• Home
  • »
  • News
  • »
  • education
  • »
  • DTE Karnataka Diploma Results 2022: ಡಿಪ್ಲೊಮಾ ಪರೀಕ್ಷೆ ಫಲಿತಾಂಶ ಪ್ರಕಟ; ಈ ರೀತಿ ಚೆಕ್​ ಮಾಡಿ

DTE Karnataka Diploma Results 2022: ಡಿಪ್ಲೊಮಾ ಪರೀಕ್ಷೆ ಫಲಿತಾಂಶ ಪ್ರಕಟ; ಈ ರೀತಿ ಚೆಕ್​ ಮಾಡಿ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ಕಳೆದ ಮಾರ್ಚ್ ಮತ್ತು ಏಪ್ರಿಲ್ ರಲ್ಲಿ ಕರ್ನಾಟಕದ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಡಿಪ್ಲೊಮಾ ಪರೀಕ್ಷೆಯನ್ನು ಆಯೋಜಿಸಲಾಗಿತ್ತು

  • News18 Kannada
  • Last Updated :
  • Bangalore [Bangalore], India
  • Share this:

    ಕರ್ನಾಟಕ ತಾಂತ್ರಿಕ ಶಿಕ್ಷಣ ಇಲಾಖೆ (Directorate of Technical Education) ಪ್ರಸಕ್ತ ಸಾಲಿನ ಡಿಪ್ಲೊಮಾ (Diploma) ಪದವಿಯ ಫಲಿತಾಂಶವನ್ನು ಪ್ರಕಟಿಸಿದೆ. ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ ತಮ್ಮ ಫಲಿತಾಂಶವನ್ನು ಪರಿಶೀಲಿಸಬಹುದಾಗಿದೆ. ಶೀಘ್ರದಲ್ಲೇ ಪೋರ್ಟಲ್​ನಲ್ಲಿ ಕೂಡ ಸಕ್ರಿಯಗೊಳಿಸಲಾಗುವುದು. ಅಭ್ಯರ್ಥಿಗಳು ತಮ್ಮ ನೋಂದಾಣಿ ಸಂಖ್ಯೆ ಮತ್ತು ಜನ್ಮ ದಿನಾಂಕ ನೋಂದಾಯಿಸುವ ಮೂಲಕ ಫಲಿತಾಂಶ ಪಡೆಯಬಹುದಾಗಿದೆ.


    ಕಳೆದ ಮಾರ್ಚ್ ಮತ್ತು ಏಪ್ರಿಲ್ ರಲ್ಲಿ ಕರ್ನಾಟಕದ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಡಿಪ್ಲೊಮಾ ಪರೀಕ್ಷೆಯನ್ನು ಆಯೋಜಿಸಲಾಗಿತ್ತು. ಈ ಫಲಿತಾಂಶವನ್ನು ತಾಂತ್ರಿಕ ಶಿಕ್ಷಣ ಇಲಾಖೆಯು ಅಧಿಕೃತ ವೆಬ್‌ಸೈಟ್‌ನಲ್ಲಿ ವಿದ್ಯಾರ್ಥಿಗಳು ಪಡೆಯಬಹುದಾಗಿದೆ.


    ಇದರ ಜೊತೆ ವಿದ್ಯಾರ್ಥಿಗಳು BTELINX 1ನೇ, 2ನೇ, 3ನೇ, 4ನೇ, 5ನೇ ಮತ್ತು 6ನೇ ಸೆಮ್ ಫಲಿತಾಂಶ 2022 ಅನ್ನು ಆನ್‌ಲೈನ್‌ನಲ್ಲಿ ಪರಿಶೀಲಿಸಬಹುದು. ಮಾರ್ಕ್ ಶೀಟ್ ಡೌನ್‌ಲೋಡ್ ಮಾಡಬಹುದು. www.dtek.karnataka.gov.in ಈ ಅಧಿಕೃತ ವೆಬ್​ಸೈಟ್​​ ಫಲಿತಾಂಶ ಪರೀಕ್ಷಿಸಬಹುದಾಗಿದೆ.


    ಫಲಿತಾಂಶ ವೀಕ್ಷಣೆ ಹೇಗೆ
    ಅಧಿಕೃತ ವೆಬ್‌ಸೈಟ್ www.dtek.karnataka.gov.in ಗೆ ಹೋಗಿ
    ಕಾಣಿಸಿಕೊಂಡ ಮುಖಪುಟದಲ್ಲಿ, BTELINX DTE ಕರ್ನಾಟಕ ಡಿಪ್ಲೊಮಾ ಫಲಿತಾಂಶ 2022 ಲಿಂಕ್ ಅನ್ನು ಕ್ಲಿಕ್ ಮಾಡಿ
    ಹೊಸ ಲಾಗಿನ್ ಪುಟ ತೆರೆಯುತ್ತದೆ. ಬಳಿಕ ನಿಮ್ಮ ರೋಲ್ ಸಂಖ್ಯೆ ಅಥವಾ ಇತರೆ ಮಾಹಿತಿ ಅಪ್​ಡೇಟ್​ ಮಾಡಿ
    ಈಗ ಫಲಿತಾಂಶವನ್ನು ಪಡೆಯಬಹುದಾಗಿದೆ. ಬಳಿಕ ಈ ಫಲಿತಾಂಶವನ್ನು ಪ್ರಿಂಟ್​ ಪಡೆಯಿರಿ.


    ಇದನ್ನು ಓದಿ: ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರದಲ್ಲಿದೆ ಹುದ್ದೆ; ವಾಕ್​-ಇನ್​ನಲ್ಲಿ ಭಾಗಿಯಾಗಿ


    ತಾಂತ್ರಿಕ ಶಿಕ್ಷಣ ನಿರ್ದೇಶನಾಲಯವು ಕರ್ನಾಟಕದಲ್ಲಿ ಡಿಪ್ಲೋಮ ಮತ್ತು ಇಂಜಿನಿಯರಿಂಗ್ ಪದವಿ ಕೋರ್ಸುಗಳ ದಾಖಲಾತಿಯ ಮೇಲ್ವಿಚಾರಣೆ ಮಾಡುವ ಮತ್ತು ನಿಯಂತ್ರಿಸುವ ಸಂಸ್ಥೆಯಾಗಿದೆ. ಡಿಪ್ಲೋಮಾ ಪ್ರವೇಶದ ಆಯ್ಕೆಯು ಅರ್ಹತೆ ಮೇಲೆ ಆಧರಿಸಿರುತ್ತದೆ

    Published by:Seema R
    First published: