• ಹೋಂ
  • »
  • ನ್ಯೂಸ್
  • »
  • ಶಿಕ್ಷಣ
  • »
  • Mother Tongue: ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಮಾತೃಭಾಷೆ ಬಳಕೆಗೆ ಸಿಗಲಿದೆಯಂತೆ ಉತ್ತೇಜನ!

Mother Tongue: ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಮಾತೃಭಾಷೆ ಬಳಕೆಗೆ ಸಿಗಲಿದೆಯಂತೆ ಉತ್ತೇಜನ!

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಪುಟ್ಟ ಮಗು ಆರಂಭದಲ್ಲಿ ತನ್ನ ಮಾತೃಭಾಷೆಯಲ್ಲಿ ಮಾತನಾಡಲು ಕಲಿಯುತ್ತದೆ. ಮನೆಯಲ್ಲೇ ಆ ಮಗುವಿಗೆ ತನ್ನ ಮಾತೃಭಾಷೆಯಲ್ಲಿಯೇ ಸಂವಹನ ಕ್ರಿಯೆಗಳು ನಡೆಯುತ್ತದೆ.

  • Trending Desk
  • 2-MIN READ
  • Last Updated :
  • New Delhi, India
  • Share this:

    ಫೆಬ್ರವರಿ 21, 2023 (February) ಅನ್ನು ಅಂತಾರಾಷ್ಟ್ರೀಯ ಮಾತೃ ಭಾಷಾ ದಿನವನ್ನಾಗಿ (International Mother Language Day) ಆಚರಿಸಲಾಗುತ್ತಿದ್ದು, ತಮ್ಮ ತಮ್ಮ ಮಾತೃಭಾಷೆಗಾಗಿ ಏನಾದರೊಂದು ಕೊಡುಗೆ ನೀಡುವಂತೆ ಹಾಗೂ ಮಾತೃಭಾಷೆಯ (Language) ಉನ್ನತಿ ಹಾಗೂ ಅಭಿವೃದ್ಧಿಗಾಗಿ (Development) ಶ್ರಮಿಸುವಂತೆ ಕೇಂದ್ರ ಗೃಹ ಸಚಿವರಾದ ಅಮಿತ್ ಶಾ (Amit Shah) ಕರೆ ನೀಡಿದ್ದಾರೆ. ಮಾತೃಭಾಷೆಯೊಂದಿಗೆ ಇನ್ನಷ್ಟು ಹೆಚ್ಚಿನ ಸಂಪರ್ಕ ಸಾಧಿಸಲು ಹಾಗೂ ಭಾಷೆಯನ್ನು ಮತ್ತಷ್ಟು ಸಮೃದ್ಧಗೊಳಿಸಲು ಈ ದಿನ ಸಂಕಲ್ಪ ತೊಡೋಣ ಎಂದು ಗೃಹ ಮಂತ್ರಿಗಳು ತಿಳಿಸಿದ್ದಾರೆ.


    ಮಾತೃಭಾಷೆಯ ಬಳಕೆ ಹೆಚ್ಚಾಗಬೇಕು


    ಪುಟ್ಟ ಮಗು ಆರಂಭದಲ್ಲಿ ತನ್ನ ಮಾತೃಭಾಷೆಯಲ್ಲಿ ಮಾತನಾಡಲು ಕಲಿಯುತ್ತದೆ. ಮನೆಯಲ್ಲೇ ಆ ಮಗುವಿಗೆ ತನ್ನ ಮಾತೃಭಾಷೆಯಲ್ಲಿಯೇ ಸಂವಹನ ಕ್ರಿಯೆಗಳು ನಡೆಯುತ್ತದೆ.


    ವಿದೇಶಿ ಭಾಷೆಗಳು ಕೌಶಲ್ಯ ಅಭಿವೃದ್ಧಿಗೆ ಪೂರಕವಾಗಿವೆ ಎಂಬ ನಿಟ್ಟಿನಲ್ಲಿ ಆ ಭಾಷೆಗಳೇ ಆದ್ಯತೆ ಪಡೆದಿವೆ. ಮಾತೃಭಾಷೆ ಹೆಚ್ಚಿನ ಅಭಿವೃದ್ಧಿಯಾಗಬೇಕು ಎಂದಾದರೆ ಪ್ರತಿಯೊಬ್ಬರು ಈ ಭಾಷೆಗೆ ಆದ್ಯತೆ ನೀಡುವಂತಾಗಬೇಕು ಹಾಗೂ ಮಾತೃಭಾಷೆಯನ್ನೇ ಗರಿಷ್ಠವಾಗಿ ಎಲ್ಲೆಡೆ ಬಳಕೆ ಮಾಡುವ ಪಣವನ್ನು ಪ್ರತಿಯೊಬ್ಬ ನಾಗರಿಕರು ತೊಡಬೇಕು ಎಂದು ಅಮಿತ್ ಷಾ ತಿಳಿಸಿದ್ದಾರೆ.


    The National Education Policy will encourage the use of mother tongue!
    ಸಾಂಕೇತಿಕ ಚಿತ್ರ


    ಮಾತೃಭಾಷೆಯಲ್ಲಿ ಶಿಕ್ಷಣ ಕ್ರಮಗಳು


    ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ (UNESCO) ಪ್ರಕಾರ, ಜಾಗತಿಕವಾಗಿ 40% ಜನಸಂಖ್ಯೆಯು ಅವರು ಮಾತನಾಡುವ ಅಥವಾ ಅರ್ಥಮಾಡಿಕೊಳ್ಳುವ ಭಾಷೆಯಲ್ಲಿ ಶಿಕ್ಷಣವನ್ನು ಹೊಂದಿಲ್ಲ ಎಂದು ತಿಳಿಸಿದೆ.


    ಈ ನಿಟ್ಟಿನಲ್ಲಿ ಮಾತೃಭಾಷೆಯಲ್ಲೇ ಶಿಕ್ಷಣ ಕ್ರಮಗಳನ್ನು ಕೈಗೊಳ್ಳುವುದಕ್ಕಾಗಿ ಭಾರತ ಸರಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ.


    ಇತ್ತೀಚೆಗೆ, 20 ನೇ ಫೆಬ್ರವರಿ 2023 ರಂದು, ಶಿಕ್ಷಣ ಸಚಿವರು 3-8 ವರ್ಷ ವಯಸ್ಸಿನ ಮಕ್ಕಳಿಗಾಗಿ ವಿನ್ಯಾಸಗೊಳಿಸಲಾದ ಆಟ-ಆಧಾರಿತ ಕಲಿಕೆ-ಬೋಧನಾ ಸಾಮಗ್ರಿಯಾದ “ಜಾದೂಯಿ ಪಿಟಾರಾ” ಇದೇ ಯೋಜನೆಯ ಒಂದು ಕ್ರಮವಾಗಿದೆ.


    ಇದನ್ನು ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟಿನ ಅಡಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ ಮತ್ತು 13 ಭಾರತೀಯ ಭಾಷೆಗಳಲ್ಲಿ ಲಭ್ಯವಿದೆ. ಮಗು ತನ್ನ ಮಾತೃಭಾಷೆಯಲ್ಲಿ ಓದುವಾಗ, ಮಾತನಾಡುವಾಗ ಮತ್ತು ಯೋಚಿಸಿದಾಗ, ಆ ಮಗುವಿನ ಯೋಚಿಸುವ, ತರ್ಕಿಸುವ, ವಿಶ್ಲೇಷಿಸುವ ಮತ್ತು ಸಂಶೋಧನೆ ಮಾಡುವ ಸಾಮರ್ಥ್ಯ ಹೆಚ್ಚುತ್ತದೆ ಎಂಬುದು ಅಧ್ಯಯನಗಳು ತಿಳಿಸಿರುವ ಅಂಶವಾಗಿದೆ.


    ಹೊಸ ಶಿಕ್ಷಣ ನೀತಿಯು ಭಾರತದ ಉಜ್ವಲ ಭವಿಷ್ಯಕ್ಕೆ ಆಧಾರವಾಗಿದೆ ಎಂಬ ಪ್ರಶಂಸೆ ಕೂಡ ದೊರಕಿದೆ.


    ಇದನ್ನೂ ಓದಿ: Education: ಸರ್ಕಾರಿ ಶಾಲೆಗಳ ಬಗ್ಗೆ ತಾತ್ಸಾರ, ಖಾಸಗಿ ಶಾಲೆಗಳ ಮೇಲೆ ಹೆಚ್ಚಾಗುತ್ತಿರುವ ಪೋಷಕರ ವ್ಯಾಮೋಹ! ಕಾರಣವೇನು?


    "ಬಹುಭಾಷಾ ಶಿಕ್ಷಣ - ಶಿಕ್ಷಣವನ್ನು ಪರಿವರ್ತಿಸುವ ಅವಶ್ಯಕತೆ"


    ಅಂತಾರಾಷ್ಟ್ರೀಯ ಮಾತೃಭಾಷಾ ದಿನವು, ಭಾಷೆಗಳು ಮತ್ತು ಬಹುಭಾಷಾತನದ ಸೇರ್ಪಡೆಯನ್ನು ಮುನ್ನಡೆಸುತ್ತ ಸುಸ್ಥಿರ ಅಭಿವೃದ್ಧಿ ಗುರಿಗಳ ಅಂಶಕ್ಕೆ ಪ್ರಾಧಾನ್ಯತೆ ನೀಡಿದೆ.


    ಯುನೆಸ್ಕೋ ಮಾತೃಭಾಷೆ ಅಥವಾ ಮೊದಲ ಭಾಷೆಯ ಆಧಾರದ ಮೇಲೆ ಬಹುಭಾಷಾ ಶಿಕ್ಷಣವನ್ನು ಪ್ರೋತ್ಸಾಹಿಸುತ್ತದೆ ಮತ್ತು ಉತ್ತೇಜಿಸುತ್ತದೆ. ಇದು ಒಂದು ರೀತಿಯ ಶಿಕ್ಷಣವಾಗಿದ್ದು, ಕಲಿಯುವವರು ಹೆಚ್ಚು ಕರಗತ ಮಾಡಿಕೊಳ್ಳುವ ಭಾಷೆಯಲ್ಲಿ ಶಿಕ್ಷಣ ಪ್ರಾರಂಭವಾಗುತ್ತದೆ ಮತ್ತು ನಂತರ ಕ್ರಮೇಣ ಇತರ ಭಾಷೆಗಳನ್ನು ಈ ಯೋಜನೆಯಲ್ಲಿ ಪರಿಚಯಿಸಲಾಗುತ್ತದೆ.


    2023 ರ ಅಂತರರಾಷ್ಟ್ರೀಯ ಮಾತೃಭಾಷಾ ದಿನದ ವಿಷಯವು "ಬಹುಭಾಷಾ ಶಿಕ್ಷಣ - ಶಿಕ್ಷಣವನ್ನು ಪರಿವರ್ತಿಸುವ ಅವಶ್ಯಕತೆ" ಎಂಬ ಅಂಶಕ್ಕೆ ಮಹತ್ವ ನೀಡಿದೆ.


    ಟ್ರಾನ್ಸ್‌ಫಾರ್ಮಿಂಗ್ ಎಜುಕೇಶನ್ ಶೃಂಗಸಭೆಯ ಸಮಯದಲ್ಲಿ ಮಾಡಿದ ಕೆಲವೊಂದು ಶಿಫಾರಸುಗಳಿಗೆ ಹೊಂದಿಕೆಯಾಗಿದ್ದು ಅಲ್ಲಿ ಸ್ಥಳೀಯ ಜನರ ಶಿಕ್ಷಣ ಹಾಗೂ ಭಾಷೆಗೆ ಒತ್ತು ನೀಡಲಾಯಿತು.


    ಬಹುಭಾಷೆಯೊಂದಿಗೆ ಅಂತರ್ಗತ ಸಮಾಜಗಳನ್ನು ನಿರ್ಮಿಸುವುದು:


    ಜೀವನದ ಆರಂಭದಲ್ಲಿ ಬಲವಾದ ಭಾಷೆ ಮತ್ತು ಸಾಕ್ಷರತೆಯ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವುದು ನಂತರದ ಅಭಿವೃದ್ಧಿ ಮತ್ತು ಸಾಧನೆಗೆ ನಿರ್ಣಾಯಕವಾಗಿದೆ.


    ಮಾತೃಭಾಷೆಯಲ್ಲಿ ಪಕ್ವತೆ ಪಡೆಯದ ಮಕ್ಕಳು ಶಾಲೆಯಲ್ಲಿ ಯಶಸ್ವಿಯಾಗಲು ಸಾಧ್ಯವಾಗುವುದಿಲ್ಲ. ಮಾತೃಭಾಷೆಯ ಮೇಲೆ ಪ್ರಾಬಲ್ಯ ಸಾಧಿಸದ ಮಕ್ಕಳು ಶಾಲೆಯಿಂದ ಹೊರಗುಳಿಯುವ ಅಥವಾ ಹೆಚ್ಚಿನದನ್ನು ಕಲಿಯದೆಯೇ ಬಿಡುವ ಅಪಾಯವನ್ನು ಹೊಂದಿರುತ್ತಾರೆ.




    ಬಹುಭಾಷಾವಾದವು ಅಂತರ್ಗತ ಸಮಾಜಗಳ ಅಭಿವೃದ್ಧಿಗೆ ಕೊಡುಗೆ ನೀಡುತ್ತದೆ, ಜೊತೆಗೆ ಬಹು ಸಂಸ್ಕೃತಿಗಳು, ವಿಶ್ವ ದೃಷ್ಟಿಕೋನಗಳು ಮತ್ತು ಜ್ಞಾನ ವ್ಯವಸ್ಥೆಗಳು ಸಹಬಾಳ್ವೆಗೆ ಅವಕಾಶ ನೀಡುತ್ತದೆ.


    ಮಾತೃಭಾಷೆಯ ಆಧಾರದ ಮೇಲೆ ಬಹುಭಾಷಾ ಶಿಕ್ಷಣವು ಸ್ಥಳೀಯ ಭಾಷೆಗಳನ್ನು ಮಾತನಾಡುವ ಜನಸಂಖ್ಯೆಯ ಗುಂಪುಗಳಿಗೆ, ಶಿಕ್ಷಣಕ್ಕೆ ಪ್ರವೇಶವನ್ನು ಮತ್ತು ಕಲಿಕೆಯಲ್ಲಿ ಪಾಲ್ಗೊಳ್ಳುವಿಕೆಯನ್ನು ಸುಲಭಗೊಳಿಸುತ್ತದೆ.

    Published by:Gowtham K
    First published: