• ಹೋಂ
 • »
 • ನ್ಯೂಸ್
 • »
 • ಶಿಕ್ಷಣ
 • »
 • Study Tour: ವಿಶ್ವವಿದ್ಯಾಲಯಗಳಿಗೆ ಮಹತ್ವದ ಸೂಚನೆ ನೀಡಿದ UGC, ವಿದ್ಯಾರ್ಥಿಗಳಿಗೆ ಪ್ರವಾಸ ಭಾಗ್ಯ!

Study Tour: ವಿಶ್ವವಿದ್ಯಾಲಯಗಳಿಗೆ ಮಹತ್ವದ ಸೂಚನೆ ನೀಡಿದ UGC, ವಿದ್ಯಾರ್ಥಿಗಳಿಗೆ ಪ್ರವಾಸ ಭಾಗ್ಯ!

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ವಿದ್ಯಾರ್ಥಿಗಳಿಗೆ ವಾರ್ಷಿಕ ಅಧ್ಯಯನ ಪ್ರವಾಸವನ್ನು ಎರಡು ಮೂರು ದಿನಗಳ ಕಾಲ ಆಯೋಜಿಸಬಹುದು ಎಂದು ತಿಳಿಸಲಾಗಿದೆ. ಅಧಿಸೂಚನೆಯ ಪ್ರಕಾರ, ಪ್ರತಿ ವಿಶ್ವವಿದ್ಯಾನಿಲಯ ಅಥವಾ ಸಂಸ್ಥೆಯು ಯಾವುದೇ ಐತಿಹಾಸಿಕ ಪ್ರಾಮುಖ್ಯತೆಯ ತಾಣಗಳು, ವಸ್ತುಸಂಗ್ರಹಾಲಯಗಳು, ವನ್ಯಜೀವಿ ಅಭಯಾರಣ್ಯಗಳು, ಕರಕುಶಲ ಕೇಂದ್ರಗಳನ್ನು ಪ್ರವಾಸೋದ್ಯಮ ತಾಣವನ್ನಾಗಿ ಗುರುತಿಸಿ ಅಳವಡಿಸಿಕೊಳ್ಳಬೇಕು.

ಮುಂದೆ ಓದಿ ...
 • News18 Kannada
 • 2-MIN READ
 • Last Updated :
 • New Delhi, India
 • Share this:

ಕರ್ನಾಟಕ (Karnataka) ಮತ್ತು ಅದರಾಚೆಗಿನ ಸಂಸ್ಕೃತಿ, ಭಾರತೀಯ ಪರಂಪರೆ, ಸಂಸ್ಕೃತಿ, ವಾಸ್ತುಶಿಲ್ಪ, ವನ್ಯಜೀವಿ, ಐತಿಹಾಸಿಕ ಸ್ಥಳ ಇತ್ಯಾದಿಗಳ ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲು ಯುಜಿಸಿ ಹೊಸದೊಂದು ಸುತ್ತೋಲೆ ಹೊರಡಿಸಿದೆ. ವಿಶ್ವವಿದ್ಯಾನಿಲಯ (University) ಧನಸಹಾಯ ಆಯೋಗ (UGC) ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಒಂದು ಪ್ರವಾಸಿ ತಾಣವನ್ನು ತನ್ನ ಅಧ್ಯಯನದ ವರ್ಷದಲ್ಲಿ ಗುರುತಿಸಿಕೊಂಡು ಮತ್ತು ಅದರ ಬಗ್ಗೆ ತಿಳಿದುಕೊಳ್ಳಲು ವಿದ್ಯಾರ್ಥಿಗಳನ್ನು(Students) ಉತ್ತೇಜಿಸುವ ವಿವಿಧ ಚಟುವಟಿಕೆಗಳನ್ನು ಕೈಗೊಳ್ಳಲು ನಿರ್ದೇಶಿಸಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ವಾರ್ಷಿಕ ಪ್ರವಾಸೋದ್ಯಮ ಅಧ್ಯಯನ  ಪ್ರವಾಸಗಳನ್ನು (Study Tour) ಆಯೋಜಿಸಲು ಸಂಸ್ಥೆಗಳಿಗೆ ಯುಜಿಸಿ ಮನವಿ ಮಾಡಿದೆ.


ವಿದ್ಯಾರ್ಥಿಗಳಿಗೆ ವಾರ್ಷಿಕ ಪ್ರವಾಸ ಆಯೋಜನೆಗೆ ಯುಜಿಸಿ ಸೂಚನೆ


ಯುಜಿಸಿ ಇತ್ತೀಚೆಗೆ ಎಲ್ಲಾ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಪ್ರವಾಸೋದ್ಯಮ ತಾಣವನ್ನು ಗುರುತಿಸಲು ಹೇಳಿದ್ದು, ತಾವು ಆಯ್ಕೆ ಮಾಡಿಕೊಂಡ ಸ್ಥಳದ ಬಗ್ಗೆ ತಿಳಿದುಕೊಳ್ಳಲು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿ, ವರ್ಷವಿಡೀ ಅದರ ಸುತ್ತ ಕೇಂದ್ರೀಕೃತ ಚಟುವಟಿಕೆಗಳನ್ನು ಆಯೋಜಿಸಿ ಮತ್ತು ವಾರ್ಷಿಕೋತ್ಸವದ ಭಾಗವಾಗಿ ಸ್ಥಳಗಳಿಗೆ ಭೇಟಿ ನೀಡುವಂತೆ ಹೇಳಿದೆ. ಈ ಮೂಲಕ ಶೈಕ್ಷಣಿಕ ಪ್ರವಾಸವನ್ನು ಹಮ್ಮಿಕೊಂಡು ವಿದ್ಯಾರ್ಥಿಗಳಿಗೆ ದೇಶದ ಬಗ್ಗೆ ಜ್ಞಾನವನ್ನು ಹೆಚ್ಚಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ.


ಈಗಾಗ್ಲೇ ಮಾಸ್ಟರ್ ಆಫ್ ಸೋಶಿಯಲ್ ವರ್ಕ್ ಮತ್ತು ಕೆಲವು ಎಂಬಿಎ ಕೋರ್ಸ್‌ ವಿದ್ಯಾರ್ಥಿಗಳಿಗಾಗಿ ವಾರ್ಷಿಕ ಅಧ್ಯಯನ ಪ್ರವಾಸಗಳು ಕಡ್ಡಾಯವಾಗಿ ನಡೆಯುತ್ತಿದ್ದು, ಇದೇ ಕ್ರಮವನ್ನು ಎಲ್ಲಾ ವಿದ್ಯಾರ್ಥಿಗಳಿಗೂ ಅನ್ವಯ ಮಾಡುವಂತೆ ಯುಜಿಸಿ ಯೋಜಿಸಿದೆ.


ಇದನ್ನೂ ಓದಿ: School Fees: ಖಾಸಗಿ ಶಾಲಾ ಶುಲ್ಕ ಏರಿಕೆ ಮಾಡೋದಿಲ್ಲ; ಪಾಲಕರಿಗೆ ಅಭಯ ನೀಡಿದ ರುಪ್ಸಾ


ಎರಡ್ಮೂರು ದಿನಗಳ ಕಾಲ ಪ್ರವಾಸ


ವಿದ್ಯಾರ್ಥಿಗಳಿಗೆ ಈ ವಾರ್ಷಿಕ ಅಧ್ಯಯನ ಪ್ರವಾಸವನ್ನು ಎರಡು ಮೂರು ದಿನಗಳ ಕಾಲ ಆಯೋಜಿಸಬಹುದು ಎಂದು ತಿಳಿಸಲಾಗಿದೆ. ಅಧಿಸೂಚನೆಯ ಪ್ರಕಾರ, ಪ್ರತಿ ವಿಶ್ವವಿದ್ಯಾನಿಲಯ ಅಥವಾ ಸಂಸ್ಥೆಯು ಯಾವುದೇ ಐತಿಹಾಸಿಕ ಪ್ರಾಮುಖ್ಯತೆಯ ತಾಣಗಳು, ವಸ್ತುಸಂಗ್ರಹಾಲಯಗಳು, ವನ್ಯಜೀವಿ ಅಭಯಾರಣ್ಯಗಳು, ಕರಕುಶಲ ಕೇಂದ್ರಗಳನ್ನು ಪ್ರವಾಸೋದ್ಯಮ ತಾಣವನ್ನಾಗಿ ಗುರುತಿಸಿ ಅಳವಡಿಸಿಕೊಳ್ಳಬೇಕು.


ಸಂಬಂಧಪಟ್ಟ ವಿಶ್ವವಿದ್ಯಾನಿಲಯಗಳು/ಸಂಸ್ಥೆಗಳು ತಾವು ಆಯ್ಕೆ ಮಾಡಿಕೊಂಡ ಸ್ಥಳದ ಕುರಿತು ಹೆಚ್ಚಿನ ಮಾಹಿತಿಗಾಗಿ ಸ್ಥಳೀಯ ಭಾರತ ಪ್ರವಾಸೋದ್ಯಮ ಕಚೇರಿ ಅಥವಾ ಸಂಬಂಧಪಟ್ಟ ರಾಜ್ಯ ಸರ್ಕಾರವನ್ನು ಸಂಪರ್ಕಿಸಬಹುದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.


ಭೇಟಿ ನೀಡಿದ ಸ್ಥಳಗಳ ಬಗ್ಗೆ ವಿಶ್ವವಿದ್ಯಾಲಯಕ್ಕೆ ವರದಿ


ವಿದ್ಯಾರ್ಥಿಗಳು ತಮ್ಮ ಪ್ರವಾಸ ಸ್ಥಳವನ್ನು ಆಯ್ಕೆ ಮಾಡಿಕೊಂಡು ಅಲ್ಲಿ ಭೇಟಿ ನೀಡಿದ ತಮ್ಮ ಅನುಭವಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಲು ಸಹ ಪ್ರೋತ್ಸಾಹಿಸಲಾಗಿದೆ ಮತ್ತು ಭೇಟಿಯ ನಂತರ ವರದಿಯನ್ನು ಸಿದ್ಧಪಡಿಸಿ ವಿಶ್ವವಿದ್ಯಾಲಯಕ್ಕೆ ಸಲ್ಲಿಸಬೇಕಾಗಿ ಯುಜಿಸಿ ಹೇಳಿದೆ.


"ನಮ್ಮ ಸಂಸ್ಕೃತಿ, ವಾಸ್ತುಶಿಲ್ಪ, ಪರಂಪರೆ ಬಗ್ಗೆ ಅರಿವು ಮೂಡಿಸುತ್ತದೆ"


ಯುಜಿಸಿಯ ಈ ಕಾರ್ಯಕ್ರಮದ ಬಗ್ಗೆ ಮಾತನಾಡಿದ ಬೆಂಗಳೂರು ನಗರ ವಿಶ್ವವಿದ್ಯಾಲಯದ (ಬಿಸಿಯು) ಉಪಕುಲಪತಿ ಲಿಂಗರಾಜ್ ಗಾಂಧಿ "ಈ ಕ್ರಮ ವಿದ್ಯಾರ್ಥಿಗಳಿಗೆ ಕಲಿಕೆಯ ದೃಷ್ಟಿಯಿಂದ ಹಾಗೆಯೇ ನಮ್ಮ ಸಂಸ್ಕೃತಿ, ವಾಸ್ತುಶಿಲ್ಪ ಮತ್ತು ಸಮಾಜವನ್ನು ಕಲಿಯಲು ಅನುಕೂಲವಾಗುತ್ತದೆ" ಎಂದು ತಿಳಿಸಿದರು.
ವಿಶ್ವವಿದ್ಯಾನಿಲಯಗಳಲ್ಲಿ ಇಂತಹ ಚಟುವಟಿಕೆಗಳನ್ನು ಪರಿಚಯಿಸಿದರೆ, ಅದು ವಿದ್ಯಾರ್ಥಿ ಸಮುದಾಯದಲ್ಲಿ ಅನುಭವದ ಕಲಿಕೆ ಮತ್ತು ಕ್ಷೇತ್ರ ಜ್ಞಾನವನ್ನು ಹೆಚ್ಚಿಸುತ್ತದೆ. ಅಧ್ಯಯನ ಪ್ರವಾಸಗಳು ಕಲಿಕೆಯನ್ನು ಹೆಚ್ಚಿಸುವುದು ಮಾತ್ರವಲ್ಲದೆ ವಿದ್ಯಾರ್ಥಿಗಳು ತಮ್ಮ ವ್ಯಕ್ತಿತ್ವವನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ ಎಂದು ತಿಳಿಸಿದರು.


ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಭಾಗವಾಗಿ, ವಿದ್ಯಾರ್ಥಿಗಳು ಈಗಾಗಲೇ ತಮ್ಮ ಕೋರ್ ಕೋರ್ಸ್‌ನ ಹೊರತಾಗಿ ಮುಕ್ತ ಆಯ್ಕೆಗಳು, ಭಾಷೆಗಳು, ಸಾಮರ್ಥ್ಯ ವರ್ಧನೆಯ ಕೋರ್ಸ್‌ಗಳು, ಕೌಶಲ್ಯ ವರ್ಧನೆಯ ಕೋರ್ಸ್‌ಗಳು, ಮೌಲ್ಯಾಧಾರಿತ ಚಟುವಟಿಕೆಗಳನ್ನು ಕಡ್ಡಾಯವಾಗಿ ಅಧ್ಯಯನ ಮಾಡುತ್ತಿದ್ದಾರೆ. ಇವುಗಳೆಲ್ಲದರ ಜೊತೆ ಅಧ್ಯಯನ ಪ್ರವಾಸ ಕೂಡ ಈ ಪಟ್ಟಿಗೆ ಹೊಸದಾಗಿ ಸೇರ್ಪಡೆಯಾಗುವ ಸಾಧ್ಯತೆ ಇದೆ.

First published: