• Home
 • »
 • News
 • »
 • education
 • »
 • Oxford - Harvard: ಆಕ್ಸ್‌ಫರ್ಡ್ ಮತ್ತು ಹಾರ್ವರ್ಡ್‌ ವಿಶ್ವವಿದ್ಯಾಲಯಗಳಿಗೆ 1 ಲಕ್ಷಕ್ಕೂ ಅಧಿಕ ಭಾರತೀಯ ವಿದ್ಯಾರ್ಥಿಗಳ ಅಡ್ಮಿಷನ್!

Oxford - Harvard: ಆಕ್ಸ್‌ಫರ್ಡ್ ಮತ್ತು ಹಾರ್ವರ್ಡ್‌ ವಿಶ್ವವಿದ್ಯಾಲಯಗಳಿಗೆ 1 ಲಕ್ಷಕ್ಕೂ ಅಧಿಕ ಭಾರತೀಯ ವಿದ್ಯಾರ್ಥಿಗಳ ಅಡ್ಮಿಷನ್!

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ದೆಹಲಿಯಲ್ಲಿರುವ ಯುಎಸ್ ರಾಯಭಾರ ಕಚೇರಿಯು ಕಳೆದ ತಿಂಗಳು 82,000 ಕ್ಕೂ ಹೆಚ್ಚಿನ ವಿದ್ಯಾರ್ಥಿ ವೀಸಾಗಳನ್ನು ನೀಡಿದೆ ಎಂಬುದಾಗಿ ತಿಳಿಸಿದೆ ಅಂತೆಯೇ ಇದು ದಾಖಲೆಯಾಗಿದೆ ಎಂಬುದಾಗಿ ತಿಳಿಸಿದೆ. ಈ ಹೊಸ ಪ್ರವೃತ್ತಿಗೆ ಸ್ವಾಗತ ಕೋರಿರುವ ಭಾರತದಲ್ಲಿನ US ಮಿಷನ್‌ನ ಚಾರ್ಜ್ ಡಿ'ಅಫೇರ್ಸ್ ಪೆಟ್ರೀಷಿಯಾ ಲ್ಯಾಸಿನಾ ಭಾರತದ ಈ ಪ್ರವೃತ್ತಿಗೆ ಹರ್ಷ ವ್ಯಕ್ತಪಡಿಸಿದ್ದಾರೆ.

ಮುಂದೆ ಓದಿ ...
 • Share this:

ಯುಎಸ್‌ನಲ್ಲಿನ ಅಂತರರಾಷ್ಟ್ರೀಯ ವಿದ್ಯಾರ್ಥಿ ಗುಂಪಿಗೆ ಭಾರತವು ಚೀನಾವನ್ನು (China) ಹಿಂದಿಕ್ಕಿ ಹೆಚ್ಚಿನ ಕೊಡುಗೆಯನ್ನು ನೀಡಿದೆ. ದೆಹಲಿಯಲ್ಲಿರುವ ಯುಎಸ್ ರಾಯಭಾರ ಕಚೇರಿಯು ಕಳೆದ ತಿಂಗಳು 82,000 ಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿಗೆ ವೀಸಾಗಳನ್ನು (Students Visa) ನೀಡಿದೆ ಎಂಬುದಾಗಿ ತಿಳಿಸಿದೆ. ಈ ಹೊಸ ಪ್ರವೃತ್ತಿಗೆ ಸ್ವಾಗತ ಕೋರಿರುವ ಭಾರತದಲ್ಲಿನ US ಮಿಷನ್‌ನ ಚಾರ್ಜ್ ಡಿ'ಅಫೇರ್ಸ್ ಪೆಟ್ರೀಷಿಯಾ ಲ್ಯಾಸಿನಾ ಭಾರತದ ಈ ಪ್ರವೃತ್ತಿಗೆ ಹರ್ಷ ವ್ಯಕ್ತಪಡಿಸಿದ್ದಾರೆ. 2020-2021ರ ಶೈಕ್ಷಣಿಕ ವರ್ಷದಲ್ಲಿ ಭಾರತದಿಂದ (India) 167,582 ವಿದ್ಯಾರ್ಥಿಗಳು ದಾಖಲಾಗಿದ್ದಾರೆ ಎಂದು ತಿಳಿಸಿದೆ. ಕೋವಿಡ್-19 ನಿರ್ಬಂಧಗಳನ್ನು ತೆರವುಗೊಳಿಸಿದ ಬಳಿಕ ಅವಕಾಶದ ಬಾಗಿಲುಗಳು ತೆರೆದಿವೆ ಎಂಬುದಾಗಿ ಕಾಣುತ್ತಿದೆ.


ಯುಎಸ್ ಮತ್ತು ಯುಕೆ, ಆಸ್ಟ್ರೇಲಿಯಾ, ಕೆನಡಾ, ನ್ಯೂಜಿಲೆಂಡ್ ಮತ್ತು ಇತರ ಯುರೋಪಿಯನ್ ರಾಷ್ಟ್ರಗಳಂತಹ ಇತರ ಸ್ಥಳಗಳಿಗೆ ಹೋಗುವ ಈ ವಿದ್ಯಾರ್ಥಿಗಳ ಸಾಮಾಜಿಕ ಸಂಯೋಜನೆಯನ್ನು ತಿಳಿಯಲು ನಮ್ಮಲ್ಲಿ ಯಾವುದೇ ಡೇಟಾ ಇಲ್ಲ ಆದರೆ ವಿದ್ಯಾರ್ಥಿಗಳು ಮಾಡಿರುವ ಟ್ವಿಟ್ಟರ್ ಕಾಮೆಂಟ್‌ಗಳಿಂದ ಹಿಂದುಳಿದ ಸಮುದಾಯಗಳು, ವಿಶೇಷವಾಗಿ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳು ಅಧ್ಯಯನ ನಡೆಸಲು ಪಶ್ಚಿಮದತ್ತ ತೆರಳುತ್ತಿದ್ದಾರೆ ಎಂಬುದಾಗಿ ರಾಯಭಾರ ಕಚೇರಿ ತಿಳಿಸಿದೆ.


ಉದಯೋನ್ಮುಖ ಪ್ರವೃತ್ತಿ
ಸವರ್ಣ ಹಿಂದೂಗಳಿಗೆ ಹೋಲಿಸಿದರೆ ಈ ಸಂಖ್ಯೆಗಳು ಇನ್ನೂ ಚಿಕ್ಕದಾಗಿರಬಹುದು ಆದರೆ ಈ ಪ್ರವೃತ್ತಿ ಮುಂಬರುವ ದಿನಗಳಲ್ಲಿ ಒಂದು ಉತ್ತಮ ಹೆಜ್ಜೆಯಾಗಿದೆ ಎಂದು ತಿಳಿದು ಬಂದಿದೆ. ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದ ಸಾರ್ವಜನಿಕ ಬುದ್ಧಿಜೀವಿ ಮತ್ತು ಪಿಎಚ್‌ಡಿ ವಿದ್ವಾಂಸರಾದ ಸೂರಜ್ ಯೆಂಗ್ಡೆ ತಾನು ಹೋದಲ್ಲೆಲ್ಲಾ ಅಂಬೇಡ್ಕರ್ ಮಕ್ಕಳನ್ನು ಭೇಟಿಯಾಗುತ್ತಿರುವೆ ಎಂಬುದಾಗಿ ಟ್ವೀಟ್ ಮಾಡಿದ್ದು ಡಾ ಅಂಬೇಡ್ಕರ್ ಇಂಟರ್ನ್ಯಾಷನಲ್ ಸ್ಟೂಡೆಂಟ್ಸ್ ಅಸೋಸಿಯೇಷನ್ ಅನ್ನು ಪ್ರಾರಂಭಿಸುವ ಯೋಜನೆಯನ್ನು ಅವರು ಪ್ರಸ್ತಾಪಿಸಿದರು.


ಇದನ್ನೂ ಓದಿ: NITK ಸುರತ್ಕಲ್, ಬಾಶ್ ಕಂಪೆನಿಯಿಂದ ಇಲೆಕ್ಟ್ರಿಕ್ ವೆಹಿಕಲ್‌ನಲ್ಲಿ ಎಮ್‌ಟೆಕ್ ಆರಂಭಕ್ಕೆ ಒಪ್ಪಂದ; ಏನಿದು ಕೋರ್ಸ್?


ಶಿಕ್ಷಣದ ಸಲುವಾಗಿ ವಿದೇಶಕ್ಕೆ ಹೋಗುವುದು ಭಾರತೀಯರಿಗೆ ಹೊಸದೇನಲ್ಲ. ಸ್ವಾತಂತ್ರ್ಯ ಪೂರ್ವದ ಅವಧಿಯಲ್ಲಿಯೂ ಸಹ, ಅನೇಕ ಭಾರತೀಯರು ತಮ್ಮ ಮಕ್ಕಳನ್ನು ಹೆಚ್ಚಾಗಿ ಹುಡುಗರನ್ನು ಪಾಶ್ಚಿಮಾತ್ಯ ಜಗತ್ತಿಗೆ, ವಿಶೇಷವಾಗಿ ಯುಕೆ ಮತ್ತು ಯುಎಸ್‌ಗೆ ಕಳುಹಿಸಿದ್ದರು. ಫೋರಿನ್ ರಿಟರ್ನ್ಡ್ (ಇದೀಗ ವಿದೇಶದಲ್ಲಿ ನೆಲೆಸಿದ್ದಾರೆ) ಭಾರತೀಯ ಗಣ್ಯರಿಗೆ ಇದೊಂದು ಮಾನ್ಯತೆಯ ಗುರುತಾಗಿತ್ತು. ಆ ಕಾಲದಲ್ಲಿಯೇ ವಿದೇಶದಲ್ಲಿ ಶಿಕ್ಷಣ ಪಡೆಯಬೇಕೆಂದವರಿಗೆ ನವಾಬರು, ರಾಜರು ಸಹಾಯ ಮಾಡುತ್ತಿದ್ದರು.


ಬಿ.ಆರ್ ಅಂಬೇಡ್ಕರ್ ವಿದೇಶಕ್ಕೆ ಹೋಗಲು ಮರಾಠ ದೊರೆ ಸಹಾಯ ಮಾಡಿದರು. ಸ್ವಾತಂತ್ರ್ಯದ ನಂತರ ಪ್ರಾದೇಶಿಕ ಚಲನಶೀಲತೆ ಹೆಚ್ಚಾಯಿತು ಹಾಗೂ ಹೊಸ ಗಣ್ಯ ಶಕ್ತಿಯುತ ವರ್ಗವು ರೂಪುಗೊಂಡಿತು. ಶಿಕ್ಷಕರು, ಗಣ್ಯರು, ಅಧಿಕಾರಿಗಳು ಹೀಗೆ ಬಿಳಿ ಕಾಲರ್ ವರ್ಗಗಳು ತಲೆ ಎತ್ತಿದವು. ಯುರೋಪ್ ಮತ್ತು ಉತ್ತರ ಅಮೇರಿಕಾ ಈ ವರ್ಗದ ಜನರಿಗೆ ಕನಸಿನ ಶೈಕ್ಷಣಿಕ ತಾಣವಾಯಿತು. ಅವಕಾಶವನ್ನು ಪಡೆದುಕೊಳ್ಳಲು ಜಾತಿಯಲ್ಲಿ ಉನ್ನತ ಶ್ರೇಣಿಯಲ್ಲಿದ್ದ ಗಣ್ಯರು ಮುಖ್ಯ ಸಾಲಿನಲ್ಲಿದ್ದರು. ನಿಸ್ಸಂಶಯವಾಗಿ ಇದರಿಂದ ಎಸ್‌ಸಿ ಮತ್ತು ಎಸ್‌ಟಿಗಳು ಹಿಂದುಳಿದಿದ್ದಾರೆ. ಒಬಿಸಿಗಳೂ, ಕನಸುಗಳು ಮತ್ತು ಅವಕಾಶಗಳಿಂದ ವಂಚಿತರಾಗಿದ್ದರು.


ಇದೀಗ ವಿಷಯಗಳು ಬದಲಾಗುತ್ತಿವೆ ಹಾಗೂ ಪ್ರಮುಖವಾಗಿ ಗಮನಿಸಬೇಕಾದ ಐದು ಅಂಶಗಳಿವೆ


 • ಕೇಂದ್ರ ಮತ್ತು ಅನೇಕ ರಾಜ್ಯ ಸರ್ಕಾರಗಳು ಅಂಚಿನಲ್ಲಿರುವ ಮತ್ತು ಆರ್ಥಿಕವಾಗಿ ಹಿಂದುಳಿದ ಸಮುದಾಯಗಳಿಗೆ ಸಾಗರೋತ್ತರ ವಿದ್ಯಾರ್ಥಿವೇತನವನ್ನು ನೀಡುತ್ತಿವೆ. ತಮಿಳುನಾಡು, ಮಹಾರಾಷ್ಟ್ರ ಜಾರ್ಖಂಡ್ ಈ ನಿಟ್ಟಿನಲ್ಲಿ ಯಶಸ್ವಿಯಾಗಿದ್ದರೂ ದೆಹಲಿಯ ಸಾಗರೋತ್ತರ ವಿದ್ಯಾರ್ಥಿವೇತನ ಯೋಜನೆಯು ಅದರ ಸಂಕೀರ್ಣ ಮತ್ತು ದೋಷಪೂರಿತ ಪೂರ್ವಾಪೇಕ್ಷಿತಗಳ ಕಾರಣದಿಂದಾಗಿ ಸಂಪೂರ್ಣ ವಿಫಲವಾಗಿದೆ.

 • ಹೆಚ್ಚಾಗಿ ಸರ್ಕಾರಿ ಉದ್ಯೋಗಗಳು ಮತ್ತು ಶಿಕ್ಷಣದಲ್ಲಿ ಮೀಸಲಾತಿ ನೀತಿ ಮತ್ತು ಆರ್ಥಿಕತೆಯ ಮುಕ್ತತೆಯಿಂದಾಗಿ ಭಾರತೀಯ ನಗರ ಮಧ್ಯಮ ವರ್ಗದ ಸಂಯೋಜನೆಯು ವರ್ಷಗಳಲ್ಲಿ ಬದಲಾಗಿದೆ,

 • ಪಾಶ್ಚಿಮಾತ್ಯ ಜಗತ್ತಿನಲ್ಲಿ, ವಿಶೇಷವಾಗಿ ಶೈಕ್ಷಣಿಕ ಕ್ಷೇತ್ರದಲ್ಲಿ ಜಾತಿಯ ಅಂಶವು ಈಗ ಹೆಚ್ಚು ಬಹಿರಂಗವಾಗುತ್ತಿದೆ ಮತ್ತು ಗೋಚರಿಸುತ್ತಿದೆ. ಪಶ್ಚಿಮದ ಹೆಚ್ಚು ಹೆಚ್ಚು ವಿಶ್ವವಿದ್ಯಾನಿಲಯಗಳು ಮತ್ತು ಶಿಕ್ಷಣ ವ್ಯವಸ್ಥೆಗಳು ದಕ್ಷಿಣ ಏಷ್ಯಾದ ವಲಸೆಗಾರರಲ್ಲಿ ಅನೇಕ ದೋಷಗಳನ್ನು ಗುರುತಿಸುತ್ತಿವೆ.


ಇದನ್ನೂ ಓದಿ: Career in Cyber Security: ಸೈಬರ್ ಸೆಕ್ಯುರಿಟಿ ವೃತ್ತಿಜೀವನವನ್ನು ಪ್ರಾರಂಭಿಸಲು ಉತ್ತಮ ಮಾರ್ಗಗಳಿವು

 • ಅಮೇರಿಕಾದಲ್ಲಿನ ಕೆಲವು ಘಟನೆಗಳು ಮತ್ತು ವಿವಾದಗಳು ಭಾರತದಲ್ಲಿ ಜಾತಿ ತಾರತಮ್ಯಕ್ಕೆ ಸಂಬಂಧಿಸಿದ ಜಾಗೃತಿಯನ್ನು ಹೆಚ್ಚಿಸಿವೆ. ಅವುಗಳಲ್ಲಿ ಅಗ್ರಗಣ್ಯ ಟೆಕ್ ಕಂಪನಿಗಳಲ್ಲಿ ಒಂದಾದ ಸಿಸ್ಕೋದಲ್ಲಿನ ಜಾತಿ ತಾರತಮ್ಯ ಪ್ರಕರಣವಾಗಿದೆ. ಕ್ಯಾಲಿಫೋರ್ನಿಯಾದ ಉದ್ಯೋಗ ನಿಯಂತ್ರಕರು ನೌಕರನ ಪರವಾಗಿ ಸಿಸ್ಕೋ ವಿರುದ್ಧ ಮೊಕದ್ದಮೆಯನ್ನು ಪ್ರಾರಂಭಿಸಿದರು ಹಾಗೂ ಇಬ್ಬರು ಉನ್ನತ-ಜಾತಿ ನಿರ್ವಾಹಕರು ತಾರತಮ್ಯ ಮತ್ತು ಅವರ ವೃತ್ತಿಜೀವನವನ್ನು ನಿರ್ಬಂಧಿಸಿದ್ದಾರೆ ಎಂದು ಆರೋಪಿಸಿದರು. ಇದು ಅಂತಾರಾಷ್ಟ್ರೀಯ ಮನ್ನಣೆಗಳನ್ನು ಪಡೆದುಕೊಂಡಿದೆ.

 • ಹೆಚ್ಚು ಹೆಚ್ಚು ದಲಿತ ಮತ್ತು ಬಹುಜನ ಸಂಘಟನೆಗಳು ಮತ್ತು ವ್ಯಕ್ತಿಗಳು ಬಡತನ ಅಂಚಿನಲ್ಲಿರುವ ಸಮುದಾಯಗಳ ವಿದ್ಯಾರ್ಥಿಗಳನ್ನು ಶೈಕ್ಷಣಿಕ ಮತ್ತು ಇತರ ಸಂಪನ್ಮೂಲಗಳೊಂದಿಗೆ ಸಜ್ಜುಗೊಳಿಸಲು ಶ್ರಮಿಸುತ್ತಿದ್ದಾರೆ, ಇದರಿಂದ ಅವರು ವಿದೇಶಕ್ಕೆ ಹೋಗಿ ಅಧ್ಯಯನ ಮಾಡಬಹುದಾಗಿದೆ.

Published by:Ashwini Prabhu
First published: