟನ್ ಅನ್ನು ಕ್ಲಿಕ್ ಮಾಡಬೇಕು.

  • ಅಲ್ಲಿ ಅದರ ಅರ್ಜಿ ನಮೂನೆಯು ನಿಮ್ಮ ಮುಂದೆ ತೆರೆಯುತ್ತದೆ.

  • ಕೊನೆಯಲ್ಲಿ ನೀವು ಅರ್ಜಿ ನಮೂನೆಯಲ್ಲಿ ಕೋರಿದ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಬೇಕು

  •  ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ನೀಡಬೇಕು.

  • ಒಂದು ಹಾರ್ಡ್​ ಕಾಪಿ ನಿಮ್ಮಬಳಿ ಇರಲಿ
    ಅದರ ಮುದ್ರಣವನ್ನು ನಿಮ್ಮೊಂದಿಗೆ ಇಟ್ಟುಕೊಳ್ಳಬೇಕು.ಮುಂದಿನ ಸಂಪರ್ಕಕ್ಕಾಗಿ ಈ ಸಂಖ್ಯೆಗೆ ಕರೆ ಮಾಡಿ. ಇನ್ನಷ್ಟು ಮಾಹಿತಿ ಪಡೆಯಿರಿ


ಇದನ್ನೂ ಓದಿ: ಪ್ರಸಾರ ಭಾರತಿಯಲ್ಲಿ ಉದ್ಯೋಗ ಬಯಸುವವರಿಗೆ ಇಲ್ಲಿದೆ ಸುವರ್ಣಾವಕಾಶ


ಸಹಾಯವಾಣಿ ಸಂಖ್ಯೆ: 022-49150800


ಮೇಲೆ ನೀಡಿರುವ ಎಲ್ಲಾ ಮಾಹಿತಿಗಳನ್ನು ಸಂಪೂರ್ಣವಾಗಿ ತಿಳಿದುಕೊಳ್ಳಿ. ಈ ಮಾಹಿತಿಯಂತೆ ಅರ್ಜಿ ಸಲ್ಲಿಸಿ ವಿದ್ಯಾರ್ಥಿ ವೇತನ ನಿಮ್ಮದಾಗಿಸಿಕೊಳ್ಳಿ. ಅರ್ಹರು ಇದರ ಪ್ರಯೋಜನ ಪಡೆದುಕೊಳ್ಳ ಬೇಕು. 1ನೇ ಆಗಸ್ಟ್ 2022 ರಿಂದ 31ನೇ ಜನವರಿ 2023 ರವರೆಗೆ ಆನ್‌ಲೈನ್ ಅರ್ಜಿಯನ್ನು ಸ್ವೀಕರಿಸಲಾಗುತ್ತದೆ. ಈ ದಿನಾಂಕಕ್ಕಿಂತ ಮುಂಚಿತವಾಗಿ ಅರ್ಜಿ ಸಲ್ಲಿಸಬೇಕು.


ಅರ್ಜಿ ಸಲ್ಲಿಸಲು ಅಧಿಕೃತ ವೆಬ್​​ಸೈಟ್
ಇಲ್ಲಿ ಕ್ಲಿಕ್ ಮಾಡಿ


ಆದಷ್ಟು ಬೇಗ ಅಪ್ಲೈ ಮಾಡಿ ಪ್ರಯೋಜನ ಪಡೆದುಕೊಳ್ಳಿ.

First published: