• Home
  • »
  • News
  • »
  • education
  • »
  • NEET Exam ಪಾಸ್ ಆದರೂ ಮೆಡಿಕಲ್ ಓದಲು ಹಣವಿಲ್ಲದೆ ವಿದ್ಯಾರ್ಥಿನಿಯ ಪರದಾಟ!

NEET Exam ಪಾಸ್ ಆದರೂ ಮೆಡಿಕಲ್ ಓದಲು ಹಣವಿಲ್ಲದೆ ವಿದ್ಯಾರ್ಥಿನಿಯ ಪರದಾಟ!

ವಿದ್ಯಾರ್ಥಿನಿ ಹರಿಕಾ

ವಿದ್ಯಾರ್ಥಿನಿ ಹರಿಕಾ

ಆಕೆಗೆ ಕನಿಷ್ಠ 2 ಲಕ್ಷ ರೂಪಾಯಿ ವೆಚ್ಚವಾಗಲಿದ್ದು, ಅದನ್ನು ಭರಿಸಲುಕುಟುಂಬಕ್ಕೆ ಆಗುತ್ತಿಲ್ಲ. ಬೀಡಿ ಸುತ್ತುವ ತಾಯಿಯೇ ಕುಟುಂಬದ ಏಕೈಕ ಆದಾಯದ ಮೂಲ. ಹೀಗಾಗಿ ಹರಿಕಾಳ ವೈದ್ಯಕೀಯ ಕಾಲೇಜು ವೆಚ್ಚ ಭರಿಸಲು ಕುಟುಂಬಕ್ಕೆ ಸಾಧ್ಯವಾಗಲಿಲ್ಲ.

  • Share this:

ಓದಬೇಕು ಅನ್ನೋ ಯಾವುದೇ ವಿದ್ಯಾರ್ಥಿಗೆ (Student) ಎಂದಿಗೂ ಹಣ ಸಮಸ್ಯೆಯಾಗಿ (Money Problem) ಅಡ್ಡಿ ಬರಬಾರದು. ಹಣ ಇಲ್ಲದೇ ಮಕ್ಕಳು ಓದನ್ನು ನಿಲ್ಲಿಸುವುದು ನಿಜಕ್ಕೂ ದುಃಖಕರ. ಇಲ್ಲೊಬ್ಬ ಪ್ರತಿಭಾನ್ವಿತ ವಿದ್ಯಾರ್ಥಿನಿಯ ಓದಿಗೆ ಕೂಡ ಹಣದ ಸಮಸ್ಯೆ ಅಡ್ಡಿಯಾಗಿದೆ. ಈ ವಿದ್ಯಾರ್ಥಿನಿಯ ಹೆಸರು ಹರಿಕಾ (Harika). ತೆಲಂಗಾಣದ ಇವರು ಹಣಕಾಸಿನ ಕೊರತೆಯಿಂದ ಯಾವುದೇ ಕೋಚಿಂಗ್ ಇನ್ಸ್ಟಿಟ್ಯೂಟ್​ಗೆ ಸೇರಲು ಆಗಲಿಲ್ಲ. ಆದರೂ ಈಕೆ ವೈದ್ಯೆಯಾಗುವ ತನ್ನ ಕನಸನ್ನು ಬಿಟ್ಟುಕೊಡಲಿಲ್ಲ. ಯೂಟ್ಯೂಬ್ ಸಹಾಯದಿಂದ ವೈದ್ಯಕೀಯ ಪ್ರವೇಶ ಪರೀಕ್ಷೆ NEETನಲ್ಲಿ ಯಶಸ್ವಿಯಾಗಿದ್ದಾರೆ.


ಕನಿಷ್ಟ 2 ಲಕ್ಷ ರೂ. ಬೇಕು


2022ರಲ್ಲಿ ನಡೆದ ನೀಟ್ ಪರೀಕ್ಷೆಯಲ್ಲಿ ಹರಿಕಾ ರಾಷ್ಟ್ರಮಟ್ಟದಲ್ಲಿ 40,958 ಹಾಗೂ ರಾಜ್ಯ ಮಟ್ಟದಲ್ಲಿ 703 ಮತ್ತು ಮೆರಿಟ್ ಆಧಾರದ ಮೇಲೆ 980 ರ್ಯಾಂಕ್ ಗಳಿಸಿ ಸಿದ್ದಿಪೇಟೆಯ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಪ್ರವೇಶ ಪಡೆದರು. ಆದರೆ ವೈದ್ಯಕೀಯ ವ್ಯಾಸಂಗ ಮಾಡಲು ಆಕೆಗೆ ಕನಿಷ್ಠ 2 ಲಕ್ಷ ರೂಪಾಯಿ ವೆಚ್ಚವಾಗಲಿದ್ದು, ಅದನ್ನು ಕುಟುಂಬಕ್ಕೆ ಭರಿಸಲು ಆಗುತ್ತಿಲ್ಲ. ಬೀಡಿ ಸುತ್ತುವ ತಾಯಿಯೇ ಕುಟುಂಬದ ಏಕೈಕ ಆದಾಯದ ಮೂಲ. ಹೀಗಾಗಿ ಹರಿಕಾಳ ವೈದ್ಯಕೀಯ ಕಾಲೇಜು ವೆಚ್ಚ ಭರಿಸಲು ಕುಟುಂಬಕ್ಕೆ ಸಾಧ್ಯವಾಗಲಿಲ್ಲ.


ಬೀಡಿ ಸುತ್ತುವ ತಾಯಿ


ನಿಜಾಮಾಬಾದ್ ಪಟ್ಟಣದ ನಾಮದೇವವಾಡ ಪ್ರದೇಶದ ಸತೀಶ್ ಕುಮಾರ್ ಮತ್ತು ಅನುರಾಧ ದಂಪತಿಗೆ ಜನಿಸಿದ ಹರಿಕಾ ಚಿಕ್ಕ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡರು. ಸಂಸಾರಕ್ಕೆ ಅನ್ನದಾತರೂ ಆಗಿದ್ದ ತಂದೆಯ ನಿಧನದ ನಂತರ ತಾಯಿಯನ್ನು ಬೀಡಿ ಸುತ್ತುವ ಕೆಲಸಕ್ಕೆ ಸೇರುವಂತೆ ಮಾಡಿತು. ಕಷ್ಟದಲ್ಲೇ ಆ ತಾಯಿ ಕುಟುಂಬವನ್ನು ಮುನ್ನಡೆಸಿಕೊಂಡು ಮಕ್ಕಳಿಗೆ ವಿದ್ಯಾಭ್ಯಾಸ ನೀಡುತ್ತಿದ್ದಾರೆ. ಹರಿಕಾಗೆ ಈಶ್ವರ್ ಎಂಬ ಸಹೋದರನಿದ್ದಾನೆ.


ಜನಪ್ರತಿನಿಧಿಗಳ ಮೊರೆ ಹೋದ ಹರಿಕಾ


ಮೆಡಿಕಲ್​ ಓದಿಗಾಗಿ ಹರಿಕಾ ಆರ್ಥಿಕ ಸಹಾಯಕ್ಕಾಗಿ ಸಾರ್ವಜನಿಕ ಪ್ರತಿನಿಧಿಯನ್ನು ಸಂಪರ್ಕಿಸಿದಳು. ಹರಿಕಾ ಅವರು ನಿಜಾಮಾಬಾದ್ ಎಂಎಲ್​ಸಿ ಕವಿತಾ ಅವರನ್ನು ಶಿಕ್ಷಣಕ್ಕೆ ಹಣಕಾಸಿನ ನೆರವು ನೀಡುವಂತೆ ಮನವಿ ಮಾಡಿದರು. ಈಕೆಯ ಸಾಧನೆಯಿಂದ ಹಿಗ್ಗಿದ ನಿಜಾಮಾಬಾದ್ ಎಂಎಲ್‌ಸಿ ಕಲ್ವಕುಂಟ್ಲ ಕವಿತಾ ಶುಲ್ಕದ ಮೊದಲ ಕಂತನ್ನು ನೀಡಿದ್ದಾರೆ.
ನ್ಯೂಸ್ 18 ಹರಿಕಾ ಅವರನ್ನು ಸಂಪರ್ಕಿಸಿದಾಗ, ಎಂಎಲ್‌ಸಿ ಅವರು ತಮ್ಮ ಶಿಕ್ಷಣಕ್ಕಾಗಿ ಎಲ್ಲಾ ವೆಚ್ಚವನ್ನು ಭರಿಸುವುದಾಗಿ ಭರವಸೆ ನೀಡಿದ್ದಾರೆ. ಇದರಿಂದ ನಾನು, ನನ್ನ ಕುಟುಂಬಕ್ಕೆ ಸಂತೋಷವಾಗಿದೆ ಎಂದು ಹೇಳಿದರು. ಬಿಜೆಪಿ ಮುಖಂಡ ಮತ್ತು ಉದ್ಯಮಿ ಧನಪಾಲ್ ಸೂರ್ಯನಾರಾಯಣ ಗುಪ್ತಾ ಅವರ ಮನೆಗೆ ಬಂದು ಧನಪಾಲ್ ಲಕ್ಷ್ಮಿ ವಿಟ್ಟಲ್ ಟ್ರಸ್ಟ್ ವತಿಯಿಂದ 25,000 ರೂಪಾಯಿಗಳ ತಕ್ಷಣದ ಆರ್ಥಿಕ ಸಹಾಯವನ್ನು ನೀಡಿದರು ಎಂದು ಹರಿಕಾ ಹೇಳಿದರು.


ನನಗೆ ಮಾಡಿದ ಸಹಾಯವನ್ನು ಸಮಾಜಕ್ಕೆ ಹಿಂತಿರುಗಿಸುವೆ


ಡಾಕ್ಟರ್ ಆದ ಮೇಲೆ ಬಡವರ ಸೇವೆ ಮಾಡುವ ಮೂಲಕ ಸಮಾಜಕ್ಕೆ ಮರುಪಾವತಿ ಮಾಡುತ್ತೇನೆ ಎಂದು ಹರಿಕಾ ಮುಖದಲ್ಲಿ ಧನ್ಯವಾದದ ಮುಗುಳ್ನಗೆ ಇತ್ತು. ಏತನ್ಮಧ್ಯೆ, MLC ಕವಿತಾ ಅವರು ಹರಿಕಾ ಮತ್ತು ಅವರ ತಾಯಿಯನ್ನು ಭೇಟಿಯಾದ ಬಗ್ಗೆ ಟ್ವೀಟ್ ಮಾಡಿದ್ದಾರೆ. ಅವರು ತಮ್ಮ ಶುಲ್ಕದ ಮೊದಲ ಕಂತನ್ನು ಹಸ್ತಾಂತರಿಸುವ ಬಗ್ಗೆ ಟ್ವೀಟ್ ಮಾಡಿದ್ದಾರೆ.


ಇದನ್ನೂ ಓದಿ: Success Story: ಆಟೋ ಡ್ರೈವರ್ ಪುತ್ರ ಈಗ ಅತ್ಯಂತ ಕಿರಿಯ IAS ಅಧಿಕಾರಿ: ಸಾಧನೆಯ ಕಥೆ ಇಲ್ಲಿದೆ


ಕನಸು ಕಾಣಲು ಧೈರ್ಯ ಮಾಡಿ ಮತ್ತು ನೀವು ಅವುಗಳನ್ನು ಸಾಧಿಸುವವರೆಗೆ ಎಂದಿಗೂ ನಿಲ್ಲಿಸಬೇಡಿ. ಯೂಟ್ಯೂಬ್ ವಿಡಿಯೋ ಮೂಲಕ ಎಂಬಿಬಿಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ಹರಿಕಾ ಅವರ ಕಥೆ ಎಲ್ಲರಿಗೂ ಸ್ಪೂರ್ತಿ. ನಾನು ಅವಳನ್ನು ಮತ್ತು ಅವಳ ತಾಯಿಯನ್ನು ಭೇಟಿಯಾಗಿ ಅವಳ ಫೀಸ್‌ನ ಮೊದಲ ಕಂತನ್ನು ಹಸ್ತಾಂತರಿಸುವ ಮೂಲಕ ಅವಳ ಕನಸುಗಳಿಗೆ ಬೆಂಬಲವನ್ನು ನೀಡಿದ್ದೇನೆ. ಬೀಡಿ ಕಾರ್ಮಿಕರಾಗಿರುವ ಒಂಟಿ ತಾಯಿಯ ಮಗಳು, ನಿಜಾಮಾಬಾದ್‌ನ ಹರಿಕಾ ಒಳ್ಳೆಯ ಡಾಕ್ಟರ್​ ಆಗಲಿ ಎಂದು ಹಾರೈಸಿ ಟ್ವೀಟ್​ ಮಾಡಿದ್ದಾರೆ.

Published by:Kavya V
First published: