• ಹೋಂ
  • »
  • ನ್ಯೂಸ್
  • »
  • ಶಿಕ್ಷಣ
  • »
  • Education System: ವಾಷಿಂಗ್ಟನ್‌ನ ವಿಶೇಷ ಶಿಕ್ಷಣ ವ್ಯವಸ್ಥೆಯೊಂದಿಗೆ ಹೋರಾಡಿ ಜಯಶಾಲಿಯಾದ ತಾಯಿಯ ಕಥೆ!

Education System: ವಾಷಿಂಗ್ಟನ್‌ನ ವಿಶೇಷ ಶಿಕ್ಷಣ ವ್ಯವಸ್ಥೆಯೊಂದಿಗೆ ಹೋರಾಡಿ ಜಯಶಾಲಿಯಾದ ತಾಯಿಯ ಕಥೆ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಇಂದಿನ ಲೇಖನದಲ್ಲಿ ಕೂಡ ತನ್ನ ವಿಕಲಾಂಗ ಮಗುವಿಗಾಗಿ ಆತನ ಶಿಕ್ಷಣಕ್ಕಾಗಿ  ಆಕೆ ಹೋರಾಟವನ್ನೇ ನಡೆಸಿದಳು ಹೇಗೆ ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿದುಕೊಳ್ಳೋಣ.

  • Trending Desk
  • 3-MIN READ
  • Last Updated :
  • Share this:

ತಾಯಿ (Mother)  ಹಾಗೂ ಮಗುವಿನ  (Baby) ಬಾಂಧವ್ಯ ಬೆಲೆ ಕಟ್ಟಲಾಗದ ಅನುಬಂಧವಾಗಿದೆ. ಮಗುವಿನ ಸುಖ ಸಂತೋಷದ ಮುಂದೆ ಆಕೆ ಎಂತಹ ಸವಾಲನ್ನು ಬೇಕಾದರೂ ಮೆಟ್ಟಿ ನಿಲ್ಲುತ್ತಾಳೆ. ತನಗೆ ಕಷ್ಟ ಬಂದರೂ ತನ್ನ ಮಗು ಸುಖವಾಗಿರಬೇಕೆಂಬ ಇಚ್ಛೆಯನ್ನು ಹೊಂದಿರುತ್ತಾಳೆ. ಇಂದಿನ ಲೇಖನದಲ್ಲಿ ಕೂಡ ತನ್ನ ವಿಕಲಾಂಗ ಮಗುವಿಗಾಗಿ ಆತನ ಶಿಕ್ಷಣಕ್ಕಾಗಿ  (Education) ಆಕೆ ಹೋರಾಟವನ್ನೇ ನಡೆಸಿದಳು ಹೇಗೆ ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿದುಕೊಳ್ಳೋಣ. ತನ್ನ ಮಗ ಮಾನಸಿಕವಾಗಿ ವಿಕಲಾಂಗನಾಗಿದ್ದರೂ ಮೇಘನ್ ಆತನನ್ನು ಸಾಮಾನ್ಯರಂತೆ ಬೆಳೆಸಬೇಕೆಂಬ ಇಚ್ಛೆ ಹೊಂದಿದ್ದರು ಹಾಗೂ ಉತ್ತಮ ಶಿಕ್ಷಣ ಕೊಡಿಸಬೇಕೆಂಬ ಉದ್ದೇವಿತ್ತು. ಅದಕ್ಕಾಗಿಯೇ ನಗರದ ಉತ್ತಮ ಶಾಲೆಗೆ ಮಗನನ್ನು ಸೇರಿಸಿದ್ದರು. ಆದರೆ ಮಗುವಿನ ವಿಲಕ್ಷಣ ಚಟುವಟಿಕೆಗಳನ್ನು (Activity) ಕಂಡು ಶಾಲೆ ಮಗುವನ್ನು ವಿಶೇಷ ಶಾಲೆಗೆ (School) ಸೇರಿಸುವಂತೆ ತಾಯಿಗೆ ಸಲಹೆ ನೀಡುತ್ತದೆ. ಆದರೆ ಕೊನೆಗೂ ತಾಯಿ ಅದೇ ಶಾಲೆಯಲ್ಲಿಯೇ ಮಗ ಶಿಕ್ಷಣ ಪೂರೈಸುವಂತೆ ಮಾಡುತ್ತಾರೆ.


ಮಗನಿಗಾಗಿ ತಾಯಿಯ ಪ್ರಯತ್ನ


ಮೇಘನ್ ಕ್ಯೂಮಿಂಗ್ಸ್ ತನ್ನ 14 ರ ಹರೆಯದ ಮಗ ಎಲಿಜಾಕಿಂಗ್‌ನ ಮುಂದಿನ ಭವಿಷ್ಯದ ಬಗೆಗೆ ಅತಂತ್ರರಾಗಿದ್ದರು. ತನ್ನ ಸಹಪಾಠಿಯೊಂದಿಗೆ ಜಗಳ ಮಾಡಿ ಶಾಲೆಯಿಂದ ಓಡಿ ಬಂದ್ದ ಎಲಿಜಾಕಿಂಗ್ ಪುನಃ ಶಾಲೆಗೆ ತೆರಳಲು ಹಿಂಜರಿದಿದ್ದ.


ಆದರೆ ಆತನ ತಾಯಿ ಮಗನನ್ನು ಮರಳಿ ಶಾಲೆಗೆ ಸೇರಿಸಿಕೊಳ್ಳುವಂತೆ ಟಕೊಮೊ ಪಬ್ಲಿಕ್ ಶಾಲೆಯ ಅಧ್ಯಾಪಕರನ್ನು ಪರಿಪರಿಯಾಗಿ ವಿನಂತಿಸಿಕೊಂಡಿದ್ದರು.


ತನ್ನ ಮಗ ಎಲಿಜಾ ವಿಶೇಷ ಮಗನಾಗಿದ್ದರೂ ಮೇಘನ್‌ಗೆ ಸಾಮಾನ್ಯ ಮಕ್ಕಳಂತೆಯೇ ಆತನನ್ನು ಬೆಳೆಸುವ ಇಚ್ಛೆಯಾಗಿತ್ತು. ಹಾಗಾಗಿಯೇ ಆಕೆ ಮಗನನ್ನು ಟಕೊಮೊ ಪಬ್ಲಿಕ್ ಶಾಲೆಗೆ ಸೇರಿಸಿದ್ದರು. ಆದರೆ ಶಾಲೆ ಎಲಿಜಾರನ್ನು ವಿಶೇಷ ಶಾಲೆಗೆ ಸೇರಿಸುವಂತೆ ಸಲಹೆ ನೀಡುತ್ತಾರೆ.


ಇದನ್ನೂ ಓದಿ: ಕಾಲು ಮುರಿದು ಹೋದ್ರೂ ಕೈ ಬಿಡದ ಲವರ್, ಆಸ್ಪತ್ರೆಯಲ್ಲೇ ತಾಳಿ ಕಟ್ಟಿದ ಹುಡುಗ!


ಆ ಶಾಲೆಯವರು ಎಲಿಜಾಕಿಂಗ್ ಅನ್ನು ವಿಶೇಷ ಮಕ್ಕಳ ಶಾಲೆಗೆ ಸೇರಿಸುವಂತೆ ಮೇಘನ್‌ಗೆ ಸಲಹೆ ನೀಡುತ್ತಾರೆ. ಅಂತಹ ಶಾಲೆಯೇ ಆತನ ಕಲಿಕೆಗೆ ಬೆಂಬಲವನ್ನೊದಗಿಸಬಹುದು ಎಂದು ತಿಳಿಸುತ್ತಾರೆ.


ವಿಶೇಷ ಶಾಲೆಯಲ್ಲಿ ಮಕ್ಕಳಿಗಿರಲಿಲ್ಲ ಆದ್ಯತೆ


ಆದರೆ ಈ ವಿಶೇಷ ಶಾಲೆ ತನ್ನದೇ ಆದ ನ್ಯೂನತೆಗಳನ್ನು ಹೊಂದಿತ್ತು ಹಾಗೂ ಅಲ್ಲಿನ ಅಧ್ಯಾಪಕರು ಮಕ್ಕಳ ಕಡೆಗೆ ಅಷ್ಟೇನೋ ಗಮನಹರಿಸುವುದಿಲ್ಲ ಎಂಬ ಕಾಮೆಂಟ್‌ಗಳನ್ನು ಆಕೆ ಓದಿದ್ದರು.


ಇದರಿಂದಾಗಿಯೇ ತಮ್ಮ ಮಗನನ್ನು ಆಕೆ ಉತ್ತಮ ಶಾಲೆಗೆ ಸೇರಿಸಿದ್ದರು. ಇತರ ಪೋಷಕರಂತೆಯೇ ಮೇಘನ್ ಕೂಡ ವಾಷಿಂಗ್ಟನ್‌ನ ವಿಶೇಷ ಶಿಕ್ಷಣಾ ಪದ್ಧತಿಯ ಅಸಮಾನತೆಯ ಮೌಲ್ಯದ ವಿರುದ್ಧ ಬೇಸರ ಹೊಂದಿದ್ದರು.


ದೇಶ ಅತ್ಯಂತ ದುರ್ಬಲ ಮಕ್ಕಳಿಗೆ ಸೇವೆ ಸಲ್ಲಿಸುವ ಖಾಸಗಿ ಶಾಲೆಗಳನ್ನು ಮೇಲ್ವಿಚಾರಣೆ ಮಾಡಲು ವಿಫಲವಾಗಿತ್ತು. ಶಾಲೆಗಳ ಅಸಮಾನತೆಯ ಬೀಡಾಗಿತ್ತು ಹಾಗೂ ಪೋಷಕರೇ ತಮ್ಮ ಮಕ್ಕಳಿಗಾಗಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಿ ಎಂದು ಸರಕಾರ ಮೌನವಾಗಿತ್ತು.


ಇದನ್ನೂ ಓದಿ: ಫೋಟೋಗೆ ಹೇಗೆಲ್ಲಾ ಪೋಸ್ ಕೊಟ್ಟಿದ್ದಾರೆ ನೋಡಿ ಈ ವೃದ್ಧ ದಂಪತಿ; ಈ ಮುಗ್ಧ ವಿಡಿಯೋ ನೀವೇ ನೋಡಿ


ಮೇಘನ್ ಕ್ಯೂಮಿಂಗ್ಸ್ ಇಬ್ಬರು ವಿಕಲಾಂಗ ಮಕ್ಕಳ ಒಬ್ಬಂಟಿ ತಾಯಿಯಾಗಿದ್ದರು ಜೊತೆಗೆ ಆಕೆಗೆ ಬೆಂಬಲವನ್ನೊದಗಿಸಲು ಯಾರೂ ಇರಲಿಲ್ಲ. ಅದಾಗ್ಯೂ ತನ್ನ ಮಗುವಿಗೆ ಉತ್ತಮ ಶಿಕ್ಷಣ ಒದಗಿಸಬೇಕೆಂಬ ಒಂದೇ ಹಟವನ್ನು ಆ ತಾಯಿ ಹೊಂದಿದ್ದರು.


ಕಡಿಮೆ ಅನುದಾನ ಹಾಗೂ ಅಸಮಾನತೆ


ವಾಷ್ಟಿಂಗ್ಟನ್ ಆಡಳಿತ ವರ್ಗದ ದುರ್ಬಲ ಮೇಲ್ವಿಚಾರಣೆ ಹಾಗೂ ವಿಕಲಾಂಗ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಶಾಲೆಗಳ ಹೆಚ್ಚಿನ ಅವಲಂಬನೆಯು ಶೈಕ್ಷಣಿಕ ಅಸಮಾನತೆಗಳನ್ನು ತೀವ್ರಗೊಳಿಸುತ್ತದೆ.


2021 ರಲ್ಲೇ ರಾಜ್ಯ ಮತ್ತು ಶಾಲಾ ಜಿಲ್ಲೆಗಳು ಕಾರ್ಯಕ್ರಮಗಳಿಗೆ ಕನಿಷ್ಠ $173 ಮಿಲಿಯನ್ ಖರ್ಚು ಮಾಡಿದರೂ ಶಾಲೆಗಳು ಕೆಲವೊಂದು ನ್ಯೂನತೆಗಳನ್ನು ಹೊಂದಿತ್ತು ಹಾಗೂ ಶಾಲೆಗಳ ಬಗ್ಗೆ ಹೆಚ್ಚುವರಿ ಅಸ್ಥೆ ತೋರಿಸುವ ಪ್ರಮುಖ ಕ್ರಮಗಳನ್ನು ಪತ್ತೆಹಚ್ಚಲು ಕೇಂದ್ರೀಕೃತ ವ್ಯವಸ್ಥೆ ಹೊಂದಿರಲಿಲ್ಲ.


ಎಲಿಜಾಕಿಂಗ್ ಅನ್ನು ಅತ್ಯಂತ ಕೆಟ್ಟ ಖ್ಯಾತಿಯ ಶಾಲೆಗಳಲ್ಲಿ ಒಂದಾದ ನಾರ್ತ್‌ವೆಸ್ಟ್ ಸ್ಕೂಲ್ ಆಫ್ ಇನ್ನೋವೇಟಿವ್ ಲರ್ನಿಂಗ್‌ಗೆ ಕಳುಹಿಸಲಾಯಿತು.


ಅಲ್ಲಿನ ಶಿಕ್ಷಕರು ಮಾನವೀತೆಯನ್ನು ಮೀರಿ ವಿದ್ಯಾರ್ಥಿಗಳೊಂದಿಗೆ ಕ್ರೂರವಾಗಿ ನಡೆದುಕೊಳ್ಳುತ್ತಿದ್ದರು ಎಂಬುದು ವರದಿಯಾಗಿತ್ತು. ಹಾಗೂ ಶಾಲೆಯ ಸಿಬ್ಬಂದಿ ವರ್ಗ ಕೂಡ ಶಾಲಾ ಆಡಳಿತ ಮಂಡಳಿ ಹೇರುವ ಹೆಚ್ಚಿನ ಒತ್ತಡಕ್ಕೆ ಒಳಗಾಗಿತ್ತು.


ಸಾರ್ವಜನಿಕ ಶಿಕ್ಷಣದ ರಾಜ್ಯ ಕಚೇರಿಯ ವಿಶೇಷ ಶಿಕ್ಷಣ ಸೇವೆಗಳ ಮುಖ್ಯಸ್ಥ ತಾನಿಯಾ ಮೇ, ವ್ಯವಸ್ಥೆಯಲ್ಲಿನ ಅಸಮಾನತೆಗಳನ್ನು ಒಪ್ಪಿಕೊಂಡರು ಮತ್ತು ಹೆಚ್ಚಿನ ಸಾರ್ವಜನಿಕ ಕಾರ್ಯಕ್ರಮಗಳನ್ನು ರಚಿಸಲು ಮತ್ತು ಸಾರ್ವಜನಿಕವಲ್ಲದ ಏಜೆನ್ಸಿಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಸಂಸ್ಥೆಗೆ ಹೆಚ್ಚಿನ ಹಣದ ಅವಶ್ಯಕತೆ ಇದೆ ಎಂದು ತಿಳಿಸಿದ್ದರು.


ವಾಷಿಂಗ್ಟನ್‌ನ ವಿಶೇಷ ಶಿಕ್ಷಣ ವ್ಯವಸ್ಥೆಯು ಒಟ್ಟಾರೆಯಾಗಿ ಕಡಿಮೆ ಹಣವನ್ನು ಹೊಂದಿದೆ - ರಾಜ್ಯ ಶಿಕ್ಷಣ ಅಧಿಕಾರಿಗಳ ಪ್ರಕಾರ ವರ್ಷಕ್ಕೆ ಸುಮಾರು $500 ಮಿಲಿಯನ್ ಕೊರತೆಯನ್ನು ಶಾಲೆ ಎದುರಿಸುತ್ತಿದೆ ಎಂದು ವರದಿಯಾಗಿದೆ.


ಎಲಿಜಾಕಿಂಗ್ ತಾಯಿ ಮೇಘನ್ ಒಬ್ಬಂಟಿಯಾಗಿದ್ದರು ಹಾಗೂ ಸರಕಾರದ ನೆರವು ಪಡೆಯುವುದರ ಹೊರತು ಆಕೆಗೆ ಬೇರೆ ದಾರಿ ಇರಲಿಲ್ಲ. ಹೆಚ್ಚಿನ ಸಂಪನ್ಮೂಲಗಳನ್ನು ಪಡೆಯುವುದು ಅಥವಾ ಗೌರವಾನ್ವಿತ ಕಾರ್ಯಕ್ರಮಗಳ ಕಡೆಗೆ ತನ್ನ ಮಗನನ್ನು ಮುನ್ನಡೆಸಲು ಕಾನೂನು ಕ್ರಮಗಳನ್ನು ತೆಗೆದುಕೊಳ್ಳುವುದು ಹೇಗೆ ಎಂದು ಅವರಿಗೆ ತಿಳಿದಿರಲಿಲ್ಲ.


ಮೇಘನ್ ರೀತಿಯ ಅದೇ ಸಮಸ್ಯೆಯನ್ನು ಹಿಪ್ಪಲ್ ಹಾಗೂ ಸ್ಯಾಮ್ ರೀಡ್ ಹೊಂದಿದ್ದರು. ತಮ್ಮ ಮಗಳು ಹಿಲರಿಯನ್ನು ಅದೇ ಶಾಲೆಗೆ ಸೇರಿಸಿದ್ದರು ಆದರೆ ಮಗಳು ಶೈಕ್ಷಣಿಕ ಚಟುವಟಿಕೆಗಳಲ್ಲಿ ಯಾವುದೇ ಸಾಧನೆಗಳನ್ನು ಮಾಡದೆ ಮನೆಗೆ ಬರುತ್ತಿದ್ದಳು ಹಾಗೂ ಶಾಲಾ ಶಿಕ್ಷಕರು ತನಗೇನೂ ಸಹಾಯ ಮಾಡುತ್ತಿಲ್ಲ ಎಂಬುದಾಗಿ ಪೋಷಕರ ಬಳಿ ತಿಳಿಸುತ್ತಿದ್ದಳು.


ಈ ದಂಪತಿಗಳು ವಿಕಲಾಂಗ ಮಕ್ಕಳ ಪೋಷಕರಿಗಾಗಿ ಹಲವಾರು ಫೇಸ್‌ಬುಕ್ ಗುಂಪುಗಳಿಗೆ ಸೇರ್ಪಡೆಗೊಂಡರು ಹಾಗೂ ಇತರ ಪೋಷಕರನ್ನು ಭೇಟಿಯಾದರು ಅವರ ಸಮಸ್ಯೆಗಳನ್ನು ಅರಿತುಕೊಂಡರು.


2019 ರ ಕೊನೆಯಲ್ಲಿ, ಹಿಪ್ಪಲ್ ಮತ್ತು ರೀಡ್ ಅವರ ಬೆಂಬಲ ಗುಂಪುಗಳಲ್ಲಿ ಒಬ್ಬ ಪೋಷಕರು ವಕೀಲರನ್ನು ನೇಮಿಸಿಕೊಳ್ಳಲು ಸೂಚಿಸಿದರು.


ಆತನಿಗೆ ಒಂದೇ ಒಂದು ಅವಕಾಶ ಸಾಕು ತಾಯಿಯ ಬೇಡಿಕೆ


ಕ್ಯುಮಿಂಗ್ಸ್ ತಮ್ಮ ಸಂಪಾದನೆಯ ಅಷ್ಟೂ ಹಣವನ್ನು ಮಗ ಎಲಿಜಾರ ವಿದ್ಯಾಭ್ಯಾಸಕ್ಕಾಗಿ ಖರ್ಚುಮಾಡುತ್ತಿದ್ದರು. ಆದರೆ ಶಾಲೆಯಲ್ಲಿ ಆತ ಅಷ್ಟೇನೂ ಕಲಿಯುತ್ತಿರಲಿಲ್ಲ ಹಾಗೂ ಆತನಿಗೆ ಆಕ್ರೋಶ ಬಂದಾಗ ಶಾಲೆಯ ಶಿಕ್ಷಕರು ಪೊಲೀಸರನ್ನು ಕರೆಸುತ್ತಿದ್ದರು ಹಾಗೂ ಎಲಿಜಾನನ್ನು ಆಸ್ಪತ್ರೆಗೆ ಸಾಗಿಸುತ್ತಿದ್ದರು.


ಕ್ಯುಮಿಂಗ್ಸ್ ಎಲಿಜಾರ ಮಾನಸಿಕ ಖರ್ಚುವೆಚ್ಚಗಳನ್ನು ಭರಿಸುವ ಸ್ಥಿತಿಯಲ್ಲಿರಲಿಲ್ಲ ಆದರೆ ಎಲಿಜಾ ಪೋಷಕರ ಪಾಲನೆಯಲ್ಲಿದ್ದರೆ ಒಳರೋಗಿ ಚಿಕಿತ್ಸೆಗಾಗಿ ರಾಜ್ಯವೇ ಪಾವತಿಸುತ್ತದೆ ಎಂಬುದು ಮೇಘನ್ ಕ್ಯುಮಿಂಗ್ಸ್‌ಗೆ ತಿಳಿಯಿತು.


ಈ ಸಮಯದಲ್ಲಿ ಕಠಿಣ ನಿರ್ಧಾರ ಮಾಡಿದ ಕ್ಯುಮಿಂಗ್ಸ್ ಮಕ್ಕಳ ರಕ್ಷಣಾ ಸೇವಾ ಇಲಾಖೆಯ ಕದ ತಟ್ಟಿದರು ಹಾಗೂ ತನ್ನ ಮಗ ಎಲಿಜಾರನ್ನು ಅಲ್ಲಿ ಸೇರಿಸಿದರು. ಇದರಿಂದ ಮಗನಿಗೆ ಬೇಕಾದ ವೈದ್ಯಕೀಯ ಸೌಲಭ್ಯ ದೊರೆಯುತ್ತದೆ ಎಂಬುದು ಕ್ಯುಮಿಂಗ್ಸ್‌ಗೆ ತಿಳಿದಿತ್ತು.


ಇಲಾಖೆಯ ರಕ್ಷಣೆಯಲ್ಲಿಯೇ ಕಳೆದ ಎಲಿಜಾ ಸಿಯಾಟಲ್‌ನಲ್ಲಿನ ವಿಕಲಾಂಗ ಮಕ್ಕಳ ಸಾರ್ವಜನಿಕ ಶಾಲೆಯಲ್ಲಿ ಸುಮಾರು ಎರಡು ವರ್ಷಗಳನ್ನು ಕಳೆದರು. ಆದರೆ 2021-22 ಶಾಲಾ ವರ್ಷದ ಕೊನೆಯಲ್ಲಿ ಕಾರ್ಯಕ್ರಮವು ಸ್ಥಗಿತಗೊಂಡಾಗ, ಸಿಯಾಟಲ್ ಪಬ್ಲಿಕ್ ಶಾಲೆಗಳು ಅವನನ್ನು ವಾಯುವ್ಯ SOIL ನಲ್ಲಿ ಇರಿಸಲು ಸೂಚಿಸಿದವು.


ಕ್ಯುಮ್ಮಿಂಗ್ಸ್ ಟಕೋಮಾಗೆ ಸ್ಥಳಾಂತರಗೊಂಡರು, ಅಲ್ಲಿ ಅವರು ಸ್ಥಿರವಾದ ವಸತಿ ಕಂಡುಕೊಂಡರು. ಎಲಿಜಾಕಿಂಗ್ ನನ್ನು ಹತ್ತಿರದ ಹಿಲ್‌ಟಾಪ್ ಹೆರಿಟೇಜ್ ಮಿಡಲ್ ಸ್ಕೂಲ್‌ಗೆ ಸೇರಿಸಿದರು.


ಆದರೆ ಅಲ್ಲಿ ಕೂಡ ಮಾನಸಿಕ ಸ್ಥಿಮಿತ ಕಳೆದುಕೊಂಡ ಎಲಿಜಾ, ಸಹಪಾಠಿಗಳೊಂದಿಗೆ ಗದ್ದಲ ನಡೆಸುತ್ತಿದ್ದ ಹಾಗೂ ಟಕೋಮಾ ಪಬ್ಲಿಕ್ ಸ್ಕೂಲ್ಸ್ ಆತನನ್ನು SOIL ನಲ್ಲಿ ದಾಖಲಿಸಿತು. ಆದರೆ ಕ್ಯುಮಿಂಗ್ಸ್ ವಿಧಿಯಿಲ್ಲದೆ ಎಲಿಜಾರನ್ನು ಮನೆಯಲ್ಲಿಯೇ ಇರಿಸಿಕೊಂಡರು.


ನಂತರದ ವಾರಗಳಲ್ಲಿ, ಟಕೋಮಾ ಇತರ ನಾಲ್ಕು ಖಾಸಗಿ ಕಾರ್ಯಕ್ರಮಗಳನ್ನು ಶಿಫಾರಸು ಮಾಡಿದರು, ಆದರೆ ಯಾವುದೂ ತನ್ನ ಮಗನಿಗೆ ಸೂಕ್ತವಲ್ಲ ಎಂಬುದು ಕ್ಯುಮಿಂಗ್ಸ್ ಅನಿಸಿಕೆಯಾಗಿತ್ತು.


ಕಾನೂನು ಸಮರದಲ್ಲಿ ಗೆದ್ದ ತಾಯಿ ಹಾಗೂ ಮಗ


ಹಿಪ್ಪಲ್ ಮತ್ತು ರೀಡ್‌ನಂತಹ ಇತರರ ಬೆಂಬಲ ಗುಂಪುಗಳಿಲ್ಲದೆಯೇ, ವಿಶೇಷ ಶಿಕ್ಷಣದ ಕಾನೂನುಗಳನ್ನು ಹುಡುಕಲು ಕ್ಯುಮಿಂಗ್ಸ್ ಸ್ಥಳೀಯ ಗ್ರಂಥಾಲಯಕ್ಕೆ ಹೋದರು.


ಅವರು ರಾಜ್ಯಪಾಲರ ಶಿಕ್ಷಣ ಕಚೇರಿಗೆ ಕರೆ ಮಾಡಿದರು. ಎಲ್ಲಿಯೂ ಆಕೆಯ ಪ್ರಯತ್ನಕ್ಕೆ ಬೆಲೆ ದೊರಯಲಿಲ್ಲ. ಕೊನೆಗೆ ಶೈಕ್ಷಣಿಕ ವಿವಾದಗಳಲ್ಲಿ ಪರಿಣತಿ ಹೊಂದಿರುವ ಸಿಯಾಟಲ್ ಮೂಲದ ಸಂಸ್ಥೆಯಾದ ಸೀಡರ್ ಲಾದೊಂದಿಗೆ ಸಂಪರ್ಕ ಹೊಂದಿದರು.


ಸೀಡರ್ ಲಾದಲ್ಲಿ ವ್ಯವಸ್ಥಾಪಕ ಪಾಲುದಾರರಾದ ಲಾರಾ ಹ್ರುಸ್ಕಾ ಎಲಿಜಾರಿಗೆ ಉತ್ತಮ ಶಿಕ್ಷಣ ಕೊಡಿಸುವುದಾಗಿ ಕಾನೂನು ಸಮರದಲ್ಲಿ ನೆರವು ನೀಡುವುದಾಗಿ ಭರವಸೆ ಇತ್ತರು.


ಕ್ಯೂಮಿಂಗ್ಸ್ ಪರಿಸ್ಥಿತಿಯನ್ನು ಅರಿತುಕೊಂಡ ಲಾರಾ ತ್ವರಿತ ವಿನಂತಿಯನ್ನು ಸಲ್ಲಿಸಿದರು. ವಾರಗಳ ಕಾನೂನು ಪ್ರಕ್ರಿಯೆಗಳ ನಂತರ, ಟಕೋಮಾ ಎಲಿಜಾ ಕಿಂಗ್ ಅನ್ನು ಹಿಲ್‌ಟಾಪ್ ಹೆರಿಟೇಜ್‌ಗೆ ಮರಳಿ ತರಲು ಒಪ್ಪಿಕೊಂಡರು.




ಕಳೆದ ಕೆಲವು ವರ್ಷಗಳಲ್ಲಿ ನೂರಾರು ವಿದ್ಯಾರ್ಥಿಗಳನ್ನು ವಾಯುವ್ಯ SOIL ಗೆ ಕಳುಹಿಸಿದ ವ್ಯವಸ್ಥೆಗೆ ಕ್ಯೂಮಿಂಗ್ಸ್ ಎದುರೇಟು ನೀಡಿದ್ದರು. ತಮ್ಮ ಮಗ ಎಲಿಜಾರನ್ನು ಅಲ್ಲಿಗೆ ಕಳುಹಿಸುವ ಟಕೋಮಾ ಶಾಲೆಯ ನಿರ್ಧಾರವನ್ನು ತುಂಡರಿಸಿದರು ಹಾಗೂ ಅದೇ ಶಾಲೆಯಲ್ಲಿ ತನ್ನ ಮಗ ಪುನಃ ಸೇರ್ಪಡೆಗೊಳ್ಳುವಂತೆ ಮಾಡಿದರು.


ವಿವಾದದಿಂದ ಎಲಿಜಾ ಎರಡು ತಿಂಗಳು ಶಾಲೆಗೆ ಹೋಗದೇ ಇದ್ದರೂ ನಂತರ ಟಕೋಮಾ ಶಾಲೆಗೆ ಮರಳಿದರು ಹಾಗೂ ಸಾಮಾನ್ಯ ಮಕ್ಕಳಂತೆಯೇ ಎಲಿಜಾ ಕೂಡ ಶಿಕ್ಷಣ ಹೊಂದಲು ಸಾಧ್ಯವಾದಂತಾಗಿದೆ.

First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು