• Home
  • »
  • News
  • »
  • education
  • »
  • Scholarships: 1 ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ಸಿಗಲಿದೆ 30 ಸಾವಿರ ಸ್ಕಾಲರ್ ​ಶಿಪ್​!

Scholarships: 1 ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ಸಿಗಲಿದೆ 30 ಸಾವಿರ ಸ್ಕಾಲರ್ ​ಶಿಪ್​!

ಅಪ್ಲೈ ಮಾಡಿ

ಅಪ್ಲೈ ಮಾಡಿ

ಅರ್ಜಿ ಸಲ್ಲಿಕೆಗೆ ನವೆಂಬರ್ 10 ಕೊನೆಯ ದಿನವಾಗಿದ್ದು ಅದಕ್ಕೂ ಮುನ್ನ ಅರ್ಜಿ ಸಲ್ಲಿಸಬೇಕು.

  • Share this:

ಶಾಲಾ ವಿದ್ಯಾರ್ಥಿಗಳಿಗೆ (School Student) ಆದಿತ್ಯ ಬಿರ್ಲಾ ಕ್ಯಾಪಿಟಲ್ ಕೋವಿಡ್ ಸ್ಕಾಲರ್‌ಶಿಪ್ (Scholarship) ನೀಡಲಾಗುತ್ತಿದೆ. ಅರ್ಹ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಳ್ಳಬಹುದು. ಅರ್ಜಿ ಸಲ್ಲಿಕೆಗೆ ನವೆಂಬರ್ 10 ಕೊನೆಯ ದಿನವಾಗಿದ್ದು ಅದಕ್ಕೂ ಮುನ್ನ ಅರ್ಜಿ ಸಲ್ಲಿಸಬೇಕು. ಕೋವಿಡ್​ನಿಂದಾಗಿ (Covid 19) ಪೋಷಕರನ್ನು ಕಳೆದುಕೊಂಡವರಿಗೆ ಇದೊಂದು ಉತ್ತಮ ಧನಸಹಾಯವಾಗಿದ್ದು ಹಲವಾರು ಮಕ್ಕಳು ಇದರ ಪ್ರಯೋಜನ (Benefit) ಪಡೆದುಕೊಳ್ಳಲಿದ್ದಾರೆ. ಈ ಕೆಳಗಿನ ಮಾಹಿತಿಯಂತೆ ಅರ್ಜಿ ಸಲ್ಲಿಸಿ. 


ಆದಿತ್ಯ ಬಿರ್ಲಾ ಕ್ಯಾಪಿಟಲ್ ಮತ್ತು ಅದರ ಅಂಗಸಂಸ್ಥೆಗಳ ಉದ್ಯೋಗಿಗಳ ಮಕ್ಕಳು ಅರ್ಜಿ ಸಲ್ಲಿಸಲು ಅರ್ಹರಾಗಿರುವುದಿಲ್ಲ. 1 ರಿಂದ 12ನೇ ತರಗತಿ ಓದುತ್ತಿರುವ ಎಲ್ಲಾ ವಿದ್ಯಾರ್ಥಿಗಳು ತಮ್ಮ ಶಿಕ್ಷಣಕ್ಕಾಗಿ ಈ ವಿದ್ಯಾರ್ಥಿವೇತನವನ್ನು ಪಡೆದುಕೊಳ್ಳಬಹುದು.


ಅರ್ಹತೆ
ಅರ್ಜಿದಾರರು 1 ರಿಂದ 12 ನೇ ತರಗತಿಯಲ್ಲಿ ಓದುತ್ತಿರಬೇಕು.
ತಮ್ಮ ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸಿದವರಾಗಿರಬಾರದು.
ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯವು ಎಲ್ಲಾ ಮೂಲಗಳಿಂದ INR 6 ಲಕ್ಷಕ್ಕಿಂತ ಕಡಿಮೆಯಾಗಿರಬೇಕು ಅಥವಾ ಸಮನಾಗಿರಬೇಕು.
COVID-19 ಸಾಂಕ್ರಾಮಿಕ ರೋಗದಿಂದಾಗಿ ತಮ್ಮ ಪೋಷಕರನ್ನು ಕಳೆದುಕೊಂಡಿರುವ ವಿದ್ಯಾರ್ಥಿಗಳು ಅರ್ಹರಾಗಿರುತ್ತಾರೆ.
ಭಾರತೀಯ ಪ್ರಜೆಗಳಿಗೆ ಮಾತ್ರ ಈ ಧನಸಹಾಯ ನೀಡಲಾಗುತ್ತದೆ.


ಪ್ರಯೋಜನಗಳು:
1 ರಿಂದ 8 ನೇ ತರಗತಿ ವಿದ್ಯಾರ್ಥಿಗಳಿಗೆ - INR 24,000
9 ರಿಂದ 12 ನೇ ತರಗತಿ ವಿದ್ಯಾರ್ಥಿಗಳಿಗೆ - INR 30,000


ಗಮನಿಸಿ: 
ಇದು ಒಂದು ಬಾರಿ ಮಾತ್ರ ವಿದ್ಯಾರ್ಥಿವೇತನಕ್ಕೆ ಅಪ್ಲೈ ಮಾಡಬಹುದು. ವಿದ್ಯಾರ್ಥಿವೇತನದ ಮೊತ್ತವನ್ನು ಬೋಧನಾ ಶುಲ್ಕಗಳು, ಹಾಸ್ಟೆಲ್ ಶುಲ್ಕಗಳು, ಆಹಾರ, ಇಂಟರ್ನೆಟ್, ಸಾಧನ, ಪುಸ್ತಕಗಳು, ಲೇಖನ ಸಾಮಗ್ರಿಗಳು, ಆನ್‌ಲೈನ್ ಕಲಿಕೆ ಇತ್ಯಾದಿಗಳನ್ನು ಒಳಗೊಂಡಿರುವ ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರ  ಬಳಸಿಕೊಳ್ಳಬಹುದು.


ಇದನ್ನೂ ಓದಿ: ಕುಟುಂಬದ ಆದಾಯ 5 ಲಕ್ಷಕ್ಕಿಂತ ಕಡಿಮೆಯಿದೆಯೇ? ವರ್ಷಕ್ಕೆ 75 ಸಾವಿರ ಸ್ಕಾಲರ್​ಶಿಪ್ ಸಿಗುತ್ತೆ


ದಾಖಲೆಗಳು
ಹಿಂದಿನ ತರಗತಿಯ ಅಂಕಪಟ್ಟಿ.
ಸರ್ಕಾರ ನೀಡಿದ ಗುರುತಿನ ಪುರಾವೆ (ಆಧಾರ್ ಕಾರ್ಡ್/ಮತದಾರ ಗುರುತಿನ ಚೀಟಿ/ಚಾಲನಾ ಪರವಾನಗಿ/PAN ಕಾರ್ಡ್)
ಪ್ರಸಕ್ತ ವರ್ಷದ ಪ್ರವೇಶ ಪುರಾವೆ (ಶುಲ್ಕ ರಸೀದಿ/ಪ್ರವೇಶ ಪತ್ರ/ಸಂಸ್ಥೆಯ ಗುರುತಿನ ಚೀಟಿ/ಪ್ರಮಾಣಪತ್ರ)
ಪೋಷಕರ ಮರಣ ಪ್ರಮಾಣಪತ್ರ
COVID-19 ರ ಕಾರಣದಿಂದಾಗಿ ಸಾವಿನ ಪುರಾವೆ (ಆಸ್ಪತ್ರೆಯ ರಸೀದಿಗಳು, ವೈದ್ಯರ ಪ್ರಿಸ್ಕ್ರಿಪ್ಷನ್, ಕೋವಿಡ್ ಪರೀಕ್ಷಾ ವರದಿ, COVID ಔಷಧಿಗಳ ವೈದ್ಯಕೀಯ ಬಿಲ್‌ಗಳು, ಆಸ್ಪತ್ರೆಯ ಡಿಸ್ಚಾರ್ಜ್ ಸಾರಾಂಶ, ಇತ್ಯಾದಿ)
ಅರ್ಜಿದಾರರ (ಅಥವಾ ಪೋಷಕರು) ಬ್ಯಾಂಕ್ ಖಾತೆ ವಿವರಗಳು
ಆದಾಯ ಪುರಾವೆ ಮತ್ತು ಅರ್ಜಿದಾರರ ಭಾವಚಿತ್ರ ನೀಡಬೇಕು


ಇದನ್ನೂ ಓದಿ: ಉನ್ನತ ಶಿಕ್ಷಣಕ್ಕೆ ವಿದ್ಯಾಸಾರಥಿ ನೆರವು, ನೀವೂ ಅಪ್ಲೈ ಮಾಡಿ


ಅರ್ಜಿ ಸಲ್ಲಿಕೆ
ಕೆಳಗೆ ನೀಡಿರುವ ಅಧಿಕೃತ ವೆಬ್​ಸೈಟ್​ಗೆ ಭೇಟಿನಿಡಿ.
ನಿಮ್ಮ ನೋಂದಾಯಿತ ID ಯೊಂದಿಗೆ Buddy4Study ಗೆ ಲಾಗಿನ್ ಮಾಡಿ ಮತ್ತು ಅರ್ಜಿ ನಮೂನೆಯ ಪುಟ ತೆರೆಯರಿ.
ನೋಂದಾಯಿಸದಿದ್ದರೆ  ನಿಮ್ಮ ಇಮೇಲ್/ಮೊಬೈಲ್/ಜಿಮೇಲ್ ಖಾತೆಯೊಂದಿಗೆ Buddy4Study ನಲ್ಲಿ ನೋಂದಾಯಿಸಿ.
ಈಗ ನಿಮ್ಮನ್ನು ಆದಿತ್ಯ ಬಿರ್ಲಾ ಕ್ಯಾಪಿಟಲ್ ಕೋವಿಡ್ ಸ್ಕಾಲರ್‌ಶಿಪ್ ಪ್ರೋಗ್ರಾಂ ಅರ್ಜಿ ನಮೂನೆಯ ಪುಟಕ್ಕೆ ನೊಂದಾಯಿಸಲಾಗುತ್ತದೆ.
ಅಪ್ಲಿಕೇಶನ್ ಪ್ರಕ್ರಿಯೆಯನ್ನು ಪ್ರಾರಂಭಿಸಲು ಅಪ್ಲೈ ನವ್ ಬಟನ್ ಮೇಲೆ ಕ್ಲಿಕ್ ಮಾಡಿ.
ಆನ್‌ಲೈನ್ ಅರ್ಜಿ ನಮೂನೆಯಲ್ಲಿ ಅಗತ್ಯವಿರುವ ವಿವರಗಳನ್ನು ಭರ್ತಿ ಮಾಡಿ.
ಸಂಬಂಧಿತ ದಾಖಲೆಗಳನ್ನು ಅಪ್ಲೋಡ್ ಮಾಡಿ.
ನಿಯಮಗಳು ಮತ್ತು ಷರತ್ತುಗಳನ್ನು ಒಪ್ಪಿಕೊಳ್ಳಿ
'ಪೂರ್ವವೀಕ್ಷಣೆ' ಬಟನ್ ಮೇಲೆ ಕ್ಲಿಕ್ ಮಾಡಿ.
ಅರ್ಜಿದಾರರು ಭರ್ತಿ ಮಾಡಿದ ಎಲ್ಲಾ ವಿವರಗಳನ್ನು ಪೂರ್ವವೀಕ್ಷಣೆ ಪರದೆಯಲ್ಲಿ ಸರಿಯಾಗಿ ತೋರಿಸುತ್ತಿದ್ದರೆ ಅಪ್ಲಿಕೇಶನ್ ಪ್ರಕ್ರಿಯೆಯನ್ನು ಪೂರ್ಣಗೊಂಡಿದೆ ಎಂದು ತೋರಿಸುತ್ತದೆ.
ಬೇಗ ಅಪ್ಲೈ ಮಾಡಿ.


ಅರ್ಜಿ ಸಲ್ಲಿಕೆ ಕೊನೆ ದಿನಾಂಕ
10-ನವೆಂಬರ್-2022

First published: