Exam Revision: ಕೊನೆಯ ಕ್ಷಣದಲ್ಲಿ ಪರೀಕ್ಷಾ ತಯಾರಿ ಹೀಗಿರಲಿ: ಇಲ್ಲಿವೆ ಕೆಲವು ಟಿಪ್ಸ್

ನಿಮ್ಮ ಪರೀಕ್ಷೆಯ ಹಿಂದಿನ ದಿನದಂದು ನೀವು ಹೇಗೆ ವಿಷಯಗಳನ್ನು ಪುನರಾವರ್ತನೆ ಮಾಡಬೇಕು? ಈ ಸಲಹೆಗಳು ನಿಮ್ಮ ಸಮಯವನ್ನು ಸದುಪಯೋಗಪಡಿಸಿಕೊಳ್ಳಲು ನಿಮಗೆ ತುಂಬಾನೇ ಸಹಾಯ ಮಾಡುತ್ತವೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಸಾಮಾನ್ಯವಾಗಿ ಈ ನಮ್ಮ ಬಾಲ್ಯದಲ್ಲಿ ಶಾಲೆಗೆ (School) ಹೋಗುತ್ತಿರುವಾಗ, ಈ ಪರೀಕ್ಷೆಗಳು ಅಂತ ಕೇಳಿದರೆ ಸಾಕು ಅನೇಕರಿಗೆ ವರ್ಷವಿಡೀ ಕಾಡದೆ ಇರುವ ಅನಾರೋಗ್ಯ (Illness) ಸಮಸ್ಯೆಗಳು ಬಂದು ಬಿಡುತ್ತಿದ್ದವು. ಹೌದು.. ಶಾಲೆಯಲ್ಲಿ ಓದಬೇಕಾದರೆ ಈ ಪರೀಕ್ಷೆಗಳ ದಿನಾಂಕವನ್ನು (Exam date) ನಮ್ಮ ತರಗತಿಯ ಶಿಕ್ಷಕರು (Teachers) ಹೇಳಿದರೆ ಸಾಕು ನಮಗೆ ಭಯ ಶುರುವಾಗುತ್ತಿತ್ತು. ಅನೇಕ ಮಕ್ಕಳಿಗೆ ಈ ಪರೀಕ್ಷೆಯ ಭಯ ಮತ್ತು ಆತಂಕ ಎನ್ನುವುದು ಅವರು ವರ್ಷವಿಡೀ ಶಾಲೆಗೆ ಹೋಗಿ ಸಂಜೆ ಮನೆಗೆ ಬಂದು ಶಿಕ್ಷಕರು ಹೇಳಿದ ಹೋಂ ವರ್ಕ್ ಮಾಡಿ ಅಂದಿನ ಪಾಠ ಅಂದೇ ಓದದೆ ಇರುವಂತಹವರಿಗೆ ಸ್ವಲ್ಪ ಹೆಚ್ಚಾಗಿಯೇ ಕಾಡುತ್ತಿತ್ತು ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಕೆಲವು ಬುದ್ದಿವಂತ ಮಕ್ಕಳು ವರ್ಷದ ಆರಂಭದಿಂದಲೇ ಶಾಲೆಯಲ್ಲಿ ಆ ದಿನ ಹೇಳಿದ ಪಾಠ ಅಂದೇ ಓದಿ ತಯಾರಾಗಿರುತ್ತಾರೆ, ಇಂತಹ ಮಕ್ಕಳಿಗೆ ಪರೀಕ್ಷಾ ಭಯ ಅಷ್ಟೊಂದು ಪರಿಣಾಮ ಬೀರುವುದಿಲ್ಲ ಅಂತಾನೆ ಹೇಳಬಹುದು.

ಕೊನೆಯ ಕ್ಷಣದಲ್ಲಿ ಪರೀಕ್ಷೆಗೆ ತಯಾರಾಗಬಹುದೇ?
ಇಲ್ಲಿ ಯಾವುದು ಸರಿ ಅಲ್ಲ, ತಪ್ಪು ಅಲ್ಲ. ಪರೀಕ್ಷೆಗೆ ಯಾವಾಗ ಬೇಕಾದರೂ ಸಿದ್ದರಾಗಬಹುದು, ಎಂದರೆ ಚೆನ್ನಾಗಿ ಓದಿಕೊಂಡು ತಯಾರಾಗುವುದು ನಮಗೆ ಈ ಪರೀಕ್ಷೆಯ ಭೀತಿಯಿಂದ ದೂರವಿರಿಸುತ್ತದೆ. ಪರೀಕ್ಷೆಗೂ ಮೊದಲಿನ 24 ಗಂಟೆಗಳು ತುಂಬಾ ಒತ್ತಡದಿಂದ ಕೂಡಿರಬಹುದು. ನೀವು ಸಾಕಷ್ಟು ಬಾರಿ ಪಾಠಗಳನ್ನು ರಿವಿಶನ್ ಎಂದರೆ ಪುನರಾವರ್ತನೆ ಮಾಡಿಲ್ಲ ಎಂದು ನೀವು ಚಿಂತಿಸುತ್ತಿರಬಹುದು, ಅಥವಾ ನೀವು ಈಗ ಮಾಡುತ್ತಿರುವುದು ನಿಮಗೆ ಪರೀಕ್ಷೆಯಲ್ಲಿ ಎಷ್ಟರ ಮಟ್ಟಿಗೆ ನೆನಪಿನಲ್ಲಿ ಉಳಿದು ಉತ್ತರ ಪತ್ರಿಕೆಯನ್ನು ತುಂಬಿಸುವಂತಾಗುತ್ತದೆಯೋ ಗೊತ್ತಿಲ್ಲವಾದರೆ ಈ ಕೆಳಗಿನ ಕೆಲವು ಸಲಹೆಗಳನ್ನು ಅನುಸರಿಸುವುದರೊಂದಿಗೆ ಪರೀಕ್ಷೆಯ ದಿನ ನಿಮ್ಮ ಮನಸ್ಸನ್ನು ಪ್ರಶಾಂತವಾಗಿರಿಸಿಕೊಳ್ಳಲು ಸಹಾಯ ಮಾಡುತ್ತದೆ.

ಖಂಡಿತವಾಗಿಯೂ, ನೀವು ನಿಮ್ಮ ಎಲ್ಲಾ ವಿಷಯಗಳ ಪುನರಾವರ್ತನೆಯನ್ನು ಪರೀಕ್ಷೆಯ ಕೊನೆಯ ಕ್ಷಣಕ್ಕೆ ಬಿಟ್ಟಿರುವ ಸಾಧ್ಯತೆಯಿರುತ್ತದೆ. ಈ ಕೆಲವು ಸಲಹೆಗಳು ನಿಮಗೆ ಆಗಲೂ ಉಪಯುಕ್ತವಾಗುತ್ತವೆ ನೋಡಿ. ಬಹುಶಃ ಅತ್ಯಂತ ಮುಖ್ಯವಾದ ಸಲಹೆ ಎಂದರೆ ಪರೀಕ್ಷೆಯ ಬಗ್ಗೆ ತುಂಬಾ ಗಾಬರಿಗೊಳ್ಳಬೇಡಿ. ಇದು ನೀವು ಓದಿರುವ ವಿಷಯಗಳನ್ನು ಮರೆಯುವಂತೆ ಮಾಡುತ್ತದೆ. ಅಲ್ಲದೆ ಇದರಿಂದ ನಿಮ್ಮ ಏಕಾಗ್ರತೆಯ ಸಾಮರ್ಥ್ಯ ಸಹ ಕಡಿಮೆ ಆಗುತ್ತದೆ. ಆದಷ್ಟು ಪರೀಕ್ಷೆಯ ಸಮಯದಲ್ಲಿ ಮನಸ್ಸನ್ನು ಶಾಂತವಾಗಿರಿಸಿಕೊಳ್ಳಿರಿ ಮತ್ತು ಎಲ್ಲವೂ ಒಳ್ಳೆಯದಾಗುತ್ತದೆ ಎಂದು ನಂಬಿಕೆ ಇಡಿ.

ಹಾಗಾದರೆ, ನಿಮ್ಮ ಪರೀಕ್ಷೆಯ ಹಿಂದಿನ ದಿನದಂದು ನೀವು ಹೇಗೆ ವಿಷಯಗಳನ್ನು ಪುನರಾವರ್ತನೆ ಮಾಡಬೇಕು? ಈ ಸಲಹೆಗಳು ನಿಮ್ಮ ಸಮಯವನ್ನು ಸದುಪಯೋಗಪಡಿಸಿಕೊಳ್ಳಲು ನಿಮಗೆ ತುಂಬಾನೇ ಸಹಾಯ ಮಾಡುತ್ತವೆ.

1. ಕೊನೆಯ ಕ್ಷಣದಲ್ಲಿ ಶಾಂತವಾಗಿರಿ
ಪರೀಕ್ಷೆಯ ಸಮಯದವರೆಗೂ ಹೇಗೆ ನೀವು ಓದಿಕೊಂಡು ಬಂದಿರುತ್ತೀರೊ, ಹಾಗೆಯೇ ಮುಂದುವರೆಸಿ. ಗಾಬರಿಯಾಗುವುದು ಬೇಡ ಮತ್ತು ನೀವು ಬೆಳೆಸಿಕೊಂಡು ಬಂದ ಉತ್ತಮ ಅಧ್ಯಯನ ಅಭ್ಯಾಸಗಳನ್ನು ತ್ಯಜಿಸಬಾರದು.

ಪರೀಕ್ಷೆಯ ಹಿಂದಿನ ದಿನ ಸಹ ನೀವು ಓದುವಾಗ, ನೀವು ನಿಯಮಿತ ವಿರಾಮಗಳನ್ನು ತೆಗೆದುಕೊಳ್ಳಬೇಕು ಮತ್ತು ನಿಮ್ಮ ಮನಸ್ಸನ್ನು ಆಸಕ್ತಿಯಿಂದ ಇರಿಸಿಕೊಳ್ಳಲು, ನೀವು ಏನು ಮಾಡುತ್ತಿದ್ದೀರಿ ಎಂಬುದನ್ನು ನೀವು ಮೊದಲು ಅರಿತುಕೊಳ್ಳಬೇಕು. ಪರೀಕ್ಷೆ ಬಂದೆ ಬಿಟ್ಟಿದೆ ಅಂತ ತಡ ರಾತ್ರಿಯವರೆಗೆ ಪುಸ್ತಕಗಳನ್ನು ಓದುತ್ತಾ ಕುಳಿತು ಕೊನೆಗೆ ಅದರ ಮೇಲೆಯೇ ನಿದ್ರಿಸಬೇಡಿ. ಹೀಗೆ ಮಾಡುವುದರಿಂದ ನಿಮ್ಮ ಮನಸ್ಸಿನ ಶಾಂತಿಯನ್ನು ಇದು ಸುಧಾರಿಸುವುದಿಲ್ಲ. ನೀವು ಆರೋಗ್ಯಕರವಾಗಿ ಆಹಾರ ಸೇವಿಸಬೇಕು ಮತ್ತು ಎಚ್ಚರವಾಗಿರಲು ಈ ಕೆಫೀನ್ ಅನ್ನು ಅವಲಂಬಿಸಬಾರದು.

2. ಬೇಗನೆ ಎದ್ದು ಓದಿ
ನೀವು ಬೇರೆ ದಿನಗಳಲ್ಲಿ ಬೆಳಗ್ಗೆ ಬೇಗನೆ ಎದ್ದು ಓದುವ ವ್ಯಕ್ತಿಯಲ್ಲದಿದ್ದರೂ ಪರವಾಗಿಲ್ಲ, ಪರೀಕ್ಷೆಯ ಹಿಂದಿನ ದಿನ ಮಾತ್ರ ಸ್ವಲ್ಪ ಬೆಳಗ್ಗೆ ಬೇಗನೆ ಏಳುವುದರಿಂದ ನಿಮಗೆ ವಿಷಯವನ್ನು ಪುನರಾವರ್ತನೆ ಮಾಡಲು ಹೆಚ್ಚಿನ ಸಮಯ ಸಿಗುತ್ತದೆ ಎಂದು ಹೇಳಬಹುದು.

ಇದನ್ನೂ ಓದಿ:  Viral Video: ಒಟ್ಟಿಗೆ ಆಕಾಶದಲ್ಲಿ ಹಾರಿದ ತಾಯಿ ಮಗಳು! ಇಲ್ಲಿದೆ ನೋಡಿ ಪೈಲೆಟ್ ಅಮ್ಮ ಮಗಳ ರೋಮಾಂಚಕ ಕಥೆ

ನಿಮ್ಮ ಪರೀಕ್ಷೆಯ ಹಿಂದಿನ ದಿನದಂದು, ಪ್ರತಿ ಸೆಕೆಂಡು ಸಹ ತುಂಬಾನೇ ಮುಖ್ಯವಾಗುತ್ತದೆ. ಆದ್ದರಿಂದ ನೀವು ಬೇಗನೆ ಎದ್ದು ಬೆಳಗ್ಗೆ ಸ್ವಲ್ಪ ಹೊತ್ತು ಓದಿಕೊಳ್ಳಬಹುದು. ಬೆಳಗ್ಗೆ ಹೊತ್ತಿನಲ್ಲಿ ಸುತ್ತಮುತ್ತಲೂ ಅಷ್ಟೊಂದು ಗದ್ದಲ ಇರದೇ ಇರುವುದರಿಂದ ಓದಿದ ವಿಷಯಗಳು ಬೇಗನೆ ತಲೆಯಲ್ಲಿ ಹೋಗುತ್ತವೆ ಅಂತ ಹೇಳಲಾಗುತ್ತದೆ.

3. ನಿಮ್ಮ ಮನೆಯವರ ಸಹಾಯ ಪಡೆದುಕೊಳ್ಳಿರಿ
ನಿಮ್ಮ ಸಮಸ್ಯೆಯನ್ನು ಯಾರೊಂದಿಗಾದರೂ ಹಂಚಿಕೊಂಡರೆ ಆ ಸಮಸ್ಯೆ ಅರ್ಧ ಪರಿಹಾರವಾದ ಹಾಗೆಯೇ ಅಂತ ಹೇಳುತ್ತಾರೆ. ಎಂದರೆ ನೀವು ಓದಲು ಕುಳಿತಾಗ ನಿಮಗೆ ಚಹಾ ಮಾಡಿಕೊಡಲು ನಿಮ್ಮ ಮನೆಯಲ್ಲಿರುವವರ ಸಹಾಯ ಪಡೆದುಕೊಳ್ಳಬಹುದು. ನಿಮ್ಮ ಸಹೋದರ ಮತ್ತು ಸಹೋದರಿಯರು ಸಹ ಪರೀಕ್ಷೆಗೆ ಸಿದ್ದತೆ ನಡೆಸುತ್ತಾ ಇದ್ದರೆ, ನೀವು ನಿಮ್ಮ ಹೆತ್ತವರಿಗೆ ಕೇಳಿ ಚಹಾ ಮಾಡಿಸಿಕೊಂಡು ಕುಡಿಯಬಹುದು.

ನೀವು ಪರೀಕ್ಷೆಗಳಿಗಾಗಿ ವಿಷಯಗಳನ್ನು ಪುನರಾವರ್ತನೆ ಮಾಡುತ್ತಿರುವಾಗ ಸ್ನೇಹಿತರನ್ನು ಹೊಂದಿದ್ದರೆ, ವಿಶೇಷವಾಗಿ ಅವರು ನಿಮಗಿಂತ ಬುದ್ದಿವಂತರಾಗಿದ್ದರೆ ಅವರ ಸಹಾಯವನ್ನು ಸಹ ನೀವು ಪಡೆದುಕೊಳ್ಳಬಹುದು. ನೀವು ಅವರೊಂದಿಗೆ ಊಟ ಮಾಡುತ್ತಾ ಅಥವಾ ಸಂಜೆ ಟೀ ಕುಡಿಯುತ್ತಾ ನಿಮಗೆ ಇರುವ ಪಠ್ಯ ಸಂದೇಹಗಳನ್ನು ಪರಿಹರಿಸಿಕೊಳ್ಳಬಹುದು.

4. ಪೂರ್ತಿಯಾಗಿ ಓದುವುದಕ್ಕಿಂತ ಪಾಠದ ಸಾರಾಂಶ ಓದಿ
ಪರೀಕ್ಷೆಗೂ ಹಿಂದಿನ ದಿನವನ್ನು ನೀವು ಇಡೀ ವರ್ಷ ಓದಿದ್ದನ್ನು ಒಮ್ಮೆ ಮನನ ಮಾಡಿಕೊಳ್ಳುವ ದಿನ ಅಂತ ಅಂದುಕೊಳ್ಳಿರಿ. ಆದ್ದರಿಂದ, ಪ್ರತಿ ವಿಷಯದ ಬಗ್ಗೆ ಒಂದು ಪುಟವನ್ನು ರಚಿಸಿಕೊಂಡು ಬುಲೆಟ್ ಪಾಯಿಂಟ್ ಸಾರಾಂಶಗಳಂತಹ ಸಾರಾಂಶಗಳನ್ನು ಓದುವುದು ಒಳ್ಳೆಯದು. ನೀವು ಹೀಗೆ ಮಾಡಿದರೆ ವಿಷಯವನ್ನು ಪರಿಶೀಲಿಸಲು ಮತ್ತು ನಿಮ್ಮ ತಿಳುವಳಿಕೆಯನ್ನು ಪರಿಶೀಲಿಸಲು ಉತ್ತಮ ಮಾರ್ಗವಾಗಿರುತ್ತದೆ. ಹಿಂದಿನ ಪರೀಕ್ಷೆಯ ಪ್ರಶ್ನೆಗಳಿಗಾಗಿ ಪ್ರಬಂಧ ಯೋಜನೆಗಳನ್ನು ಬರೆಯುವುದು ನಿಮ್ಮ ತಿಳುವಳಿಕೆಯನ್ನು ಪರಿಶೀಲಿಸಲು ಮತ್ತು ಹಿಂದಿನ ವರ್ಷಗಳಲ್ಲಿ ಪ್ರಶ್ನೆಗಳಿಗೆ ಉತ್ತರಿಸಲು ನಿಮಗೆ ಸಾಧ್ಯವಾಗುತ್ತಿತ್ತು ಎಂದು ನಿಮಗೆ ನೀವೇ ಭರವಸೆ ನೀಡಲು ಉತ್ತಮ ಮಾರ್ಗವಾಗಿದೆ.

5. ಪೋನ್ ಮತ್ತು ಲ್ಯಾಪ್ಟಾಪ್ ಗಳನ್ನು ಆಫ್ ಮಾಡಿ, ಪಕ್ಕಕ್ಕೆ ಇಡಿ
ನಿಮಗೆ ಯಾವುದೇ ರೀತಿಯ ಚಂಚಲತೆಯನ್ನು ನೀಡುವ ಪೋನ್, ಲ್ಯಾಪ್‌ಟಾಪ್, ಕಂಪ್ಯೂಟರ್ ಮತ್ತು ಇನ್ನಿತರೆ ತಂತ್ರಜ್ಞಾನದ ವಸ್ತುಗಳನ್ನು ಪರೀಕ್ಷಾ ಸಮಯದಲ್ಲಿ ದೂರವಿಡುವುದು ಒಳ್ಳೆಯದು. ಲಿಖಿತ ಟಿಪ್ಪಣಿಗಳ ಮೇಲೆ ಗಮನ ಕೇಂದ್ರೀಕರಿಸಿ ಮತ್ತು ಅಗತ್ಯವಿದ್ದರೆ ಜ್ಞಾಪನೆಗಳನ್ನು ಬರೆಯಲು ಪೆನ್ ಮತ್ತು ಕಾಗದವನ್ನು ಬಳಸಿ.

6. ಒತ್ತಡವನ್ನು ದೂರವಿಡಿ
ನೀವು ಪರೀಕ್ಷೆ ಅಂತ ಅಂದ ತಕ್ಷಣ ನಿಜವಾಗಿಯೂ ಅಗತ್ಯಕ್ಕಿಂತ ಹೆಚ್ಚು ಒತ್ತಡವನ್ನು ಅನುಭವಿಸುವ ಅಗತ್ಯವಿಲ್ಲ. ಆದ್ದರಿಂದ ಒತ್ತಡದಲ್ಲಿರುವ ಇತರ ಜನರನ್ನು ಸಹ ನೀವು ಭೇಟಿ ಮಾಡಬೇಡಿ. ಪರೀಕ್ಷೆಯ ಹಿಂದಿನ ದಿನ ನೀವು ಮನೆಯಲ್ಲಿ ಅಷ್ಟೊಂದು ಶಾಂತತೆ ಇರದೇ ಹೋದರೆ ನಿಮ್ಮ ಶಾಲಾ ಕಾಲೇಜಿನ ಗ್ರಂಥಾಲಯಕ್ಕೆ ಹೋಗಿ ಅಲ್ಲಿಯೇ ಕುಳಿತುಕೊಂಡು ಓದಿಕೊಳ್ಳಿರಿ. ಆದರೆ ಅಲ್ಲಿಗೆ ಹೋಗಿ ನಿಮ್ಮ ಸ್ನೇಹಿತರಿಗೆ ಎಷ್ಟು ವಿಷಯದ ಬಗ್ಗೆ ಗೊತ್ತು, ನಿಮಗೆಷ್ಟು ಗೊತ್ತು ಅಂತ ಅದನ್ನು ತುಲನೆ ಮಾಡಿಕೊಳ್ಳುತ್ತಾ ಕುಳಿತುಕೊಳ್ಳಬೇಡಿ. ಇದರಿಂದ ನಿಮ್ಮ ಮೇಲೆ ಒತ್ತಡ ಜಾಸ್ತಿಯಾಗುತ್ತದೆಯೇ ಹೊರತು ಯಾವುದೇ ಪ್ರಯೋಜನವಾಗುವುದಿಲ್ಲ.

ಇದನ್ನೂ ಓದಿ:  IAS-IPS Family: ಈ ಕುಟುಂಬದಲ್ಲಿ ಮೂವರು ಐಎಎಸ್, ಒಬ್ಬರು ಐಪಿಎಸ್! ಇವರ ಕಥೆ ಇಂಟ್ರೆಸ್ಟಿಂಗ್

ನಿಮಗೆ ತಿಳಿದಿರುವ ಯಾರಾದರೂ ವಿಶೇಷವಾಗಿ ಒತ್ತಡಕ್ಕೊಳಗಾಗುವುದನ್ನು ತಪ್ಪಿಸುವುದು ವಿಶೇಷವಾಗಿ ಉತ್ತಮ ಉಪಾಯವಾಗಿದೆ. ಹೌದು, ಖಂಡಿತವಾಗಿಯೂ ನೀವು ನಿಮ್ಮ ಸ್ನೇಹಿತರನ್ನು ನೋಡಿಕೊಳ್ಳಬೇಕು. ಆದರೆ ಇದೀಗ ಅದಕ್ಕಿಂತಲೂ ಹೆಚ್ಚಾಗಿ ಮೊದಲು ನಿಮ್ಮನ್ನು ನೀವು ನೋಡಿಕೊಳ್ಳಿರಿ.

7. ದೀರ್ಘ ವಿರಾಮ ತೆಗೆದುಕೊಳ್ಳಿರಿ
ನೀವು ಪರೀಕ್ಷೆಯ ಹಿಂದಿನ ದಿನದವರೆಗೆ ನಿಮ್ಮ ವಿಷಯಗಳ ಪುನರಾವರ್ತನೆ ಸಂಪೂರ್ಣವಾಗಿ ಮಾಡಿದ್ದರೆ, ದೀರ್ಘ ವಿರಾಮವನ್ನು ತೆಗೆದುಕೊಳ್ಳುವುದು ನಿಜವಾಗಿಯೂ ಉತ್ತಮ ಉಪಾಯವಾಗಿದೆ. ಉದಾಹರಣೆಗೆ, ನೀವು ಹೋಗಿ ಸ್ವಲ್ಪ ವ್ಯಾಯಾಮ ಮಾಡಬಹುದು, ಸ್ನೇಹಿತನೊಂದಿಗೆ ದೀರ್ಘ ನಡಿಗೆಗೆ ಹೋಗಬಹುದು, ಅಥವಾ ಸ್ಕ್ವಾಷ್ ಅಥವಾ ಎಲ್ಲಾದರೂ ಹೋಗಿ ಬರಬಹುದು.

ನಿಮ್ಮ ಕೆಲಸದಿಂದ ನಿಮ್ಮನ್ನು ಸಂಪೂರ್ಣವಾಗಿ ವಿಚಲಿತಗೊಳಿಸುವುದು ಮತ್ತು ನಿಮ್ಮನ್ನು ದೈಹಿಕವಾಗಿ ದಣಿಯುವಂತೆ ಮಾಡುವುದು ಇದರ ಉದ್ದೇಶವಾಗಿದೆ, ಇದರಿಂದ ನೀವು ಉತ್ತಮವಾಗಿ ನಿದ್ರಿಸುತ್ತೀರಿ.

ಇದಕ್ಕೆ ಕಾರಣವೆಂದರೆ ಇದು ನಿಮ್ಮ ಮೆದುಳಿಗೆ ಸ್ವಲ್ಪ ಹೆಚ್ಚಿನ ಸಂಸ್ಕರಣಾ ಸಮಯವನ್ನು ನೀಡುತ್ತದೆ. ನೀವು ಓದಿದ ಕೊನೆಯ ವಿಷಯದ ಬಗ್ಗೆ ನೆನಪಿನಲ್ಲಿ ಉಳಿಯುವಂತೆ ಮಾಡುತ್ತದೆ. ದೀರ್ಘ ವಿರಾಮವನ್ನು ತೆಗೆದುಕೊಳ್ಳುವುದು ಎಂದರೆ ನೀವು ಇತರ ವಿಷಯಗಳ ಬಗ್ಗೆ ಯೋಚಿಸುತ್ತಿದ್ದೀರಿ ಎಂದರ್ಥ, ಮತ್ತು ನಿಮ್ಮ ಮೆದುಳು ಸದ್ದಿಲ್ಲದೆ ನಿಮ್ಮ ಅಧ್ಯಯನವನ್ನು ಹಿನ್ನೆಲೆಯಲ್ಲಿ ಆಯೋಜಿಸಬಹುದು.

ಮರುದಿನ, ನಿಮ್ಮ ಪರೀಕ್ಷೆಯಲ್ಲಿ ಅದನ್ನು ಹೆಚ್ಚು ಸುಲಭವಾಗಿ ನೆನಪಿಸಿಕೊಳ್ಳಲು ಇದು ನಿಮಗೆ ಸಹಾಯ ಮಾಡುತ್ತದೆ.

8. ಬೆಳಗ್ಗೆ ಪರೀಕ್ಷೆಗೆ ಬೇಕಾದ ಎಲ್ಲವನ್ನೂ ರಾತ್ರಿಯೇ ಜೋಡಿಸಿಟ್ಟುಕೊಳ್ಳಿ
ಪರೀಕ್ಷೆಯು ಸ್ವಲ್ಪ ಗಂಟೆಗಳಿರುವಾಗ ನೀವು ಎಲ್ಲವನ್ನೂ ಜೋಡಿಸಿಕೊಳ್ಳುತ್ತಾ ಅತ್ತಿಂದಿತ್ತ ಓಡಾಡಬೇಡಿ. ಹೀಗೆ ಕೊನೆಯ ಕ್ಷಣದಲ್ಲಿನ ಓಡಾಟ ನಿಮ್ಮ ಒತ್ತಡವನ್ನು ಇನ್ನಷ್ಟು ಹೆಚ್ಚು ಮಾಡುತ್ತದೆ. ಹಿಂದಿನ ದಿನ ರಾತ್ರಿಯೇ ಪರೀಕ್ಷೆಗೆ ಬೇಕಾದ ಎಲ್ಲಾ ವಸ್ತುಗಳನ್ನು ಜೋಡಿಸಿಟ್ಟುಕೊಳ್ಳಿರಿ. ನಿಮ್ಮ ಎಲ್ಲಾ ಪೆನ್ನುಗಳು, ಪೆನ್ಸಿಲ್ ಗಳು, ಲಕ್ಕಿ ಮ್ಯಾಸ್ಕಾಟ್ ಗಳು ಮತ್ತು ನಿಮಗೆ ಅಗತ್ಯವಿರುವ ಇತರ ಯಾವುದೇ ಸ್ಟೇಷನರಿಗಳನ್ನು ಒಟ್ಟುಗೂಡಿಸಿಟ್ಟುಕೊಳ್ಳಿರಿ.

ಇದನ್ನೂ ಓದಿ: Smallest Rocket: 75 ಶಾಲೆಗಳ 750 ವಿದ್ಯಾರ್ಥಿಗಳಿಂದ ತಯಾರಾದ 75 ಪೆಲೋಡ್ ನಭಕ್ಕೆ; ತ್ರಿವರ್ಣ ಧ್ವಜ ಹೊತ್ತು ಸಾಗಲಿದೆ SSLV ರಾಕೆಟ್!

ನಿಮಗೆ ಪೆನ್ಸಿಲ್ ಕೇಸ್ ಅನ್ನು ಅನುಮತಿಸಲಾಗಿದೆಯೇ, ಅಥವಾ ಪ್ಲಾಸ್ಟಿಕ್ ಚೀಲದ ಅಗತ್ಯವಿದೆಯೇ ಎಂದು ಪರಿಶೀಲಿಸಿ ಮತ್ತು ಅದರಲ್ಲಿ ಎಲ್ಲವನ್ನೂ ಇರಿಸಿಕೊಳ್ಳಿರಿ. ಯಾವುದೇ ವಿದ್ಯುನ್ಮಾನ ಸಾಧನಗಳು, ಕೈಗಡಿಯಾರಗಳು ಮತ್ತು ಇತ್ಯಾದಿಗಳನ್ನು ಹೊಂದಲು ನಿಮಗೆ ಅನುಮತಿಸಲಾಗುತ್ತದೆಯೇ ಎಂದು ಪರಿಶೀಲಿಸಿ, ಮತ್ತು ನಿಮ್ಮನ್ನು ಸಿದ್ಧಪಡಿಸಿಕೊಳ್ಳಿ.

ಶಾಲಾ ಸಮವಸ್ತ್ರದಂತಹ ನಿರ್ದಿಷ್ಟ ಬಟ್ಟೆಗಳನ್ನು ನೀವು ಧರಿಸುವ ಅಗತ್ಯವಿದೆಯೇ? ಅದನ್ನು ಹೊರ ತೆಗೆದು ಇರಿಸಿಕೊಳ್ಳಿರಿ. ನಿಮಗೆ ನಿರ್ದಿಷ್ಟ ಉಡುಪುಗಳ ಅಗತ್ಯವಿಲ್ಲದಿದ್ದರೂ, ನೀವು ಧರಿಸಲಿರುವುದನ್ನು ಹೊರ ತೆಗೆದು ಇರಿಸಿಕೊಳ್ಳಿರಿ.

9. ಸಕಾರಾತ್ಮಕವಾಗಿ ಆಲೋಚಿಸಿ
ಕೊನೆಯದಾಗಿ ಇದೆಲ್ಲವನ್ನು ಮಾಡುವುದರ ಜೊತೆಗೆ ನೀವು ಪರೀಕ್ಷೆಯ ಬಗ್ಗೆ ಸಕರಾತ್ಮಕವಾಗಿ ಆಲೋಚಿಸಿ. ನೀವು ಪರೀಕ್ಷೆಗೆ ಬೇಕಾದ ಎಲ್ಲಾ ಸಿದ್ದತೆಗಳನ್ನು ನೀವು ಮಾಡಿಕೊಂಡಿದ್ದೀರಿ, ಚೆನ್ನಾಗಿಯೇ ಬರೆಯುತ್ತೀರಿ ಅಂತ ದೃಢವಾದ ನಂಬಿಕೆ ಇರಲಿ. ಇದು ಕೇವಲ ಒಂದು ತರಗತಿಗೆ ಸಂಬಂಧಪಟ್ಟ ಪರೀಕ್ಷೆ ಮತ್ತು ಇದು ಪ್ರಪಂಚದ ಅಂತ್ಯವಲ್ಲ ಎಂಬುದನ್ನು ನೆನಪಿಡಿ. ಸಕಾರಾತ್ಮಕ ಮನೋಭಾವವು ನೀವು ಪರೀಕ್ಷೆಯಲ್ಲಿ ಚೆನ್ನಾಗಿ ಬರೆಯುವಂತೆ ಸಹಾಯ ಮಾಡುತ್ತದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.
Published by:Ashwini Prabhu
First published: