ಈ ಆಧುನಿಕ ಸಮಾಜದಲ್ಲಿ ಫ್ಯಾಶನ್ (Fashion) ಪ್ರತಿಯೊಬ್ಬರ ಜೀವನದ ಅವಿಭಾಜ್ಯ ಅಂಗವಾಗಿದೆ. ಆದ್ದರಿಂದ ಈ ವೃತ್ತಿಯಲ್ಲಿ ನಿಮ್ಮ ವೃತ್ತಿಜೀವನವನ್ನು ಎತ್ತರಕ್ಕೆ ಕೊಂಡೊಯ್ಯಲು ನೀವು ನಿರ್ಧರಿಸಿದರೆ ಸುಲಭವಾಗಿ ವೃತ್ತಿಜೀವನದಲ್ಲಿ (Career) ಭಾರೀ ಯಶಸ್ಸನ್ನು ಗಳಿಸಬಹುದು. ಫ್ಯಾಷನ್ ಎಂಬುದು ಎಲ್ಲರಿಗೂ ಅತಿ ಪ್ರಿಯವಾದ ವಿಷಯವಾಗಿದೆ. ಕಾಲ ಕಾಲಕ್ಕೆ ಬದಲಾಗುವ ಫ್ಯಾಶನ್ ಟ್ರೆಂಡ್‌ಗಳ (Fashion Trend) ಬಗ್ಗೆ ಯಾರು ನಮಗೆಲ್ಲ ತಿಳಿಸುತ್ತಾರೆ ಎಂಬ ಪ್ರಶ್ನೆ ಈಗಾಗಲೇ ನಿಮ್ಮ ತಲೆಯಲ್ಲಿ ಬಂದಿರಬಹುದಲ್ಲವೇ? ಹೌದು ಅಲ್ವಾ..ಈ ಫ್ಯಾಷನ್ ಬಗ್ಗೆ ತಿಳಿಸೋದಕ್ಕೆ ಯಾರು ಇರ್ತಾರೆ. ಈ ಫ್ಯಾಶನ್ ವಿಷಯದಲ್ಲಿ ಹೆಚ್ಚು ಪರಿಣಿತಿ ಪಡೆದ ಪತ್ರಕರ್ತರ (Journalists) ಗುಂಪೊಂದು ಎಲ್ಲ ಮಾಧ್ಯಮಗಳಲ್ಲೂ ಇದ್ದೆ ಇರುತ್ತದೆ.
ಆರ್ಥಿಕ ಅಭಿವೃದ್ಧಿ ಮತ್ತು ಆಧುನಿಕ ಮೌಲ್ಯಗಳ ಏರಿಕೆಯು ನಮ್ಮ ಜೀವನಶೈಲಿಯ ಮೇಲೆ ಪರಿಣಾಮ ಬೀರಿದೆ. ಇಂದು ಪ್ರತಿಯೊಬ್ಬರೂ ಉಡುಪುಗಳು, ಆಹಾರ, ಪ್ರಯಾಣ, ಶಿಕ್ಷಣ ಮತ್ತು ಸಂಬಂಧದ ವಿಷಯದಲ್ಲಿ ಅತ್ಯಾಧುನಿಕ ಜೀವನಶೈಲಿಯನ್ನು ಸಾಗಿಸಲು ಬಯಸುತ್ತಾರೆ.
ಈ ಟ್ರೆಂಡ್ ಅನ್ನು ನೋಡಿದಾಗ ಫ್ಯಾಶನ್ ಲೋಕವು ಕೆಲವು ಸಮಯದಿಂದ ಹಾಟೆಸ್ಟ್ ವೃತ್ತಿಜೀವನದ ಅನೇಕ ಆಯ್ಕೆಗಳನ್ನು ನೀಡುತ್ತಿದೆ. ಭೂಮಿಯ ಮೇಲಿನ ಪ್ರತಿಯೊಬ್ಬ ವ್ಯಕ್ತಿಯು ಮನಮೋಹಕ ಮತ್ತು ಆಕರ್ಷಕ ರೀತಿಯಲ್ಲಿ ಉಡುಗೆ ತೊಡಲು ಬಯಸುತ್ತಾರೆ ಮತ್ತು ಈ ಕಾರಣದಿಂದಾಗಿ ಫ್ಯಾಶನ್ ಲೋಕ ಅತೀ ವೇಗವಾಗಿ ಬೆಳೆಯುವ ಕ್ಷೇತ್ರವಾಗಿ ಬೆಳೆಯುತ್ತಿದೆ.
ಫ್ಯಾಶನ್ ಜರ್ನಲಿಸ್ಟ್ ವೃತ್ತಿಜೀವನ
ಇತ್ತೀಚಿನ ಫ್ಯಾಶನ್ ವಿನ್ಯಾಸಗಳು ಮತ್ತು ಪ್ರವೃತ್ತಿಗಳ ಕುರಿತು ವರದಿ ಮಾಡುವುದು ಫ್ಯಾಶನ್ ಪತ್ರಕರ್ತರ ಪ್ರಾಥಮಿಕ ಜವಾಬ್ದಾರಿಯಾಗಿದೆ. ಒಬ್ಬ ಫ್ಯಾಶನ್ ಜರ್ನಲಿಸ್ಟ್, ಫ್ಯಾಶನ್ ಬಗ್ಗೆ ಅತ್ಯುತ್ತಮ ಬರವಣಿಗೆಯ ಕೌಶಲ್ಯವನ್ನು ಹೊಂದಿರುವುದರ ಜೊತೆಗೆ, ಫ್ಯಾಶನ್ ಟ್ರೆಂಡ್‌ಗಳ ಬಗ್ಗೆಯೂ ಸಹ ಸಾಕಷ್ಟು ಮಾಹಿತಿಯನ್ನು ತಿಳಿದುಕೊಂಡಿರಬೇಕು.
ಫ್ಯಾಶನ್ ಉದ್ಯಮದಲ್ಲಿ ಕೆಲಸ ಮಾಡುವ ಪತ್ರಕರ್ತರು ಫ್ಯಾಶನ್ ಪ್ರವೃತ್ತಿಗಳಿಗೆ ಸಂಬಂಧಿಸಿದ ಲೇಖನಗಳು, ಬ್ಲಾಗ್‌ಗಳು ಮತ್ತು ಸುದ್ದಿ ತುಣುಕುಗಳನ್ನು ಪ್ರಕಟಿಸುವ ಮತ್ತು ಬರೆಯುವ ಜವಾಬ್ದಾರಿಯನ್ನು ಹೊಂದಿರುತ್ತಾರೆ. ಈ ಪ್ರಕಾರದ ಪತ್ರಿಕೋದ್ಯಮವು ಸಂಪೂರ್ಣವಾಗಿ ಮನರಂಜನೆ ಮತ್ತು ಪ್ರಚಾರ-ಕೇಂದ್ರಿತವಾಗಿದೆ ಮತ್ತು ಎಲ್ಲಾ ವರ್ಗಗಳ ವಿನ್ಯಾಸಕರನ್ನು ಸಹ ಇದು ಒಳಗೊಂಡಿರುತ್ತದೆ.
ಇದನ್ನೂ ಓದಿ: Career Growth: ಈ ರೀತಿ ಕೋರ್ಸ್ ಆಯ್ಕೆ ಮಾಡಿಕೊಂಡ್ರೆ ನಿಮ್ಮ ಕೆರಿಯರ್ ಚೆನ್ನಾಗಿರುತ್ತೆ
ಫ್ಯಾಶನ್ ಉದ್ಯಮದಲ್ಲಿ ಯಶಸ್ವಿಯಾಗಲು, ಅತ್ಯುತ್ತಮ ಬರವಣಿಗೆಯ ಕೌಶಲ್ಯವನ್ನು ಹೊಂದಿರುವುದರ ಜೊತೆಗೆ, ಫ್ಯಾಶನ್ ಪ್ರವೃತ್ತಿಗಳ ಬಗ್ಗೆ ತೀಕ್ಷ್ಣವಾದ ದೃಷ್ಟಿಯನ್ನು ಹೊಂದಿರುವುದು ಬಹಳ ಮುಖ್ಯ. ಏಕೆಂದರೆ ಅವುಗಳು ವೈರಲ್ ಆಗುವ ಮೊದಲೇ ನೀವು ಅವುಗಳನ್ನು ಗುರುತಿಸಿ ವರದಿ ಮಾಡಬೇಕಾಗುತ್ತದೆ.
ಫ್ಯಾಶನ್ ಪತ್ರಕರ್ತರಾಗಲು ಇರುವ ಕೆಲವು ಹಂತಗಳಿವು
ಹಂತ 1: ದೃಢ ನಿರ್ಧಾರವಿರಲಿ: ಫ್ಯಾಶನ್ ಜರ್ನಲಿಸ್ಟ್ ಆಗಲು ಬಯಸುವವರು ದೃಢವಾದ ನಿರ್ಧಾರದಿಂದ ಈ ಕ್ಷೇತ್ರವನ್ನು ಆರಿಸಿಕೊಂಡು ಅದಕ್ಕೆ ಬೇಕಾಗುವ ಕೌಶಲ್ಯಗಳನ್ನು ಸೂಕ್ತವಾಗಿ ಕಲಿಯಬೇಕು.
ಫ್ಯಾಶನ್ ಲೋಕದ ವಿವಿಧ ಮಜಲುಗಳನ್ನು ಕಲಿಯಬೇಕು. ನೀವು ಪತ್ರಕರ್ತರಾಗಿ ನಿಮಗೆ ಅಗತ್ಯವಿರುವ ಕೌಶಲ್ಯಗಳ ಮೇಲೆ ಕೆಲಸ ಮಾಡಲು ಪ್ರಾರಂಭಿಸಬೇಕು. ಅಂದರೆ ವರದಿ ಮಾಡುವುದು, ಬರವಣಿಗೆ, ಛಾಯಾಗ್ರಹಣ, ವೀಡಿಯೊಗ್ರಫಿ ಹೀಗೆ ಹಲವು ಕೌಶಲ್ಯಗಳಲ್ಲಿ ಮಾಸ್ಟರ್ ಆಗಬೇಕು.
ಹಂತ 2: ಇಂಟರ್ನ್‌ಶಿಪ್‌ಗೆ ಸೇರಿಕೊಳ್ಳಿ: ನಿಮ್ಮ ಅಧ್ಯಯನದ ಸಮಯದಲ್ಲಿ, ಇಂಟರ್ನ್‌ಶಿಪ್‌ಗಳ ರೂಪದಲ್ಲಿ ಕೆಲಸದ ಅನುಭವವನ್ನು ಪಡೆಯುವುದು ನಿಮ್ಮ ರೆಸ್ಯೂಮ್ ಅನ್ನು ಹೆಚ್ಚು ಅವಕಾಶಗಳು ಸಿಗಲು ಸಹಾಯ ಮಾಡುತ್ತದೆ.
ಹಂತ 3: ಸ್ಪಷ್ಟವಾದ ಆಲೋಚನಾ ಕ್ರಮವಿರಲಿ: ನೀವು ಸ್ವತಂತ್ರ ಉದ್ಯೋಗಿಯಾಗಲು ಬಯಸಿದರೆ, ಅಥವಾ ದೊಡ್ಡ ನಿಯತಕಾಲಿಕೆಗಳೊಂದಿಗೆ ಕೆಲಸ ಮಾಡಲು ಅಥವಾ ನಿಮ್ಮ ಚಾನಲ್ ಅನ್ನು ಪ್ರಾರಂಭಿಸಲು ಬಯಸುತ್ತೀರಾ ಎಂದು ಯೋಚಿಸಿ. ನಿಮ್ಮ ಆಲೋಚನೆಯಂತೆ ಮುಂದುವರಿಯಿರಿ.
ಭಾರತದಲ್ಲಿ ಫ್ಯಾಶನ್ ಪತ್ರಿಕೋದ್ಯಮದ ವೃತ್ತಿಜೀವನ
ಪ್ರಸ್ತುತ, ಫ್ಯಾಶನ್ ಜರ್ನಲಿಸ್ಟ್‌ಗಳಿಗೆ ಭಾರತೀಯ ಉದ್ಯೋಗ ಮಾರುಕಟ್ಟೆ ಬಹಳ ಆಶಾದಾಯಕವಾಗಿದೆ. ಈ ಫ್ಯಾಶನ್ ಲೋಕ ವ್ಯಾಪಕ ಶ್ರೇಣಿಯ ಕ್ಷೇತ್ರಗಳಲ್ಲಿ ಒಂದಾಗಿದೆ. ಇಲ್ಲಿ ಅನೇಕ ಖಾಲಿ ಹುದ್ದೆಗಳಿವೆ. ಪ್ರಭಾವಶಾಲಿ ಪೋರ್ಟ್ಫೋಲಿಯೊಗಳೊಂದಿಗೆ ಫ್ಯಾಶನ್ ಪತ್ರಕರ್ತರು ದೊಡ್ಡ ಫ್ಯಾಶನ್ ನಿಯತಕಾಲಿಕೆಗಳು ಮತ್ತು ಸಂಸ್ಥೆಗಳಿಗೆ ಕಾರ್ಯನಿರ್ವಾಹಕ, ನಿರ್ಮಾಪಕರ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ.
ಇದನ್ನೂ ಓದಿ: Career: ವೃತ್ತಿ ಜೀವನದ ಯಶಸ್ಸಿಗೆ ಅಧಿಕ ಜನರ ಸಂಪರ್ಕ ಬೆಳೆಸುವುದು ಹೇಗೆ ಸಹಾಯಕ?
ಫ್ಯಾಶನ್ ಛಾಯಾಗ್ರಹಣ, ಆಭರಣಗಳ ವಿನ್ಯಾಸ, ಸಾಂಪ್ರದಾಯಿಕ ಜವಳಿ ಮತ್ತು ಕರಕುಶಲ ವಸ್ತುಗಳು, ಮೇಕಪ್ ಪ್ರವೃತ್ತಿಗಳು ಮತ್ತು ಶೈಲಿಗಳು ಮತ್ತು ತಯಾರಿಕೆಯಲ್ಲಿ ಇತ್ತೀಚಿನವುಗಳ ನಡುವೆ ಭಾರತೀಯ ಫ್ಯಾಶನ್ ಲೋಕವು ತನ್ನದೇ ಆದ ಸ್ಟೈಲ್ ಅನ್ನು ಹೊಂದಿದೆ ಎಂದು ಹೇಳಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ