NEET Exam Results: ನೀಟ್ ಪಾಸ್ ಮಾಡಿದ ಕಾರ್ಮಿಕನ ಮಗ, ತರಕಾರಿ ಮಾರಾಟಗಾರನ ಮಗಳು

ಚೆನ್ನಾಗಿ ಓದಿ ಅಂತ ಮಕ್ಕಳಿಗೆ ಪೋಷಕರು ಎಲ್ಲಾ ಸೌಲಭ್ಯಗಳನ್ನು ನೀಡಿದರೆ, ಕೆಲ ಮಕ್ಕಳಿಗೆ ಪರೀಕ್ಷೆಯನ್ನು ಪಾಸು ಮಾಡುವುದೇ ಕಬ್ಬಿಣದ ಕಡಲೆಯಾಗಿರುತ್ತದೆ. ಇನ್ನೊಂದು ಕಡೆ ಯಾವುದೇ ಸೌಲಭ್ಯವಿಲ್ಲದಿದ್ದರೂ ಸಹ ಕಷ್ಟಪಟ್ಟು ಓದಿಕೊಂಡು ನೀಟ್ ಅಂತ ಕಠಿಣವಾದ ಪರೀಕ್ಷೆಗಳನ್ನು ಉತ್ತಮ ಅಂಕಗಳೊಂದಿಗೆ ಪಾಸು ಮಾಡುವುದನ್ನು ನಾವು ನೋಡಿರುತ್ತೇವೆ. ಇದಕ್ಕೆ ಉದಾಹರಣೆ ಇಲ್ಲಿದೆ ನೋಡಿ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
‘ಕೆಲವೊಮ್ಮೆ ಏನೂ ಸೌಲಭ್ಯಗಳಿಲ್ಲದಿದ್ದರೆ, ಮಕ್ಕಳು ಪರೀಕ್ಷೆಯಲ್ಲಿ (Exam) ಕಷ್ಟಪಟ್ಟು ಓದಿ ಒಳ್ಳೆಯ ಅಂಕಗಳನ್ನು (Marks) ಗಳಿಸುತ್ತಾರೆನೋ’ ಅಂತ ತಮ್ಮ ಮಕ್ಕಳಿಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸಿದಾಗಲೂ ಪರೀಕ್ಷೆಯಲ್ಲಿ ಉತ್ತಮ ಅಂಕಗಳು ಗಳಿಸದೆ ಇದ್ದಾಗ ಬಹುತೇಕ ಪೋಷಕರಿಗೆ (Parents) ಹೀಗೆ ಅನ್ನಿಸುತ್ತದೆ. ‘ಹಲ್ಲಿದ್ದವರಿಗೆ ತಿನ್ನಲು ಕಡಲೆ ಇರುವುದಿಲ್ಲ, ಕಡಲೆ ಇದ್ದವರಿಗೆ ತಿನ್ನಲು ಹಲ್ಲಿರುವುದಿಲ್ಲ’ ಎಂಬಂತೆ ಸೌಲಭ್ಯ ಇದ್ದವರಿಗೆ ಓದಿನಲ್ಲಿ ಆಸಕ್ತಿ ಇರುವುದಿಲ್ಲ, ಆಸಕ್ತಿ ಇದ್ದವರಿಗೆ ಸೌಲಭ್ಯಗಳಿರುವುದಿಲ್ಲ. ಆದರೆ ಆಸಕ್ತಿ (Interest) ಒಂದಿದ್ದರೆ ಸಾಕು ಎಂತಹ ಗುರಿಯನ್ನು ಸಹ ತಲುಪಬಹುದು ಅಂತ ಕೆಲ ಪ್ರತಿಭಾವಂತ ವಿದ್ಯಾರ್ಥಿಗಳು (Students) ಪ್ರತಿ ವರ್ಷ ಪದೇ ಪದೇ ಸಾಬೀತು ಪಡಿಸುತ್ತಲೇ ಇರುವುದನ್ನು ನಾವು ನೋಡಬಹುದು.

ನೀಟ್ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದು ತೇರ್ಗಡೆಯಾದ ಕಾರ್ಮಿಕರ ಮಕ್ಕಳು

ಹೌದು.. ಚೆನ್ನಾಗಿ ಓದಿ ಅಂತ ಮಕ್ಕಳಿಗೆ ಪೋಷಕರು ಎಲ್ಲಾ ಸೌಲಭ್ಯಗಳನ್ನು ನೀಡಿದರೆ, ಕೆಲ ಮಕ್ಕಳಿಗೆ ಪರೀಕ್ಷೆಯನ್ನು ಪಾಸು ಮಾಡುವುದೇ ಕಬ್ಬಿಣದ ಕಡಲೆಯಾಗಿರುತ್ತದೆ. ಇನ್ನೊಂದು ಕಡೆ ಯಾವುದೇ ಸೌಲಭ್ಯವಿಲ್ಲದಿದ್ದರೂ ಸಹ ಕಷ್ಟಪಟ್ಟು ಓದಿಕೊಂಡು ನೀಟ್ ಅಂತ ಕಠಿಣವಾದ ಪರೀಕ್ಷೆಗಳನ್ನು ಉತ್ತಮ ಅಂಕಗಳೊಂದಿಗೆ ಪಾಸು ಮಾಡುವುದನ್ನು ನಾವು ನೋಡಿರುತ್ತೇವೆ.

ಅದರಲ್ಲೂ ಈ ಹೊಟ್ಟೆ ಪಾಡಿಗಾಗಿ ದಿನಗೂಲಿ ಮಾಡುವ ಕಾರ್ಮಿಕರ ಮಕ್ಕಳು ಮತ್ತು ತರಕಾರಿ ಮಾರುವವರ ಮಕ್ಕಳು ಇಂತಹ ಪರೀಕ್ಷೆಗಳಲ್ಲಿ ಒಳ್ಳೆಯ ಅಂಕಗಳನ್ನು ಪಡೆಯುವುದರೊಂದಿಗೆ ಉತ್ತೀರ್ಣರಾದರೆ ಪೋಷಕರು ಕಷ್ಟಪಟ್ಟು ಮಕ್ಕಳನ್ನು ಓದಿಸಿದ್ದಕ್ಕೂ ಸಾರ್ಥಕತೆ ಸಿಗುತ್ತದೆ.

ಇಲ್ಲಿಯೂ ಸಹ ಅದೇ ಆಗಿದೆ ನೋಡಿ. ಒಬ್ಬ ಕಾರ್ಮಿಕನ ಮಗ ಮತ್ತು ಒಡಿಶಾದ ತರಕಾರಿ ವ್ಯಾಪಾರಿಯ ಮಗಳು ವೈದ್ಯಕೀಯ ಪ್ರವೇಶ ಪರೀಕ್ಷೆ ನೀಟ್ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದುಕೊಂಡು ತೇರ್ಗಡೆಯಾಗಿದ್ದಾರೆ. ಗಂಜಾಂ ಜಿಲ್ಲೆಯ ಪೋಲಸರಾ ಬ್ಲಾಕ್ ನಿವಾಸಿ ಶಾಂತನು ದಲೈ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯಲ್ಲಿ (ನೀಟ್) ಅಖಿಲ ಭಾರತ ಮಟ್ಟದಲ್ಲಿ 19,678ನೇ ರ‍್ಯಾಂಕ್‌ ಗಳಿಸಿದ್ದಾರೆ.

ಉತ್ತಮ ಅಂಕ ಪಡೆದ ಇಶ್ರೀತಾ ಪಾಂಡಾ 

ಗಜಪತಿ ಜಿಲ್ಲೆಯ ಅಡವ ಗ್ರಾಮದ ನಿವಾಸಿ ಇಶ್ರೀತಾ ಪಾಂಡಾ ಅವರು 720ಕ್ಕೆ 622 ಅಂಕಗಳನ್ನು ಪಡೆದು ಅಖಿಲ ಭಾರತ ಮಟ್ಟದಲ್ಲಿ 11,895ನೇ ರ‍್ಯಾಂಕ್‌ ಗಳಿಸಿದ್ದಾರೆ. ಅವಳ ತಂದೆ ಅಡವ ಮಾರುಕಟ್ಟೆಯಲ್ಲಿ ತರಕಾರಿಗಳನ್ನು ಮಾರಾಟ ಮಾಡುತ್ತಾರೆ.

ಇದನ್ನೂ ಓದಿ: Career in Fashion Management: ಫ್ಯಾಷನ್ ಫೀಲ್ಡ್​​ನಲ್ಲೂ phd ಮಾಡಬಹುದು, ಸಂಪೂರ್ಣ ಮಾಹಿತಿ ಇಲ್ಲಿದೆ

ಇಬ್ಬರೂ ಕಳೆದ ವರ್ಷ ತಮ್ಮ ತಮ್ಮ ಮೊದಲ ಅವಕಾಶದಲ್ಲಿ ಉತ್ತೀರ್ಣರಾಗಲು ಸಾಧ್ಯವಾಗದ ಕಾರಣ ಈ ಬಾರಿ ಇಬ್ಬರು ತಮ್ಮ ಎರಡನೇ ಅವಕಾಶವನ್ನು ತುಂಬಾನೇ ಚೆನ್ನಾಗಿ ಬಳಸಿಕೊಂಡು ಪ್ರತಿಷ್ಠಿತ ಪರೀಕ್ಷೆಯಲ್ಲಿ ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗಿದ್ದಾರೆ.

ಪಾಂಡಾ ಅವರು ಇದಕ್ಕಾಗಿ ತುಂಬಾನೇ ಶ್ರಮಿಸಿದರು ಮತ್ತು ಈ‌ಗ ಅವರು ಪರೀಕ್ಷೆಯಲ್ಲಿ ಪಡೆದ ಅಂಕಗಳಿಂದ ತುಂಬಾನೇ ಸಂತೋಷ ಪಟ್ಟಿದ್ದೇನೆ ಎಂದು ಅವರು ಹೇಳಿದರು.

ಇನ್ನು ದಲೈ ಅವರ ಕಥೆ ಹೀಗಿದೆ 

ಕಟಕ್ ಅಥವಾ ಬೆರ್ಹಾಂಪುರದ ಪ್ರಮುಖ ಸರ್ಕಾರಿ ವೈದ್ಯಕೀಯ ಸಂಸ್ಥೆಯಲ್ಲಿ ಸೀಟು ಪಡೆಯುವ ಭರವಸೆಯನ್ನು ಅವರು ಹೊಂದಿದ್ದಾರೆ. ದಿನಗೂಲಿ ಕಾರ್ಮಿಕನ ಮಗನಾದ ದಲೈ ಅವರು ರಾಜ್ಯದ ಯಾವುದೇ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಪ್ರವೇಶ ಪಡೆದರೂ ಒಳ್ಳೆಯದೇ ಅಂತ ಹೇಳುತ್ತಾರೆ.

"ಬಡತನದಲ್ಲಿಯೇ ಆರ್ಥಿಕ ತೊಂದರೆ ಇದ್ದರೂ ಸಹ ಅದರ ಹೊರತಾಗಿಯೂ, ನಾನು ಅವರ ಅಧ್ಯಯನವನ್ನು ನಿರ್ಲಕ್ಷಿಸಲಿಲ್ಲ" ಎಂದು ಅವರ ತಂದೆ ಹೇಳಿದರು. ದಲೈ ಅವರು ಶಿಕ್ಷಣ ತಜ್ಞ ಸುಧೀರ್ ರೌತ್ ನಡೆಸುತ್ತಿದ್ದ ‘ಆರ್ಯಭಟ್ಟ’ ಎಂಬ ಖಾಸಗಿ ಸಂಸ್ಥೆಯಲ್ಲಿ ಉಚಿತವಾಗಿ ತರಬೇತಿ ಪಡೆಯುತ್ತಿದ್ದರು.

ಇಶ್ರೀತಾ ಪಾಂಡಾ ವೈದ್ಯೆಯಾಗುವುದು ಅವರ ತಂದೆಯ ಕನಸಂತೆ 

ಕೋವಿಡ್-19 ಸಾಂಕ್ರಾಮಿಕ ರೋಗದ ಹಾವಳಿಂದಾಗಿ ಕಳೆದ ಎರಡು ವರ್ಷಗಳಿಂದ ತನ್ನ ವ್ಯವಹಾರದಲ್ಲಿ ನಷ್ಟವಾಗಿದ್ದರೂ ತನ್ನ ಮಗಳ ಅಧ್ಯಯನವನ್ನು ತಾನು ನಿರ್ಲಕ್ಷಿಸಲಿಲ್ಲ ಎಂದು ಪಾಂಡಾ ಅವರ ತಂದೆ ಹೇಳಿದರು.

ಇದನ್ನೂ ಓದಿ: Writing Tips for Exams: ಟಚ್​ಸ್ಕ್ರೀನ್​​​​​​ ಯುಗದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬರೆಯುವ ಕಲೆಯನ್ನು ರೂಢಿಸಿಕೊಳ್ಳುವುದು ಹೇಗೆ

"ಅವಳು ಒಬ್ಬ ವೈದ್ಯಯಾಗಬೇಕೆಂದು ನಾನು ಬಯಸುತ್ತೇನೆ ಮತ್ತು ಅದಕ್ಕೆ ಅವಳ ಓದಿಗೆ ಏನೆಲ್ಲಾ ಸಹಾಯ ಬೇಕೋ, ಅದೆಲ್ಲವನ್ನು ಮಾಡಿದ್ದೇನೆ" ಎಂದು ಅವರು ಹೇಳಿದರು. ಕಳೆದ ಕೆಲವು ವರ್ಷಗಳಲ್ಲಿ ತಮ್ಮ ಸಂಸ್ಥೆ ಕೆಲವು ಬಡ ವಿದ್ಯಾರ್ಥಿಗಳಿಗೆ ಉಚಿತ ತರಬೇತಿಯನ್ನು ನೀಡಿದೆ ಮತ್ತು ಅವರ ಪ್ರವೇಶಕ್ಕಾಗಿ ಹಣವನ್ನು ವ್ಯವಸ್ಥೆ ಮಾಡಿದೆ ಎಂದು ರೌತ್ ಅವರು ಹೇಳಿದರು.
Published by:Ashwini Prabhu
First published: