• Home
  • »
  • News
  • »
  • education
  • »
  • Best Universities: ವಿಶ್ವದ ಅತ್ಯುತ್ತಮ ವಿಶ್ವವಿದ್ಯಾಲಯಗಳ ಕೇಂದ್ರವಾಗಿ ಉಳಿಯದ ಅಮೆರಿಕ!

Best Universities: ವಿಶ್ವದ ಅತ್ಯುತ್ತಮ ವಿಶ್ವವಿದ್ಯಾಲಯಗಳ ಕೇಂದ್ರವಾಗಿ ಉಳಿಯದ ಅಮೆರಿಕ!

ವಿಶ್ವದ ಅತ್ಯುತ್ತಮ ವಿಶ್ವವಿದ್ಯಾಲಯಗಳ ಕೇಂದ್ರವಾಗಿ ಉಳಿಯದ ಅಮೆರಿಕ

ವಿಶ್ವದ ಅತ್ಯುತ್ತಮ ವಿಶ್ವವಿದ್ಯಾಲಯಗಳ ಕೇಂದ್ರವಾಗಿ ಉಳಿಯದ ಅಮೆರಿಕ

ಇತ್ತೀಚಿಗೆ ಪ್ರಕಟವಾದ ಟೈಮ್ಸ್ ಹೈಯರ್ ಎಜುಕೇಶನ್ ವರ್ಲ್ಡ್ ಯೂನಿವರ್ಸಿಟಿ ಶ್ರೇಯಾಂಕಗಳ 19 ನೇ ವಾರ್ಷಿಕ ಆವೃತ್ತಿಯು ಇದನ್ನು ಸ್ಪಷ್ಟಪಡಿಸಿದೆ. ಇದರ ಪ್ರಕಾರ, ವಿಶ್ವದ ಅಗ್ರ 100 ವಿಶ್ವವಿದ್ಯಾನಿಲಯಗಳಲ್ಲಿ ಅಮೆರಿಕದ ಪಾಲು ಕುಸಿಯುತ್ತಿದೆ. ಅದರ ಜೊತೆಗೆ ಚೀನಾ ನೇತೃತ್ವದ ಪೂರ್ವ ಏಷ್ಯಾದ ರಾಷ್ಟ್ರಗಳು ಮತ್ತು ಮಧ್ಯಪ್ರಾಚ್ಯದ ಪಾಲು ಹೆಚ್ಚಾಗುತ್ತಿದೆ. 2018 ರಲ್ಲಿ ವಿಶ್ವದ ಅಗ್ರ 100 ಸ್ಥಾನಗಳಲ್ಲಿ ಸುಮಾರು ಅರ್ಧದಷ್ಟು ಅಂದರೆ 43 ವಿಶ್ವವಿದ್ಯಾನಿಲಯಗಳನ್ನು ಹೊಂದಿರುವ ಖ್ಯಾತಿ ಅಮೆರಿಕದ್ದಾಗಿತ್ತು.

ಮುಂದೆ ಓದಿ ...
  • Share this:

ಜಗತ್ತು (World) ಬದಲಾಗುತ್ತಿದೆ. ಹಾಗೆಯೇ ಇಂದು ಜ್ಞಾನದ ಭೌಗೋಳಿಕ ರಾಜಕೀಯವು ಬದಲಾಗ್ತಿದೆ. ಇತ್ತೀಚಿಗೆ ಪ್ರಕಟವಾದ ಟೈಮ್ಸ್ ಹೈಯರ್ ಎಜುಕೇಶನ್ ವರ್ಲ್ಡ್ ಯೂನಿವರ್ಸಿಟಿ ಶ್ರೇಯಾಂಕಗಳ 19 ನೇ ವಾರ್ಷಿಕ ಆವೃತ್ತಿಯು ಇದನ್ನು ಸ್ಪಷ್ಟಪಡಿಸಿದೆ. ಇದರ ಪ್ರಕಾರ, ವಿಶ್ವದ ಅಗ್ರ 100 ವಿಶ್ವವಿದ್ಯಾನಿಲಯಗಳಲ್ಲಿ (University) ಅಮೆರಿಕದ (America) ಪಾಲು ಕುಸಿಯುತ್ತಿದೆ. ಅದರ ಜೊತೆಗೆ ಚೀನಾ (China) ನೇತೃತ್ವದ ಪೂರ್ವ ಏಷ್ಯಾದ ರಾಷ್ಟ್ರಗಳು ಮತ್ತು ಮಧ್ಯಪ್ರಾಚ್ಯದ ಪಾಲು ಹೆಚ್ಚಾಗುತ್ತಿದೆ. 2018 ರಲ್ಲಿ ವಿಶ್ವದ ಅಗ್ರ 100 ಸ್ಥಾನಗಳಲ್ಲಿ ಸುಮಾರು ಅರ್ಧದಷ್ಟು ಅಂದರೆ 43 ವಿಶ್ವವಿದ್ಯಾನಿಲಯಗಳನ್ನು ಹೊಂದಿರುವ ಖ್ಯಾತಿ ಅಮೆರಿಕದ್ದಾಗಿತ್ತು.


ಆದರೆ ಈಗಿನ ಆವೃತ್ತಿಯಲ್ಲಿ ಆ ಸಂಖ್ಯೆ ಕುಸಿತ ಕಂಡಿದ್ದು, 34 ವಿಶ್ವವಿದ್ಯಾಲಯಗಳನ್ನಷ್ಟೇ ಅಮೆರಿಕ ಹೊಂದಿದೆ. ಡಾರ್ಟ್‌ಮೌತ್ ಕಾಲೇಜ್‌, ಓಹಿಯೋ ಸ್ಟೇಟ್ ಮತ್ತು ಮಿಶಿಗನ್ ಸ್ಟೇಟ್ ಸೇರಿದಂತೆ ಉತ್ತಮ ಪ್ರಾದೇಶಿಕ ಶಕ್ತಿ ಕೇಂದ್ರಗಳು 100 ರಲ್ಲಿ ತಮ್ಮ ಸ್ಥಾನವನ್ನು ಕಳೆದುಕೊಂಡಿವೆ.


2 ರಿಂದ 7 ಕ್ಕೇರಿದ ಚೀನಾ!


ಈ ಮಧ್ಯೆ, ಚೀನಾದಲ್ಲಿ ವಿಶ್ವದರ್ಜೆಯ ಅತ್ಯುತ್ತಮ ವಿಶ್ವವಿದ್ಯಾಲಯಗಳು 2 ರಿಂದ 7 ಕ್ಕೇರಿವೆ. 2018 ರಲ್ಲಿ ವಿಶ್ವದ ಅಗ್ರ 100 ಸ್ಥಾನಗಳ ಪಾಲು ಕೇವಲ 2 ಆಗಿತ್ತು. ಇದೀಗ ಚೀನಾ ಅಂತಹ 7 ವಿಶ್ವವಿದ್ಯಾಲಯಗಳನ್ನು ಹೊಂದಿದೆ. ಹಾಂಗ್ ಕಾಂಗ್ 5 ಉನ್ನತ ಸಂಸ್ಥೆಗಳನ್ನು ಹೊಂದಿದೆ. ಇನ್ನು, ದಕ್ಷಿಣ ಕೊರಿಯಾ, 2018 ರಲ್ಲಿ ಎರಡು ಸ್ಥಾನಗಳನ್ನು ಹೊಂದಿದ್ದು ಇದೀಗ ಮೂರು ಅಗ್ರ ವಿಶ್ವವಿದ್ಯಾಲಯಗಳನ್ನು ಹೊಂದಿದೆ. ಜೊತೆಗೆ ಸಿಂಗಾಪುರ ಮತ್ತು ಜಪಾನ್ ಕೂಡ ತಲಾ ಎರಡು ಅಗ್ರ ವಿಶ್ವವಿದ್ಯಾಲಯಗಳನ್ನು ಹೊಂದಿವೆ.


ಇದನ್ನೂ ಓದಿ:  Superhighway: ಸಮುದ್ರತೀರದಲ್ಲಿ ಪ್ರಾಚೀನ ಸೂಪರ್ ಹೈವೇ ಪತ್ತೆ!


ಮಧ್ಯಪ್ರಾಚ್ಯದಲ್ಲಿ, ಸೌದಿ ಅರೇಬಿಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ಮುಂಚೂಣಿಯಲ್ಲಿದೆ. ಇದನ್ನು ಕೆಲವರು ಭಾರೀ ಹೂಡಿಕೆಯ ಬೆಂಬಲದೊಂದಿಗೆ ನಾವೀನ್ಯತೆ ಮತ್ತು ಜ್ಞಾನದ ಸೃಷ್ಟಿಯಿಂದ ನಡೆಸಲ್ಪಡುತ್ತಿರುವ “ಹೊಸ ನವೋದಯ” ಎಂದು ಕರೆಯುತ್ತಿದ್ದಾರೆ. ಸೌದಿಯ ಕಿಂಗ್ ಅಬ್ದುಲಜೀಜ್ ವಿಶ್ವವಿದ್ಯಾನಿಲಯವು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ವಿಶ್ವವಿದ್ಯಾನಿಲಯಗಳಲ್ಲಿ ಒಂದಾಗಿದೆ. ಕಳೆದ ವರ್ಷ 190 ನೇ ಸ್ಥಾನದಿಂದ ಈ ವರ್ಷ 101 ನೇ ಸ್ಥಾನಕ್ಕೆ ಏರಿದೆ. ಈ ವರ್ಷ ವಿಶ್ವ ಶ್ರೇಯಾಂಕದಲ್ಲಿ ರಾಷ್ಟ್ರೀಯ ಸರಾಸರಿ ಸ್ಕೋರ್‌ನಿಂದ ಕಿಂಗ್‌ಡಮ್ ಹೆಚ್ಚು ಸುಧಾರಿತ ರಾಷ್ಟ್ರವಾಗಿದೆ.


UAE ಯಲ್ಲಿ, 2023 ರ ಒಟ್ಟಾರೆ ವಿಶ್ವ ಶ್ರೇಯಾಂಕದಲ್ಲಿ ಸೇರಿಸಲಾದ ಆರು UAE ವಿಶ್ವವಿದ್ಯಾನಿಲಯಗಳಲ್ಲಿ, ಐದು ಏರಿಕೆಯಲ್ಲಿವೆ. ಯುನೈಟೆಡ್ ಅರಬ್ ಎಮಿರೇಟ್ಸ್ ವಿಶ್ವವಿದ್ಯಾಲಯ ಮತ್ತು ಶಾರ್ಜಾ ವಿಶ್ವವಿದ್ಯಾಲಯದ ನೇತೃತ್ವದಲ್ಲಿ, ಇವೆರಡೂ ಈ ವರ್ಷ ವಿಶ್ವದ ಟಾಪ್ 300 ಪಟ್ಟಿಗೆ ಏರಿವೆ ಅನ್ನೋದು ವಿಶೇಷ.


ಈ ಬಾರಿಯೂ ಅಗ್ರಸ್ಥಾದಲ್ಲಿ ಆಕ್ಸ್‌ ಫರ್ಡ್‌ ವಿಶ್ವವಿದ್ಯಾಲಯ!


ಇನ್ನು ಲಂಡನ್‌ ನ ಆಕ್ಸ್‌ ಫರ್ಡ್‌ ವಿಶ್ವವಿದ್ಯಾಲಯವು, ವಿಶ್ವದ ಅಗ್ರ ವಿಶ್ವವಿದ್ಯಾನಿಲಯ ಶ್ರೇಯಾಂಕದಲ್ಲಿ ಸತತ ಏಳನೇ ವರ್ಷದಲ್ಲೂ ಅಗ್ರಸ್ಥಾನ ಪಡೆದಿದೆ. ಅದು ಅಂತರಾಷ್ಟ್ರೀಯ ಜ್ಞಾನ ಹಂಚಿಕೆಗೆ ಹೆಸರುವಾಸಿಯಾದ ವಿಶ್ವವಿದ್ಯಾನಿಲಯವಾಗಿದೆ. ಆಕ್ಸ್‌ಫರ್ಡ್ ನಂತರದ ಸ್ಥಾನದಲ್ಲಿ ಹಾರ್ವರ್ಡ್ ವಿಶ್ವವಿದ್ಯಾನಿಲಯವು ಎರಡನೇ ಸ್ಥಾನದಲ್ಲಿದ್ದರೆ, ನಂತರದ ಸ್ಥಾನಗಳಲ್ಲಿ ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯ, ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾನಿಲಯ ಹಾಗೂ ಮ್ಯಾಸಚೂಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ವಿಶ್ವವಿದ್ಯಾಲಯಗಳಿವೆ.


ಇನ್ನು ಅಮೆರಿಕದ ಶಿಕಾಗೋ ವಿಶ್ವವಿದ್ಯಾನಿಲಯವು ತನ್ನ ವಿಶ್ವ ಟಾಪ್-10 ಸ್ಥಾನವನ್ನು ಕಳೆದುಕೊಂಡಿದ್ದು, 13 ನೇ ಸ್ಥಾನಕ್ಕೆ ಕುಸಿದಿದೆ. ಇದೇ ವೇಳೆ, ಲಂಡನ್‌ ನ ಇಂಪೀರಿಯಲ್ ಕಾಲೇಜ್ ಲಂಡನ್ 12 ನೇ ಸ್ಥಾನದಿಂದ 10ನೇ ಸ್ಥಾನಕ್ಕೇರಿದೆ. ಆಕ್ಸ್‌ಫರ್ಡ್‌ನ ಉಪಕುಲಪತಿ ಲೂಯಿಸ್ ರಿಚರ್ಡ್‌ಸನ್ ಈ ಬಗ್ಗೆ ಸಂತೋಷ ವ್ಯಕ್ತಪಡಿಸಿದ್ದಾರೆ. “ಸತತ ಏಳನೇ ವರ್ಷ ಆಕ್ಸ್‌ಫರ್ಡ್ ವಿಶ್ವದ ಉನ್ನತ ವಿಶ್ವವಿದ್ಯಾಲಯ ಎಂದು ಹೆಸರಿಸಲ್ಪಟ್ಟಿದೆ. ಇದರಿಂದ ನನ್ನ ಸಹೋದ್ಯೋಗಿಗಳಿಗೆ ಹಾಗೂ ನನಗೆ ಸಂತೋಷವಾಗಿದೆ. ಈ ಶ್ರೇಯಾಂಕಗಳನ್ನು ಕಂಪೈಲ್ ಮಾಡುವಲ್ಲಿ ಕೆಲಸ ಮಾಡುವವರಿಗೆ ನಾನು ತುಂಬಾ ಕೃತಜ್ಞನಾಗಿದ್ದೇನೆ" ಎಂದಿದ್ದಾರೆ.


ಇದನ್ನೂ ಓದಿ:  Ukraine Crisis: ಕಾರಿಗೆ​ ಡಿಕ್ಕಿ ಹೊಡೆಯಲಿದ್ದ ಹೆಲಿಕಾಪ್ಟರ್, ಕೂದಲೆಳೆ ಅಂತರದಲ್ಲಿ ತಪ್ಪಿತು ಭಾರೀ ಅನಾಹುತ!


ಅಂದಹಾಗೆ, ವಿಶ್ವ ವಿಶ್ವವಿದ್ಯಾಲಯ ಶ್ರೇಯಾಂಕಗಳು 13 ಪ್ರತ್ಯೇಕ ಕಾರ್ಯಕ್ಷಮತೆಯನ್ನು ಆಧರಿಸಿವೆ. ಟೈಮ್ಸ್ ಹೈಯರ್ ಎಜುಕೇಶನ್‌ನ (THE) ವಿಶ್ವ ಶ್ರೇಯಾಂಕವು ಜಾಗತಿಕ ನಾವೀನ್ಯತೆ ಮತ್ತು ಜ್ಞಾನ ಆರ್ಥಿಕತೆಯ ಬದಲಾವಣೆಗಳನ್ನು ಅಧ್ಯಯನ ಮಾಡಿರುವ ಮಾಪಕವಾಗಿವೆ. ಸರ್ಕಾರದ ನೀತಿ ನಿರೂಪಣೆ ಮತ್ತು ವಿಶ್ವವಿದ್ಯಾನಿಲಯದ ನಾಯಕರ ಕಾರ್ಯತಂತ್ರದ ನಿರ್ಧಾರಗಳನ್ನು ಇದು ತೆರೆದಿಡುತ್ತದೆ. ಜೊತೆಗೆ ಲಕ್ಷಾಂತರ ಅಂತರರಾಷ್ಟ್ರೀಯ ವಿದ್ಯಾರ್ಥಿಗಳು ಯಾವ ವಿಶ್ವವಿದ್ಯಾಲಯ ತಮಗೆ ಬೆಸ್ಟ್‌ ಅನ್ನೋದನ್ನು ನಿರ್ಧರಿಸಲು ಇದು ಸಹಾಯ ಮಾಡುತ್ತದೆ.

Published by:Ashwini Prabhu
First published: