• Home
  • »
  • News
  • »
  • education
  • »
  • E Books: ನಿಮ್ಮ ಮಕ್ಕಳು ಹೆಚ್ಚಾಗಿ ಮೊಬೈಲ್ ಬಳಸುತ್ತಿದ್ದಾರಾ? ಹಾಗಾದರೆ ಅವರಿಗೆ ಇ-ಬುಕ್​ ಪರಿಚಯಿಸಿ

E Books: ನಿಮ್ಮ ಮಕ್ಕಳು ಹೆಚ್ಚಾಗಿ ಮೊಬೈಲ್ ಬಳಸುತ್ತಿದ್ದಾರಾ? ಹಾಗಾದರೆ ಅವರಿಗೆ ಇ-ಬುಕ್​ ಪರಿಚಯಿಸಿ

ಇ-ಬುಕ್​

ಇ-ಬುಕ್​

ಇ ಓದುವಿಕೆಯ ಸಂತೋಷವನ್ನು ಅನೇಕ ಜನರು ಇತ್ತೀಚೆಗೆ ಕಂಡುಹಿಡಿದಿದ್ದಾರೆ. ಇದು ನಿಮ್ಮ ಮಕ್ಕಳ ಪದಕೋಶ ಅಭಿವೃದ್ಧಿಗೂ ಪೂರಕವಾಗುತ್ತದೆ.

  • Share this:

ಈಗ ಕಾಲ ಮೊದಲಿನಂತಿಲ್ಲ. ಎಲ್ಲವೂ ಡಿಜಿಟಲ್​ಮಯವಾಗಿದೆ. ಆಟ, ಪಾಠ ಎರಡೂ ಸಹ ಮೊಬೈಲ್​ನಲ್ಲೇ (Mobile) ಲಭ್ಯವಿದೆ. ಅಷ್ಟೇಅಲ್ಲ ಇನ್ನೂ ಅನೇಕ ಅಂಶಗಳನ್ನು ನಾವು ದಿನನಿತ್ಯ ಮೊಬೈಲ್​ ಮೂಕಲ ಪಡೆಯುತ್ತೇವೆ. ಕೋವಿಡ್ (Covid)​ ನಂತರ ಶಿಕ್ಷಣ ಕ್ಷೇತ್ರವೂ ಸಹ ಅಂತರ್ಜಾಲಕ್ಕೆ ತುಂಬಾ ಹೊಂದಿಕೊಂಡಿದೆ. ಅಷ್ಟೇ ಏಕೆ ಆನ್​ಲೈನ್​ ತರಗತಿಯಿಂದ ಹಿಡಿದು ಇ-ಬುಕ್ (E-Book)​, ಇ-ಲರ್ನಿಂಗ್​ ಈಗ ಆರಂಭವಾಗಿದೆ. ಇಲ್ಲಿ ಮಕ್ಕಳಿಗೆ (Children) ಪ್ರಯೋಜನವಾಗುವ ಕೆಲವು ಬುಕ್​ ಆ್ಯಪ್​ಗಳ ಮಾಹಿತಿ ನೀಡಲಾಗಿದೆ. ನಿಮ್ಮ ಮಕ್ಕಳಿಗೂ ನೀವು ಈ ಆ್ಯಪ್​ಗಳ ಪರಿಚಯ ಮಾಡಿಸಿ.


1. ಕಿಟಾಬೂ
Android, Windows ಮತ್ತು iOSನಲ್ಲಿ ನೀವು ಈ ಪುಸ್ತಕ ಕೇಳಬಹುದು. KITABOO ಶಿಕ್ಷಣಕ್ಕಾಗಿ ಸಂವಾದಾತ್ಮಕ ಇಬುಕ್ ಅಪ್ಲಿಕೇಶನ್ ಆಗಿದೆ. ಅಪ್ಲಿಕೇಶನ್​ ಬಳಸಿ ವಿದ್ಯಾರ್ಥಿಗಳು ಸುಲಭವಾಗಿ ಇ-ಪುಸ್ತಕಗಳನ್ನು ಡೌನ್‌ಲೋಡ್ ಮಾಡಲು ಮತ್ತು ಸೇವ್ ಆದ ನಂತರ ಆಫ್‌ಲೈನಲ್ಲಿ ಓದುವ ವೈಶಿಷ್ಟ್ಯದೊಂದಿಗೆ ಇದು ಮಕ್ಕಳಿಗೆ ತುಂಬಾ ಪ್ಯೋಜನದಾಯಕವಾಗಿದೆ. ಸಂವಾದಾತ್ಮಕ ವೈಶಿಷ್ಟ್ಯಗಳು ಮತ್ತು ಮಲ್ಟಿಮೀಡಿಯಾ ಅಂಶಗಳನ್ನೂ ಸಹ ಇದು ಹೊಂದಿದೆ.


ಈ ಪುಸ್ತಕಗಗಳ ಪ್ರಯೋಜನಗಳು
1. ವಿದ್ಯಾರ್ಥಿಗಳು ತಮ್ಮಿಷ್ಟದ ಪುಸ್ತಕವನ್ನು ಆಯ್ಕೆ ಮಾಡಿಕೊಳ್ಳಲು ಮತ್ತು ಅದನ್ನು ಓದಲು ಇದು ಸಹಕಾರಿ.
2. ಗ್ರಂಥಾಲಯಗಳಿಗೆ ಹೋಗಿ ಬರಬೇಕೆಂದಿಲ್ಲ.
3. ನೀವು ಈ ಪುಸ್ತಕಗಳನ್ನು ಎಲ್ಲಿ ಬೇಕಾದರೂ ಓದಬಹುದು.
4. ಬುಕ್​ಮಾರ್ಕ್​ ಮಾಡಿಕೊಳ್ಳುವ ಆಯ್ಕೆ ಕೂಡ ಇರುತ್ತದೆ.
5. ಪಠ್ಯವನ್ನು ಹೈಲೈಟ್ ಮಾಡುವುದು, ಗೊತ್ತಿಲ್ಲದ ಅಂಶಗಳ ಅರ್ಥವನ್ನು ಅಲ್ಲೇ ಕಂಡುಹಿಡಿಯಲು ಇದು ಸಹಕಾರಿಯಾಗಿದೆ.


ಇದನ್ನೂ ಓದಿ: ಕೇರಳದಲ್ಲಿ ಇಸ್ಲಾಮಿಕ್ ಸಂಸ್ಥೆಯ ಮಕ್ಕಳಿಗೆ ಸಂಸ್ಕೃತ ಬೋಧನೆ!


2. ಅಲ್ಡಿಕೊ ಬುಕ್ ರೀಡರ್
ಅಲ್ಡಿಕೊ ಬುಕ್ ರೀಡರ್ PDF ಮತ್ತು ePub ಫಾರ್ಮ್ಯಾಟ್‌ಗಳಲ್ಲಿ ಪುಸ್ತಕಗಳನ್ನು ನೀಡುವ ಆ್ಯಪ್​ ಇದಾಗಿದೆ. ಅಪ್ಲಿಕೇಶನ್‌ನ ಮುಖ್ಯಾಂಶವೆಂದರೆ ಇದು ಸ್ವಯಂಚಾಲಿತ ಪುಸ್ತಕ ಇದನ್ನು ಸೇವ್ ಮಾಡದೆಯೂ ಓದಬಹುದು. ಆದ್ದರಿಂದ ನಿಮ್ಮ ಮೊಬೈಲ್​ನಲ್ಲಿ ಮೆಮೊರಿ ಜಾಗವನ್ನು ತುಂಬಿಸುತ್ತೆ ಎನ್ನುವ ಭಯ ಬೇಡ. ಎಷ್ಟು ಪುಸ್ತಕ ಬೇಕಾದರೂ ನೀವು ಓದಬಹುದು. ಸುಲಭವಾಗಿ ನಿಮಗೆ ಬೇಕಾದ ಪುಸ್ತಕಗಳನ್ನು ನೀವು ಇದರಲ್ಲಿ ಓದಬಹುದು.


3. FB ರೀಡರ್
ಎಫ್‌ಬಿ ರೀಡರ್ ವಿದ್ಯಾರ್ಥಿಗಳಿಗೆ ತಿಳಿದಿರುವ ಜನಪ್ರಿಯ ಇಬುಕ್ ರೀಡರ್ ಅಪ್ಲಿಕೇಶನ್ ಆಗಿದೆ. ಇದು ನಿಮ್ಮ ಲೈಬ್ರರಿ, ಬುಕ್‌ಮಾರ್ಕ್‌ಗಳು ಮತ್ತು ಇತರೆ ಮಾಹಿತಿಯನ್ನು Google ಡ್ರೈವ್ ಆಧಾರಿತ ಕ್ಲೌಡ್ ಸೇವೆಯೊಂದಿಗೆ ಹೊಂದಿಸಿಡುತ್ತದೆ. ನೀವು ಓದುವಾಗ ನಿಮ್ಮ ಮೊಬೈಲ್​ ಬ್ರೈಟ್​ನೆಸ್​ ಹೆಚ್ಚು ಕಡಿಮೆ ಆಯ್ಕೆ ಹೊಂದಿರುತ್ತೀರಿ.


4. ಕೈಬುಕ್
ವಿಶೇಷವಾಗಿ iOS ಮತ್ತು iPadOSಗಾಗಿ ಇದನ್ನು ವಿನ್ಯಾಸಗೊಳಿಸಲಾಗಿದೆ. KyBook ವಿದ್ಯಾರ್ಥಿಗಳಿಗೆ ಹಲವು ಪುಸ್ತಕಗಳನ್ನು ಒದಗಿಸುತ್ತದೆ. ಇದರಲ್ಲಿ ನಿಮಗೆ ಯಾವ ಪುಸ್ತಕಬೇಕೋ ಆ ಪುಸ್ತಕಗಳ ಫೋಲ್ಡರ್​ ಕ್ರಯೇಟ್​ ಮಾಡಿಕೊಳ್ಳಬಹುದು. ಫಾಂಟ್ ಶೈಲಿ, ಬಣ್ಣ ಥೀಮ್ ಮತ್ತು ಪಠ್ಯವನ್ನು ನೀವು ಇದರಲ್ಲಿ ನಿಮ್ಮ ಅನುಕೂಲಕ್ಕೆ ತಕ್ಕಂತೆ ಬದಲಾಯಿಸಬಹುದು. ನೀವು ಓದುವುದನ್ನು ನಿಲ್ಲಿಸಲು ಬಯಸಿದಾಗ ಟೈಮರ್ ಸೆಟ್​ಮಾಡಿ ಇಡಬಹುದು.


1. ನೀವೂ ಈ ಪುಸ್ತಕಗಳನ್ನು ಯಾವಾಗಲೂ ನಿಮ್ಮ ಸ್ವಂತ ಪುಸ್ತಕದಂತೆ ಬಳಸಬಹುದು.
2. ಯಾವುದೇ ಹೆಚ್ಚಿನ ಶುಲ್ಕ ಪಾವತಿಸಬೇಕಾಗಿಲ್ಲ
3. 1000ಕ್ಕೂ ಅಧಿಕ ಪುಸ್ತಕಗಳನ್ನು ನೀವು ನಿಮ್ಮ ಜೇಬಿನಲ್ಲಿ ಇಟ್ಟು ಓಡಾಬಹುದು. ಅಗತ್ಯ ಬಿದ್ದಾಗ ತಕ್ಷಣ ತೆರೆದು ನೋಡಬಹುದು.
4. ಪರಿಚಯವಿಲ್ಲದ ಭಾಷೆ ಮತ್ತು ಪರಿಚಯವಿಲ್ಲದ ಪದಗಳನ್ನು ನೀವು ಅಲ್ಲೇ ಭಾಷಾಂತರಿಸಿ ನೋಡಬಹುದು
5. ನಿಮಗೆ ಯಾವ ರೀತಿಯ ಪುಸ್ತಕ ಬೇಕೆಂದು ಆಯ್ಕೆ ಮಾಡಬಹುದು.
6. ನೀವು ಕೆಲವೊಂದು ಪುಸ್ತಕಗಳನ್ನು ಕೇಳಲೂಬಹುದು.

First published: