• Home
  • »
  • News
  • »
  • education
  • »
  • Ram Rahim: ವಿದ್ಯಾರ್ಥಿಗಳಿಗೆ ಕೊಲೆ ಮತ್ತು ಅತ್ಯಾಚಾರ ವಿಡಿಯೋ ತೋರಿಸಿದ ರಾಮ್ ರಹೀಮ್!

Ram Rahim: ವಿದ್ಯಾರ್ಥಿಗಳಿಗೆ ಕೊಲೆ ಮತ್ತು ಅತ್ಯಾಚಾರ ವಿಡಿಯೋ ತೋರಿಸಿದ ರಾಮ್ ರಹೀಮ್!

ರಾಮ್ ರಹೀಮ್​

ರಾಮ್ ರಹೀಮ್​

ಯಾವುದೇ ಸಂದರ್ಭದಲ್ಲೂ ಮಕ್ಕಳ ಮನಸ್ಥಿತಿಯನ್ನು ಕೆಡಿಸಲು ಇಂಥವರಿಗೆ ಅವಕಾಶ ನೀಡಬಾರದು ಅದೂ ಅಲ್ಲದೆ ಮಕ್ಕಳನ್ನು ಕಡ್ಡಾಯವಾಗಿ ಅಲ್ಲಿಗೆ ಕರೆತರಲಾಗಿತ್ತು.

  • Share this:

ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್  ಅವರ ಆನ್‌ಲೈನ್ ಸತ್ಸಂಗದಲ್ಲಿ 300 ಕ್ಕೂ ಹೆಚ್ಚು ಮಕ್ಕಳು (Students) ಶಾಲಾ ಸಮವಸ್ತ್ರದಲ್ಲಿ ಮತ್ತು ಅವರ ಶಿಕ್ಷಕರೂ ಕೂಡ ಹಾಜರಿದ್ದರು. ಈ ಆನ್​ಲೈನ್ (Online)​ ಕಾರ್ಯಕ್ರಮದಲ್ಲಿ ಹಾಜರಿದ್ದ ಎಲ್ಲಾ ವಿದ್ಯಾರ್ಥಿಗಳಿಗೂ ಸಹ ಕೊಲೆ (Murder) ಮತ್ತು ಅತ್ಯಾಚಾರದ ವಿಡಿಯೋ (Video) ಕ್ಲಿಪ್ ಅನ್ನು ತೋರಿಸಲಾಗಿದೆ. ಈ ವಿಷಯದ ಕುರಿತು ಇನ್ನಷ್ಟು ಮಾಹಿತಿಗಾಗಿ ಮುಂದೆ ಓದಿ.


ಈ ವಿಷಯ ತಿಳಿದ ನಂತರ ಯುಪಿಯ ಶಹಜಾನ್‌ಪುರದ ಮೂಲದ ಶಿಕ್ಷಾ ಅಧಿಕಾರಿ (ಬಿಎಸ್‌ಎ) ತನಿಖೆಗೆ ಆದೇಶಿಸಿದ್ದಾರೆ. ಪೆರೋಲ್ ಮೇಲೆ ಹೊ ಹೋಗಿರುವ ರಾಮ್​ ರಹೀಮ್​ ಗುರುವಾರ ರೋಜಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಸ್ಥಳದಲ್ಲಿ ಒಂದು ಹಸಿರು ಹುಲ್ಲಿನ ಪ್ರದೇಶದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಆಮಂತ್ರಣ ನೀಡಿ ಅವರ ಮೇಲೆ ಕೆಟ್ಟ ಪರಿಣಾಮ ಬೀರುವ ವಿಡಿಯೋಗಳನ್ನು ತೋರಿಸಲಾಗಿದೆ.


2000ಕ್ಕೂ ಹೆಚ್ಚು ಜನರಿಗೆ ಆನ್​ಲೈನ್​ ವೀಕ್ಷಣೆ
ಅಲ್ಲೆ ಒಂದು ದೊಡ್ಡ ಸ್ರ್ಕೀನ್ ವ್ಯವಸ್ಥೆ ಮಾಡಲಾಗಿತ್ತು 2000ಕ್ಕೂ ಹೆಚ್ಚು ಜನರು ಅಲ್ಲಿ ಕುಳಿತು ಆನ್​ಲೈನ್ ಸತ್ಸಂಗ ಕಾರ್ಯಕ್ರಮವನ್ನು ವೀಕ್ಷಿಸಬಹುದಾದ ವ್ಯವಸ್ಥೆ ಕಲ್ಪಿಸಲಾಗಿತ್ತು. ಇನ್ನೂ ಹೆಚ್ಚಿನ ಜನರನ್ನು ಕರೆತರಲು ಬಸ್​ ವ್ಯವಸ್ಥೆ ಕೂಡಾ ಮಾಡಲಾಗಿತ್ತು. ಅಷ್ಟೇ ಅಲ್ಲ ಫರೂಕಾಬಾದ್ ಮತ್ತು ಲಖಿಂಪುರ ಖೇರಿ ಸೇರಿದಂತೆ ನೆರೆಯ ಜಿಲ್ಲೆಗಳಿಂದ ಜನರನ್ನು ಬಸ್‌ಗಳ ಮೂಲಕ ಕರೆತರಲಾಗಿತ್ತು ಎಂಬ ಮಾಹಿತಿ ಪೊಲೀಸರಿಂದ ತಿಳಿದುಬಂದಿದೆ.


ಶಾಲಾ ಮಕ್ಕಳಿಗೆ ಕರೆ
ಶಾಲಾ ಮಕ್ಕಳನ್ನು ಆನ್‌ಲೈನ್ ಸತ್ಸಂಗಕ್ಕೆ ಹಾಜರಾಗುವಂತೆ ಮಾಡಲಾಗಿದೆ ಎಂದು ನನಗೆ ತಿಳಿದಿರಲಿಲ್ಲ. ಯಾವ ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗಲಾಗಿತ್ತು ಮತ್ತು ಎಷ್ಟು ಜನರು ಹೋಗಿದ್ದರು ಎಂಬ ನಿಖರ ಮಾಹಿತಿಯನ್ನು ಆದಷ್ಟು ಬೇಗ ವರದಿ ನೀಡುವಂತೆ ಶಿಕ್ಷಣಾಧಿಕಾರಬಳಿ ತಿಳಿಸುವಂತೆ ಸೂಚಿಸಿದ್ದೇನೆ ಎಂದು BSA ಸುರೇಂದ್ರ ಕುಮಾರ್ ರಾವತ್ ತಿಳಿಸಿದ್ದಾರೆ. ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.


ಇದನ್ನೂ ಓದಿ: ಹತ್ತನೇ ತರಗತಿ ವಿದ್ಯಾರ್ಥಿಗಳೇ ಗಮನಿಸಿ, ಇಲ್ಲಿದೆ ಮಾದರಿ ಪ್ರಶ್ನೆ ಪತ್ರಿಕೆ


ಇವರ ಹಿನ್ನೆಲೆ ನೋಡುವುದಾದರೆ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಹರಿಯಾಣ ಮೂಲದ ರಾಮ್ ರಹೀಮ್ ಸದ್ಯ ಪೆರೋಲ್ ಮೇಲೆ ಹೊರಗಿದ್ದಾರೆ. ಅವರು ಇತ್ತೀಚೆಗೆ ಹರಿಯಾಣದ ಸುನಾರಿಯಾ ಜೈಲಿನಿಂದ ಹೊರಬಂದಾಗಿನಿಂದ ಹಲವಾರು ಪ್ರವಚನಗಳನ್ನು ನಡೆಸುತ್ತಿದ್ದಾರೆ. ಅನೇಕ ರಾಜಕಾರಣಿಗಳೂ ಸಹ ಈ ಕಾರ್ಯಕ್ರಮಕ್ಕೆ ಹಾಜರಿದ್ದರು ಎಂದು ಮೂಲಗಳು ತಿಳಿಸಿವೆ.


ಅತ್ಯಾಚಾರ ಮತ್ತು ಕೊಲೆ ಪ್ರಕರಣ
55 ವರ್ಷ ವಯಸ್ಸಿನ ಸಿರ್ಸಾ ಡೇರಾ ಮುಖ್ಯಸ್ಥರು ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳಲ್ಲಿ ಅನೇಕ ಅಪರಾಧಗಳಿಗಾಗಿ ಜೀವಾವಧಿ ಶಿಕ್ಷೆಯನ್ನು ಅನುಭವಿಸುತ್ತಿದ್ದಾರೆ. ಈ ವರ್ಷದ ಅಕ್ಟೋಬರ್‌ನಲ್ಲಿ ಅವರಿಗೆ 40 ದಿನಗಳ ಪೆರೋಲ್ ನೀಡಲಾಗಿತ್ತು. ಅದರ ನಂತರ ಯುಪಿಯಲ್ಲಿರುವ ಡೇರಾದ ಬರ್ನಾವಾ ಆಶ್ರಮದಿಂದ ಹಲವಾರು ಆನ್‌ಲೈನ್ ಪ್ರವಚನಗಳನ್ನು ಆಗಾಗ ನಡೆಸುತ್ತಿದ್ದಾರೆ.


ಬಜರಂಗದಳದ ವಿರೋಧ
ಈ ಮಧ್ಯೆ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಮತ್ತು ಬಜರಂಗದಳ ಸದಸ್ಯರು ಕಾರ್ಯಕ್ರಮದ ಸ್ಥಳಕ್ಕೆ ಆಗಮಿಸಿ ಗಲಾಟೆ ಮಾಡಿದ್ದಾರೆ. ಅವರು ರಾಮ್ ರಹೀಮ್ ಅವರ ಪೋಸ್ಟರ್ ಮತ್ತು ಬ್ಯಾನರ್ಗಳನ್ನು ಹರಿದು ಪೊಲೀಸರು ಮತ್ತು ಮಾಧ್ಯಮಗಳನ್ನು ಕರೆದು ಈ ಕುರಿತು ಮಾಹಿತಿ ನೀಡಿದ್ದಾರೆ.


ಸತ್ಸಂಗ ರದ್ದು
ಇಷ್ಟಾದ ಬಳಿಕ ಸತ್ಸಂಗವನ್ನು ರದ್ದುಗೊಳಿಸಲಾಯಿತು ಮತ್ತು ಹಾಜರಿದ್ದವರನ್ನು ಮನೆಗೆ ಕಳುಹಿಸಲಾಯಿತು. ಸಂಘಟಕರನ್ನು ನಂತರ ಪೊಲೀಸ್ ಠಾಣೆಗೆ ಕರೆದೊಯ್ದರೂ ಯಾವುದೇ ದೂರು ಇಲ್ಲದ ಕಾರಣ ಬಿಡುಗಡೆ ಮಾಡಲಾಯಿತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.


ಮಕ್ಕಳ ಮನಸ್ಥಿತಿಗೆ ಕೆಡುಕು
ಯಾವುದೇ ಸಂದರ್ಭದಲ್ಲೂ ಮಕ್ಕಳ ಮನಸ್ಥಿತಿಯನ್ನು ಕೆಡಿಸಲು ಇಂಥವರಿಗೆ ಅವಕಾಶ ನೀಡಬಾರದು ಅದೂ ಅಲ್ಲದೆ ಮಕ್ಕಳನ್ನು ಕಡ್ಡಾಯವಾಗಿ ಅಲ್ಲಿಗೆ ಕರೆತರಲಾಗಿತ್ತು. ಇಂತಹ ಸನ್ನಿವೇಶಗಳು ಮಕ್ಕಳ ಮನಸಿನಲ್ಲಿ ನಕಾರಾತ್ಮಕ ಪರಿಣಾಮ ಬಿರುತ್ತದೆ ಇಂತಹ ಘಟನೆಗಳನ್ನು ತಡೆಯಬೇಕೆಂದು ಹಲವರು ಒತ್ತಾಯ ಮಾಡಿದ್ದಾರೆ,

First published: