Arts Students: ಕಲಾ ವಿಭಾಗದ ಮೇಲಿರುವ ತಪ್ಪು ಕಲ್ಪನೆಗಳಿಂದ ಹೊರ ಬನ್ನಿ, ಇದರಲ್ಲೂ ಇವೆ ವಿಫುಲ ಅವಕಾಶಗಳು

ಕಲಾ ವಿಭಾಗದಲ್ಲಿ ಅಧ್ಯಯನ ನಡೆಸಿದವರು ಮುಂದಿನ ವೃತ್ತಿ ಜೀವನಕ್ಕೆ ಅನುಕೂಲಕರವಾದ ಯಾವೆಲ್ಲಾ ಆಯ್ಕೆಗಳಲ್ಲಿ ಅಧ್ಯಯನ ನಡೆಸಬಹುದು? ಕಲಾ ವಿಭಾಗ ಕೂಡ ವಿದ್ಯಾರ್ಥಿಗಳ ಉತ್ತಮ ಭವಿಷ್ಯಕ್ಕೆ ಹೇಗೆ ಕೊಡುಗೆ ನೀಡುತ್ತದೆ? ಎಂಬ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ವಿದ್ಯಾರ್ಥಿಗಳು (Students) ತಮ್ಮ ಪ್ರೌಢಶಾಲೆಯ ನಂತರ ಉನ್ನತ ಶಿಕ್ಷಣವನ್ನು ಪಡೆಯಲು ಕಲೆ, ವಾಣಿಜ್ಯ, ವಿಜ್ಞಾನ ವಿಭಾಗವನ್ನು ಆಯ್ಕೆಮಾಡಿಕೊಳ್ಳುತ್ತಾರೆ. ಈ ಮೂರು ವಿಭಾಗಗಳಲ್ಲಿ ವಿದ್ಯಾರ್ಥಿಗಳ ನೆಚ್ಚಿನ ಆಯ್ಕೆ ಕಲಾ (ಆರ್ಟ್ಸ್) (Arts) ವಿಭಾಗವಾಗಿದೆ. ಭವಿಷ್ಯದಲ್ಲಿ ವಿದ್ಯಾರ್ಥಿಗಳಿಗೆ ಹಲವಾರು ಕೋರ್ಸ್‌ಗಳು (Courses) ಅಂತೆಯೇ ವೃತ್ತಿಗೆ ಸಂಬಂಧಿಸಿದ ವಿಫುಲ ಅವಕಾಶಗಳನ್ನು ಕಲಾ ವಿಭಾಗ ಒದಗಿಸುತ್ತದೆ. ಆದರೆ, ಈ ವಿಭಾಗದಲ್ಲಿ ಕಲಿಯುವುದು ಮುಂದಿನ ಭವಿಷ್ಯಕ್ಕೆ ಅಷ್ಟೊಂದು ಉತ್ತಮವಲ್ಲ ಎಂಬುದು ಹೆಚ್ಚಿನ ವಿದ್ಯಾರ್ಥಿಗಳ ಅಂತೆಯೇ ಪೋಷಕರ (Parents) ಮನೋಭಾವವಾಗಿದೆ. ವಿಜ್ಞಾನ ಹಾಗೂ ವಾಣಿಜ್ಯ (Commerce) ವಿಭಾಗಗಳಲ್ಲಿ ಪ್ರವೇಶ ದೊರೆಯದ, ಕಡಿಮೆ ಅಂಕ ಪಡೆದುಕೊಂಡ ವಿದ್ಯಾರ್ಥಿಗಳು ಮಾತ್ರವೇ ಈ ವಿಭಾಗವನ್ನು ಆಯ್ಕೆಮಾಡಿಕೊಳ್ಳುತ್ತಾರೆ ಎಂಬ ತಪ್ಪು ಕಲ್ಪನೆ ಇಂದಿಗೂ ನಡೆದುಕೊಂಡು ಬರುತ್ತಿದೆ ಎಂಬುದು ಖೇದಕರ ಸಂಗತಿಯಾಗಿದೆ.

ಆದರೆ, ಇಂದಿನ ಲೇಖನದಲ್ಲಿ ಕಲಾ ವಿಭಾಗದಲ್ಲಿ ಅಧ್ಯಯನ ನಡೆಸಿದವರು ಮುಂದಿನ ವೃತ್ತಿ ಜೀವನಕ್ಕೆ ಅನುಕೂಲಕರವಾದ ಯಾವೆಲ್ಲಾ ಆಯ್ಕೆಗಳಲ್ಲಿ ಅಧ್ಯಯನ ನಡೆಸಬಹುದು? ಕಲಾ ವಿಭಾಗ ಕೂಡ ವಿದ್ಯಾರ್ಥಿಗಳ ಉತ್ತಮ ಭವಿಷ್ಯಕ್ಕೆ ಹೇಗೆ ಕೊಡುಗೆ ನೀಡುತ್ತದೆ? ಎಂಬ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ.

ಕಲಾ ವಿಭಾಗದ ಮೇಲಿರುವ ತಪ್ಪುಕಲ್ಪನೆ
ಕಲಾ ವಿಭಾಗವೆಂದರೆ ಮೊದಲಿನಂದಲೂ ಮೂಗು ಮುರಿಯುವವರೇ ಹೆಚ್ಚು. ಈ ವಿಭಾಗವನ್ನು ಆಯ್ದುಕೊಂಡವರು ಅಷ್ಟೊಂದು ಪ್ರತಿಭಾವಂತರಲ್ಲ ಎಂಬುದೊಂದು ವಿಚಾರವಿದೆ. ಆದರೆ ಕಲಾ ವಿಭಾಗ ಕೂಡ ವಿದ್ಯಾರ್ಥಿಗಳಿಗೆ ವಿಫುಲ ಅವಕಾಶವನ್ನೊದಗಿಸುತ್ತದೆ ಎಂಬುದು ಇಂದಿನ ದಿನಗಳಲ್ಲಿ ಸಾಬೀತುಗೊಳ್ಳುತ್ತಿದೆ. ಯುಎಸ್‌ಸಿ, ಸಿವಿಲ್ ಸರ್ವೀಸ್, ಮೊದಲಾದ ಕ್ಷೇತ್ರಗಳಲ್ಲಿ ಕಲಾ ವಿಭಾಗದ ಪಠ್ಯ ಪ್ರವಚನಗಳೇ ಹೆಚ್ಚು ಸಹಕಾರಿಯಾಗಿರುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲೂ ಕಲಾ ವಿಷಯಗಳೇ ಹೆಚ್ಚು ಸಹಾಯವನ್ನು ಒದಗಿಸುತ್ತವೆ.

ಪ್ರಮುಖ ಉಪ-ವಿಭಾಗಗಳು:
ಕಲಾ ವಿಭಾಗವು ಅವಕಾಶಗಳ ಭರ್ಜರಿ ನೆಲೆಯಾಗಿದೆ. ವಿದ್ಯಾರ್ಥಿಗಳು ಇಲ್ಲಿ ತಮಗೆ ಇಷ್ಟವಾಗುವ ಉಪ ವಿಭಾಗಗಳ ಆಯ್ಕೆಯನ್ನು ಮಾಡಬಹುದಾಗಿದೆ. ಆ ವಿಭಾಗಗಳು ಯಾವುವು ಎಂಬುದನ್ನು ತಿಳಿದುಕೊಳ್ಳೋಣ.

ಹ್ಯುಮಾನಿಟೀಸ್:
ಈ ವಿಭಾಗವನ್ನು ಪದಗಳಲ್ಲಿ ವರ್ಣಿಸುವುದು ಕೊಂಚ ಕಷ್ಟವಾದರೂ ವಿದ್ಯಾರ್ಥಿಗಳ ವೃತ್ತಿ ರಂಗಕ್ಕೆ ಇದು ಹೆಚ್ಚು ಸಹಕಾರಿಯಾಗಿದೆ. ಮಾನವ ಪರಿಸ್ಥಿತಿಗಳ ಅಧ್ಯಯನಕ್ಕೆ ಈ ವಿಭಾಗ ಉಪಯೋಗಕಾರಿ. ಐತಿಹಾಸಿಕ ಹಿನ್ನೆಲೆಯನ್ನು ಅನಾವರಣಗೊಳಿಸುವುದು, ಮಾನವ ಸಮಾಜದಲ್ಲಿ ಮಾನವ ನಡವಳಿಕೆ, ಸಾಮಾಜಿಕ-ಸಾಂಸ್ಕೃತಿಕ, ಆರ್ಥಿಕ ಮತ್ತು ರಾಜಕೀಯ ವ್ಯವಸ್ಥೆಗಳ ವಿಕಾಸದ ಹಿಂದಿನ ಕಾರಣಗಳನ್ನು ಅರ್ಥಮಾಡಿಕೊಳ್ಳುವುದು ಮೊದಲಾದ ಅಂಶಗಳನ್ನು ಒಳಗೊಂಡಿದೆ. ಇದರಲ್ಲೂ ಇನ್ನಷ್ಟು ವಿಭಾಗಗಳಿದ್ದು ಅವುಗಳಲ್ಲಿ ಪ್ರಮುಖವಾದವುಗಳು ಇಂತಿವೆ.

  • ಇತಿಹಾಸ

  • ಭಾಷೆಗಳು

  • ಸಾಹಿತ್ಯ

  • ಕಾನೂನು

  • ತತ್ವಶಾಸ್ತ್ರ

  • ಧರ್ಮ

  • ಕಲೆ ಪ್ರದರ್ಶನ

  • ಮಾನವಶಾಸ್ತ್ರ

  • ಸಂವಹನ

  • ಸಮಾಜಶಾಸ್ತ್ರ

  • ಮನಃಶಾಸ್ತ್ರ


ಲಲಿತ ಕಲೆ:
ಲಲಿತಕಲೆಯು ತನ್ನ ಸೌಂದರ್ಯದ ಮೌಲ್ಯ ಮತ್ತು ಸೌಂದರ್ಯಕ್ಕಾಗಿ ಮಾತ್ರ ಅಭ್ಯಾಸ ಮಾಡುವ ಕಲಾ ಪ್ರಕಾರವನ್ನು ಉಲ್ಲೇಖಿಸುತ್ತದೆ. ಲಲಿತ ಕಲೆ ಎನ್ನುವುದು ದೃಶ್ಯ ಕಲೆಗಳು, ಪ್ರದರ್ಶನ ಕಲೆಗಳು ಮತ್ತು ಸಾಹಿತ್ಯ ಕಲೆಗಳನ್ನು ಒಳಗೊಂಡಿರುವ ವಿಭಾಗವಾಗಿದೆ. ಲಲಿತ ಕಲೆಯ ಅಧ್ಯಯನವು ಸೃಜನಶೀಲ ಕೌಶಲ್ಯ ಮತ್ತು ಚಿಂತನೆಯ ಪ್ರಕ್ರಿಯೆಯ ಬೆಳವಣಿಗೆಯನ್ನು ಸೂಚಿಸುತ್ತದೆ.

ದೃಶ್ಯ ಕಲೆ:
ಹೆಸರೇ ಸೂಚಿಸುವಂತೆ, ದೃಶ್ಯ ಕಲೆಗಳು ದೃಶ್ಯ ಕಲಾ ಪ್ರಕಾರಗಳ ಬೆಳವಣಿಗೆಗೆ ಸಂಬಂಧಿಸಿದ ಕ್ಷೇತ್ರವಾಗಿದೆ. ಇದು ಪ್ರಸಿದ್ಧ ಕಲಾವಿದರು ಮತ್ತು ಅವರ ಕೃತಿಗಳ ಬಗ್ಗೆ ಕಲಿಯುವುದು ಮತ್ತು ಅವರ ಪ್ರೇರಣೆಯನ್ನು ಅರ್ಥಮಾಡಿಕೊಳ್ಳುವುದನ್ನು ಒಳಗೊಂಡಿದೆ. ಚಿತ್ರಕಲೆ, ಶಿಲ್ಪಕಲೆ ಮೊದಲಾದವು ಈ ವಿಭಾಗದಲ್ಲಿ ಬರುತ್ತವೆ. ಚಿತ್ರಕಲೆ, ಡ್ರಾಯಿಂಗ್, ಶಿಲ್ಪಕಲೆ ಛಾಯಾಗ್ರಹಣ, ಪರಿಕಲ್ಪನಾ ಕಲೆಗಳು, ವಾಸ್ತುಶಿಲ್ಪ, ನೇಯ್ಗೆ, ಬಟ್ಟೆಗಳು ಇತ್ಯಾದಿ.

ಇದನ್ನೂ ಓದಿ: IAS-IPS Family: ಈ ಕುಟುಂಬದಲ್ಲಿ ಮೂವರು ಐಎಎಸ್, ಒಬ್ಬರು ಐಪಿಎಸ್! ಇವರ ಕಥೆ ಇಂಟ್ರೆಸ್ಟಿಂಗ್

ಪ್ರದರ್ಶನ ಕಲೆ:
ಪ್ರದರ್ಶನ ಕಲೆಯು ಲಲಿತಕಲೆಗಳ ಉಪ-ಡೊಮೇನ್ ಆಗಿದೆ. ವಿದ್ಯಾರ್ಥಿಯಲ್ಲಿ ಪ್ರದರ್ಶನ ಕಲೆಯ ಕೌಶಲ್ಯಗಳ ಬೆಳವಣಿಗೆಯನ್ನು ಒಳಗೊಂಡಿರುತ್ತದೆ. ಪ್ರದರ್ಶನ ಕಲೆಗಳ ಅಧ್ಯಯನವು ಸಂಗೀತ, ನಟನೆ, ನೃತ್ಯ ಮತ್ತು ರಂಗಭೂಮಿಯಂತಹ ಕ್ಷೇತ್ರಗಳನ್ನು ಒಳಗೊಂಡಿದೆ. ಇನ್ನಷ್ಟು ವಿಷಯಗಳನ್ನು ಈ ವಿಭಾಗಗಳಲ್ಲಿ ಕಲಿತುಕೊಳ್ಳಬಹುದಾಗಿದೆ.

  • ಸಂಗೀತ

  • ರಂಗಮಂದಿರ

  • ನೃತ್ಯ

  • ಗಾಯನ

  • ನಟನೆ

  • ಹಾಸ್ಯ

  • ನಿರ್ದೇಶನ

  • ನೃತ್ಯ ಸಂಯೋಜನೆ

  • ಸಂಪಾದನೆ

  • ಸಮರ ಕಲೆ


ಸಾಹಿತ್ಯ ಕಲೆಗಳು:
ಹೆಸರೇ ಸೂಚಿಸುವಂತೆ, ಸಾಹಿತ್ಯ ಕಲೆಗಳು ಸಾಹಿತ್ಯ ಕಲಾಕೃತಿಗಳ ಅಭಿವೃದ್ಧಿಯನ್ನು ಆಧರಿಸಿವೆ, ಅಂದರೆ ಪುಸ್ತಕಗಳು ಮತ್ತು ಕಾದಂಬರಿಗಳು. ಬರವಣಿಗೆ ಮತ್ತು ಕಥೆ-ಹೇಳುವುದು ಸಾಹಿತ್ಯ ಕಲೆಗಳನ್ನು ಅಧ್ಯಯನ ಮಾಡುವಾಗ ಕೇಂದ್ರೀಕರಿಸುವ ಪ್ರಮುಖ ಕೌಶಲ್ಯಗಳಾಗಿವೆ. ಈ ವಿಭಾಗದಲ್ಲಿ ಕಲಿಯಬಹುದಾದ ಇತರ ವಿಷಯಗಳು ಹೀಗಿವೆ:

  • ಕಾವ್ಯ

  • ಕಾದಂಬರಿ

  • ಸಣ್ಣ ಕಥೆಗಳು

  • ಮಹಾಕಾವ್ಯಗಳು

  • ಬರವಣಿಗೆ


ಕಲಾ ವಿಭಾಗದಲ್ಲಿ ಹೆಚ್ಚಿನ ಅಧ್ಯಯನ:
10 ನೇ ತರಗತಿಯ ನಂತರ ಉನ್ನತ ವಿದ್ಯಾಭ್ಯಾಸವನ್ನು ಆಯ್ಕೆಮಾಡುವಾಗ ವಿದ್ಯಾರ್ಥಿಗಳು ಪರಿಗಣಿಸಬೇಕಾದ ಹಲವು ಅಂಶಗಳಲ್ಲಿ ಹೆಚ್ಚಿನ ಅಧ್ಯಯನಕ್ಕೆ ಪೂರಕವಾಗಿರುವ ಅಂಶಗಳಿಗೆ ಗಮನ ನೀಡುವುದು ಅತ್ಯಂತ ನಿರ್ಣಾಯಕವಾದದ್ದು. ವಿಜ್ಞಾನ ಮತ್ತು ವಾಣಿಜ್ಯ ಸ್ಟ್ರೀಮ್‌ಗಳಲ್ಲಿ ಪ್ರಮುಖ ವಿಷಯಗಳು ಸಾಮಾನ್ಯವಾಗಿರುವಾಗ ಕಲಾ ವಿಭಾಗದಲ್ಲಿ ಆಯ್ಕೆಗಳು ವಿಫುಲವಾಗಿರುತ್ತವೆ. ಹೀಗಾಗಿ ವೃತ್ತಿಗೆ ಆದ್ಯತೆ ನೀಡಿ ಕೋರ್ಸ್‌ಗಳ ವಿಧಗಳ ಆಯ್ಕೆಯನ್ನು ಮಾಡಬೇಕಾಗುತ್ತದೆ.

ಪದವಿ ಕೋರ್ಸ್‌ಗಳು:
ಬ್ಯಾಚುಲರ್ ಆಫ್ ಆರ್ಟ್ಸ್ / ಬಿ.ಎ ಅತ್ಯಂತ ಜನಪ್ರಿಯ ಪದವಿಪೂರ್ವ ಹಂತದ ಕೋರ್ಸ್ ಆಗಿದ್ದು ವಿದ್ಯಾರ್ಥಿಗಳಿಗೆ ಪ್ರೌಢಶಾಲೆ ಕಲಿಕೆಯನ್ನು ಪೂರ್ಣಗೊಳಿಸಿದ ನಂತರ ಅಧ್ಯಯನ ಮಾಡುವಂತಹದ್ದಾಗಿದೆ. ಇದರಲ್ಲಿರುವ ಇತರ ವಿಭಾಗಗಳೆಂದರೆ

ಇತಿಹಾಸದಲ್ಲಿ ಬಿ.ಎ ಪದವಿ, ಭೌಗೋಳಿಕದಲ್ಲಿ ಬಿ.ಎ ಪದವಿ, ರಾಜ್ಯಶಾಸ್ತ್ರ, ಸಾರ್ವಜನಿಕ ಆಡಳಿತ, ಇಂಗ್ಲಿಷ್ ಸಾಹಿತ್ಯದಲ್ಲಿ, ಅರ್ಥಶಾಸ್ತ್ರದಲ್ಲಿ ಬಿ.ಎ ಪದವಿಯನ್ನು ಅಭ್ಯಸಿಸಬಹುದಾಗಿದೆ.

ತಾಂತ್ರಿಕ ಕೋರ್ಸ್‌ಗಳು:
ಇನ್ನು ನೀವು ಕಲಾ ವಿಭಾಗವನ್ನು ಆರಿಸಿಕೊಂಡಿದ್ದೀರೆಂದು ಟೆಕ್ ಆಧಾರಿತ ಕೋರ್ಸ್‌ಗಳನ್ನು ಮಾಡಬಾರದು ಎಂದೇನಿಲ್ಲ. ಕಲಾ ವಿಭಾಗದವರಿಗಾಗಿ ಕೂಡ ತಾಂತ್ರಿಕ ಕೋರ್ಸ್‌ಗಳಿವೆ ಅವೆಂದರೆ ಬಿಸಿಎ (ಬ್ಯಾಚುಲರ್ ಆಫ್ ಕಂಪ್ಯೂಟರ್ ಅಪ್ಲಿಕೇಶನ್) ಬ್ಯಾಚುಲರ್ ಆಫ್ ಆರ್ಕಿಟೆಕ್ಚರ್.

ಇದನ್ನೂ ಓದಿ:  PUC ಆಯ್ತು ಮುಂದೇನು ಮಾಡೋದು ಅಂತ ಯೋಚ್ನೆ ಮಾಡ್ತಾ ಇದ್ದೀರಾ? ಹಾಗಿದ್ರೆ ಇಲ್ಲಿದೆ ಬೆಸ್ಟ್ ಫ್ಯೂಚರ್ ಪ್ಲಾನ್

ಕಾನೂನು ಕೋರ್ಸ್‌ಗಳು:
ನಿಮಗೆ ಕಾನೂನು ವಿಷಯಗಳಲ್ಲಿ ಆಸಕ್ತಿ ಇದೆ ಎಂದಾದಲ್ಲಿ ಕಾನೂನು ಪದವಿ ಅಭ್ಯಾಸವನ್ನು ಮಾಡಬಹುದು. ಪದವಿ ಅರ್ಹತೆಯ ಮೇರೆಗೆ ಕಾನೂನು ಕೋರ್ಸ್‌ಗಳನ್ನು ಮಾಡಬಹುದು.

  • ಬಿ.ಎ+ ಎಲ್‌.ಎಲ್‌.ಬಿ (ಬ್ಯಾಚುಲರ್ ಆಫ್ ಆರ್ಟ್ಸ್ ಹಾಗೂ ಬ್ಯಾಚುಲರ್ ಆಫ್ ಲೆಜೆಸ್ಲೇಟೀವ್ ಲಾ

  • ಬಿಬಿಎ+ಎಲ್‌ಎಲ್‌ಬಿ – ಬ್ಯಾಚುಲರ್ ಆಫ್ ಬ್ಯುಸಿನೆಸ್ ಅಡ್ಮಿನಿಸ್ಟ್ರೇಶನ್ ಹಾಗೂ ಬ್ಯಾಚುಲರ್ ಆಫ್ ಲೆಜೆಸ್ಲೇಟೀವ್ ಲಾ


ಮ್ಯಾನೇಜ್‌ಮೆಂಟ್ ಕೋರ್ಸ್‌ಗಳು:
ವೃತ್ತಿ ಯೋಜನೆ ಮತ್ತು ಬೆಳವಣಿಗೆಗೆ ಸಂಬಂಧಿಸಿದಂತೆ ಮ್ಯಾನೇಜ್‌ಮೆಂಟ್ ಕೋರ್ಸ್‌ಗಳು ಉತ್ತಮ ಅಡಿಪಾಯಕ್ಕೆ ಬುನಾದಿಯಾಗಿದೆ. ಆರ್ಟ್ಸ್ ವಿಭಾಗದ ವಿದ್ಯಾರ್ಥಿಗಳಿಗೆ, ಹನ್ನೆರಡನೇ ತರಗತಿಯನ್ನು ಪೂರ್ಣಗೊಳಿಸಿದ ನಂತರ ಹಲವಾರು ಮ್ಯಾನೇಜ್‌ಮೆಂಟ್ ಕೋರ್ಸ್‌ಗಳು ಲಭ್ಯವಿವೆ. ಇವುಗಳಲ್ಲಿ ಸ್ನಾತಕೋತ್ತರ ಪದವಿ ಮಟ್ಟದ ಕೋರ್ಸ್‌ಗಳು, ಸಂಯೋಜಿತ ಐದು ವರ್ಷಗಳ ಕೋರ್ಸ್‌ಗಳು ಮತ್ತು ಅಲ್ಪಾವಧಿಯ ಪ್ರಮಾಣೀಕರಣ ಕೋರ್ಸ್‌ಗಳು ಸೇರಿವೆ. ಆದಾಗ್ಯೂ, ಅವುಗಳಲ್ಲಿ ಅತ್ಯಂತ ಜನಪ್ರಿಯವಾದವುಗಳು:

  • ಬಿಬಿಎ (ಬ್ಯಾಚುಲರ್ ಆಫ್ ಬಿಸಿನೆಸ್ ಅಡ್ಮಿನಿಸ್ಟ್ರೇಷನ್)

  • ಬಿಎಮ್‌ಎಸ್ (ಬ್ಯಾಚುಲರ್ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್)

  • ಇಂಟಿಗ್ರೇಟೆಡ್ ಬಿಬಿಎ + ಎಮ್‌ಬಿಎ ಪ್ರೋಗ್ರಾಂ (5 ವರ್ಷಗಳ ಅವಧಿ)

  • ಬಿಎಚ್‌ಎಮ್ (ಬ್ಯಾಚುಲರ್ ಆಫ್ ಹೋಟೆಲ್ ಮ್ಯಾನೇಜ್ಮೆಂಟ್)

  • ರಿಟೇಲ್ ಮ್ಯಾನೇಜ್‌ಮೆಂಟ್ (ಡಿಪ್ಲೊಮಾ)


ಫ್ಯಾಶನ್ ಡಿಸೈನ್/ ಡಿಸೈನ್ ಕೋರ್ಸ್‌ಗಳು:
ಡಿಸೈನಿಂಗ್ ಕಲೆಯ ವಿದ್ಯಾರ್ಥಿಗಳಿಗೆ, ವಿಶೇಷವಾಗಿ ದೃಶ್ಯ ಕಲೆಗಳ ಸ್ಟ್ರೀಮ್‌ನಲ್ಲಿ ಪರಿಣತಿ ಹೊಂದಿರುವ ವಿದ್ಯಾರ್ಥಿಗಳಿಗೆ ಇದು ಅನುಕೂಲಕರವಾಗಿದೆ. ಆದ್ದರಿಂದ, ಕಲಾ ವಿಭಾಗದ ವಿದ್ಯಾರ್ಥಿಗಳಿಗೆ ಡಿಸೈನ್ ವಿಭಾಗದಲ್ಲಿ ಹಲವಾರು ಪದವಿಪೂರ್ವ ಹಂತದ ಕೋರ್ಸ್‌ಗಳು ಲಭ್ಯವಿದೆ

  • ಬ್ಯಾಚುಲರ್ ಆಫ್ ಟೆಕ್ಸ್‌ಟೈಲ್ ಡಿಸೈನ್

  • ಬ್ಯಾಚುಲರ್ ಆಫ್ ಡಿಸೈನ್ (ಆ್ಯಕ್ಸೆಸರಿ)

  • ಬ್ಯಾಚುಲರ್ ಆಫ್ ಫ್ಯಾಶನ್ ಕಮ್ಯುನಿಕೇಷನ್

  • ಬ್ಯಾಚುಲರ್ ಆಫ್ ಇಂಟೀರಿಯರ್ ಡಿಸೈನಿಂಗ್

  • ಬ್ಯಾಚುಲರ್ ಆಫ್ ಪ್ರಾಡಕ್ಟ್ ಡಿಸೈನ್

  • ಫರ್ನಿಚರ್ ಮತ್ತು ಇಂಟೀರಿಯರ್ ಡಿಸೈನ್ ಕೋರ್ಸ್

  • ಬ್ಯಾಚುಲರ್ ಆಫ್ ಡಿಸೈನ್ (ಲೆದರ್)

  • ಬ್ಯಾಚುಲರ್ ಆಫ್ ಫ್ಯಾಶನ್ ಡಿಸೈನ್ ಮತ್ತು ಟೆಕ್ನಾಲಜಿ


ಸರಿಯಾದ ಕೋರ್ಸ್‌ಗಳು / ಉಪ-ವಿಭಾಗವನ್ನು ಆರಿಸುವುದು ಹೇಗೆ?
ಆರ್ಟ್ಸ್ ವಿಷಯಕ್ಕೆ ಬಂದಾಗ, ಹೆಚ್ಚಿನ ವಿದ್ಯಾರ್ಥಿಗಳು ಫೈನ್ ಆರ್ಟ್ಸ್ ಉಪ-ವಿಭಾಗದೊಂದಿಗೆ ಕೆಲವು ಆಯ್ಕೆಗಳನ್ನು ಮಾಡುವ ಮೂಲಕ ಮಾನವಿಕ ವಿಷಯಗಳಿಗೆ ಆದ್ಯತೆ ನೀಡುತ್ತಾರೆ. ಪ್ರೌಢಶಾಲೆ ಒಂದು ಅಡಿಪಾಯ ಹಂತವಾಗಿರುವುದರಿಂದ, ಈ ಅವಧಿಯಲ್ಲಿ ಕಲಾ ವಿಭಾಗದಡಿಯಲ್ಲಿ ಬರುವ ವಿವಿಧ ವಿಷಯಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಲಾಗುತ್ತದೆ. ಆದಾಗ್ಯೂ, ಕೋರ್ಸ್‌ಗಳು ಅಥವಾ ಉಪ-ವಿಭಾಗದ ಆಯ್ಕೆಗೆ ಬಂದಾಗ, ವಿದ್ಯಾರ್ಥಿಗಳು ಆಸಕ್ತಿ, ಕಲಿಕಾ ಸಾಮರ್ಥ್ಯ ಅಂತೆಯೇ ಮುಂದಿನ ಭವಿಷ್ಯದ ಕಲಿಕೆಗೆ ಸಹಕಾರಿಯಾಗಿರುವ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು.

ಕಲಾ ವಿಭಾಗದ ವಿದ್ಯಾರ್ಥಿಗಳಿಗೆ ಉದ್ಯೋಗವಕಾಶಗಳು:
ಕಲಾ ವಿಭಾಗದ ವಿದ್ಯಾರ್ಥಿಗಳು ಹೆಚ್ಚಿನ ಉದ್ಯೋಗ ಅವಕಾಶಗಳನ್ನು ಹೊಂದಿದ್ದಾರೆ. ತಮ್ಮ ಆಸಕ್ತಿಯ ಕ್ಷೇತ್ರ ಇಲ್ಲವೇ ಬೋಧನಾ ಕ್ಷೇತ್ರದಲ್ಲಿ ವೃತ್ತಿ ಆಯ್ಕೆಯನ್ನು ಮಾಡಿಕೊಳ್ಳಬಹುದು. ಅಂತೆಯೇ ಆಯ್ಕೆ ಮಾಡುವ ಮುಂದಿನ ಅಧ್ಯಯನದ ಆಯ್ಕೆಯನ್ನು ಅವಲಂಬಿಸಿ ಅವರು ಇತರ ವೃತ್ತಿ ಆಯ್ಕೆಗಳನ್ನು ಅನ್ವೇಷಿಸಬಹುದು.

ಇದನ್ನೂ ಓದಿ:  Explained: ಅಮೆರಿಕಾದಲ್ಲಿ ಕಾಲೇಜು ಓದುತ್ತಲೇ ವಿದ್ಯಾರ್ಥಿಗಳು ಕೆಲಸ ಮಾಡಬಹುದೇ?

ವ್ಯಾಪಾರ ನಿರ್ವಹಣೆ, ವಕೀಲ ವೃತ್ತಿ, ಸಂಗೀತ, ನೃತ್ಯ, ಕಲಾವಿದ, ನಟ, ಉದ್ಯಮಿ, ಅರ್ಥಶಾಸ್ತ್ರಜ್ಞ, ಸಂಖ್ಯಾಶಾಸ್ತ್ರಜ್ಞ, ವಾಸ್ತುಶಿಲ್ಪಿಗಳು, ಫ್ಯಾಷನ್ ವಿನ್ಯಾಸಕರು, ಬರಹಗಾರರು, ಇತಿಹಾಸಕಾರ ಮತ್ತು ಪುರಾತತ್ವಶಾಸ್ತ್ರಜ್ಞರು ಹೀಗೆ ಹಲವಾರು ಬಗೆಯ ವೃತ್ತಿಗಳು ಸೇರಿವೆ. ಅದೇ ರೀತಿ ಐಎಎಸ್, ಐಪಿಎಸ್, ಐಎಫ್‌ಎಸ್ ಮತ್ತು ಇತರ ಉನ್ನತ ಮಟ್ಟದ ಹುದ್ದೆಗಳಿಗೆ ನಡೆಸುವ ಅರ್ಹತಾ ಪರೀಕ್ಷೆಯಾಗಿರುವ ಯುಪಿಎಸ್‌ಸಿ ನಾಗರಿಕ ಸೇವಾ ಪರೀಕ್ಷೆಯಲ್ಲಿ ಕೂಡ ಕಲಾ ವಿಭಾಗದ ವಿದ್ಯಾರ್ಥಿಗಳು ಪಾಲ್ಗೊಂಡು ಉನ್ನತ ಹುದ್ದೆಯನ್ನಲಂಕರಿಸಿಕೊಳ್ಳಬಹುದು.
Published by:Ashwini Prabhu
First published: