Vidya Turant: ವಿದ್ಯಾರ್ಥಿಗಳಿಗೆ ಶಿಕ್ಷಣ ಸಾಲ ಒದಗಿಸಲು ಐಐಎಸ್ಸಿಯೊಂದಿಗೆ ಕೆನರಾ ಬ್ಯಾಂಕ್ ಒಪ್ಪಂದ

ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಯ ಸಂದರ್ಭದಲ್ಲಿ ಹಣದ ಕೊರತೆ ಉಂಟಾಗದಂತೆ ಹಾಗೂ ಅವರು ನಿಶ್ಚಿಂತೆಯಿಂದ ವಿದ್ಯಾಭ್ಯಾಸದಲ್ಲಿ ತೊಡಗಿಕೊಳ್ಳುವ ದೃಷ್ಟಿಯಿಂದ ಕೆನರಾ ಬ್ಯಾಂಕ್, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಸಂಸ್ಥೆಯೊಂದಿಗೆ 'ವಿದ್ಯಾ ತುರಂತ್' ಯೋಜನೆಯಡಿಯಲ್ಲಿ ಸುಲಭವಾಗಿ ಸಾಲ ಒದಗಿಸುವುದಕ್ಕೆ ಸಂಬಂಧಿಸಿದಂತೆ ಮೆಮೊರಂಡಮ್ ಆಫ್ ಅಂಡರ್ಸ್ಟ್ಯಾಂಡಿಂಗ್ ಪತ್ರಕ್ಕೆ ಸಹಿ ಹಾಕಿದೆ.

 ಕೆನರಾ ಬ್ಯಾಂಕ್

ಕೆನರಾ ಬ್ಯಾಂಕ್

  • Share this:
ಇಂದಿನ ಸಮಯದಲ್ಲಿ ಶಿಕ್ಷಣ (Education) ಅದರಲ್ಲೂ ಉನ್ನತ ಮಟ್ಟದ ತಾಂತ್ರಿಕ ಶಿಕ್ಷಣವು ಸಾಕಷ್ಟು ಮಹತ್ವ ಪಡೆದುಕೊಂಡಿದೆ. ಈಗಾಗಲೇ ಭಾರತವು (India) ಕೆಲವು ಪ್ರತಿಷ್ಠಿತ ಎನ್ನುವಂತಹ ತಾಂತ್ರಿಕ ಶಿಕ್ಷಣ ಸಂಸ್ಥೆಗಳಾದ (Institute of Technical Education) ಐಐಟಿಗಳಿಂದಾಗಿ (IIT) ಜಗತ್ತಿನಲ್ಲೇ ಮನ್ನಣೆಗಳಿಸಿದೆ. ಅದರಲ್ಲೂ ಬೆಂಗಳೂರು ಮೂಲದ ಐಐಎಸ್ಸಿ (IISc) (ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್) ಪ್ರಸ್ತುತ ಭಾರತದಲ್ಲೇ ಮೊದಲ ಸ್ಥಾನದಲ್ಲಿರುವ ಅತ್ಯುನ್ನತ ಹಾಗೂ ಪ್ರತಿಷ್ಠಿತ ತಾಂತ್ರಿಕ ಶಿಕ್ಷಣ ಸಂಸ್ಥೆಯಾಗಿದೆ. ದೇಶದಲ್ಲಿರುವ ಸಾವಿರಾರು ಪ್ರತಿಭಾವಂತ ವಿದ್ಯಾರ್ಥಿಗಳು ( Talented Students) ಐಐಎಸ್ಸಿ ಸೇರಬೇಕೆಂಬ ಕನಸು ಹೊತ್ತಿರುವುದು ಸುಳ್ಳಲ್ಲ.

ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಸಹಾಯವಾಗುವ ಎಜುಕೇಶನ್ ಲೋನ್ ಗಳು
ಆದರೆ, ಇಂತಹ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಹೇಗೆ ವಿದ್ಯಾರ್ಜನೆ ಎಂಬುದು ಉನ್ನತ ಮಟ್ಟದ್ದಾಗಿದೆಯೋ ಅದರಂತೆ ಆ ಶಿಕ್ಷಣ ಪಡೆಯುವುದೂ ಸಹ ದುಬಾರಿ. ಒಬ್ಬ ಪ್ರತಿಭಾವಂತ ವಿದ್ಯಾರ್ಥಿ ಅದರಲ್ಲೂ ಮಧ್ಯಮ ವರ್ಗದ ಕುಟುಂಬದವರಿಂದ ಬಂದವರಾಗಿದ್ದರೆ ಇಂತಹ ಉನ್ನತ ತಾಂತ್ರಿಕ ಶಿಕ್ಷಣ ಪಡೆಯಲು ಹಾಗೂ ಅವನು ಅಥವಾ ಅವಳು ಆ ಶೈಕ್ಷಣಿಕ ವಿದ್ಯಾಭ್ಯಾಸದ ಭಾಗವಾಗಿರುವ ಪ್ರಾಜೆಕ್ಟ್ ಗಳನ್ನು ನಿಭಾಯಿಸಲು ಸಾಕಷ್ಟು ಹಣ ವ್ಯಯಿಸಬೇಕಾಗಿರುವುದು ಸಾಮಾನ್ಯ ಸಂಗತಿ. ಇಂತಹ ಸಂದರ್ಭದಲ್ಲಿ ಕೆಲ ವಿದ್ಯಾರ್ಥಿಗಳು ಈ ಹಣ ಹೊಂದಿಸಲು ಸಾಕಷ್ಟು ಕಷ್ಟಪಡಬೇಕಾಗಿರುವುದು ಅನಿವಾರ್ಯ ಎಂಬಂತಾಗುತ್ತದೆ.

ಇಂತಹ ಕಷ್ಟದ ಸಂದರ್ಭಗಳನ್ನು ನಿಭಾಯಿಸಲೆಂದೇ ಹಾಗೂ ಅರ್ಹ ವಿದ್ಯಾರ್ಥಿಗಳು ಹಣ ಹೊಂದಾಣಿಕೆಯ ಕಷ್ಟದಲ್ಲಿ ಸಿಲುಕದೆ ತಮ್ಮ ವಿದ್ಯಾಭ್ಯಾಸದ ಕಡೆಗೆ ಗಮನ ಹರಿಸಲೆಂದು ಶಿಕ್ಷಣ ಸಾಲ ಎಂಬುದು ಸಾಕಷ್ಟು ಸಹಾಯಕ್ಕೆ ಬರುತ್ತದೆ. ಶಿಕ್ಷಣ ಸಾಲದ ಮುಖ್ಯ ಪ್ರಯೋಜನ ಎಂದರೆ ಒಬ್ಬ ಅರ್ಹ ವಿದ್ಯಾರ್ಥಿಯು ತನ್ನ ವಿದ್ಯಾಭ್ಯಾಸಾರ್ಜನೆಗೆ ತಗುಲುವ ವೆಚ್ಚವನ್ನು ಸುಲಭವಾಗಿ ಭರಿಸುವುದಷ್ಟೇ ಅಲ್ಲದೆ ಅತಿ ಕಡಿಮೆ ಬಡ್ಡಿದರದಲ್ಲಿ ಅತಿ ಹೆಚ್ಚು ಕಾಲಾವಧಿಯ ಸೌಲಭ್ಯ ಪಡೆದು ಪಡೆದ ಸಾಲವನ್ನು ಬ್ಯಾಂಕಿಗೆ ಹಿಂತಿರುಗಿಸಬಹುದಾಗಿದೆ.

'ವಿದ್ಯಾ ತುರಂತ್' ಯೋಜನೆ
ಈಗಾಗಲೇ, ಈ ಎಜುಕೇಶನ್ ಲೋನ್ ಎಂಬುದು ಸಾಕಷ್ಟು ಸಾಮಾನ್ಯವಾಗಿದ್ದು ಸಾವಿರಾರು ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದಿದ್ದಾರೆ. ಈಗ ಈ ನಿಟ್ಟಿನಲ್ಲಿ ಕೆನರಾ ಬ್ಯಾಂಕ್ ಬೆಂಗಳೂರಿನ ಪ್ರತಿಷ್ಠಿತ ಐಐಎಸ್ಸಿಯೊಂದಿಗೆ ಹೀಗೆ ಶಿಕ್ಷಣ ಸಾಲವನ್ನು ವಿದ್ಯಾರ್ಥಿಗಳಿಗೆ ಒದಗಿಸುವ ಸಂಬಂಧ ತಿಳುವಳಿಕೆ ಪತ್ರಕ್ಕೆ ಸಹಿ ಮಾಡಿಕೊಂಡಿದೆ. ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಯ ಸಂದರ್ಭದಲ್ಲಿ ಹಣದ ಕೊರತೆ ಉಂಟಾಗದಂತೆ ಹಾಗೂ ಅವರು ನಿಶ್ಚಿಂತೆಯಿಂದ ವಿದ್ಯಾಭ್ಯಾಸದಲ್ಲಿ ತೊಡಗಿಕೊಳ್ಳುವ ದೃಷ್ಟಿಯಿಂದ ಕೆನರಾ ಬ್ಯಾಂಕ್, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಸಂಸ್ಥೆಯೊಂದಿಗೆ 'ವಿದ್ಯಾ ತುರಂತ್' ಯೋಜನೆಯಡಿಯಲ್ಲಿ ಸುಲಭವಾಗಿ ಸಾಲ ಒದಗಿಸುವುದಕ್ಕೆ ಸಂಬಂಧಿಸಿದಂತೆ ಮೆಮೊರಂಡಮ್ ಆಫ್ ಅಂಡರ್ಸ್ಟ್ಯಾಂಡಿಂಗ್ ಪತ್ರಕ್ಕೆ ಸಹಿ ಹಾಕಿದೆ.

ಇದನ್ನೂ ಓದಿ: Bengaluru: ಮಕ್ಕಳಲ್ಲಿ ಹೆಚ್ಚಾಗುತ್ತಿದೆ ವೈರಲ್ ಸೋಂಕುಗಳು: ವೈದ್ಯರು ಹೇಳುವುದೇನು ನೋಡಿ

ಈ ಯೋಜನೆಯ ವಿಶೇಷತೆ ಎಂದರೆ, ಇದರಲ್ಲಿ ವಿದ್ಯಾರ್ಥಿಗಳು ಯಾವುದೇ ಅಡಮಾನಗಳು ಅಥವಾ ಮೇಲಾಧಾರಗಳನ್ನಿಡದೆ ಶಿಕ್ಷಣ ಸಾಲವನ್ನು ಪಡೆಯಬಹುದಾಗಿದೆ. ಅಲ್ಲದೆ, ಅವರು ತಮ್ಮ ಶಿಕ್ಷಣದಲ್ಲಿ ಮಾಡುವ ಪ್ರಾಜೆಕ್ಟ್ ಗಳಿಗೆ ತಗುಲುವ ವೆಚ್ಚದ ಸಂಪೂರ್ಣ ಪ್ರಮಾಣವನ್ನೂ ಸಹ ಪಡೆಯಬಹುದಾಗಿದೆ. ಅಲ್ಲದೆ, ಹೀಗೆ ಪಡೆದ ಸಾಲವನ್ನು ವಿದ್ಯಾರ್ಥಿಗಳು ಹಿಂತಿರುಗಿಸಲು ಅವರಿಗೆ ಫ್ಲೆಕ್ಸಿಬಲ್ ಮರುಪಾವತಿ ಅವಧಿಯನ್ನು ಕರುಣಿಸಲಾಗಿದ್ದು ಇದರ ಪ್ರಮಾಣ ಗರಿಷ್ಠ 15 ವರ್ಷಗಳವರೆಗೂ ಇದೆ.

ವಿದ್ಯಾರ್ಥಿಗಳ ಭವಿಷ್ಯ ಉಜ್ವಲಗೊಳಿಸಿಕೊಳ್ಳಲು ನೆರವಿನ ಹಸ್ತ
ಇನ್ನು ಈ ಸಾಲವನ್ನು ವಿದ್ಯಾರ್ಥಿಗಳು ತಾವು ವಾಸದ ಸ್ಥಳದಿಂದ ಇಲ್ಲವೆ ಐಐಎಸ್ಸಿಗೆ ಪ್ರವೇಶ ಪಡೆದ ಸ್ಥಳದಿಂದಲೂ ಪಡೆಯಬಹುದಾಗಿದೆ. ಪ್ರಸ್ತುತ, ಈ ವಿದ್ಯಾ ತುರಂತ್ ಯೋಜನೆಯ ಕುರಿತಾದ ತಿಳುವಳಿಕೆ ಪತ್ರದ ಮೇಲೆ ಕೆನರಾ ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕರಾದ ಆರ್. ಪಿ ಜೈಸ್ವಾಲ್ ಹಾಗೂ ಐಐಎಸ್ಸಿಯ ರೆಜಿಸ್ಟ್ರಾರ್ ಆಗಿರುವ ಕ್ಯಾಪ್ಟನ್ ಶ್ರೀಧರ್ ವಾರಿಯರ್ (ನಿವೃತ್ತ) ಹಸ್ತಾಕ್ಷರ ಹಾಕಿದ್ದಾರೆಂದು ವರದಿಯಾಗಿದೆ.

ಇದನ್ನೂ ಓದಿ: Midday Meal: ಟೀಚರ್ ಇವತ್ತು ನಮಗೆ ಮೊಟ್ಟೆ ಬೇಡ, ಬಾಳೆಹಣ್ಣು ಕೊಡಿ; ಸಂದಿಗ್ಧ ಪರಿಸ್ಥಿತಿಯಲ್ಲಿ ಶಿಕ್ಷಕರು

ಒಟ್ಟಿನಲ್ಲಿ ಇದೊಂದು ಉತ್ತಮ ನಡೆಯಾಗಿದ್ದು ಇದು ನಿಜವಾಗಿಯೂ ಅರ್ಹವಾಗಿರುವ ವಿದ್ಯಾರ್ಥಿಗಳಿಗೆ ತಮ್ಮ ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳಲು ನೆರವಿನ ಹಸ್ತ ನೀಡಲಿದೆ. ಈ ಮೂಲಕ ನೈಜ ಪ್ರತಿಭೆಯುಳ್ಳ ವಿದ್ಯಾರ್ಥಿಗಳು ಇಂತಹ ಅತ್ಯುನ್ನತ ಶಿಕ್ಷಣ ಕೇಂದ್ರಗಳಲ್ಲಿ ಅಧ್ಯಯನ ಮಾಡಿ ಮುಂದೆ ಏನನ್ನಾದರೂ ಸಾಧಿಸಿದರೆ ಅದು ನಮ್ಮ ದೇಶದ ಹೆಸರನ್ನು ಮತ್ತಷ್ಟು ಮೇಲಕ್ಕೆ ಒಯ್ಯಬಲ್ಲುದು ಎಂದರೆ ತಪ್ಪಾಗಲಿಕ್ಕಿಲ್ಲ.
Published by:Ashwini Prabhu
First published: