IIM Collegeಗಳಲ್ಲಿ ಅಧ್ಯಯನ ನಡೆಸುವ ಆಸೆ ಇದ್ಯಾ? ಹಾಗಿದ್ರೆ ಪ್ರವೇಶ ಪರೀಕ್ಷೆ ಇಲ್ಲದೇನೆ ಕನಸಿನ ಕಾಲೇಜಿಗೆ ದಾಖಲಾಗಿ

ತಮ್ಮ ಕನಸಿನ ಕಾಲೇಜಿಗೆ ಪ್ರವೇಶ ಪಡೆಯಬೇಕು ಎಂದಾದಲ್ಲಿ ಕಬ್ಬಿಣದ ಕಡಲೆಯಂತಿರುವ ರಾಷ್ಟ್ರ ಮಟ್ಟದ ಪರೀಕ್ಷೆಗಳಲ್ಲಿ ಸಫಲತೆಯನ್ನು ಪಡೆಯಬೇಕು ಎಂಬುದೊಂದೇ ದಾರಿ ಎಂದು ಹಲವಾರು ವಿದ್ಯಾರ್ಥಿಗಳು ನಂಬುತ್ತಾರೆ. ಆದರೆ ದೇಶದಲ್ಲಿರುವ ಉನ್ನತ ಬ್ಯುಸಿನೆಸ್ ಸ್ಕೂಲ್‌ಗಳಿಗೆ ಪ್ರವೇಶಾತಿ ಪಡೆಯಲು ಇನ್ನೂ ಕೆಲವು ವಿಧಾನಗಳಿವೆ. ಅವು ಯಾವುವು ಎಂಬುದನ್ನು ತಿಳಿದುಕೊಳ್ಳೋಣ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (IIMs) ಗೆ ದಾಖಲಾತಿ ಪಡೆಯುವುದು ಎಂದರೆ ಅದೊಂದು ಪ್ರತಿಷ್ಠೆಯ ವಿಚಾರವಾಗಿದೆ. ಆದರೆ ಇಲ್ಲಿ ದಾಖಲಾತಿ ಪಡೆದುಕೊಳ್ಳಬೇಕು ಎಂದಾದಲ್ಲಿ ವಿದ್ಯಾರ್ಥಿಗಳು (Students) ಸಾಮಾನ್ಯ ಪ್ರವೇಶ ಪರೀಕ್ಷೆ (CAT) ಯಲ್ಲಿ ತೇರ್ಗಡೆಗೊಳ್ಳಲೇಬೇಕು. ತಮ್ಮ ಕನಸಿನ ಕಾಲೇಜಿಗೆ (College) ಪ್ರವೇಶ ಪಡೆಯಬೇಕು ಎಂದಾದಲ್ಲಿ ಕಬ್ಬಿಣದ ಕಡಲೆಯಂತಿರುವ ರಾಷ್ಟ್ರ ಮಟ್ಟದ ಪರೀಕ್ಷೆಗಳಲ್ಲಿ (National Level Examination) ಸಫಲತೆಯನ್ನು ಪಡೆಯಬೇಕು ಎಂಬುದೊಂದೇ ದಾರಿ ಎಂದು ಹಲವಾರು ವಿದ್ಯಾರ್ಥಿಗಳು ನಂಬುತ್ತಾರೆ. ಆದರೆ ದೇಶದಲ್ಲಿರುವ ಉನ್ನತ ಬ್ಯುಸಿನೆಸ್ ಸ್ಕೂಲ್‌ಗಳಿಗೆ (Business Schools) ಪ್ರವೇಶಾತಿ ಪಡೆಯಲು ಇನ್ನೂ ಕೆಲವು ವಿಧಾನಗಳಿವೆ ಅವು ಯಾವುವು ಎಂಬುದನ್ನು ತಿಳಿದುಕೊಳ್ಳೋಣ.

ಆನ್‌ಲೈನ್ ಕೋರ್ಸ್‌ಗಳು:
ಕೆಲವು ಆನ್‌ಲೈನ್ ಕೋರ್ಸ್‌ಗಳು ಮತ್ತು ಅಲ್ಪಾವಧಿಯ ಕೋರ್ಸ್‌ಗಳಿದ್ದು, ಅಭ್ಯರ್ಥಿಗಳು ತಮ್ಮ ಮನೆಗಳಲ್ಲಿಯೇ ಕುಳಿತು ಅಧ್ಯಯನ ನಡೆಸಲು ಅರ್ಜಿ ಸಲ್ಲಿಸಬಹುದು. ಹಲವಾರು IIM ಗಳು ಈ ಆನ್‌ಲೈನ್ ಪ್ರಮಾಣಪತ್ರಗಳು ಮತ್ತು ಡಿಪ್ಲೊಮಾ ಕೋರ್ಸ್‌ಗಳನ್ನು ವಿದ್ಯಾರ್ಥಿಗಳಿಗೆ ಮತ್ತು ವೃತ್ತಿ ನಿರತ ವೃತ್ತಿಪರರಿಗೆ ಒದಗಿಸುತ್ತವೆ. ವಿದ್ಯಾರ್ಥಿಗಳು ಕೋರ್ಸ್‌ರೇ (Coursera), ಇಡಿಎಕ್ಸ್‌ (edX) ನಂತಹ ಇ-ಲರ್ನಿಂಗ್ ಪ್ಲ್ಯಾಟ್‌ಫಾರ್ಮ್‌ಗಳಿಗೆ ಭೇಟಿ ನೀಡುವ ಮೂಲಕ ಮತ್ತು ಐಐಎಮ್ (IIM) ಗಳ ಅಧಿಕೃತ ವೆಬ್‌ಸೈಟ್‌ಗಳಿಗೆ ಭೇಟಿ ನೀಡುವ ಮೂಲಕ ಈ ಕೋರ್ಸ್‌ಗಳಿಗೆ ದಾಖಲಾತಿ ಪಡೆದುಕೊಳ್ಳಬಹುದು. ವಿದ್ಯಾರ್ಥಿಗಳು IIM ಗಳಿಗೆ ಸೇರಲು ಬಯಸಿದರೆ ಯಾವೆಲ್ಲಾ ವಿಧಾನದ ಮೂಲಕ ತಮ್ಮಾಸೆಯನ್ನು ಈಡೇರಿಸಿಕೊಳ್ಳಬಹುದು ಎಂಬ ವಿವರವನ್ನು ಇಲ್ಲಿ ಸಂಗ್ರಹಿಸಿದ್ದೇವೆ.

ಆರ್ಟಿಫಿಶಿಯಲ್ ಇಂಟಲಿಜೆನ್ಸಿ ಫಾರ್ ಬ್ಯುಸಿನೆಸ್ (ARTIFICIAL INTELLIGENCE FOR BUSINESS) - ಐಐಎಮ್ (IIM) ಲಕ್ನೋ:
ಸಂಸ್ಥೆಯು AI ಉತ್ಪನ್ನಗಳು, ಸೇವೆಗಳು ಅಥವಾ ಪ್ರಕ್ರಿಯೆಗಳಲ್ಲಿ ಆಸಕ್ತಿ ಹೊಂದಿರುವ ವೃತ್ತಿಪರರಿಗಾಗಿಯೇ ವಿನ್ಯಾಸಗೊಳಿಸಲಾದ ಆರ್ಟಿಫಿಶಿಯಲ್ ಇಂಟಲಿಜೆನ್ಸಿ ಫಾರ್ ಬ್ಯುಸಿನೆಸ್ ಪ್ರೋಗ್ರಾಂ ಅನ್ನು ಒದಗಿಸುತ್ತವೆ. WileyNXT ಸಹಯೋಗದೊಂದಿಗೆ ಅಭಿವೃದ್ಧಿಪಡಿಸಲಾದ ಈ ಪ್ರೋಗ್ರಾಂ ಸೆಪ್ಟೆಂಬರ್ 4 ರಂದು ಪ್ರಾರಂಭವಾಗಲಿದೆ. ಯಾವುದೇ ಯುಜಿಸಿ (UGC) ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಕನಿಷ್ಠ 50% ಸ್ಕೋರ್ ಹೊಂದಿರುವ ಪದವೀಧರರು ಪ್ರೋಗ್ರಾಂಗೆ ಅರ್ಜಿ ಸಲ್ಲಿಸಬಹುದು. ಇದು ಆರು ತಿಂಗಳ ಅವಧಿಯ ಆನ್‌ಲೈನ್ ಸರ್ಟಿಫಿಕೇಟ್ ಪ್ರೋಗ್ರಾಂ ಆಗಿದ್ದು, ಕೃತಕ ಬುದ್ಧಿಮತ್ತೆ ಅಥವಾ ಯಂತ್ರ ಕಲಿಕೆಯಲ್ಲಿ ಉದ್ಯೋಗವಕಾಶ ಬಯಸುವ ಎರಡರಿಂದ ಮೂರು ವರ್ಷಗಳ ವೃತ್ತಿ ಅನುಭವ ಹೊಂದಿರುವ ವೃತ್ತಿಪರರಿಗೆ ಸೂಕ್ತವಾಗಿದೆ.

ಸ್ಪೋರ್ಟ್ಸ್ ಮ್ಯಾನೇಜ್‌ಮೆಂಟ್ - ಐಐಎಮ್ (IIM) ರೋಹ್ತಕ್:
IIM ರೋಹ್ತಕ್, ಕ್ರೀಡಾ ಮ್ಯಾನೇಜ್‌ಮೆಂಟ್‌ನಲ್ಲಿ ಪಿಜಿ ಡಿಪ್ಲೊಮಾ ಕೋರ್ಸ್ ಅನ್ನು ಒದಗಿಸುವ ಮೊದಲ ಸಂಸ್ಥೆಯಾಗಿದೆ. ಕ್ರೀಡಾ ಮ್ಯಾನೇಜ್‌ಮೆಂಟ್‌ನಲ್ಲಿನ ಎರಡು ವರ್ಷಗಳ ವಿಶೇಷ ಪದವಿಯಲ್ಲಿ ಆಸಕ್ತಿ ಹೊಂದಿರುವ ಅನುಭವಿ ವೃತ್ತಿಪರರು, ಕ್ರೀಡಾ ಪ್ರೇಮಿಗಳು ಮತ್ತು ಕ್ರೀಡಾ ನಿರ್ವಾಹಕರಿಗಾಗಿ ಈ ಕೋರ್ಸ್ ಸಿದ್ಧವಾಗಿದೆ. ಪ್ರೋಗ್ರಾಂಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ತಮ್ಮ ಅಂಕಗಳ 50% ಅಥವಾ ಸಮಾನವಾದ ಒಟ್ಟಾರೆ ಗ್ರೇಡ್ ಪಾಯಿಂಟ್ ಸರಾಸರಿಯನ್ನು ಹೊಂದಿರಬೇಕು.

ಇದನ್ನೂ ಓದಿ: Jio Institute: ಜಿಯೋ ಇನ್ಸ್ಟಿಟ್ಯೂಟ್ ನ ಮೊದಲ ಬ್ಯಾಚ್ ಆರಂಭ, ಇದು ನಮ್ಮ ಕನಸಿನ ಕೇಂದ್ರ ಎಂದ ನೀತಾ ಅಂಬಾನಿ

ಬ್ಯುಸಿನೆಸ್ ಮ್ಯಾನೇಜ್‌ಮೆಂಟ್ ಐಐಎಮ್ (IIM) ಕೋಯಿಕ್ಕೋಡ್:
ಈ ಪ್ರೋಗ್ರಾಂ ನಲ್ಲಿ ಬ್ಯುಸಿನೆಸ್ ಲೀಡರ್‌ಶಿಪ್ ಕೌಶಲ್ಯಗಳು, ತಂತ್ರಗಳು ಮತ್ತು ಪರಿಣಾಮಕಾರಿ ತಂತ್ರಗಳು ಮತ್ತು ಸಾಂಸ್ಥಿಕ ಬೆಳವಣಿಗೆಯನ್ನು ರಚಿಸಲು ಅಗತ್ಯವಿರುವ ವಿಧಾನಗಳನ್ನು ಕಲಿಯುತ್ತಾರೆ. ಹಣಕಾಸು, ಮಾರ್ಕೆಟಿಂಗ್, ಹಾಗೂ ಮಾರಾಟದ ಮೇಲೆ ಪ್ರೋಗ್ರಾಂ ಅಧ್ಯಯನಗಳು ಕೇಂದ್ರೀಕೃತವಾಗಿರುತ್ತವೆ. ಇದಕ್ಕೆ ನಿಗದಿಪಡಿಸಿರುವ ಶುಲ್ಕ ರೂ 187,500. ಆನ್‌ಲೈನ್ ಸೆಶನ್‌ಗಳು ಹಾಗೂ ಕ್ಯಾಂಪಸ್‌ನಲ್ಲಿ ಐದು ದಿನಗಳ ಕಾಲ ನಡೆಯುವ ತರಬೇತಿಯಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ಕಲಿಕಾ ಅವಕಾಶವನ್ನೊದಗಿಸುತ್ತದೆ.

ಅಕೌಂಟಿಂಗ್ ಮತ್ತು ಫಿನಾನ್ಸ್ – ಐಐಎಮ್ (IIM) ಬೆಂಗಳೂರು:
ಆರ್ಥಿಕ ಸ್ಟೇಟ್‌ಮೆಂಟ್ ಹಾಗೂ ಆಸ್ತಿ ನಿರ್ವಹಣೆ, ವೆಚ್ಚ ನಿರ್ವಹಣೆ, ತೆರಿಗೆ ನಿರ್ವಹಣೆಯು ವ್ಯವಹಾರ ಕಾರ್ಯಕ್ಷಮತೆಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಮೌಲ್ಯಮಾಪನ ಮಾಡಲು ಈ ಕೋರ್ಸ್ ಅತ್ಯುತ್ತಮವಾಗಿದೆ. ಕೋರ್ಸ್‌ಗೆ ನಿಗದಿಪಡಿಸಿರುವ ಶುಲ್ಕ ರೂ 11,172 ಆಗಿದ್ದು edX ನಲ್ಲಿ ಕೋರ್ಸ್ ಲಭ್ಯವಿದೆ.

ಮ್ಯಾನೇಜ್‌ಮೆಂಟ್ ಸೈನ್ಸ್- ಐಐಎಮ್ (IIM) ಕಲ್ಕತ್ತಾ:
ಆರು ತಿಂಗಳ ಕೋರ್ಸ್ ಇದಾಗಿದ್ದು ವೃತ್ತಿಜೀವನಕ್ಕೆ ಅತ್ಯಗತ್ಯವಾಗಿರುವ ಅಂಶಗಳನ್ನು, ವಿಚಾರಗಳನ್ನು ಅರಿತುಕೊಳ್ಳಬಹುದಾಗಿದೆ. IIM ಕಲ್ಕತ್ತಾದಲ್ಲಿರುವ ಫ್ಯಾಕಲ್ಟಿ ಸದಸ್ಯರು ಉಪನ್ಯಾಸಗಳು, ವೀಡಿಯೊಗಳು, ಯೋಜನೆಗಳನ್ನು ಬಳಸಿಕೊಂಡು ರಚನಾತ್ಮಕ ಕಲಿಕೆಯ ಪ್ರಕ್ರಿಯೆಯ ಮೂಲಕ ಅರ್ಜಿದಾರರಿಗೆ ಅವಕಾಶ ಒದಗಿಸುತ್ತಾರೆ. Coursera ದಲ್ಲಿ ಈ ಕೋರ್ಸ್ ಲಭ್ಯವಿದೆ.

ಅಡ್ವಾನ್ಸ್ ಹ್ಯೂಮನ್ ರಿಸೋರ್ಸ್ ಮ್ಯಾನೇಜ್‌ಮೆಂಟ್- ಐಐಎಮ್ (IIM) ಅಹಮದಾಬಾದ್:
ಎಚ್‌ಆರ್ (HR) ವಿಭಾಗದಲ್ಲಿ ಮೂರು ವರ್ಷಗಳಿಗಿಂತ ಹೆಚ್ಚಿನ ಅನುಭವ ಹೊಂದಿರುವ ಹಿರಿಯ ಮತ್ತು ಮಧ್ಯಮ ಮಟ್ಟದ ವ್ಯವಸ್ಥಾಪಕರು ಮತ್ತು ಕಾರ್ಯನಿರ್ವಾಹಕರಿಗಾಗಿ ಈ ಪ್ರೋಗ್ರಾಂ ಅನ್ನು ಸಿದ್ಧಪಡಿಸಲಾಗಿದೆ. ಇದು ನೌಕರಿ ಲರ್ನಿಂಗ್‌ನಲ್ಲಿ ಲಭ್ಯವಿದ್ದು ತಗುಲುವ ವೆಚ್ಚ ರೂ 140000. ಈ ಕೋರ್ಸ್‌ನ ಕೊನೆಯಲ್ಲಿ ಅಭ್ಯರ್ಥಿಗಳು ಪ್ರಮಾಣಪತ್ರವನ್ನು ಸಹ ತಮ್ಮದಾಗಿಸಿಕೊಳ್ಳಬಹುದು.

ಇದನ್ನೂ ಓದಿ: PUC ಆಯ್ತು ಮುಂದೇನು ಮಾಡೋದು ಅಂತ ಯೋಚ್ನೆ ಮಾಡ್ತಾ ಇದ್ದೀರಾ? ಹಾಗಿದ್ರೆ ಇಲ್ಲಿದೆ ಬೆಸ್ಟ್ ಫ್ಯೂಚರ್ ಪ್ಲಾನ್

ಜಿಪ್‌ಮ್ಯಾಟ್ (JIPMAT):
ಆನ್‌ಲೈನ್ ಕೋರ್ಸ್‌ಗಳನ್ನು ಹೊರತುಪಡಿಸಿ, ಉನ್ನತ ಸಂಸ್ಥೆಗಳಲ್ಲಿ ಇಂಟಿಗ್ರೇಟೆಡ್ ಪ್ರೋಗ್ರಾಂ ಇನ್ ಮ್ಯಾನೇಜ್‌ಮೆಂಟ್ (IPM) ಅನ್ನು ಪರಿಚಯಿಸುವುದರೊಂದಿಗೆ, ವಿದ್ಯಾರ್ಥಿಗಳು ಇದೀಗ ಐಐಎಮ್‌ (IIM) ಗಳಲ್ಲಿ ದಾಖಲಾತಿ ಪಡೆಯಲು ತಮ್ಮ ಪದವಿಯನ್ನು ಪೂರ್ಣಗೊಳಿಸುವವರೆಗೆ ಕಾಯಬೇಕಾಗಿಲ್ಲ. ಈ ಪ್ರೋಗ್ರಾಂ ಅನ್ನು ದ್ವಿತೀಯ ಪಿಯುಸಿ ನಂತರ ಕೂಡ ಮುಂದುವರಿಸಬಹುದು ಮತ್ತು ಮ್ಯಾನೇಜ್‌ಮೆಂಟ್‌ನಲ್ಲಿ ವಿದ್ಯಾರ್ಥಿಗಳು ಈ ಐದು ವರ್ಷಗಳ ಸಂಯೋಜಿತ ಕೋರ್ಸ್‌ಗಳನ್ನು ಬಿಬಿಎ (BBA) ಜೊತೆಗೆ ಎಮ್‌ಬಿಎ (MBA) ಪದವಿಯನ್ನು ಮುಂದುವರಿಸಬಹುದು ಮತ್ತು ವರ್ಷಕ್ಕೆ ಐದು ಮೂರು ಕಾಲಾವಧಿಗಳಲ್ಲಿ ಎರಡು ಪದವಿಗಳನ್ನು ಪಡೆಯಬಹುದು. IIM ಜಮ್ಮು, IIM ಬೋಧ ಗಯಾ, IIM ರೋಹ್ಟಕ್ ಮತ್ತು IIM ಇಂದೋರ್ ಈ ಪ್ರೋಗ್ರಾಂ ಅನ್ನು ಒದಗಿಸುವ ಶಿಕ್ಷಣ ಸಂಸ್ಥೆಗಳಾಗಿವೆ.

ಜಿಮ್ಯಾಟ್ (GMAT):
ಐಐಎಮ್‌ (IIM ) ಗಳು ಒಂದು ವರ್ಷದ ಪೂರ್ಣ ಸಮಯದ ಎಮ್‌ಬಿಎ (MBA) ಪ್ರೋಗ್ರಾಂ ಅನ್ನು ಒದಗಿಸುತ್ತವೆ ಮತ್ತು ವಿದ್ಯಾರ್ಥಿಗಳು ತಮ್ಮ ಗ್ರಾಜುಯೇಟ್ ಮ್ಯಾನೇಜ್‌ಮೆಂಟ್ ಅಡ್ಮಿಷನ್ ಟೆಸ್ಟ್ (GMAT) ಸ್ಕೋರ್‌ಗಳೊಂದಿಗೆ ದಾಖಲಾತಿಯನ್ನು ಪಡೆದುಕೊಳ್ಳುತ್ತಾರೆ. ಕೋರ್ಸ್‌ಗಳಿಗೆ ಅರ್ಜಿ ಸಲ್ಲಿಸಲು ವಿದ್ಯಾರ್ಥಿಗಳು ಕನಿಷ್ಠ 50% ಅಂಕಗಳೊಂದಿಗೆ ಪದವಿ ಪೂರ್ಣಗೊಳಿಸಿರಬೇಕು. GMAT ಸ್ಕೋರ್ ಆಧರಿಸಿ ಮೇಲ್ಕಾಣಿಸಿದ ಸಂಸ್ಥೆಗಳಲ್ಲಿ ದಾಖಲಾತಿ ಪಡೆದುಕೊಳ್ಳಬಹುದಾಗಿದೆ.
Published by:Ashwini Prabhu
First published: