• Home
  • »
  • News
  • »
  • education
  • »
  • Government Holiday 2023: ಸರ್ಕಾರಿ ಶಾಲಾ ರಜಾ ದಿನಗಳ ಪಟ್ಟಿ ಹೀಗಿದೆ

Government Holiday 2023: ಸರ್ಕಾರಿ ಶಾಲಾ ರಜಾ ದಿನಗಳ ಪಟ್ಟಿ ಹೀಗಿದೆ

ಕ್ಯಾಲೆಂಡರ್

ಕ್ಯಾಲೆಂಡರ್

ಸದ್ಯ ತಿಳಿದುಬಂದ ರಜಾ ದಿನಗಳ ವಿವರವಾಗಿದ್ದು. ಈ ಬಾರಿ ಎಲ್ಲಾ ರಜಾ ದಿನಗಳು ಲಭ್ಯವಾಗುವಂತೆಯೇ ಬಂದಿವೆ ಯಾವ ರಜೆಯೂ ಅಷ್ಟೊಂದಾಗಿ ಭಾನುವಾರ ಬಂದಿಲ್ಲ ಎಂಬುದು ಖುಷಿಯ ವಿಚಾರ.

  • News18 Kannada
  • Last Updated :
  • Karnataka, India
  • Share this:

2022 ಮುಗಿದು ಇನ್ನೊಂದು ತಿಂಗಳಲ್ಲಿ (Month) 2023 ಹೊಸ ವರ್ಷ ಆರಂಭವಾಗಲಿದೆ. ಸರ್ಕಾರಿ ನೌಕರರಿಗೆ ಮತ್ತು ಶಾಲಾ ಮಕ್ಕಳಿಗೆ (Children) ಸಿಗುವ ರಜಾ ದಿನಗಳ ಪಟ್ಟಿ ಈ ಕೆಳಗಿನಂತಿದೆ. ಜನರು ಈಗಾಗಲೇ 2023ರ ಬಗ್ಗೆ ಚಿಂತನೆ ಆರಂಭಿಸಿದ್ದಾರೆ. ಹೊಸ ವರ್ಷದಲ್ಲಿ (New Year) ಮಾಡಬೇಕಾದ ಕಾರ್ಯಗಳ ಬಗ್ಗೆ ಯೋಜನೆ ತಯಾರು ಮಾಡುತ್ತಿದ್ದಾರೆ. ಈ ವರ್ಷದ ಹೊಸ ದಿನಗಳ ರಜಾ ಪ್ಲಾನ್ (Holiday Plan)​ ಮಾಡಿಕೊಳ್ಳಲು ಸಹಾಯವಾಗುವಂತೆ ಈಗಲೇ 2023ರ ರಜಾ ದಿನಗಳ ಪಟ್ಟಿ ಬಿಡುಗಡೆಯಾಗಿದೆ. ಅವು ಈ ಕೆಳಗಿನಂತಿವೆ. 


ಸರ್ಕಾರಿ ಶಾಲಾ ಮಕ್ಕಳಿಗೆ ಸಿಗಲಿರುವ ರಜೆಗಳ ವಿವರ


14 ಜನವರಿ - ಶನಿವಾರ ಮಕರ ಸಂಕ್ರಾಂತಿ
26 ಜನವರಿ - ಗುರುವಾರ ಗಣರಾಜ್ಯೋತ್ಸವ
18 ಫೆಬ್ರವರಿ - ಶನಿವಾರ ಮಹಾ ಶಿವರಾತ್ರಿ
22 ಮಾರ್ಚ್ - ಬುಧವಾರ ಯುಗಾದಿ
4 ಎಪ್ರಿಲ್ - ಮಂಗಳವಾರ ಮಹಾವೀರ ಜಯಂತಿ
7 ಏಪ್ರಿಲ್ - ಶುಕ್ರವಾರ ಶುಭ ಶುಕ್ರವಾರ
14 ಎಪ್ರಿಲ್ - ಶುಕ್ರವಾರ ಡಾ ಅಂಬೇಡ್ಕರ್ ಜಯಂತಿ
22 ಎಪ್ರಿಲ್-  ಶನಿವಾರ ಈದುಲ್ ಫಿತರ್
23 ಎಪ್ರಿಲ್ - ರವಿವಾರ ಬಸವ ಜಯಂತಿ
1 ಮೇ - ಸೋಮವಾರ ಮೇ ದಿನ
29 ಜೂನ್ - ಗುರುವಾರ ಬಕ್ರೀದ್ / ಈದ್ ಅಲ್ ಅಧಾ
29 ಜುಲೈ - ಶನಿವಾರ ಮೊಹರಂ
15 ಆಗಸ್ಟ್ - ಮಂಗಳವಾರ ಸ್ವಾತಂತ್ರ್ಯ ದಿನಾಚರಣೆ
19 ಸೆಪ್ಟೆಂಬರ್ - ಮಂಗಳವಾರ ಗಣೇಶ ಚತುರ್ಥಿ
28 ಸೆಪ್ಟೆಂಬರ್ - ಗುರುವಾರ ಈದ್ ಮಿಲಾದ್
2 ಅಕ್ಟೋಬರ್ - ಸೋಮವಾರ ಗಾಂಧಿ ಜಯಂತಿ
14 ಅಕ್ಟೋಬರ್ - ಶನಿವಾರ ಮಹಾಲಯ ಅಮಾವಾಸ್ಯೆ
23 ಅಕ್ಟೋಬರ್ - ಸೋಮವಾರ ಮಹಾ ನವಮಿ
24 ಅಕ್ಟೋಬರ್ - ಮಂಗಳವಾರ ವಿಜಯ ದಶಮಿ
28 ಅಕ್ಟೋಬರ್ - ಶನಿವಾರ ಮಹರ್ಷಿ ವಾಲ್ಮೀಕಿ ಜಯಂತಿ
1 ನವೆಂಬರ್ - ಬುಧವಾರ ಕನ್ನಡ ರಾಜ್ಯೋತ್ಸವ
12 ನವೆಂಬರ್ - ರವಿವಾರ ದೀಪಾವಳಿ
13 ನವೆಂಬರ್ - ಸೋಮವಾರ ದೀಪಾವಳಿ ರಜೆ
30 ನವೆಂಬರ್ - ಗುರುವಾರ ಕನಕದಾಸರ ಜಯಂತಿ
25 ಡಿಸೆಂಬರ್ - ಸೋಮವಾರ ಕ್ರಿಸ್ ಮಸ್ ದಿನ


ಇದನ್ನೂ ಓದಿ: ಇಂದು ನಿಮ್ಮೂರಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ ಎಷ್ಟಿದೆ? ಇಲ್ಲಿ ಚೆಕ್ ಮಾಡಿ


ಇದಿಷ್ಟು ಸದ್ಯ ತಿಳಿದುಬಂದ ರಜಾ ದಿನಗಳ ವಿವರವಾಗಿದ್ದು. ಈ ಬಾರಿ ಎಲ್ಲಾ ರಜಾ ದಿನಗಳು ಲಭ್ಯವಾಗುವಂತೆಯೇ ಬಂದಿವೆ ಯಾವ ರಜೆಯೂ ಅಷ್ಟೊಂದಾಗಿ ಭಾನುವಾರ ಬಂದಿಲ್ಲ ಎಂಬುದು ಖುಷಿಯ ವಿಚಾರ. ಈ ಕೋಷ್ಟಕದಲ್ಲಿನ ದಿನಾಂಕಗಳು ಅಂದಾಜು 2023 ರ ರಜಾ ದಿನಗಳ ಪಟ್ಟಿಯಾಗಿದೆ. ಇದರ ನಡುವೆ ಇನ್ನೊಂದಿಷ್ಟು ರಜೆಗಳು ಲಭ್ಯವಾಗುವ ಸಾಧ್ಯತೆ ಕೂಡ ಇದೆ. ಮಳೆ ಹಾಗೂ ನೈಸರ್ಗಿಕ ವಿಕೋಪಗಳಿಗೆ ಪ್ರತಿ ವರ್ಷವೂ ಕೆಲವು ರಜಾ ದಿನಗಳನ್ನು ಮೀಸಲಿಡಲಾಗುತ್ತದೆ.


ಹಬ್ಬದ ರಜೆಗಳು ಲಭ್ಯ
ಈ ಕಾರಣ ರಜಾ ದಿನಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು. ಶನಿವಾರದ ರಜಾದಿನಗಳು ಹೆಚ್ಚಾಗಿ ಬಂದಿವೆ. ಇದು ಕೇವಲ ಸರ್ಕಾರಿ ಶಾಲಾ ಮಕ್ಕಳಿಗೆ ಮಾತ್ರವಲ್ಲ ಸರ್ಕಾರಿ ಶಾಲಾ ಶಿಕ್ಷಕರು ಹಾಗೂ ನೌಕರರಿಗೂ ಸಂಬಂಧಿಸಿದ ರಜೆಯಾಗಿದೆ. ಜನವರಿಯಲ್ಲಿ ಒಟ್ಟು 2 ದಿನ ಸರ್ಕಾರಿ ರಜೆ ಇದ್ದು ಫೆಬ್ರವರಿಯಲ್ಲಿ ಹಾಗೂ ಮಾರ್ಚ್​ನಲ್ಲಿ ತಲಾ ಒಂದೊಂದು ದಿನ ಸರ್ಕಾರಿ ರಜಾ ಲಭ್ಯವಿದೆ. ಎಪ್ರಿಲ್​ ತಿಂಗಳಲ್ಲಿ 3 ರಜೆ ನೀಡಲಾಗಿದೆ. ಅದಲ್ಲದೆ ಮೇ ತಿಂಗಳಿನಲ್ಲಿ ಶಾಲಾ ಮಕ್ಕಳಿಗೆ ಇನ್ನಷ್ಟು ಬೇಸಿಗೆ ರಜಾ ದಿನಗಳು ಲಭ್ಯವಿದ್ದು ಇನ್ನೂ ಹೆಚ್ಚಿನ ರಜೆ ಸಿಗಲಿದೆ. ಅಷ್ಟೇ ಅಲ್ಲ ಇದೇ ರೀತಿ ದೀಪಾವಳಿ, ಚೌತಿ, ನವರಾತ್ರಿ ಹೀಗೆ ಹಬ್ಬದ ಸಂದರ್ಭದಲ್ಲಿ ಇನ್ನಷ್ಟು ರಜೆಗಳ ಸಾಲು ಮಕ್ಕಳಿಗೆ ಲಭ್ಯವಿದೆ.


ಈ ರಜಾ ದಿನಗಳ ಪಟ್ಟಿ ನೌವೀಕರಣಗೊಳ್ಳುವ ಸಾಧ್ಯತೆ ಇದೆ.

First published: