ಕೆಲವೊಬ್ಬರು ತಾವು ಓದಿದ ಡಿಗ್ರಿಗೆ (Degree) ಅನುಗುಣವಾಗಿ ಒಂದೊಳ್ಳೆ ಕೆಲಸ ಸಿಕ್ಕಿ, ಅದಕ್ಕೆ ಒಳ್ಳೆಯ ಸಂಬಳ ಸಿಕ್ಕರೆ ಸಾಕು ಜೀವನ ಆರಾಮಾಗಿ ನಡೆಯುತ್ತೇ ಅಂತ ಅಂದುಕೊಳ್ಳುತ್ತಾರೆ. ಇನ್ನೂ ಕೆಲವರಿಗೆ ಈ ಸಂಬಳ (Salary), ಹುದ್ದೆ, ಸ್ಥಾನಮಾನ ಯಾವುದು ಮನಸ್ಸಿಗೆ ಖುಷಿ ಕೊಡುವುದಿಲ್ಲ. ಅವರ ಮನಸ್ಸಿಗೆ ನೆಮ್ಮದಿ ಕೊಡುವುದು ಅವರಿಗೆ ಆಸಕ್ತಿ ಇರುವಂತಹ ಕೆಲಸ ಮಾಡಿದಾಗ ಮಾತ್ರ ಅಂತ ಹೇಳಬಹುದು. ಅದಕ್ಕಾಗಿ ಅವರು ಎಂತಹ ದೊಡ್ಡ ಸಂಬಳದ ಕಂಪೆನಿ ಕೆಲಸವನ್ನೂ ಸಹ ಬಿಟ್ಟು ಬರಲು ಸಿದ್ದರಿರುತ್ತಾರೆ. ಅದೇ ರೀತಿಯಾಗಿ ಕೆಲಸ ಬಿಟ್ಟು ತಮಗೆ ಆಸಕ್ತಿಯಿರುವ ಕೆಲಸವನ್ನು ಮಾಡುತ್ತಾರೆ.
ಇಲ್ಲೊಬ್ಬರು ಇದೇ ರೀತಿ ತನ್ನ ಕೆಲಸವನ್ನೇ ಬಿಟ್ಟು ಹವ್ಯಾಸ ವೃತ್ತಿಯನ್ನು ಆರಂಭಿಸಿದ್ದಾರೆ.
ಶ್ರವಣ್ ಗೆ ಗಣಿತ ಮತ್ತು ಬೋಧನೆಯ ಮೇಲೆ ತುಂಬಾ ಆಸಕ್ತಿಯಂತೆ
ಇಲ್ಲಿಯೂ ಸಹ ಇಂತಹದೇ ಒಂದು ಘಟನೆ ನಡೆದಿದೆ ನೋಡಿ.. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಪದವೀಧರರೊಬ್ಬರು ವಿದ್ಯಾರ್ಥಿಗಳಿಗೆ ಗಣಿತವನ್ನು ಕಲಿಸಲು ಬಹುರಾಷ್ಟ್ರೀಯ ಕಂಪನಿ ಎಂದರೆ ಎಂಎನ್‌ಸಿಯಲ್ಲಿ ಹೆಚ್ಚಿನ ಸಂಬಳದ ಉದ್ಯೋಗವನ್ನು ತೊರೆದಿದ್ದಾರೆ. ಅವರ ಕಥೆ ಈಗ ಅಂತರ್ಜಾಲದಲ್ಲಿ ಅನೇಕರ ಹೃದಯಗಳನ್ನು ಗೆಲ್ಲುತ್ತಿದೆ ಅಂತ ಹೇಳಬಹುದು.
ರಾಹುಲ್ ರಾಜ್ ಎಂಬ ಟ್ವಿಟರ್ ಬಳಕೆದಾರರು ಹಂಚಿಕೊಂಡಿರುವ ಶ್ರವಣ್ ಕಥೆ ಆನ್ಲೈನ್ ನಲ್ಲಿ ಸಂಚಲನ ಸೃಷ್ಟಿಸಿದೆ. ಅವರು ಶ್ರವಣ್ ಅವರನ್ನು "ಗಣಿತದ ಮೇಧಾವಿ" ಎಂದು ಕರೆದಿದ್ದಾರೆ.
ಇದನ್ನೂ ಓದಿ: ಹಿಮಪಾತದ ನಡುವೆಯೇ ಮಕ್ಕಳಿಗೆ ತರಗತಿ ಆರಂಭಿಸಿದ ಸೇನೆ, ನಿಮಗೊಂದು ಸಲಾಂ ಎಂದ ಭಾರತೀಯರು
ಶ್ರವಣ್ ಬಗ್ಗೆ ಪೋಸ್ಟ್ ಹಂಚಿಕೊಂಡ ರಾಹುಲ್ ಶೀರ್ಷಿಕೆಯಲ್ಲಿ ಬರೆದಿದ್ದೇನು?
ಈ ಶಿಕ್ಷಕ ಈಗ ಗಣಿತವನ್ನು ಕಲಿಸಲು ಯೂಟ್ಯೂಬ್ ಚಾನೆಲ್ ನಡೆಸುತ್ತಿದ್ದಾರೆ. "ಅವರು ಜೆಇಇ ಅರ್ಹತೆ ಪಡೆದು ಐಐಟಿ ಗುವಾಹಟಿಗೆ ಸೇರಿದರು. ಅವರು ಎಂಎನ್‌ಸಿ ಉದ್ಯೋಗಗಳನ್ನು ತೊರೆದರು ಮತ್ತು ಗಣಿತವನ್ನು ಅಧ್ಯಯನ ಮಾಡಲು ಮತ್ತು ಕಲಿಸಲು ಮಾರ್ಗಗಳನ್ನು ಹುಡುಕುತ್ತಿದ್ದರು" ಎಂದು ರಾಹುಲ್ ರಾಜ್ ಬರೆದಿದ್ದಾರೆ ಮತ್ತು ಶ್ರವಣ್ ಅವರ ಯೂಟ್ಯೂಬ್ ಟ್ಯುಟೋರಿಯಲ್ ನ ಸ್ಕ್ರೀನ್ ಶಾಟ್ ಅನ್ನು ಹಂಚಿಕೊಂಡಿದ್ದಾರೆ.
ತಮ್ಮ ಸ್ನೇಹಿತನನ್ನು ಶ್ಲಾಘಿಸಿದ ಟ್ವಿಟ್ಟರ್ ಬಳಕೆದಾರ ರಾಹುಲ್
ಈ ಟ್ವಿಟ್ಟರ್ ಬಳಕೆದಾರರು ತಮ್ಮ ಸ್ನೇಹಿತನನ್ನು ಮತ್ತಷ್ಟು ಶ್ಲಾಘಿಸುತ್ತಾ "ಶ್ರವಣ್ ಭಾರತದ ಯಾವುದೇ ಐಐಟಿ ಜೆಇಇ ಕೋಚಿಂಗ್ ತರಗತಿಯಲ್ಲಿ ಬೋಧಕನಾಗಿ ಹುದ್ದೆಯನ್ನು ಪಡೆಯಬಹುದು ಮತ್ತು ಕೋಟಿ ರೂಪಾಯಿ ಸಂಪಾದನೆ ಮಾಡಬಹುದು, ಆದರೆ ಅವರು ಮೂಲಭೂತ ಮಟ್ಟದಲ್ಲಿ ಯಾವುದೇ ಈ ರೀತಿಯ ಸಂಸ್ಥೆಗಳೊಂದಿಗೆ ಒಪ್ಪುವುದಿಲ್ಲ. ಈ ರೀತಿಯ ತರಗತಿಗಳು ವಿದ್ಯಾರ್ಥಿಗಳಲ್ಲಿ ಗಣಿತವನ್ನು ಕಲಿಯುವ ಉತ್ಸಾಹವನ್ನು ಕೊಲ್ಲುತ್ತವೆ ಎಂಬುದು ಅವರ ವಾದ ಎಂದಿದ್ದಾರೆ.
School friend Shrawan is a maths genius. He qualified JEE & joined IIT Guwahati. He quit the race MNC jobs and kept finding ways to study and teach maths. He lives like sages, like travelers, like nomads, like crazy pple. All to teach good maths which coaching classes have killed pic.twitter.com/kXitMlDO9v
— Rahul Raj (@bhak_sala) February 12, 2023
ಈ ಪೋಸ್ಟ್ ಗೆ ನೆಟ್ಟಿಗರು ಹೇಗೆ ಪ್ರತಿಕ್ರಿಯಿಸಿದ್ದಾರೆ ನೋಡಿ
"ತಂತ್ರಜ್ಞಾನದ ಪ್ರಗತಿಯೊಂದಿಗೆ ಪ್ರತಿಯೊಬ್ಬ ವಿದ್ಯಾರ್ಥಿಯು ಅಧಿಕೃತ ಆನ್ಲೈನ್ ಶಿಕ್ಷಕರಿಂದ ಅಧ್ಯಯನ ಮಾಡುವುದು ಅತ್ಯುತ್ತಮವೆಂದು ನಂಬುತ್ತಾನೆ, ಅದಕ್ಕಾಗಿಯೇ ಭಾರತದಲ್ಲಿ ಆನ್ಲೈನ್ ಕೋಚಿಂಗ್ ಬಿಸ್ನೆಸ್ ವಿಶ್ವದಲ್ಲೇ ದೊಡ್ಡದಾಗಿದೆ, ಆದ್ದರಿಂದ ಸ್ಥಳೀಯ ಪ್ರದೇಶದ ಶಿಕ್ಷಕರು ವಿದ್ಯಾರ್ಥಿಗಳನ್ನು ಪಡೆಯಲು ಹೆಣಗಾಡುತ್ತಿದ್ದಾರೆ" ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ.
"ಶ್ರವಣ್ ಅವರ ಕೆಲಸ ಅದ್ಭುತವಾಗಿದೆ... ಇವರದು ಸ್ಪೂರ್ತಿದಾಯಕ ಕಥೆಯಾಗಿದೆ" ಎಂದು ಇನ್ನೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ. "ಅವರೇ ನಿಜವಾದ ಗುರುಗಳು, ನಿಮ್ಮ ಬಗ್ಗೆ ನಮಗೆ ಹೆಮ್ಮೆಯಿದೆ" ಎಂದು ಮೂರನೆಯ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.
"ಶ್ರವಣ್ ಅವರ ಬಗ್ಗೆ ತಿಳಿದುಕೊಂಡಿರುವುದು ಅದ್ಭುತವಾಗಿದೆ, ಅವರು ನನ್ನಂತಹ ಅನೇಕರಿಗೆ ಮಾದರಿಯಾಗಿದ್ದಾರೆ" ಎಂದು ಗಣಿತತಜ್ಞ ಮತ್ತು ಚೆಸ್ ಆಟಗಾರ ಶ್ರೀನಿವಾಸ ರಾಘವ ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ