• Home
  • »
  • News
  • »
  • education
  • »
  • B.Ed Scholarship: ಬಿಎಡ್​ ವಿದ್ಯಾರ್ಥಿಗಳಿಗೆ ಸಿಗಲಿದೆ 25 ಸಾವಿರ ಪ್ರೋತ್ಸಾಹ ಧನ!

B.Ed Scholarship: ಬಿಎಡ್​ ವಿದ್ಯಾರ್ಥಿಗಳಿಗೆ ಸಿಗಲಿದೆ 25 ಸಾವಿರ ಪ್ರೋತ್ಸಾಹ ಧನ!

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

2022-23ನೇ ಸಾಲಿನಲ್ಲಿ ಬಿ.ಎಡ್ ಮತ್ತು ಡಿ.ಎಡ್ ನಲ್ಲಿ ವ್ಯಾಸಂಗ ಮಾಡುತ್ತಿದ್ದರೆ ಖಂಡಿತ ನೀವು ಇದಕ್ಕೆ ಅರ್ಜಿ ಸಲ್ಲಿಸಿ ಧನ ಸಹಾಯ ಪಡೆಯಿರಿ. 

  • News18 Kannada
  • Last Updated :
  • Karnataka, India
  • Share this:

ಬಿ.ಎಡ್ (B.Ed)​ ಮತ್ತು ಡಿ.ಎಡ್ ನಲ್ಲಿ ವ್ಯಾಸಂಗ (Study) ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಇಲ್ಲಿದೆ ಶುಭ ಸುದ್ದಿ. 2022 ಹಾಗೂ 23ನೇ ಸಾಲಿನಲ್ಲಿ ಅಭ್ಯಾಸಮಾಡುತ್ತಿರುವ ಅಲ್ಪಸಂಖ್ಯಾತರ ಸಮುದಾಯದ, ಮುಸ್ಲಿಂ , ಕ್ರಿಶ್ಚಿಯನ್, ಜೈನ್, ಸಿಖ್, ಬೌದ್ಧ ಮತ್ತು ಪಾರ್ಸಿ ಸಮುದಾಯಕ್ಕೆ ಸೇರಿದ ವಿದ್ಯಾರ್ಥಿಗಳು (Students) ಈ ಪ್ರೋತ್ಸಾಹ ಧನಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ. ಈ ಪ್ರೋತ್ಸಾಹ ಧನವನ್ನು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ನೀಡಲಾಗುತ್ತಿದೆ. ಈ ಕುರಿತು ಇನ್ನಷ್ಟು ಮಾಹಿತಿಗಾಗಿ (Information) ಮುಂದೆ ಓದಿ.  


2022-23ನೇ ಸಾಲಿನಲ್ಲಿ ಬಿ.ಎಡ್ ಮತ್ತು ಡಿ.ಎಡ್ ನಲ್ಲಿ ವ್ಯಾಸಂಗ ಮಾಡುತ್ತಿದ್ದರೆ ಖಂಡಿತ ನೀವು ಇದಕ್ಕೆ ಅರ್ಜಿ ಸಲ್ಲಿಸಿ ಧನ ಸಹಾಯ ಪಡೆಯಿರಿ. ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ 2022-23ನೇ ಸಾಲಿನಲ್ಲಿ ಬಿ.ಎಡ್ ಮತ್ತು ಡಿ.ಎಡ್ ನಲ್ಲಿ ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತರ ಸಮುದಾಯದ ವಿದ್ಯಾರ್ಥಿಗಳಿಗೆಂದೇ ವಿಶೇಷ ಪ್ರೋತ್ಸಾಹ ಧನ ನೀಡಲು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಕೆಗೆ ಕರೆ ನೀಡಲಾಗಿದೆ.


ಯಾರೆಲ್ಲಾ ಅರ್ಜಿ ಸಲ್ಲಿಸಬಹುದು?
2022-23ನೇ ಸಾಲಿನಲ್ಲಿ ಬಿ.ಎಡ್ ಮತ್ತು ಡಿ.ಎಡ್ ನಲ್ಲಿ ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತರ ಸಮುದಾಯದ, ಮುಸ್ಲಿಂ , ಕ್ರಿಶ್ಚಿಯನ್, ಜೈನ್, ಸಿಖ್, ಬೌದ್ಧ ಮತ್ತು ಪಾರ್ಸಿ ಸಮುದಾಯಕ್ಕೆ ಸೇರಿದ ವಿದ್ಯಾರ್ಥಿಗಳು ಈ ಪ್ರೋತ್ಸಾಹ ಧನಕ್ಕೆ ಅರ್ಜಿ ಸಲ್ಲಿಸಬಹುದು.


ಇದರ ಉದ್ದೇಶ ಹೀಗಿದೆ 
ಎಷ್ಟೋ  ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ಹಾಗೂ ಗ್ರಾಮೀಣ ಮತ್ತು ನಗರ ಭಾಗದಲ್ಲಿ ಆರ್ಥಿಕವಾಗಿ ಹಿಂದುಳಿದ ಅಲ್ಪಸಂಖ್ಯಾತರ ವಿದ್ಯಾರ್ಥಿಗಳು ಆರ್ಥಿಕವಾಗಿ ಸಭಲರಾಗಿರದ ಕಾರಣ ಅರ್ಧಕ್ಕೆ ವಿದ್ಯಾಭ್ಯಾಸವನ್ನು ಕೈಬಿಡುವ ಪರಿಸ್ಥಿತಿ ಇದೆ. ಆದರೆ  ವಿದ್ಯಾಭ್ಯಾಸವನ್ನು ಮುಂದುವರೆಸಲು ಪ್ರೋತ್ಸಾಹಿಸಿ ಕಲಿಕಾ ಮತ್ತು ಭೋಧನಾ ಸಾಮಗ್ರಿಗಳನ್ನು ಖರೀದಿಸಲು ಆರ್ಥಿಕವಾಗಿ ಧನ ಸಹಾಯ ಮಾಡುವ ದೃಷ್ಟಿಯಿಂದ ಈ ಪ್ರೋತ್ಸಾಹ ಧನ ನೀಡಲಾಗುತ್ತದೆ.


ಅರ್ಜಿ ಸಲ್ಲಿಸುವುದು ಹೇಗೆ?
1. ಈ ಪ್ರೋತ್ಸಾಹ ಧನಕ್ಕೆ ಅರ್ಹ ಅಭ್ಯರ್ಥಿಗಳು ಸೇವಾ ಸಿಂಧು https://sevasindhu.karnataka.gov.in/ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬೇಕು.


2. ಅರ್ಜಿ ಸಲ್ಲಿಸಲು 10-12-2022 ಕೊನೆಯ ದಿನವಾಗಿದೆ. ಈ ದಿನಾಂಕದೊಳಗೆ ಅರ್ಜಿ ಸಲ್ಲಿಸಬೇಕು.


3. ನ್ಯಾಷನಲ್ ಕೌನ್ಸಿಲ್ ಫಾರ್ ಟೀಚರ್ ಎಜುಕೇಷನ್ ನಿಂದ ಮಾನ್ಯತೆ ಪಡೆದಿರುವ ಬಿ.ಎಡ್‌ ಹಾಗೂ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ಯಿಂದ ಮಾನ್ಯತೆ ಪಡೆದಿರುವ ಡಿ.ಎಡ್ ಕೋರ್ಸ್‌ಗಳನ್ನು ಸರ್ಕಾರಿ/ ಅರೆ ಸರ್ಕಾರಿ / ಅನುದಾನಿತ ಹಾಗು ಖಾಸಗಿ ಕಾಲೇಜುಗಳಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.


4. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ 25,000ರೂಗಳ ವಿಶೇಷ ಪ್ರೋತ್ಸಾಹಧನವನ್ನು ಸಂಬಂಧಪಟ್ಟ ವಿದ್ಯಾರ್ಥಿಗಳ ಬ್ಯಾಂಕ್‌ ಖಾತೆಗೆ ಆನ್‌ಲೈನ್‌ ಮುಖಾಂತರ ಜಮಾ ಮಾಡಲಾಗುತ್ತದೆ. 


5. ನೀವು ಕರ್ನಾಟಕದಲ್ಲಿ ವಾಸವಿದ್ದರೆ ಮಾತ್ರ ಈ ಪ್ರೋತ್ಸಾಹದನಕ್ಕೆ ಅಪ್ಲೈ ಮಾಡಬಹದು.


6. ಕೋರ್ಸ್‌ಗಳ ಅವಧಿಗೆ ತಕ್ಕಂತೆ ಪ್ರತಿ ವರ್ಷದಂತೆ ಗರಿಷ್ಠ ಎರಡು ವರ್ಷದವರೆಗೆ ಅನುದಾನ ನೀಡಲಾಗುತ್ತದೆ.


ಇದನ್ನೂ ಓದಿ: ಬಿಎಡ್​ ಪ್ರವೇಶಕ್ಕೆ ಅರ್ಜಿ ಆಹ್ವಾನ, ನವೆಂಬರ್ ಒಳಗೆ ಅಪ್ಲೈ ಮಾಡಿ


7. ಪೋಷಕರ ವರಮಾನ ಗರಿಷ್ಠ 6 ಲಕ್ಷ ರೂ. ಗಿಂತ ಹೆಚ್ಚಿಗೆ ಇರಬಾರದು.


8. ಪ್ರೋತ್ಸಾಹಧನಕ್ಕೆ ಅಭ್ಯರ್ಥಿಗಳನ್ನು ಅರ್ಹತೆ ಪರೀಕ್ಷೆ ಹಾಗೂ ಹಿಂದಿನ ಸಾಲಿನ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಮೆರಿಟ್‌ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು.


8. ಅರ್ಜಿ ಸಲ್ಲಿಸಲು ಕನಿಷ್ಠ 50 ಅಂಕ ಪಡೆದಿರಬೇಕು.


ಪ್ರತಿ ಜಿಲ್ಲೆಗೆ ಬಿಡುಗಡೆಗೊಳಿಸುವ ಅನುದಾನದಲ್ಲಿ ಶೇಕಡ 50 ರಷ್ಟು ಬಾಲಕಿಯರಿಗೆ ಮೀಸಲಿಟ್ಟಿದ್ದು, ಡಿ.ಎಡ್ ಕೋರ್ಸ್‌ಗೆ ಶೇಕಡ 25 ಹಾಗು ಬಿ.ಎಡ್ ಕೋರ್ಸ್‌ಗೆ ಶೇಕಡ 75 ರಷ್ಟು ಅನುದಾನ ಬಳಸಬಹುದಾಗಿದೆ. ಒಂದು ವೇಳೆ ಅಭ್ಯರ್ಥಿಗಳು ಸುಳ್ಳು ಮಾಹಿತಿ ನೀಡಿದರೆ ಹಾಗು ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸಿದರೆ ಅಂಥವರಿಂದ ಪ್ರೋತ್ಸಾಹ ಧನ ವಾಪಸ್ ಪಡೆಯಲಾಗುವುದು.


ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಇಲಾಖಾ ಸಹಾಯವಾಣಿ ಸಂಖ್ಯೆ 8277799990 ಅಥವಾ ಇಲಾಖಾ ವೆಬ್‌ಸೈಟ್‌ https://dom.karnataka.gov.in/ ಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿ ಪಡೆಯಿರಿ.

First published: