• Home
  • »
  • News
  • »
  • education
  • »
  • Interview: ಸಂದರ್ಶನಕ್ಕೆ ಧರಿಸುವ ಬಟ್ಟೆ ಹೇಗಿರಬೇಕು? ಇಲ್ಲಿದೆ ಉಪಯುಕ್ತ ಟಿಪ್ಸ್

Interview: ಸಂದರ್ಶನಕ್ಕೆ ಧರಿಸುವ ಬಟ್ಟೆ ಹೇಗಿರಬೇಕು? ಇಲ್ಲಿದೆ ಉಪಯುಕ್ತ ಟಿಪ್ಸ್

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಉದ್ಯೋಗ ಸಂದರ್ಶನಕ್ಕೆ ಧರಿಸಲು ಇಂತಹದ್ದೇ ಉಡುಪುಗಳಿದ್ದು, ಅದನ್ನು ಧರಿಸುವ ವಿಧಾನ, ವ್ಯಕ್ತಿಯು ಅದನ್ನು ನಿರ್ವಹಿಸುವ ಚಾಕಚಕ್ಯತೆ, ನಡೆದಾಡುವ ರೀತಿ ನೀತಿ ಹೀಗೆ ಎಲ್ಲವೂ ನಿಮ್ಮ ಪ್ರತಿಬಿಂಬದಂತೆ ಗೋಚರಿಸುತ್ತದೆ. ಇದೆಲ್ಲವನ್ನು ಯಾರು ಗಮನಿಸುತ್ತಾರೆ ಎಂಬ ಸೋಮಾರಿತನ ಕೂಡ ನಿಮ್ಮಲ್ಲಿರಬಾರದು ಏಕೆಂದರೆ ಕೆಲವೊಂದು ಸಂಸ್ಥೆಗಳು ಡ್ರೆಸ್ ಕೋಡ್‌ಗಳಿಗೂ ಅಂಕಗಳನ್ನು ಹೊಂದಿರುತ್ತವೆ

ಮುಂದೆ ಓದಿ ...
  • Share this:

    ಉದ್ಯೋಗ ಸಂದರ್ಶನಗಳಿಗೆ ಸಿದ್ಧರಾಗಿ ಹೋಗುವಾಗ ಕೆಲವೊಂದು ನಿಯಮಾವಳಿಗಳನ್ನು ನೀವು ಅನುಸರಿಸಬೇಕಾಗುತ್ತದೆ. ಯಾವುದೇ ಉದ್ಯೋಗವಾಗಿರಲಿ ಸಂದರ್ಶನದ ಸಮಯದಲ್ಲಿ ನಿರ್ದಿಷ್ಟ ವೇಷಭೂಷಣಗಳನ್ನು ಧರಿಸಬೇಕಾಗುತ್ತದೆ. ಉದ್ಯೋಗ ಸಂದರ್ಶನಕ್ಕೆ ಧರಿಸಲು ಇಂತಹದ್ದೇ ಉಡುಪುಗಳಿದ್ದು, ಅದನ್ನು ಧರಿಸುವ ವಿಧಾನ, ವ್ಯಕ್ತಿಯು ಅದನ್ನು ನಿರ್ವಹಿಸುವ ಚಾಕಚಕ್ಯತೆ, ನಡೆದಾಡುವ ರೀತಿ ನೀತಿ ಹೀಗೆ ಎಲ್ಲವೂ ನಿಮ್ಮ ಪ್ರತಿಬಿಂಬದಂತೆ ಗೋಚರಿಸುತ್ತದೆ. ಇದೆಲ್ಲವನ್ನು ಯಾರು ಗಮನಿಸುತ್ತಾರೆ ಎಂಬ ಸೋಮಾರಿತನ ಕೂಡ ನಿಮ್ಮಲ್ಲಿರಬಾರದು ಏಕೆಂದರೆ ಕೆಲವೊಂದು ಸಂಸ್ಥೆಗಳು ಡ್ರೆಸ್ ಕೋಡ್‌ಗಳಿಗೂ ಅಂಕಗಳನ್ನು ಹೊಂದಿರುತ್ತವೆ. ಸಂದರ್ಶನಕ್ಕೆ ಹಾಜರಾಗುವ ಸಂದರ್ಭದಲ್ಲಿ ಈ ಬಗ್ಗೆ ಮಾಹಿತಿ ನೀಡದೇ ಇದ್ದರೂ ಸೂಕ್ಷ್ಮವಾಗಿ ನೋಟ್ ಮಾಡಿಕೊಂಡಿರುತ್ತವೆ ಹಾಗಾಗಿ ಸಂದರ್ಶನದ ಸಮಯದಲ್ಲಿ ಸೂಕ್ತವಾಗಿ ದಿರಿಸು ಧರಿಸಿಕೊಂಡು ಹಾಜರಾಗುವುದು ಉತ್ತಮ.


    ಉದ್ಯೋಗ ಸಂದರ್ಶನದಲ್ಲಿ ವೇಷಭೂಷಣ ಹೇಗಿರಬೇಕು?


    ಉದ್ಯೋಗ ಸಂದರ್ಶನದ ಸಮಯದಲ್ಲಿ ವೇಷಭೂಷಣ ಹೇಗಿರಬೇಕು ಎಂಬ ಸಲಹೆಯನ್ನು ಚಾರ್ಟೆಡ್ ಅಕೌಂಟ್ ವಿಭಾಗದಲ್ಲಿ ಅಖಿಲ ಭಾರತ ಶ್ರೇಣಿ 22 ನೇ ಸ್ಥಾನವನ್ನು ಪಡೆದುಕೊಂಡ ಸಿ.ಎ ಕರಣ್ ಬಾತ್ರ ನೀಡಿದ್ದಾರೆ. ಪ್ರಮುಖ ತೆರಿಗೆ ನಿಪುಣರಾಗಿ ಕಾರ್ಯನಿರ್ವಹಿಸುವ ಬಾತ್ರಾ ವೇಷಭೂಷಣಗಳ ಕುರಿತು ಸಲಹೆಗಳನ್ನು ನೀಡುತ್ತಾರೆ.


    ಆಕರ್ಷಕ ವ್ಯಕ್ತಿತ್ವ


    ನೀವು ಎಷ್ಟೇ ಬುದ್ಧಿವಂತರಾಗಿದ್ದರೂ ನೀವು ಸಂದರ್ಶಕರ ಮೇಲೆ ಆಕರ್ಷಕ ವ್ಯಕ್ತಿತ್ವವನ್ನು ಬೀರಿದ್ದರೆ ಇದು ಅಂತಿಮ ಫಲಿತಾಂಶಕ್ಕೆ ಸಹಕಾರಿಯಾಗಿರುತ್ತದೆ ಎಂಬುದು ಕರಣ್ ಬಾತ್ರಾ ಅಭಿಪ್ರಾಯವಾಗಿದೆ. ಉದ್ಯೋಗಕ್ಕೆ ನೀವು ಸೂಕ್ತರು ಹೌದೇ ಅಲ್ಲವೇ ಎಂಬುದನ್ನು ನಿರ್ಧರಿಸಲು ಸಂದರ್ಶಕರಿಗೆ ಬರೇ 2 ಸೆಕೆಂಡ್‌ಗಳು ಸಾಕು ಎಂಬುದು ಬಾತ್ರ ಮಾತಾಗಿದೆ. ನೀವು ಸಂದರ್ಶಕರೊಂದಿಗೆ ಏನಾದರೂ ಮಾತನಾಡುವ ಮುನ್ನ ನಿಮ್ಮ ವೇಷಭೂಷಣ ಹೇಗಿದೆ ಎಂಬುದನ್ನು ಆಧರಿಸಿ ಅವರ ಮೇಲೆ ನೀವು ಪ್ರಭಾವ ಬೀರಿರುತ್ತೀರಿ ಎಂಬುದು ಬಾತ್ರ ಹೇಳಿಕೆಯಾಗಿದೆ. ಹಾಗಿದ್ದರೆ ಸಂದರ್ಶನದ ಸಮಯದಲ್ಲಿ ಪಾಲಿಸಬೇಕಾದ ನಿಯಮಗಳು ಹಾಗೂ ವೇಷಭೂಷಣದ ಕುರಿತು ಇಂದಿನ ಲೇಖನದಲ್ಲಿ ತಿಳಿದುಕೊಳ್ಳೋಣ


    1. ದಿರಿಸುಗಳ ಆಯ್ಕೆ ಉನ್ನತವಾಗಿರಲಿ


    ನೀವು ಯಾವಾಗಲೂ ಧರಿಸುವ ಧಿರಿಸಿಗಿಂತ ತುಸು ಉತ್ತಮ ಗುಣಮಟ್ಟದ ದಿರಿಸುಗಳನ್ನೇ ಸಂದರ್ಶನಕ್ಕೆ ಆಯ್ದುಕೊಳ್ಳಿ. ಕ್ಯಾಶುವಲ್ ಧರಿಸುವುದು ಸೂಕ್ತ ಎಂಬುದು ನಿಮಗನ್ನಿಸಿದರೆ ಬ್ಯುಸಿನೆಸ್ ಕ್ಯಾಶುವಲ್ ಅನ್ನು ಧರಿಸಿ. ನೀವು ಒಬ್ಬ ಅನುಭವಿ ಎಂಬುದನ್ನು ಮರೆಯದಿರಿ. ನಿಮ್ಮ ಉಡುಗೆ ನೀವು ಉದ್ಯೋಗದ ಮೇಲೆ ಹೊಂದಿರುವ ಭರವಸೆ ಹಾಗೂ ಕಾಳಜಿಯನ್ನು ಪ್ರದರ್ಶಿಸುತ್ತದೆ


    2. ಸೂಟ್ ಧರಿಸುವುದು


    ಯಶಸ್ಸಿನತ್ತ ಹೆಜ್ಜೆ ಹಾಕುವ ನಿಮ್ಮ ಪ್ರಯತ್ನದಲ್ಲಿ ತುಸು ಹೆಚ್ಚು ಖರ್ಚು ಬಂದರೂ ಅದನ್ನು ಧಾರಾಳವಾಗಿ ಮಾಡಿ ಎಂಬುದು ಬಾತ್ರಾ ಸಲಹೆಯಾಗಿದೆ. ಸಂದರ್ಶನಕ್ಕೆ ಟು ಪೀಸ್ ಸೂಟ್ ಧರಿಸುವುದು ಇನ್ನೂ ಉತ್ತಮ ಎಂಬುದು ಬಾತ್ರಾ ಕಿವಿಮಾತಾಗಿದೆ. ತಿಳಿ ಬಣ್ಣದ ಶರ್ಟ್ ಹಾಗೂ ಟೈಯೊಂದಿಗೆ ಒಂದೇ ಬಣ್ಣದ ಸೂಟ್ ಆಯ್ಕೆಮಾಡಿ.


    ಪುರುಷ ಹಾಗೂ ಮಹಿಳೆ ಇಬ್ಬರೂ ತಮ್ಮಲ್ಲಿರುವ ಸೌಕರ್ಯ ಹಾಗೂ ಕಂಪೆನಿಯ ಸಂಸ್ಕೃತಿಗೆ ಅನುಗುಣವಾಗಿ ಸೂಟ್ ಆಯ್ಕೆಮಾಡಬಹುದು. ಪುರುಷರು ಪ್ಯಾಂಟ್ ಅಂತೆಯೇ ಮಹಿಳೆಯರು ಸ್ಕರ್ಟ್ ಸೂಟ್‌ಗಳನ್ನು ಧರಿಸಬಹುದು ಎಂಬುದು ಬಾತ್ರಾ ಮಾತಾಗಿದೆ. ಹುಡುಗಿಯರಿಗೆ, ಸ್ಕರ್ಟ್‌ ಸಾಕಷ್ಟು ಉದ್ದವಾಗಿರಬೇಕು ಇದರಿಂದ ಆರಾಮವಾಗಿ ಕುಳಿತುಕೊಳ್ಳಬಹುದು.


    ಒಂದೇ ಬಣ್ಣದ ಶರ್ಟ್ ಧರಿಸಿ, ಬಿಳಿ ಬಣ್ಣ ಉತ್ತಮ. ಬಿಳಿ ಉತ್ತಮ ಪ್ರಭಾವವನ್ನು ನೀಡುತ್ತದೆ ಮತ್ತು ಇತರರಿಗೆ ನಿಮ್ಮ ಮೇಲೆ ವಿಶ್ವಾಸವಿರಿಸುತ್ತದೆ. ನೀವು ಬೀಜ್, ಕೆನೆ ಮತ್ತು ತಿಳಿ ಗುಲಾಬಿಯಂತಹ ಇತರ ತಿಳಿ ಬಣ್ಣಗಳನ್ನು ಆಯ್ಕೆಮಾಡಿಕೊಳ್ಳಬಹುದು. ಪ್ಯಾಂಟ್ ಉದ್ದವಾಗಿರಲಿ ಹಾಗೂ ಪಾದದ ಬಳಿ ಮುದ್ದೆಯಾಗದಂತೆ ನೋಡಿಕೊಳ್ಳಿ. ಸೂಟ್ ನಿಮಗೆ ಒಪ್ಪುವಂತಿರಲಿ ಅಂದರೆ ತುಂಬಾ ಸಡಿಲ ಕೂಡ ಬೇಡ ತುಂಬಾ ಬಿಗಿಯಾಗಿಯೂ ಇರುವುದು ಬೇಡ ಇದು ಗಮನದಲ್ಲಿರಲಿ.


    3.ಭಾರತೀಯ ಉಡುಗೆ


    ಭಾರತೀಯ ಉಡುಗೆಗಳನ್ನು ಧರಿಸಿ ಮಹಿಳೆಯರು ಸಂದರ್ಶಕರ ಮೆಚ್ಚುಗೆಗೆ ಪಾತ್ರರಾಗಬಹುದು. ಕುರ್ತಾ, ಸೀರೆ, ಚೂಡಿದಾರ್ ಹೀಗೆ ಭಾರತದ ಸಂಸ್ಕೃತಿಗೆ ಒಪ್ಪುವ ದಿರಿಸುಗಳನ್ನು ಮಹಿಳೆಯರು ಆಯ್ಕೆಮಾಡಿಕೊಳ್ಳಬಹುದು. ಸೀರೆ ಉಡುವುದಾದರೆ ಹತ್ತಿ ಸೀರೆಯನ್ನು ಆರಿಸಿ ಇನ್ನು ಸಲ್ವಾರ್ ಕಮೀಜ್ ನಿಮ್ಮ ಆಯ್ಕೆಯಾದಲ್ಲಿ ದುಪ್ಪಟ್ಟಾ ಧರಿಸಲು ಮರೆಯದಿರಿ. ಬೇಕಿದ್ದರೆ ಇದರ ಮೇಲೆ ಬ್ಲೇಜರ್ ಕೂಡ ಧರಿಸಬಹುದು


    4.ಶೂಗಳು ಹೊಳೆಯುವಂತಿರಲಿ


    ಸಂದರ್ಶಕರು ನಿಮ್ಮ ಮೇಲೆ ಮೆಚ್ಚುಗೆ ಸೂಸಬೇಕು ಎಂದಾದಲ್ಲಿ ಒಂದು ಜೊತೆ ಉತ್ತಮ ಗುಣಮಟ್ಟದ ಶೂಗಳಿಗೆ ಹಣ ವ್ಯಯಿಸಿ ಎಂಬುದು ಬಾತ್ರಾ ಸಲಹೆಯಾಗಿದೆ. ಒಮ್ಮೊಮ್ಮೆ ಶೂಗಳು ಕೂಡ ಮಾತಿಗಿಂತ ಹೆಚ್ಚು ಸದ್ದುಮಾಡುತ್ತವೆ ಎಂಬುದು ಅವರ ಕಿವಿಮಾತಾಗಿದೆ. ಉತ್ತಮವಾಗಿ ಪಾಲಿಶ್ ಮಾಡಿರುವ, ಸ್ವಚ್ಛವಾಗಿರುವ, ಗಂಭೀರ ಶೂಗಳ ಕಡೆಗೆ ಕೂಡ ಸಂದರ್ಶಕರ ಗಮನ ಹೋಗುತ್ತದೆ. ಶೂಗಳಿಗೆ ಪಾಲಿಶ್ ಮಾಡದಿರಲು ಮರೆಯದಿರಿ.


    ಪುರುಷರು ಲೇಸ್ ಇರುವ ಕಪ್ಪು ಇಲ್ಲವೇ ಕಂದು ಬಣ್ಣದ ಶೂಗಳನ್ನು ಧರಿಸಬೇಕು. ಮಹಿಳೆಯರು ಪಾದಗಳನ್ನು ಮುಚ್ಚುವ ಶೂಗಳ ಆಯ್ಕೆಮಾಡಬಹುದು. ನಡೆಯಲು ಅನುಕೂಲಕರವಾಗಿರುವ ಶೂಗಳನ್ನು ಆರಿಸಿ. ಇನ್ನು ಹೈಹೀಲ್ಡ್ ಶೂಗಳ ಆಯ್ಕೆಮಾಡದಿರಿ ಎಂಬುದು ಬಾತ್ರಾ ಸಲಹೆಯಾಗಿದೆ


    5.ಹೆಚ್ಚು ಆಡಂಬರ ಬೇಡ


    ಹೆಚ್ಚಿನ ಆಭರಣಗಳನ್ನು ಧರಿಸುವುದು ಇಲ್ಲವೇ ಹೆಚ್ಚು ಫ್ಯಾಶನೇಬಲ್ ಆಗಿರುವುದೂ ಕೂಡ ಸಂದರ್ಶನದಲ್ಲಿ ಗಮನ ಸೆಳೆಯುವ ಅಂಶವಲ್ಲ ಎಂಬುದು ಬಾತ್ರಾ ಮಾತಾಗಿದೆ. ನೆಕ್ಲೇಸ್‌ಗಳು ಇಲ್ಲವೇ ಕಣ್ಣು ಕೋರೈಸುವ ಆಭರಣಗಳನ್ನು ಧರಿಸದಿರಿ. ಆದಷ್ಟು ಹಿತಮಿತವಾದ ಆಭರಣಗಳನ್ನು ಧರಿಸಿ ಎಂದು ಬಾತ್ರಾ ಹೇಳುತ್ತಾರೆ. ಸಂದರ್ಶಕರು ನಿಮಗೆ ಮಹತ್ವ ನೀಡಬೇಕೇ ಹೊರತು ನೀವು ಧರಿಸಿರುವ ಆಭರಣಕ್ಕಲ್ಲ ಎಂಬುದು ಇಲ್ಲಿ ಗಮನಿಸಬೇಕಾದ ಅಂಶವಾಗಿದೆ


    6.ಸುಗಂಧ ದ್ರವ್ಯಗಳ (ಪರ್ಫ್ಯೂಮ್ ಬಳಕೆ)


    ತುಂಬಾ ಸುಗಂಧಯುಕ್ತ ಪರ್ಫ್ಯೂಮ್‌ಗಳ ಆಯ್ಕೆಮಾಸದಿರಿ ಎಂಬುದು ಬಾತ್ರಾ ಸಲಹೆಯಾಗಿದೆ. ತೀರಾ ಸುಗಂಧಿತ ಪರ್ಪ್ಯೂಮ್‌ಗಳನ್ನು ಬಳಸುವುದು ನೀವು ಕೆಲಸದ ಕುರಿತು ಗಂಭೀರರಾಗಿಲ್ಲ ಎಂಬ ಅಂಶವನ್ನು ಸಂದರ್ಶಕರಿಗೆ ತಲುಪಿಸುತ್ತದೆ ಈ ತಪ್ಪನ್ನು ಎಂದಿಗೂ ಮಾಡದಿರಿ ಎಂಬುದು ಬಾತ್ರಾ ಕಿವಿಮಾತಾಗಿದೆ.


    7.ಟ್ಯಾಟೂಗಳ ಪ್ರದರ್ಶನ


    ಸೆಲೆಬ್ರಿಟಿಗಳು ತಮ್ಮ ಟ್ಯಾಟೂ ಪ್ರದರ್ಶನವನ್ನು ಮಾಡುತ್ತಾರೆ ಎಂದೂ ನೀವು ಈ ತಪ್ಪನ್ನು ಮಾಡದಿರಿ ಎಂದು ಬಾತ್ರಾ ಸೂಚಿಸಿದ್ದಾರೆ. ಉದ್ಯೋಗ ಸಂದರ್ಶನ ಎಂಬುದು ಇತರ ಎಲ್ಲಾ ಕ್ಷೇತ್ರಗಳಿಗಿಂತ ಭಿನ್ನವಾದುದು. ಇಲ್ಲಿ ನೀವು ಹೇಗಿರುತ್ತೀರಿ ಎಂಬುದು ಉದ್ಯೋಗದ ಮೇಲೆ ಪರಿಣಾಮ ಬೀರುತ್ತದೆ ಹಾಗಾಗಿ ಟ್ಯಾಟೂಗಳ ಪ್ರದರ್ಶನ ಬೇಡ ಎಂದು ಬಾತ್ರಾ ಹೇಳುತ್ತಾರೆ. ಆದಷ್ಟು ಟ್ಯಾಟೂಗಳನ್ನು ಮುಚ್ಚುವಂತಹ ದಿರಿಸುಗಳನ್ನು ಧರಿಸಿ


    8.ಸಣ್ಣ ಸಣ್ಣ ಅಂಶಗಳಿಗೂ ಮಹತ್ವ ನೀಡಿ


    ಸಂದರ್ಶನಕ್ಕೆ ಹೋಗುವ ಮುನ್ನ ಕೊನೆಯದಾಗಿ ನಿಮ್ಮನ್ನು ನೀವು ನೋಡಿಕೊಳ್ಳಿ. ಸಣ್ಣ ತಪ್ಪುಗಳು ಕೂಡ ಸಂದರ್ಶನದ ನಿಮ್ಮ ಪರಿಶ್ರಮವನ್ನು ವ್ಯರ್ಥಗೊಳಿಸಬಹುದು. ಆದಷ್ಟು ಆಭರಣಗಳಿಗೆ ಸರಿಹೊಂದುವಂತಹ ಇಲ್ಲವೇ ಬಟ್ಟೆಗೆ ಸರಿಹೊಂದುವಂತಹ ಒಂದೇ ಬಣ್ಣದ ಆಭರಣಗಳನ್ನು ಧರಿಸದಿರಿ. ಎಲ್ಲಾ ಸಮಯವು ಇದು ಹೊಂದಿಕೆಯಾಗುತ್ತದೆ ಎಂಬುದು ಸತ್ಯವಲ್ಲ ಎಂದು ಬಾತ್ರಾ ಹೇಳುತ್ತಾರೆ.


    ಸ್ತ್ರೀ, ಪುರುಷರಿಬ್ಬರೂ ತಮ್ಮ ಶೂ, ಬೆಲ್ಟ್, ಸಾಕ್ಸ್‌ನತ್ತ ಗಮನ ಹರಿಸಬೇಕು ಎಂಬುದು ಬಾತ್ರಾ ಸಲಹೆಯಾಗಿದೆ. ನಿಮ್ಮ ಶೂ ಬಣ್ಣವು ಧರಿಸಿರುವ ಪ್ಯಾಂಟ್/ಸ್ಕರ್ಟ್‌ಗೆ ಹೊಂದಿಕೆಯಾಗಬೇಕು ಅಂತೆಯೇ ಬೆಲ್ಟ್ ಬಣ್ಣವು ಶೂವಿನ ಬಣ್ಣಕ್ಕೆ ಹೊಂದಿಕೆಯಾಗಬೇಕು ಎಂಬುದು ನೆನಪಿನಲ್ಲಿಟ್ಟುಕೊಳ್ಳಿ ಎಂದು ಬಾತ್ರಾ ತಿಳಿಸುತ್ತಾರೆ.


    ಬಟ್ಟೆಗಳ ಗರಿಗರಿಯಾಗಿರಲಿ. ಸುಕ್ಕುಗಟ್ಟಿದ ದಿರಿಸು ನಿಮ್ಮ ಬಗ್ಗೆ ನಿರಾಸಕ್ತಿಯನ್ನು ಮೂಡಿಸಬಹುದು. ನೀವು ಧರಿಸುವ ಬಟ್ಟೆಗಳಲ್ಲಿ ಬಟನ್, ಹೊಲಿಗೆ ಎಲ್ಲವೂ ಸರಿ ಇದೆಯೇ ಎಂದು ಪರಿಶೀಲಿಸಿ. ಕೊನೆಯ ಕ್ಷಣದಲ್ಲಿ ಭಯಗೊಳ್ಳದಿರಿ ಆತುರ ಆತುರವಾಗಿ ಪರಿಶೀಲನೆ ಕೂಡ ಮಾಡದರಿ ಎಂದು ಬಾತ್ರಾ ಹೇಳಿದ್ದಾರೆ.


    ಉಗುರುಗಳನ್ನು ಟ್ರಿಮ್ ಮಾಡಿಕೊಳ್ಳಿ ಹಾಗೂ ಆದಷ್ಟು ಸ್ವಚ್ಛವಾಗಿಟ್ಟುಕೊಳ್ಳಿ. ಸ್ತ್ರೀಯರು ನೇಲ್ ಪಾಲಿಶ್ ಹಚ್ಚದಿರಿ ಎಂಬುದು ಬಾತ್ರಾ ತಿಳಿಸಿರುವ ಅಂಶಗಳಾಗಿವೆ.


    9.ಕೇಶಾಲಂಕಾರಕ್ಕೆ ಗಮನ ನೀಡಿ


    ನಿಮ್ಮ ವ್ಯಕ್ತಿತ್ವದ ಕೈಗನ್ನಡಿ ಎಂದರೆ ನಿಮ್ಮ ಕೇಶಾಲಂಕಾರವಾಗಿದೆ. ಪುರುಷರು ಅಚ್ಚುಕಟ್ಟಾಗಿ ಕೂದಲನ್ನು ಟ್ರಿಮ್ ಮಾಡಿಕೊಳ್ಳಿ ಅಂತೆಯೇ ಸ್ತ್ರೀಯರು ಕೂದಲನ್ನು ಸುಂದರವಾಗಿ ಬಾಚಿ ಕಟ್ಟಿಕೊಂಡಿರಬೇಕು. ಉದ್ದನೆಯ ಕೂದಲಿಗೆ ಹೈ ಬನ್ ಇಲ್ಲವೇ ಪೋನಿಟೇಲ್ ಉತ್ತಮವಾಗಿದೆ ಹಾಗೂ ಹೇರ್‌ಬ್ಯಾಂಡ್‌ಗಳ ಬಳಕೆಯನ್ನು ಮಾಡಬಹುದು.


    10.ಮೇಕಪ್ ಹೇಗಿರಬೇಕು


    ಸಂದರ್ಶನದ ಸಮಯದಲ್ಲಿ ನಿಮ್ಮ ಮೇಕಪ್ ಹಿತಮಿತವಾಗಿರಲಿ. ನೀವು ಮಾಡೆಲಿಂಗ್ ಏಜೆನ್ಸಿಗೆ ಸಂದರ್ಶನಕ್ಕೆ ಹೋಗುತ್ತಿಲ್ಲ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿ. ಸಮಾರಂಭಕ್ಕೆ ಹೋಗುವಾಗ ಮಾಡಿಕೊಳ್ಳುವ ಮೇಕಪ್ ಹಾಗೂ ಸಂದರ್ಶನದ ಸಮಯದಲ್ಲಿ ಮಾಡಿಕೊಳ್ಳುವ ಮೇಕಪ್‌ಗೆ ತುಂಬಾ ವ್ಯತ್ಯಾಸವಿರುತ್ತದೆ ಎಂಬುದನ್ನು ಅರಿತುಕೊಳ್ಳಿ.


    ಕಾಡಿಗೆಯನ್ನು ನವಿರಾಗಿ ಹಚ್ಚುವುದು ಹಾಗೂ ತುಟಿಗಳಿಗೆ ಲೈಟ್ ಲಿಪ್‌ಸ್ಟಿಕ್ ಇದಿಷ್ಟು ಹಚ್ಚಿಕೊಂಡರೆ ಸಾಕು ಸಂದರ್ಶನಕ್ಕೆ ಬೇಕಾದ ಮೇಕಪ್ ಮಾಡಿಕೊಂಡಂತೆಯೇ ಎಂಬುದು ಬಾತ್ರಾ ಸಲಹೆಯಾಗಿದೆ. ಸಂದರ್ಶನಕ್ಕೆ ಅತ್ಯುನ್ನತವಾಗಿ ಬೇಕಾಗಿರುವುದು ಆತ್ಮವಿಶ್ವಾಸವೆಂಬ ಮೇಕಪ್ ಆಗಿದೆ ಎಂಬುದು ಬಾತ್ರಾ ಹೇಳಿಕೆಯಾಗಿದೆ. ನಿಮ್ಮಲ್ಲಿ ಆತ್ಮವಿಶ್ವಾಸವಿರುವುದು ಇತರರನ್ನು ನಿಮ್ಮೆಡೆಗೆ ಸೆಳೆಯುತ್ತದೆ ಎಂಬುದು ಬಾತ್ರಾ ಅಭಿಪ್ರಾಯವಾಗಿದೆ.

    Published by:Precilla Olivia Dias
    First published: